ಹಲೋ ಸ್ನೇಹಿತರೇ, ತೆರಿಗೆ ಪಾವತಿದಾರರನ್ನು ಮೆಚ್ಚಿಸಲು ಬಜೆಟ್ 2024 ರಲ್ಲಿ ಮೋದಿ ಸರ್ಕಾರವು ಹೊಸ ತೆರಿಗೆ ಪದ್ಧತಿಯಲ್ಲಿ ಸಣ್ಣ ಬದಲಾವಣೆ ತರುವ ಸಾಧ್ಯತೆಯಿದೆ. ತೆರಿಗೆ ವಿನಾಯಿತಿಯನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಎಷ್ಟು ವಿನಾಯಿತಿ ನೀಡಲಾಗುತ್ತದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

ಹೊಸ ತೆರಿಗೆ ಪದ್ಧತಿಯಲ್ಲಿ ಪ್ರಸ್ತುತ ತೆರಿಗೆ ವಿನಾಯಿತಿ 7 ಲಕ್ಷದವರೆಗು ಇದೆ. ಇದನ್ನು 7.5 ಲಕ್ಷ ರೂ.ಗೆ ಏರಿಕೆ ಮಾಡಲಾಗುವುದು.
ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರ ಪಾಲಿಗೆ ಒಂದು ಖುಷಿ ಸುದ್ದಿ ಪ್ರಕಟವಾಗಿದೆ. ಫೆಬ್ರವರಿ 1 ರಂದು ಮಂಡಿಸಲಿರುವ ವೋಟ್ ಆನ್ ಅಕೌಂಟ್ ಬಜೆಟ್ನಲ್ಲಿ ಹೊಸ ತೆರಿಗೆ ಪದ್ಧತಿ ಬದಲಾವಣೆಯಾಗಬಹುದು. ಈಗಿರುವ ತೆರಿಗೆ ವಿನಾಯಿತಿಯ ವ್ಯಾಪ್ತಿಯನ್ನು ಸರ್ಕಾರ ಏರಿಸಲಿದೆ ಎನ್ನುವ ಮಾಹಿತಿ ತಿಳಿದಿದೆ. ಈ ಬದಲಾವಣೆಗೊಸ್ಕರ ಸರ್ಕಾರ ಹೊಸ ಹಣಕಾಸು ಮಸೂದೆ ತರಬಹುದು. ಅದನ್ನು ಬಜೆಟ್ ಅಧಿವೇಶನದ 2 ಹಂತದಲ್ಲಿ ಸಂಸತ್ತಿನಲ್ಲಿ ಸರ್ಕಾರ ಮಂಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಏನು ಬದಲಾಗಲಿದೆ?
ತೆರಿಗೆದಾರರನ್ನು ಮೆಚ್ಚಿಸಲು, ಬಜೆಟ್ 2024 ರಲ್ಲಿ ಸರ್ಕಾರವು ಹೊಸ ತೆರಿಗೆ ಪದ್ಧತಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಲಿದೆ. ಇದರಲ್ಲಿ ಈಗಿರುವ ತೆರಿಗೆ ವಿನಾಯಿತಿಯನ್ನು ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಹೊಸ ತೆರಿಗೆ ಪದ್ಧತಿಯಲ್ಲಿ ಪ್ರಸ್ತುತ ತೆರಿಗೆ ವಿನಾಯಿತಿ 7 ಲಕ್ಷ ರೂ.ಗ ಇದ್ದು. ಇದನ್ನು ಸರ್ಕಾರ 7.5 ಲಕ್ಷ ರೂ.ಗೆ ಏರಿಸಬಹುದು. ಅಂದರೆ 50 ಸಾವಿರ ಹೆಚ್ಚುವರಿ ರಿಯಾಯಿತಿ ಸಿಗಬಹುದು. ಈ ಹಿಂದೆ ಸರ್ಕಾರವು ಹೊಸ ತೆರಿಗೆ ಪದ್ಧತಿಯಲ್ಲಿ ವಿನಾಯಿತಿ ಮಿತಿಯನ್ನು 5 ಲಕ್ಷದಿಂದ 7 ಲಕ್ಷಕ್ಕೆ ಏರಿಸಿತ್ತು. ಇದರಲ್ಲಿ ಸೆಕ್ಷನ್ 87(ಎ) ರಿಯಾಯಿತಿಯನ್ನು 12,500 ರೂ.ನಿಂದ 25,000 ರೂ.ಗೆ ಏರಿಸಲಾಗಿತ್ತು.
ಸ್ಟ್ಯಾಂಡರ್ಡ್ ಡಿಡಕ್ಷನ್ ಉಡುಗೊರೆ ನೀಡಿದ್ದ ಸರ್ಕಾರ
2023-24ನೇ ಸಾಲಿನ ಕೇಂದ್ರ ಬಜೆಟ್ನಲ್ಲಿ ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರು ಹೊಸ ತೆರಿಗೆ ಪದ್ಧತಿಯಲ್ಲಿ ಬದಲಾವಣೆ ಮಾಡಿದ್ದರು. ಇದರಲ್ಲಿ ಮೂಲ ವಿನಾಯಿತಿ ಮಿತಿಯನ್ನು 2.5 ಲಕ್ಷದಿಂದ 3 ಲಕ್ಷಕ್ಕೆ ಏರಿಕೆ ಮಾಡಲಾಗಿತ್ತು. ಇದೆ ವೇಳೆ, 5 ಲಕ್ಷ ರೂ.ವರೆಗಿನ ರಿಯಾಯಿತಿ ಮಿತಿಯನ್ನು ರೂ.7 ಲಕ್ಷಕ್ಕೆ ಏರಿಸಲಾಯಿತು ಮತ್ತು ಪ್ರಮಾಣಿತ ಕಡಿತದ ಪ್ರಯೋಜನವನ್ನು ಸಹ ಇದಕ್ಕೆ ಸೇರಿಸಲಾಯಿತ್ತು. ಇದರ ನಂತರ 7.5 ಲಕ್ಷದವರೆಗಿನ ಆದಾಯ ತೆರಿಗೆ ಮುಕ್ತವಾಗಿತ್ತು. ಅಲ್ಲದೆ ಹೊಸ ತೆರಿಗೆ ಪದ್ಧತಿಯಲ್ಲಿ ಪಿಂಚಣಿದಾರರಿಗೆ ಹೆಚ್ಚುವರಿಯಾಗಿ 15,000 ರೂ ಲಾಭ ಪಡೆಯಬಹುದಾಗಿತ್ತು.
ನೇರ ತೆರಿಗೆ ಸಂಗ್ರಹ ಹೆಚ್ಚುತ್ತಿದೆ
ಡಿಸೆಂಬರ್ 17, 2023 ರವರೆಗೆ, ಇದೇ ಅವಧಿಗೆ ಹೋಲಿಸಿದರೆ ನೇರ ತೆರಿಗೆ ಸಂಗ್ರಹದಲ್ಲಿ ಶೇಕಡಾ 20.66 ರಷ್ಟು ಹೆಚ್ಚಳವಾಗಿದೆ. ನೇರ ತೆರಿಗೆ ಸಂಗ್ರಹವು 13,70,388 ಕೋಟಿ ರೂ.ವಾಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 11,35,754 ಕೋಟಿ ರೂ.ಆಗಿತ್ತು.
ಇತರೆ ವಿಷಯಗಳು
KEA ಪ್ರಕಟಣೆ: 5,151 ಸರ್ಕಾರಿ ಹುದ್ದೆಗಳ ಭರ್ತಿ.! ಆಸಕ್ತರು ಈ ಕೂಡಲೇ ಅಪ್ಲೇ ಮಾಡಿ
ಬೈಕರ್ಗಳಿಗೆ ನಾಳೆಯಿಂದ ₹25,000 ದಂಡ ಫಿಕ್ಸ್! ಮನೆಯಿಂದ ಹೊರಹೋಗೋ ಮುನ್ನ ಈ ಹೊಸ ನಿಯಮ ಪಾಲಿಸಿ