ನಮಸ್ಕಾರ ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ಆಧಾರ್ ಕಾರ್ಡ್ ನಲ್ಲಿರುವ ಹಳೆಯ ಫೋಟೋವನ್ನು ಹೇಗೆ ಹೊಸದಾಗಿ ಮಾಡಬಹುದು ಎಂಬುದರ ಸುಲಭ ವಿಧಾನದ ಬಗ್ಗೆ ತಿಳಿಸಲಾಗುತ್ತಿದೆ. ಭಾರತೀಯ ಪ್ರತಿಯೊಬ್ಬ ನಾಗರೀಕನು ಕೂಡ ಯು ಐ ಏ ಟಿ ಐ ಮೂಲಕ ಆಧಾರ್ ಕಾರ್ಡ್ ಪಡೆದುಕೊಂಡಿರಬೇಕು. ಅದನ್ನು ನಮ್ಮ ಮೂಲ ಗುರುತಿನ ಚೀಟಿಯಾಗಿ ನಾವೆಲ್ಲರೂ ಬಳಸುತ್ತೇವೆ. ಯಾವುದೇ ಮೂಲೆಯಲ್ಲಿ ಕುಳಿತು ಬೇಕಾದರೂ ಒಬ್ಬ ವ್ಯಕ್ತಿಯ ವೈಯಕ್ತಿಕ ವಿವರಗಳನ್ನು ಆಧಾರ್ ಕಾರ್ಡ್ ಮೂಲಕ ತಿಳಿದುಕೊಳ್ಳಬಹುದಾಗಿತ್ತು ಸರ್ಕಾರದ ಹಲವು ಸೌಲಭ್ಯಗಳು ಆಧಾರ್ ಕಾರ್ಡ್ ಒಂದು ಇದ್ದರೆ ಸಿಗುತ್ತವೆ ಇನ್ನೂ ಯಾವುದೇ ರೀತಿಯ ಹಣಕಾಸಿನ ವ್ಯವಹಾರಗಳನ್ನು ಸಹ ಮಾಡಬೇಕಾದರೆ ಆಧಾರ್ ಕಾರ್ಡ್ ಎನ್ನುವುದು ಮೂಲ ದಾಖಲೆಯಾಗಿರುತ್ತದೆ. ಅದರಂತೆ ಆಧಾರ್ ಕಾರ್ಡ್ ನಲ್ಲಿರುವ ನಿಮ್ಮ ಹಳೆಯ ಫೋಟೋವನ್ನು ಬದಲಾವಣೆ ಮಾಡಬೇಕಾದರೆ ನಿಮಗೆ ಸುಲಭವಾಗಿ ವಿಧಾನವನ್ನು ತಿಳಿಸಲಾಗುತ್ತಿದೆ.
ಅಗತ್ಯ ದಾಖಲೆಯಾಗಿ ಆಧಾರ್ ಕಾರ್ಡ್:
ಬೇರೆ ಯಾವುದೇ ಕೆಲಸ ಮಾಡಿಕೊಳ್ಳಲು ಆಧಾರ್ ಕಾರ್ಡ್ ಇಲ್ಲದೆ ಸಾಧ್ಯವಾಗುವುದಿಲ್ಲ ನಮ್ಮ ಗುರುತಿನ ಪುರಾವೆಯಾಗಿ ಬೇರೆ ಯಾವ ಗುರುತಿನ ಬಗ್ಗೆಯೂ ಸಹ ನಮಗೆ ಮಾಹಿತಿ ಇದ್ದರೂ ಅದು ಆಧಾರ್ ಕಾರ್ಡ್ ಇದ್ದಂತೆ ಆಗುವುದಿಲ್ಲ. ಹಾಗಾಗಿ ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಬಹಳ ಮುಖ್ಯವಾದ ದಾಖಲೆಯಾಗಿದ್ದು ಆಧಾರ್ ಕಾರ್ಡ್ ಬಳಕೆ ಮಾಡುವವರು ಯಾವುದೇ ರೀತಿಯ ತಿದ್ದುಪಡಿಗಳನ್ನು ಆಧಾರ್ ಕಾರ್ಡ್ ನಲ್ಲಿ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಹೆಚ್ಚು ಗಮನಹರಿಸುತ್ತಾರೆ. ಅಲ್ಲದೆ ಯಾವುದೇ ರೀತಿಯ ಒಂದು ಸಣ್ಣ ತಪ್ಪು ಇದ್ದರೂ ಸಹ ಆಧಾರ್ ಕಾರ್ಡ್ ಮೂಲಕ ಸಿಗುವ ಸೌಲಭ್ಯವು ನಮಗೆ ಸಿಗುವುದಿಲ್ಲ. ಕೇವಲ ಸರ್ಕಾರದ ಯೋಜನೆಗಳು ಮಾತ್ರವಲ್ಲದೆ ಹಣಕಾಸು ವ್ಯವಹಾರಗಳನ್ನು ಕೂಡ ನಾವು ಸುಲಭವಾಗಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ನೀವು ಆಧಾರ್ ಕಾರ್ಡ್ ನ ವಿವರಗಳಿಗೆ ಸಂಬಂಧಿಸಿದಂತೆ ಸಾಕಷ್ಟು ಗಮನ ವಹಿಸಬೇಕಾಗಿದ್ದು, ಪ್ರತಿ 10 ವರ್ಷಗಳಿಗೊಮ್ಮೆ ಆಧಾರ್ ಕಾರ್ಡ್ ಅನ್ನು ಅಪ್ಡೇಟ್ ಮಾಡಿಸಬೇಕಾಗುತ್ತದೆ.
ಆಧಾರ್ ಕಾರ್ಡ್ ನ ತಿದ್ದುಪಡಿ :
ನೀವೇನಾದರೂ 10 ವರ್ಷಗಳ ಹಿಂದೆ ಆಧಾರ್ ಕಾರ್ಡ್ ಅನ್ನು ಮಾಡಿಸಿದ್ದರೆ ಆಧಾರ್ ಕಾರ್ಡಿಗೆ ಸಂಬಂಧಿಸಿದಂತೆ ಇದು ತಿದ್ದುಪಡಿಗೆ ಸರಿಯಾದ ಸಮಯವಾಗಿದ್ದು ಆಧಾರ್ ಕಾರ್ಡನ್ನು ಡಿಸೆಂಬರ್ 21 2023ರ ವರೆಗೆ ಆನ್ಲೈನ್ ಮೂಲಕವೇ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ. ಹೆಸರು ವಿಳಾಸ ಫೋಟೋ ಬಯೋಮೆಟ್ರಿಕ್ ಮೊದಲಾದ ಬದಲಾವಣೆಗಳನ್ನು ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಸುಲಭವಾಗಿ ಮಾಡಿಸಿಕೊಳ್ಳಬಹುದಾಗಿದೆ. ನೀವು 10 ವರ್ಷಗಳ ಹಿಂದೆ ಆಧಾರ್ ಕಾರ್ಡನ್ನು ಮಾಡಿಸಿದ್ದರೆ ನಿಮ್ಮ ಫೋಟೋವನ್ನು ಸಾಕಷ್ಟು ಬದಲಾವಣೆಗಳಾಗಿದ್ದು ಈಗ ಫೋಟೋವನ್ನು ಆಧಾರ್ ಕಾರ್ಡ್ ನಲ್ಲಿ ಬದಲಾಯಿಸಿಕೊಳ್ಳಲು ಸೂಕ್ತ ಸಮಯ ಎಂದು ಹೇಳಬಹುದಾಗಿದೆ.
ಇದನ್ನು ಓದಿ : ಉಚಿತ ಪ್ರೋತ್ಸಾಹ ಧನಕ್ಕೆ ಅರ್ಜಿ ಆಹ್ವಾನ ಕೂಡಲೇ ಅರ್ಜಿ ಹೀಗೆ ಸಲ್ಲಿಸಿ
ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಸುಲಭವಾಗಿ ಬದಲಾವಣೆ ಮಾಡಿಕೊಳ್ಳಬಹುದು :
ಕೇವಲ ಆಧಾರ್ ಕಾರ್ಡ್ ನಲ್ಲಿರುವ ಫೋಟೋ ಮಾತ್ರವಲ್ಲದೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಅಗತ್ಯ ವಿವರಗಳನ್ನು ಸಹ ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿತ್ತು ನೀವು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಆಧಾರ್ ಕಾರ್ಡನ್ನು ತಿದ್ದುಪಡಿ ಮಾಡಿಸಿಕೊಳ್ಳಬಹುದಾಗಿದೆ. ನೀವೇನಾದರೂ ಆನ್ಲೈನ್ ಮೂಲಕ ಫೋಟೋವನ್ನು ತಿದ್ದುಪಡಿ ಮಾಡಲು ಬಯಸುತ್ತಿದ್ದರೆ ಸರ್ಕಾರದ ಅಧಿಕೃತ ವೆಬ್ಸೈಟ್ಗೆ ಮೊದಲು ಭೇಟಿ ನೀಡಿ ಅದರಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅದಾದ ನಂತರ ಸ್ಕ್ರೀನ್ ಮೇಲೆ ಕಾಣಿಸುವಂತಹ ದಾಖಲಾತಿ ಫಾರ್ಮನ್ನು ಡೌನ್ಲೋಡ್ ಮಾಡಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಅರ್ಜಿ ಫಾರಂ ಅನ್ನು ಭರ್ತಿ ಮಾಡಿ ನೀವು ನಿಮ್ಮ ಹತ್ತಿರದ ಸೇವ ಕೇಂದ್ರಗಳಿಗೆ ತೆಗೆದುಕೊಂಡು ಹೋಗಿ ಅದರಲ್ಲಿ ಫೋಟೋವನ್ನು ಅಪ್ಡೇಟ್ ಮಾಡಿಸಬಹುದಾಗಿದೆ. ಆಧಾರ್ ಕಾರ್ಡ್ ನಲ್ಲಿರುವ ಯಾವುದೇ ವಿವರಗಳನ್ನು ಮೊಬೈಲ್ ನಲ್ಲಿಯೇ ಅಪ್ಡೇಟ್ ಮಾಡಬಹುದಾಗಿದ್ದು ಆದರೆ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಬದಲಾವಣೆ ಮಾಡಲು ಕೇವಲ ಆಧಾರ್ ಕೇಂದ್ರಕ್ಕೆ ಮಾತ್ರ ಭೇಟಿ ನೀಡಿ ಬದಲಾವಣೆ ಮಾಡುವುದು ಕಡ್ಡಾಯವಾಗಿದೆ. https://points.uidai.gov.in/ಈ ವೆಬ್ ಸೈಟ್ ಗೆ ಭೇಟಿ ನೀಡಿ ನಿಮ್ಮ ಹತ್ತಿರದ ಯಾವುದೇ ಆಧಾರ್ ಕೇಂದ್ರಕ್ಕೆ ನೀವು ಹೋಗುವುದರ ಮೂಲಕ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವ ಹಳೆಯ ಫೋಟೋವನ್ನು ತೆಗೆದು ನಿಮ್ಮ ಹೀಗಿರುವ ಹೊಸ ಫೋಟೋವನ್ನು ಬದಲಾವಣೆ ಮಾಡಿಸಿಕೊಳ್ಳಬಹುದಾಗಿದೆ.
ಹೀಗೆ ಕೇಂದ್ರ ಸರ್ಕಾರವು ಆಧಾರ್ ಕಾರ್ಡಿಗೆ ಸಂಬಂಧಿಸಿದಂತೆ ಫೋಟೋ ಬದಲಾವಣೆ ಮಾಡಲು ಡಿಸೆಂಬರ್ 21.2023ರ ವರೆಗೆ ಅವಕಾಶ ಕಲ್ಪಿಸಲಾಗಿದ್ದು ಈ ಕೂಡಲೇ ನೀವೇನಾದರೂ ಆಧಾರ್ ಕಾರ್ಡ್ ನಲ್ಲಿರುವ ಫೋಟೋವನ್ನು ಬದಲಾವಣೆ ಮಾಡಲು ಬಯಸುತ್ತಿದ್ದರೆ ಅರ್ಜಿಯನ್ನು ಸಲ್ಲಿಸಿ ಬದಲಾವಣೆ ಮಾಡಿಸಿಕೊಳ್ಳಬಹುದಾಗಿದೆ. ಅಲ್ಲದೆ ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ನಲ್ಲಿರುವ ವಿವರಗಳನ್ನು ಪ್ರತಿ 10 ವರ್ಷಕ್ಕೊಮ್ಮೆ ಅಪ್ಡೇಟ್ ಮಾಡಿಸುವುದು ಹೆಚ್ಚು ಸೂಕ್ತವಾಗಿದ್ದು ಇದರಿಂದ ಆಧಾರ್ ಕಾರ್ಡ್ ನ ಮೂಲಕ ಲಭ್ಯವಿರುವ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಹಾಗಾಗಿ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಈ ಮಾಹಿತಿಯನ್ನು ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಸಂಬಂಧಿಕರಿಗೆ ಶೇರ್ ಮಾಡುವ ಮೂಲಕ ಆಧಾರ್ ಕಾರ್ಡ್ ಅನ್ನು ಪ್ರತಿ 10 ವರ್ಷಗಳಿಗೊಮ್ಮೆ ಅಪ್ಡೇಟ್ ಮಾಡಿಸಬೇಕು ಹಾಗೂ ಫೋಟೋವನ್ನು ಬದಲಾವಣೆ ಮಾಡಲು ಅವರು ಬಯಸುತ್ತಿದ್ದರೆ ಹೇಗೆ ಬದಲಾವಣೆ ಮಾಡಬೇಕು ಎಂಬುದರ ಬಗ್ಗೆ ತಿಳಿಸಿ ಧನ್ಯವಾದಗಳು.
ಇತರೆ ವಿಷಯಗಳು :
ಸರ್ಕಾರಿ ಶಾಲೆಯಲ್ಲಿ ವಿದ್ಯಮಾನ ಯೋಜನೆ ಜಾರಿ ಏನಿದರ ಉಪಯೋಗ.?
ಸ್ವಂತ ಜಮೀನು ಇರುವವರಿಗೆ ಕಾಂಗ್ರೆಸ್ ಸರ್ಕಾರದಿಂದ ಹೊಸ ಯೋಜನೆ : ಮೊದಲು ಅರ್ಜಿ ಸಲ್ಲಿಸಿದವರಿಗೆ ಆದ್ಯತೆ