rtgh

ಹೆಣ್ಣು ಮಕ್ಕಳಿಗಾಗಿ ಕೇಂದ್ರದ 5 ಯೋಜನೆ.! ಸಿಗುತ್ತೆ ಶಿಕ್ಷಣದಿಂದ ಕಲ್ಯಾಣದವರೆಗು ಲಾಭ.! ಕೂಡಲೇ ಅರ್ಜಿ ಸಲ್ಲಿಸಿ

ಹಲೋ ಸ್ನೇಹಿತರೇ, ಮಹಿಳೆಯರನ್ನು ಸ್ವಾವಲಂಬಿಯಾಗಿ ಮಾಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೆಣ್ಣು ಮಕ್ಕಳಿಗಾಗಿ ಈ 5 ಅತ್ಯುತ್ತಮ ಯೋಜನೆಯನ್ನು ಜಾರಿಗೆ ತಂದಿದೆ. ಯಾವುದು ಈ 5 ಯೋಜನೆಗಳು ಲಾಭ ಪಡೆಯುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

Schemes For Women

ದೇಶದ ಈ ಅಭಿವೃದ್ಧಿಯ ಹಿಂದೆ ಮಹಿಳೆಯರ ಪಾತ್ರ ದೊಡ್ಡದಾಗಿದೆ. ಒಂದು ಕಾಲದಲ್ಲಿ ಮಹಿಳೆಯರು ನಾಲ್ಕು ಗೋಡೆಯಿಂದ ಹೊರಗೆ ಬರುವುದು ತುಂಬಾ ಕಷ್ಟವಾಗಿತ್ತು. ಆದರೆ ಈಗ ಕಾಲ ಸಾಕಷ್ಟು ಬದಲಾಗಿದೆ. ಮಹಿಳೆಯರು ಎಲ್ಲಾ ಕ್ಷೇತ್ರಗದಲ್ಲಿಯೂ ಪುರುಷರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಸ್ಪರ್ಧೆಯಾಗಿ ಬೆಳೆಯುತ್ತಿದ್ದಾರೆ. ವ್ಯಾಪಾರ, ಶಿಕ್ಷಣ, ಮನರಂಜನೆ, ಐಟಿ ಹೀಗೆ ಹಲವು ಕ್ಷೇತ್ರಗಳಲ್ಲಿ ಮಹಿಳೆಯರು ತಮ್ಮದೆ ಆದ ಛಾಪು ಮೂಡಿಸುತ್ತಿದ್ದಾರೆ. ದೇಶದಲ್ಲಿ ಆರ್ಥಿಕವಾಗಿ ದುರ್ಬಲರಾದ ಹೆಚ್ಚಿನ ಸಂಖ್ಯೆಯ ಮಹಿಳೆಯರು ಇನ್ನೂ ಸಾಕಷ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ & ರಾಜ್ಯ ಸರ್ಕಾರ ಈ ಮಹಿಳೆಯರ ಅಭಿವೃದ್ದಿಗಾಗಿ ಸುಮಾರು ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈ ಯೋಜನೆಗಳ ಉದ್ದೇಶವು ದೇಶದ ಮಹಿಳೆಯರನ್ನು ಸ್ವ ಉದ್ಯೋಗಕ್ಕಾಗಿ ಉತ್ತೇಜನ ಮಾಡುವುದು & ಅವರನ್ನು ಸ್ವಾವಲಂಬಿಯನ್ನಾಗಿಸುವುದು. 

ಮಹಿಳಾ ಸಬಲೀಕರಣಕ್ಕೆ ಸರ್ಕಾರದ ಯೋಜನೆಗಳು  :
ಉಚಿತ ಹೊಲಿಗೆ ಯಂತ್ರ ಯೋಜನೆ : 

ದೇಶದಲ್ಲಿ ಹೆಚ್ಚಿನ ಜನಸಂಖ್ಯೆಯು ಬಡ & ಕಾರ್ಮಿಕ ಮಹಿಳೆಯರನ್ನು ಒಳಗೂಡಿದೆ. ಇಂಥಹ ಮಹಿಳೆಯರು ತಮ್ಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಮಹಿಳೆಯರ ಈ ಸಮಸ್ಯೆಯನ್ನು ಗಮನದಲ್ಲಿಟ್ಟ ಭಾರತ ಸರ್ಕಾರವು ಬಡ & ಕೂಲಿ ಕಾರ್ಮಿಕರಿಗೆ ಉಚಿತ ಹೊಲಿಗೆ ಯಂತ್ರವನ್ನು ನೀಡುವ ಯೋಜನೆಯನ್ನು ಆರಂಭಿಸಿತು. ಈ ಯೋಜನೆಯಡಿ ಪ್ರತಿ ರಾಜ್ಯದಲ್ಲಿ 50 ಸಾವಿರಕ್ಕೂ ಹೆಚ್ಚಿನ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರವನ್ನು ಸರ್ಕಾರ ನೀಡಲಾಗುತ್ತದೆ.

ಸುಕನ್ಯಾ ಸಮೃದ್ಧಿ ಯೋಜನೆ : 
ಇದೊಂದು ಸಣ್ಣ ಉಳಿತಾಯ ಯೋಜನೆಯಾಗಿದೆ. ಹೆಣ್ಣು ಮಕ್ಕಳ ಭವಿಷ್ಯವನ್ನು ಭದ್ರಗೊಳಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯ ಪ್ರಯೋಜನವನ್ನು ಪಡೆದುಕೊಳ್ಳಲು, ಹೆಣ್ಣು ಮಗುವಿಗೆ 10 ವರ್ಷ ವಯಸ್ಸಾಗುವ ಮೊದಲು ಮಗುವಿನ ಹೆಸರಿನಲ್ಲಿ ಖಾತೆ ತೆರೆಯಬೇಕು. ಈ ಯೋಜನೆಯಲ್ಲಿ ಕನಿಷ್ಟ  250 ರೂ. ಹೂಡಿಕೆ ಮಾಡಬೇಕು. ಇನ್ನು ಈ ಯೋಜನೆಯಲ್ಲಿ ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದಾಗಿದೆ.
ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ನಂತರದಲ್ಲಿ, ನಿಮ್ಮ ಮಗಳ ಮದುವೆ/ಅವಳ ಶಿಕ್ಷಣದ ಬಗ್ಗೆ ಚಿಂತಿ ಬೇಡ.

ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆ
ಈ ಯೋಜನೆ ಭಾರತ ಸರ್ಕಾರವು 2015 ರಲ್ಲಿ ಪ್ರಾರಂಭಮಾಡಿತು. ಹೆಣ್ಣು ಲಿಂಗಆನುಪಾತದಲ್ಲಿನ ಕುಸಿತವನ್ನು ತಡೆಯುವ ನಿಟ್ಟಿನಲ್ಲಿ & ದೇಶದ ಮಹಿಳಾ ಸಬಲೀಕರಣವನ್ನು ಉತ್ತೇಜನದ ಉದೇಶದಿಂದ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಬೇಟಿ ಬಚಾವೋ ಬೇಟಿ ಪಢಾವೋ ಯೋಜನೆಯು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸಹಾಯವನ್ನು ಮಾಡುತ್ತದೆ.


ಮಹಿಳಾ ಶಕ್ತಿ ಕೇಂದ್ರ ಯೋಜನೆ : ಈ ಯೋಜನೆಯನ್ನು 2017 ರಲ್ಲಿ ಆರಂಭವಾಯಿತು. ಈ ಯೋಜನೆಯಡಿ ದೇಶಾದ್ಯಂತ ಸಾಮಾಜಿಕ ಸಹಭಾಗಿತ್ವದ ಮೂಲಕ ಮಹಿಳೆಯರನ್ನು ಸಬಲೀಕರಣದ ಕೆಲಸ ಮಾಡಲಾಗುವುದು.

ಪ್ರಧಾನಮಂತ್ರಿ ಉಜ್ವಲಾ ಯೋಜನೆ :
ದೇಶದಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ LPG ಗ್ಯಾಸ್ ಸಿಲಿಂಡರ್‌ಗಳಿಲ್ಲದ ಮನೆಗಳಿವೆ. ಇಲ್ಲಿ ಇಂದಿಗೂ ಮಹಿಳೆಯರು ಅಡುಗೆಗೆ ಸೌದೆಯನ್ನು, ಭರಣಿ, ಇನ್ನಿತರ ವಸ್ತುಗಳನ್ನು ಬಳಸುತ್ತಿದ್ದಾರೆ.  ಹೀಗೆ ಅಡುಗೆ ಮಾಡುವಾಗ ಅಡುಗೆಮನೆಯಲ್ಲಿ ಸಾಕಷ್ಟು ಹೊಗೆ ಬರುತ್ತದೆ. ಇದರಿಂದ ಅಡುಗೆ ಮಾಡುವಾಗ ಮಹಿಳೆಯರು ಸಾಕಷ್ಟು ತೊಂದರೆಯನ್ನು ಅನುಭವಿಸುತ್ತಾರೆ.  ಅಲ್ಲದೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.   ಮಹಿಳೆಯರ ಈ ಸಮಸ್ಯೆಯನ್ನು ಗಣನೆಗೆ ತೆಗೆದುಕೊಂಡ ಭಾರತ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು ಪ್ರಾರಂಭಿಸಿತು. 

ಮಹಿಳೆಯರಿಗೆ ಉಚಿತ ಸೋಲಾರ್ ಸ್ಟವ್ ವಿತರಣೆ; ಈ ಲಿಂಕ್‌ ಬಳಸಿ ಕೂಡಲೇ ಬುಕ್‌ ಮಾಡಿ

ಅಂತ್ಯೋದಯ ಕಾರ್ಡ್ ಇದ್ದವರಿಗೆ ಭರ್ಜರಿ ಆಫರ್! 2028 ರವರೆಗೆ ಸಿಲಿದೆ ಉಚಿತ ರೇಷನ್‌

Leave a Comment