ನಮಸ್ಕಾರ ಸ್ನೇಹಿತರೇ, ಇಂದಿನ ನಮ್ಮ ಈ ಲೇಖನಕ್ಕೆ ನಿಮಗೆಲ್ಲರಿಗೂ ಆತ್ಮೀಯವಾದ ಸ್ವಾಗತ, ಅಕ್ಕಿ ಸೇರಿದಂತೆ ಧಾನ್ಯಗಳ ಬೆಲೆ ಗಗನಕ್ಕೇರಿದ್ದು, APL ಕಾರ್ಡ್‌ದಾರರಿಂದ ಪಡಿತರ ಅಕ್ಕಿ ಬೇಡಿಕೆ ಹೆಚ್ಚಾಗಿದೆ. ಕಾರ್ಡ್‌ಗಳನ್ನು ಸಕ್ರಿಯವಾಗಿಟ್ಟುಕೊಳ್ಳಲು APL ಕಾರ್ಡ್‌ದಾರರು ನ್ಯಾಯಬೆಲೆ ಅಂಗಡಿಗಳಲ್ಲಿ ಅಕ್ಕಿ ಖರೀದಿಗೆ ಮುಂದಾಗಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಜಾರಿಯಾದ ನಂತರ ಕಾರ್ಡ್ ಚಾಲ್ತಿಯಲ್ಲಿಡಲು ತುಂಬ ಜನರು ಮುಂದಾಗಿದ್ದಾರೆ. ರಾಜ್ಯದಲ್ಲಿ ಸುಮಾರು 24 ಲಕ್ಷ APL ಕಾರ್ಡ್ ಗಳನ್ನು ವಿತರಿಸಿದ್ದು, ಪ್ರತಿ ತಿಂಗಳು 20 ಸಾವಿರ ಕಾರ್ಡ್‌ದಾರರು ಪಡಿತರ ಪಡೆಯುತ್ತಿದ್ದರು. ಈಗ ಹೆಚ್ಚಿನ ಸಂಖ್ಯೆಯ ಕಾರ್ಡ್‌ದಾರರು ಅಕ್ಕಿ ಪಡೆಯಲು ನ್ಯಾಯಬೆಲೆ ಅಂಗಡಿಗೆ ಹೋಗಲು ಆರಂಬಿಸಿದ್ದಾರೆ.
ಇದನ್ನೂ ಸಹ ಓದಿ: ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಹೊಸ ನಾಮಕರಣ! ಅಲ್ಲಮಪ್ರಭು ಎಂದು ಹೆಸರಿಟ್ಟ ಸಿಎಂ
ಪ್ರತಿ ತಿಂಗಳು BPL ಕಾರ್ಡ್ ಹೊಂದಿದವರು ಪಡಿತರ ಪಡೆಯಬೇಕು. APL ಕಾರ್ಡ್‌ದಾರರು ಕನಿಷ್ಠ 3 ತಿಂಗಳಿಗೊಮ್ಮೆಯಾದರೂ ಪಡಿತರ ಪಡೆದುಕೊಂಡು ಕಾರ್ಡುಗಳನ್ನು ಸಕ್ರಿಯವಾಗಿಟ್ಟುಕೊಳ್ಳಬೇಕಿದೆ. ನ್ಯಾಯಬೆಲೆ ಅಂಗಡಿ ಮಾಲೀಕರು ತಮ್ಮ ವ್ಯಾಪ್ತಿಯ ಕಾರ್ಡ್‌ದಾರರ ಬೇಡಿಕೆಗೆ ಅನುಗುಣವಾಗಿ ಪ್ರತಿ ತಿಂಗಳು ಇಂಡೆಂಟ್ ನೀಡಿ ಪಡಿತರ ತರಿಸಿಕೊಳ್ಳುತ್ತಾರೆ.
BPL ಕಾರ್ಡ್ ಇದ್ದವರು ಪ್ರತಿ ಸದಸ್ಯರಿಗೆ 5 Kg ಅಂತೆ ಒಂದು ಕಾರ್ಡ್ ಗೆ ಗರಿಷ್ಠ 10Kg ಅಕ್ಕಿಯನ್ನು ಕೆಜಿಗೆ 15 ರೂಪಾಯಿ ದರದಲ್ಲಿ ನೀಡಲಾಗುತ್ತದೆ.
ಇತರೆ ವಿಷಯಗಳು:
KEA ಪ್ರಕಟಣೆ: 5,151 ಸರ್ಕಾರಿ ಹುದ್ದೆಗಳ ಭರ್ತಿ.! ಆಸಕ್ತರು ಈ ಕೂಡಲೇ ಅಪ್ಲೇ ಮಾಡಿ
ಗೃಹಲಕ್ಷ್ಮಿ 5 ನೇ ಕಂತಿನ ಹಣಕ್ಕೆ ಹೊಸ ರೂಲ್ಸ್.! ಎಲ್ಲರಿಗು ಸಿಗಲ್ಲ ಲಕ್ಷ್ಮೀ ಭಾಗ್ಯ!!