ಹಲೋ ಸ್ನೇಹಿತರೇ, ರಾಜ್ಯದಲ್ಲಿ ಸುಮಾರು 70% ರಿಂದ 80% ನಷ್ಟು ಜನ ಉಚಿತ ಅಕ್ಕಿಯನ್ನೇ ವಿತರಣೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಆಹಾರ ಸಚಿವ ಕೆಎಚ್ ಮುನಿಯಪ್ಪ ಅವರು ಉಚಿತ ಅಕ್ಕಿ ಬದಲು ಹಣ ವಿತರಣೆ ಮಾಡುವ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ್ದಾರೆ.

ಕೆಲವು ಕಡೆ ಉಚಿತ ಅಕ್ಕಿ ಬೇಕು ಎಂದು ಕೇಳಿದರೆ ಇನ್ನು ಕೆಲವು ಕಡೆ ಹಣ ಕೊಡುವುದನ್ನೇ ಮುಂದುವರೆಸಿ ಎಂದು ಹೇಳುತ್ತಿದ್ದಾರೆ. ಆದರೆ 70% -80% ನಷ್ಟು ಜನ ಉಚಿತ ಅಕ್ಕಿಯನ್ನು ಪಡೆದುಕೊಳ್ಳಲು ಬಯಸಿದ್ದಾರೆ. ಹೀಗಾಗಿ ವಿತರಣೆಯ ಬಗ್ಗೆಯು ಚಿಂತಿಸಲಾಗಿದೆ ಎಂದು ಸಚಿವರು ಕೂಡ ತಿಳಿಸಿದ್ದಾರೆ.
ಸದ್ಯದಲ್ಲಿಯೇ ಉಚಿತ ಅಕ್ಕಿ ವಿತರಣೆ
BPL ಕಾರ್ಡ್ ಹೊಂದಿರುವವರು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ 5 ಕೆಜಿ ರಾಜ್ಯ ಸರ್ಕಾರದ ಉಚಿತ ಅಕ್ಕಿಯ ಬದಲು ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಕುಟುಂಬದನ ಸದಸ್ಯರಿಗೆ ತಲಾ 5 ಕೆಜಿ ಅಕ್ಕಿಗೆ ಸುಮಾರು 170 ರೂಪಾಯಿ ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತಿದೆ. ಆದರೆ ಇನ್ನು ಮುಂದೆ ಅಕ್ಕಿಯನ್ನು ವಿತರಣೆ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.
LPG ಬಳಕೆದಾರರಿಗೆ ಬಿಗ್ ಅಪ್ಡೇಟ್! ಇ-ಕೆವೈಸಿ ಕುರಿತು ಆಹಾರ ಇಲಾಖೆಯಿಂದ ಮತ್ತೊಂದು ಪ್ರಕಟಣೆ
“ಆಂಧ್ರಪ್ರದೇಶ ಮತ್ತು ತೆಲಂಗಾಣ ಸೇರಿದಂತೆ ಬೇರೆ ಕಡೆ ಅಕ್ಕಿ ಖರೀದಿ ಮಾಡಲು ನಿರ್ಧರಿಸಿದ್ದೇವೆ. ಆದರೆ ಬೆಲೆ ಇನ್ನು ನಿಗದಿ ಗೊಂಡಿಲ್ಲ ಎಂದು ತಿಳಿದುಬಂದಿದೆ. ಎಲ್ಲಾ ಕಡೆ ಈ ಬಾರಿ ಅಕ್ಕಿ ಬೆಳೆ ಕಡಿಮೆ ಆಗಿದೆ. ಆದರೂ ಫಲಾನುಭವಿಗಳಿಗೆ ಅಕ್ಕಿ ಒದಗಿಸಲು ಪ್ರಯತ್ನಿಸುತ್ತಿದ್ದೇವೆ” ಎಂದು ಸಚಿವ ಕೆಎಚ್ ಮುನಿಯಪ್ಪ ತಿಳಿಸಿದ್ದಾರೆ.
ಅಕ್ಕಿಯನ್ನು ಸಮರ್ಪಕವಾಗಿ ಒದಗಿಸುವವರೆಗೆ ಫಲಾನುಭವಿಗಳ ಖಾತೆಗೆ ಅಕ್ಕಿಯ ಬದಲು ಹಣವನ್ನೇ ಜಮಾ ಮಾಡಲಾಗುವುದು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಉಚಿತ ಅಕ್ಕಿಯನ್ನೇ ಪಡೆದುಕೊಳ್ಳಲು ಬಯಸುವ ಫಲಾನುಭವಿಗಳು ಇನ್ನೂ ಸ್ವಲ್ಪ ದಿನ ಇದಕ್ಕಾಗಿ ಕಾಯಬೇಕು. ಅಲ್ಲಿಯವರೆಗೂ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ವರ್ಗಾವಣೆ ಆಗಲಿದೆ.
ಇತರೆ ವಿಷಯಗಳು:
ಅಂತ್ಯೋದಯ ಕಾರ್ಡ್ ಇದ್ದವರಿಗೆ ಭರ್ಜರಿ ಆಫರ್! 2028 ರವರೆಗೆ ಸಿಲಿದೆ ಉಚಿತ ರೇಷನ್
ಕಾರ್ಮಿಕ ಕಾರ್ಡ್ ಇದ್ದವರಿಗೆ ಬಂಪರ್! ಕೇಂದ್ರ ಸರ್ಕಾರದಿಂದ ಈ ತಿಂಗಳ ಹಣ ಖಾತೆಗೆ