ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದ 5 ನೇ ಗ್ಯಾರೆಂಟಿ ಯೋಜನೆಗೆ ನಾಳೆ ಅಧಿಕೃತ ಚಾಲನೆ ಸಿಗಲಿದ್ದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು ಏನೆಲ್ಲಾ ದಾಖಲೆಗಳು ಬೇಕು? ಈ ಎಲ್ಲಾ ಮಾಹಿತಿಯ ಕುರಿತು ತಿಳಿಯಿಲು ನಮ್ಮ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹ ಅಭ್ಯರ್ಥಿಗಳಿಗೆ ಇಂದಿನಿಂದ ಅವಕಾಶ ಮಾಡಿಕೊಡಲಾಗುತ್ತದೆ.
ಅರ್ಹ ಅಭ್ಯರ್ಥಿಗಳು ಅಗತ್ಯ ದಾಖಲಾತಿಗಳ ಸಮೇತವಾಗಿ ನಿಮ್ಮ ಹತ್ತಿರದ ಗ್ರಾಮ ಒನ್ ಕೇಂದ್ರ , ಕರ್ನಾಟಕ ಒನ್ ಕೇಂದ್ರಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
2022-23ನೇ ಶೈಕ್ಷಣಿಕ ಸಾಲಿನಲ್ಲಿ ಪದವೀಧರರಾದವರಿಗೆ ಮಾಸಿಕ 3000 ರೂ ಡಿಪ್ಲೊಮಾ ತೇರ್ಗಡೆಯಾದರೆ ಮಾಸಿಕ1500 ರೂ. ನಿರುದ್ಯೋಗ ಭತ್ಯೆ ಸಿಗುತ್ತದೆ.
ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು?
ನಿರುದ್ಯೋಗ ಭತ್ಯೆ ಪಡೆಯಲು ಬಯಸುವವರು 2022-23ನೇ ಸಾಲಿನಲ್ಲಿ ಪದವಿ/ ಡಿಪ್ಲೊಮಾ ತೇರ್ಗಡೆ ಹೊಂದಿರಬೇಕು.
ಕರ್ನಾಟಕದಲ್ಲಿ ಕನಿಷ್ಠ 6 ವರ್ಷ ಪದವಿ/ ಡಿಪ್ಲೊಮಾ ವ್ಯಾಸಂಗದ ಅವಧಿಯಲ್ಲಿ ಕರ್ನಾಟಕದ ನಿವಾಸಿಯಾಗಿಬೇಕು.
ಯಾರು ಅರ್ಜಿ ಸಲ್ಲಿಸಲು ಬರುವುದಿಲ್ಲ:
- ಸರ್ಕಾರಿ ಅನುದಾನಿತ ಸಂಸ್ಥೆ/ ಖಾಸಗಿ ವಲಯಗಳಲ್ಲಿಉದ್ಯೋಗದಲ್ಲಿರುವವರು.
- ಸ್ವಯಂ ಉದ್ಯೋಗಿ ಅಭ್ಯರ್ಥಿಗಳು.
- ವಿದ್ಯಾಭ್ಯಾಸವನ್ನು ಮುಂದುವರೆಸಲಿರುವ ಅಭ್ಯರ್ಥಿಗಳು.
ಈ ದಾಖಲೆಯಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ:
1) ಅರ್ಜಿದಾರರ ಆಧಾರ ಕಾರ್ಡ ( aadhar card)
2) ಮೊಬೈಲ್ ನಂಬರ, ಇಮೇಲ್ ಐಡಿ (mobile number)
3) SSLC, PUC ಮಾರ್ಕ್ಸ್ ಕಾರ್ಡ (marks card)
4) ಡಿಪ್ಲೊಮಾ/ಡಿಗ್ರಿ ಕೊನೆಯ ಮಾರ್ಕ್ಸ್ ಕಾರ್ಡ (last marks card)
5) 6 ವರ್ಷಗಳ ಕಾಲ ಕರ್ನಾಟಕದಲ್ಲಿ ವ್ಯಾಸಂಗ ಮಾಡಿರುವ ಬಗ್ಗೆ ದಾಖಲೆ
* ಡಿಗ್ರಿ ಮಾರ್ಕ್ಸ ಕಾರ್ಡ (degree marks)
* ಡಿಪ್ಲೊಮಾ ಮಾರ್ಕ್ಸ ಕಾರ್ಡ (diploma marks card)
* ರೇಷನ ಕಾರ್ಡ (ration card)
* CET ನಂಬರ
6) ಅಂಗವಿಕಲ ಪ್ರಮಾಣ ಪತ್ರ.
ಅರ್ಜಿ ಸಲ್ಲಿಕೆ ಆರಂಭ ದಿನಾಂಕ:
ಈ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು 26 ಡಿಸೆಂಬರ್ 2023 ರಿಂದ ಪ್ರಾರಂಭವಾಗಲಿದ್ದು ಅರ್ಜಿ ಸಲ್ಲಿಕೆಗೆ ಯಾವುದೇ ಕೊನೆಯ ದಿನಾಂಕ ನಿಗದಿಪಡಿಸಿಲ್ಲ.
ಗಮನಿಸಬೇಕಾದ ಪ್ರಮುಖ ಅಂಶಗಳು:
ಅಭ್ಯರ್ಥಿಯ ಆಧಾರ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಜೊತೆಯಲ್ಲಿ ಲಿಂಕ್ ಆಗಿರಬೇಕು
ಅಭ್ಯರ್ಥಿಯು ಸೇವಾಸಿಂಧು portal ನಲ್ಲಿ ನಿರುದ್ಯೋಗಿ ಸ್ಥಿತಿ ಬಗ್ಗೆ ಪ್ರತಿ ತಿಂಗಳ 25 ಅಥವಾ ಅದಕ್ಕಿಂತ ಮೊದಲು ಆಧಾರ್ ಒಟಿಪಿ ಮೂಲಕ ಸ್ವಯಂ ಘೋಷಣೆ ಮಾಡಿಕೊಳ್ಳಬೇಕಾಗುತ್ತದೆ ಈ ಎಲ್ಲಾ ದಾಖಲೆಯಿದ್ದರೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗುವುದು.
ಇತರೆ ವಿಷಯಗಳು
ಕೇವಲ 9 ರೂಪಾಯಿ ರಿಚಾರ್ಜ್ ಮಾಡಿ ಡಾಟಾ ಹಾಗೂ ಉಚಿತ ಕರೆ 84 ದಿನ ಸಿಗುತ್ತೆ
ಅಂಗಡಿ ಮಾಲಿಕರೇ ಹುಷಾರ್.!! ನಿಮ್ಮ ಅಂಗಡಿ ಬೋರ್ಡ್ ಈ ರೀತಿ ಇದ್ರೆ ಬೀಳುತ್ತೆ ಭಾರೀ ದಂಡ