ಹಲೋ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ಯುಪಿಐ ಬಳಸಿ ಪೇಮೆಂಟ್ ಮಾಡುವುದು ಸರ್ವೆ ಸಾಮಾನ್ಯವಾಗಿದೆ. ಈ ಪೇಮೆಂಟ್ ಮಾಡಲು 3 ನೇ ವ್ಯಕ್ತಿಯ ಅಪ್ಲಿಕೇಶನ್ಗಳನ್ನು ಬಳಸಲಾಗುತ್ತದೆ. ಈ ರೀತಿ ಪೇಮೆಂಟ್ನಲ್ಲಿ ಗೂಗಲ್ ಪೇ ಕೂಡ ಒಂದಾಗಿದೆ. ಗೂಗಲ್ ಪೇ ಬಳಸುವವರಿಗೆ ಶಾಕಿಂಗ್ ಸುದ್ದಿಯೊಂದು ಕಾದಿದೆ. ಏನದು ಶಾಕಿಂಗ್ ಸುದ್ದಿ ತಿಳಿಯಿರಿ.
ಗೂಗಲ್ ಪೇ ವ್ಯವಹಾರಕ್ಕೆ ಪಾವತಿಸಬೇಕು ಹೆಚ್ಚುವರಿ ಶುಲ್ಕ:
ದೇಶದಲ್ಲಿ ಸಾಕಷ್ಟು ಜನರು ಗೂಗಲ್ ಪೇ ಬಳಕೆ ಮಾಡುವವರಿದ್ದಾರೆ. ಅಂತಹವರಿಗೆ ಗೂಗಲ್ ಪೇ ಈಗ ಶಾಕಿಂಗ್ ಸುದ್ದಿ ನೀಡಿದೆ. ಯಾರೆಲ್ಲಾ ಗೂಗಲ್ ಪೇ ಮೊಬೈಲ್ ರೀಚಾರ್ಜ್ ಮತ್ತು ಬಿಲ್ ಪಾವತಿ ಮಾಡುತ್ತಿದ್ದಿರೋ ಅಂತಹವರಿಗೆಲ್ಲ ಇನ್ಮುಂದೆ ಗೂಗಲ್ ಪೇ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತದೆ.
Paytm ಈಗಾಗಲೇ ಹೆಚ್ಚುವರಿ ಶುಲ್ಕ ವಿಧಿಸಿದೆ:
ಪೇಟಿಎಂ ಹಾಗೂ ಫೋನ್ ಪೇ ಅಪ್ಲಿಕೇಶನ್ಗಳು ಈಗಾಗಲೇ Prepaid Mobile Recharge ಗೆ ಹೆಚ್ಚಿನ ಶುಲ್ಕವನ್ನು ವಿಧಿಸುತ್ತಿದೆ. ಇದೀಗ ಗೂಗಲ್ ಪೇ ಕೂಡ ತನ್ನ ಗ್ರಾಹಕರಿಗೆ ಇದು ಮಾರ್ಗವನ್ನು ಅನುಸರಿಸುವಂತೆ ಹೆಚ್ಚುವರಿ ಶುಲ್ಕವನ್ನು ವಿಧಿಸಲು ಸಜ್ಜಾಗಿದೆ.
ದೇಶದ 2ನೇ ಅತಿದೊಡ್ಡ ಪೇಮೆಂಟ್ ಅಪ್ಲಿಕೇಶನ್:
ಗೂಗಲ್ ಪೇ ವಿಧಿಸುತ್ತಿರುವ ಹೆಚ್ಚುವರಿ ಶುಲ್ಕವನ್ನು Convenience Fee ಎನ್ನಲಾಗುತ್ತಿದೆ. ಗೂಗಲ್ ಪೇ ಈಗ Gpay ಎನ್ನುವ ತನ್ನ ಹೊಸ ಹೆಸರಿನಲ್ಲಿ ಬದಲಾಗಿದೆ. 6 ಕೋಟಿಗು ಹೆಚ್ಚು ಗ್ರಾಹಕರನ್ನು ಒಳಗೊಂಡಿದೆ ಇದರಿಂದಾಗಿ ದೇಶದ 2 ನೇ ಅತಿದೊಡ್ಡ ಪೇಮೆಂಟ್ ಅಪ್ಲಿಕೇಶನ್ ಆಗಿದೆ.
ಮೊಬೈಲ್ ರೀಚಾರ್ಜ್ಗೆ ಎಷ್ಟು ಶುಲ್ಕ ವಿಧಿಸಲಾಗಿದೆ?
ಇದೀಗ ಬಂದ ವರದಿಯ ಪ್ರಕಾರ ಗೂಗಲ್ ಪೇನಲ್ಲಿ ಮೊಬೈಲ್ ರಿಚಾರ್ಜ್ ಮಾಡಿದ್ರೆ Convenience Fee 3 ರೂ ವಿಧಿಸಲಾಗುತ್ತದೆ. ನಿಮ್ಮ ರೀಚಾರ್ಜ್ ಪ್ಲಾನ್ 749 ರೂ ಆಗಿದ್ದರೆ Convenience Fee 3 ರೂ ಸೇರಿ 752 ರೂಗಳನ್ನು ನೀವು ಪಾವತಿ ಮಾಡಬೇಕಾಗುತ್ತದೆ.
ಒಟ್ಟಾರೆಯಾಗಿ UPI Payment ಮಾಡಲು ಗೂಗಲ್ ಪೇ ಬಳಸುವುದು ಶುಲ್ಕ ಕಟ್ಟುವುದು ಎಲ್ಲರಿಗು ದೊಡ್ಡ ತಲೆನೂವಾಗಿ ಪರಿಣಮಿಸಲಿದೆ. ರೀಚಾರ್ಜ್ ಮಾಡಿದಾಗೆಲ್ಲ ನೀವು ಶುಲ್ಕವನ್ನು ಪಾವತಿ ಮಾಡಬೇಕಾಗುತ್ತದೆ. ಅದು ನಿಮಗೆ ರೀಚಾರ್ಜ್ ಜೊತೆಗೆ ಹೆಚ್ಚುವರಿ ಹಣದ ಹೊರೆಯಾಗಲಿದೆ.
ಇತರೆ ವಿಷಯಗಳು
ರೈಲ್ವೆ ಪ್ರಯಾಣಿಕರಿಗೆ ಬಂಪರ್ ನ್ಯೂಸ್.! ಒಂದೇ ಟಿಕೆಟ್ ನಲ್ಲಿ 56 ದಿನ ಪ್ರಯಾಣ; ಇಂದಿನಿಂದಲೇ ಬುಕಿಂಗ್ ಆರಂಭ