ನಮಸ್ಕಾರ ಸ್ನೇಹಿತರೇ ರಾಜ್ಯ ಸರ್ಕಾರ ರಾಜ್ಯ ರೈತರ ಸಂಕಷ್ಟ ನಿವಾರಿಸುವ ಸಲುವಾಗಿ ಅನುಕೂಲ ವಾಗುವಂತಹ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದೆ ಅದರಲ್ಲಿ ಈ ಬಾರಿ ಕೆಲವೊಂದು ಜಿಲ್ಲೆಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲಾಗಿದ್ದು ಅಂತಹ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ವಾಸಿಸುವ ರೈತರಿಗಾಗಿ ಹಣವನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದರಂತೆ ರಾಜ್ಯ ಸರ್ಕಾರವು ರೈತರಿಗೆ ಎಷ್ಟು ಹಣ ನೀಡುತ್ತದೆ ಎಂಬುದರ ಮಾಹಿತಿಯನ್ನು ನೋಡಬಹುದಾಗಿದೆ.
ಬರಪೀಡಿತ ಪ್ರದೇಶಗಳಿಗೆ ಧನಸಹಾಯ :
ಈ ಬಾರಿ ಮಳೆಯ ಭಾವದಿಂದ ರಾಜ್ಯದಲ್ಲಿ ಸಾಕಷ್ಟು ಪ್ರದೇಶಗಳು ಬರಪೀಡಿತವಾಗಿದ್ದು ರಾಜ್ಯ ಸರ್ಕಾರವು ಅದರಂತೆ 195 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಣೆ ಮಾಡಿದೆ. ಹಾಗಾಗಿ ಈ ತಾಲೂಕುಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ಸರ್ಕಾರವು ರೈತರಿಗೆ ಧನ ಸಹಾಯ ಮಾಡಲು ನಿರ್ಧರಿಸಿದೆ. ಮಳೆಯ ಭಾವದಿಂದ ರೈತರಿಗೆ ಬೆಳೆಯ ನಷ್ಟ ಉಂಟಾಗಿತ್ತು ಸರಿಯಾದ ಫಸಲು ಈ ಬಾರಿ ಪಡೆಯುವುದಕ್ಕೆ ಸಾಧ್ಯವಾಗುತ್ತಿಲ್ಲ ಇದಕ್ಕಾಗಿ ರಾಜ್ಯ ಸರ್ಕಾರವು ರೈತರ ಕಷ್ಟಕ್ಕೆ ನಿಂತಿದ್ದು ಪರಿಹಾರ ನೋಡಲು ಮುಂದಾಗಿದೆ.
ಸರ್ಕಾರದ ಸೌಲಭ್ಯಗಳು :
ಈಗಾಗಲೇ ರಾಜ್ಯ ಸರ್ಕಾರ ಹೇಳಿರುವಂತೆ ಬರ ಪರಿಹಾರ ಹಣವನ್ನು ಬರಪೀಡಿತ ಪ್ರದೇಶಕ್ಕೆ ಬಿಡುಗಡೆ ಮಾಡುವುದಾಗಿ ತಿಳಿಸಿತ್ತು. ಅದರಂತೆ ರಾಜ್ಯ ಸರ್ಕಾರವು ಕೆಲವು ಮುಖ್ಯ ಕ್ರಮಗಳನ್ನು ಬರಬೇಡಿತ ಪ್ರದೇಶಗಳಲ್ಲಿ ಕೈಗೊಂಡಿದ್ದು ಕುಡಿಯುವ ನೀರಿಗೆ ತೊಂದರೆ ಆಗದ ರೀತಿಯಲ್ಲಿ ಕ್ರಮವಹಿಸಿದೆ. ಅಷ್ಟೇ ಅಲ್ಲದೆ ನೀರಾವರಿ ಹೊಂದಿರುವ ರೈತರು ಜಾನುವಾರು ಸಾಯಬಾರದು ಎನ್ನುವ ಕಾರಣಕ್ಕಾಗಿ ಜಾನುವಾರು ಸಾಕಾಣಿಕೆಗೆ ಮೇವು ಬೆಳೆಸಲು ಮುಂದಾದರೆ ಅಂತಹ ರೈತರಿಗೆ ಮೇವು ಕೆಟ್ಟನ್ನು ಉಚಿತವಾಗಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಇದನ್ನು ಓದಿ : ಗೃಹಲಕ್ಷ್ಮಿ 4 ಕಂತಿನ ಹಣಕ್ಕೆ ಹೊಸ ರೂಲ್ಸ್.! ಹಳೆ ಅರ್ಜಿಗಳ ಮರು ಪರಿಶೀಲನೆ.! 60 ಸಾವಿರಕ್ಕೂ ಹೆಚ್ಚು ಅರ್ಜಿಗಳು ರಿಜೆಕ್ಟ್
ಬರಪೀಡಿತ ತಾಲೂಕುಗಳ ರೈತರಿಗೆ ಬೆಳೆ ವಿಮೆ :
ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಂಡು ಎಲ್ಲ ರೈತರಿಗೆ ಸರ್ಕಾರವು ಬೆಳೆ ವಿಮೆ ಕೂಡ ನೀಡುತ್ತಿದೆ. ಮಳೆಯ ಭಾವದಿಂದ ಭೂಮಿಯನ್ನು ಹದಾ ಮಾಡಿಕೊಂಡಿದ್ದರು ಕೂಡ ರೈತರು ಬೆಳೆ ಬೆಳೆಯಲು ಬೀಜಗಳನ್ನು ಖರೀದಿ ಮಾಡಿದ್ದರು ಸಹ ಸರಿಯಾದ ಪ್ರಮಾಣದಲ್ಲಿ ಆ ಜಮೀನುಗಳಿಗೆ ನೀರನ್ನು ಒದಗಿಸಲು ಸಾಧ್ಯವಾಗದೆ ಬಿತ್ತನೆ ಕೆಲಸವನ್ನು ಮುಂದುವರಿಸಲು ಆಗುತ್ತಿಲ್ಲ ಆದ್ದರಿಂದ ರೈತರ ಜೀವನವೇ ಸಂಕಷ್ಟದಲ್ಲಿದೆ. ಇಂತಹ ರೈತರ ಜೀವನವೇ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಫಸಲ್ ಭೀಮಾ ಯೋಜನೆಯ ಅಡಿಯಲ್ಲಿ ಸರ್ಕಾರವು ವಿಮೆ ನೀಡುತ್ತಿರುವುದು ಸ್ವಲ್ಪ ಸಮಾಧಾನವನ್ನು ರೈತರಿಗೆ ಉಂಟು ಮಾಡಿದೆ ಎಂದು ಹೇಳಬಹುದು.
ಫಸಲ್ ಭೀಮಾ ಯೋಜನೆಗೆ ಪ್ರೀಮಿಯಂ ಹಣವನ್ನು ಯಾರು ಪಾವತಿ ಮಾಡಿ ನೊಂದಾಯಿಸಿಕೊಂಡಿರುತ್ತಾರೆ ಅಂತಹ ರೈತರಿಗೆ ವಿಮೆ ಪರಿಹಾರ ಹಣ ತಕ್ಷಣವೇ ಸಿಗಲಿದೆ. ಅದೇ ರೀತಿ ಬೆಳೆ ಹಾನಿ ಅಥವಾ ಫಸಲು ಬಾರದೆ ಇರುವ ಕಾರಣಕ್ಕಾಗಿ ಸಮಸ್ಯೆಗಳನ್ನು ರೈತರು ಅನುಭವಿಸಬಾರದು ಎನ್ನುವ ಕಾರಣಕ್ಕಾಗಿ ರಾಜ್ಯ ವಿಪತ್ತು ಸ್ಪಂದನ ನಿಧಿಯಿಂದ ಹಂಗಾಮಿ ಸಬ್ಸಿಡಿ ನಿಗದಿತ ದರದಲ್ಲಿ ಹಣ ಒದಗಿಸಲು ಸರ್ಕಾರ ನಿರ್ಧರಿಸಿದೆ. ಈ ಬಾರಿ ರಾಜ್ಯದ ರೈತರು ಅತಿವೃಷ್ಟಿ ಹಾಗು ಅನಾವೃಷ್ಟಿ ಎರಡನ್ನು ಅನುಭವಿಸುತ್ತಿದ್ದಾರೆ ಇಂಥವರಿಗಾಗಿ ಸರ್ಕಾರ ಸಚಿವ ಸಂಪುಟದಲ್ಲಿ ಪರಿಹಾರ ನೀಡಲು ಚರ್ಚೆ ಮಾಡಿದ್ದು ಆಗಸ್ಟ್ 2023ರ ವರೆಗೆ ಜೂನ್ ನಿಂದ ಪ್ರಕೃತಿ ವಿಕೋಪದಿಂದ ಬೆಳೆಹಾನಿಗೆ ಒಳಗಾಗಿರುವ ಎಲ್ಲ ರೈತರಿಗೆ ಸರ್ಕಾರವು ಪರಿಹಾರ ನೀಡಲು ನಿರ್ಧರಿಸಿದೆ. ಸರ್ಕಾರ ಕೆಲವರು ರೈತರ ಖಾತೆಗೆ 2022ರ ಜುಲೈನಲ್ಲಿ ಹಣವನ್ನು ನೇರವಾಗಿ ಜಮಾ ಮಾಡಿದೆ. ಇನ್ನು ಶೀಘ್ರದಲ್ಲೇ ರೈತರ ಖಾತೆಗೆ ಬೆಳೆ ಪರಿಹಾರ ನಿಧಿ ತಲುಪಲಿದೆ ನಿಮ್ಮ ಖಾತೆಗೆ ಆನ್ಲೈನ್ ಮೂಲಕವೇ ಹಣ ಸಂದಾಯ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿದುಕೊಳ್ಳಬಹುದಾಗಿತ್ತು ಹಣ ಬರದೆ ಇದ್ದರೆ ನಿಮ್ಮ ಹತ್ತಿರದ ಕೃಷಿ ಕೇಂದ್ರ ಅಥವಾ ಗ್ರಾಮ ಪಂಚಾಯಿತಿನಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.
ಒಟ್ಟಾರೆಯಾಗಿ ಸರ್ಕಾರವು ರೈತರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿದ್ದು ಈ ಯೋಜನೆಯು ಸಹ ರೈತರ ಬ್ಯಾಂಕ್ ಖಾತೆಗೆ ಹಣವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಗಾಗಿ ರೈತರ ಖಾತೆಗೆ ಹಣ ಜಮಾ ಆಗಿದೆಯೇ ಇಲ್ಲವೇ ಎಂಬುದರ ಮಾಹಿತಿಯನ್ನು ಆನ್ಲೈನ್ ಮೂಲಕವೇ ಪರಿಶೀಲಿಸಬಹುದಾಗಿದೆ ಎಂಬುದರ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು:
ಹೊಸ ದಾಖಲೆಗೆ ಸಜ್ಜಾದ ಚಿತ್ರರಂಗ.! ಕಾಂತಾರ ಅಧ್ಯಾಯ 1 ಟೀಸರ್ ಅನಾವರಣ.! ಫಸ್ಟ್ ಲುಕ್‌ನಲ್ಲೆ ಅಭಿಮಾನಿಗಳು ಫಿದಾ
ಮುಖವೆಲ್ಲ ಗಾಯ, ಬ್ಯಾಂಡೇಜ್.!! ವಿರಾಟ್ ಕೊಹ್ಲಿಗೆ ಆಗಿದ್ದಾದ್ರೂ ಏನು.?