ಹಲೋ ಸ್ನೇಹಿತರೇ, ಕೃಷಿ ಕುಟುಂಬಗಳ ಜೀವನೋಪಾಯಕ್ಕಾಗಿ ಸರ್ಕಾರ ಹೊಸ ಯೋಜನೆ ಜಾರಿಗೆ ತಂದಿದ್ದು ಈ ಮೂಲಕ ಕೃಷಿಯನ್ನೇ ಮೆಚ್ಚಿಕೊಂಡು ಇರುವ ರೈತರಿಗೆ ಉಪಕಸುಬು ಮಾಡಲು ನೆರವು ನೀಡಲಾಗುವುದು, ಈ ಬಾರಿ ರಾಜ್ಯದಲ್ಲಿ ವರ್ಷದಂತೆ ಮಳೆ ಆಗಿಲ್ಲ. ಹಾಗಾಗಿ ಮಳೆಯನ್ನೇ ನಂಬಿಕೊಂಡು ಇರುವ ರೈತನ ಬೆಳೆ ಹಾನಿ ಆಗಿದೆ. ಅಲ್ಲದೆ ಹೊಸ ವರ್ಷಕ್ಕೆ ಹೊಸ ಫಸಲು ಪಡೆಯುವುದಕ್ಕೂ ಕೂಡ ಕಷ್ಟವಾಗುತ್ತಿದೆ.
ಈ ಹಿನ್ನೆಲೆಯಲ್ಲಿ ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತರುವ ಮೂಲಕ ರಾಜ್ಯ ಸರ್ಕಾರ ರೈತರಿಗೆ ಜೀವನೋಪಾಯವನ್ನು ಒದಗಿಸಿಕೊಡಲು ಪ್ರಯತ್ನಿಸುತ್ತಿದೆ ಎನ್ನಬಹುದು.
ಬರಗಾಲ ಪರಿಸ್ಥಿತಿ ನಿಯಂತ್ರಣಕ್ಕೆ ನರೇಗಾ ಯೋಜನೆ
ಈಗಾಗಲೇ ರೈತರಿಗಾಗಿಯೇ ಜಾರಿಗೆ ಬಂದಿರುವ ನರೇಗಾ ಯೋಜನೆಯ ಅಡಿಯಲ್ಲಿ ಇನ್ನಷ್ಟು ಬೆನಿಫಿಟ್ ಗಳನ್ನು ಸೇರಿಸಲಾಗಿದ್ದು ರೈತರಿಗೆ ಹೆಚ್ಚು ಅನುಕೂಲವಾಗಿದೆ ಎನ್ನಬಹುದು. ರಾಜ್ಯದಲ್ಲಿ ಸುಮಾರು 106 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲಾಗಿದೆ. ಇಂತಹ ಸ್ಥಳಗಳಲ್ಲಿ ವಾಸಿಸುವ ರೈತರಿಗೆ ಆರ್ಥಿಕವಾಗಿ ಸಹಾಯ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೆಲವು ಪ್ರಮುಖ ಘೋಷಣೆಯನ್ನು ಸಹ ಮಾಡಿದೆ.
ಉದ್ಯೋಗ ಖಾತ್ರಿ ಯೋಜನೆ
ಕೃಷಿ ಕಾರ್ಮಿಕರು ತಮ್ಮ ಜೀವನೋಪಾಯಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ಗ್ರಾಮ ಪಂಚಾಯತ್ನಿಂದ 100 ದಿನಗಳವರೆಗೆ ಉದ್ಯೋಗ ಖಾತ್ರಿಯನ್ನು ಪಡೆದುಕೊಳ್ಳುತ್ತಾರೆ.
ಒಂದು ವೇಳೆ ಉದ್ಯೋಗವು ಸಿಗದೇ ಇದ್ದಲ್ಲಿ ಆ ದಿನದ ಹಣವನ್ನು ಗ್ರಾಮ ಪಂಚಾಯತ್ ಮೂಲಕ ಪಡೆದು ಕೊಳ್ಳಬಹುದು. ಇದೀಗ ಕೇಂದ್ರ ಸರ್ಕಾರಕ್ಕೆ ಈ ಅವಧಿಯನ್ನು ಹೆಚ್ಚಿಸುವ ಸಲುವಾಗಿ ಮನವಿ ಸಲ್ಲಿಸಲಾಗಿದ್ದು, ಕೇಂದ್ರ ಸರ್ಕಾರವು ಗ್ರೀನ್ ಸಿಗ್ನಲ್ ಕೊಟ್ಟಿದ್ದು, ನೂರು ದಿನಗಳ ಉದ್ಯೋಗ ಖಾತ್ರಿಯನ್ನು 150 ದಿನಗಳಿಗೆ ಹೆಚ್ಚಿಸಲಾಗಿದೆ.
ನರೇಗಾ ಯೋಜನೆಯ ಅಡಿ ಪ್ರಯೋಜನ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ!
ರಾಜ್ಯದ ರೈತರ ಸುಸ್ಥಿರ ಅಭಿವೃದ್ಧಿ ಮಂತ್ರವನ್ನು ಕೈಗೆತ್ತಿಕೊಂಡಿರುವ ರಾಜ್ಯ ಸರ್ಕಾರ ನರೇಗಾ ಯೋಜನೆಯ ಅಡಿಯಲ್ಲಿ ಹೊಸ ಕಾರ್ಯ ಚಟುವಟಿಕೆಯನ್ನು ಅಳವಡಿಸಿದೆ. ರೈತರು ಉಪಕಸುಬು ಮಾಡಲು ಕೂಡ ನೆರವು ನೀಡಲಾಗುವುದು. ಈ ಯೋಜನೆಯ ಅಡಿಯಲ್ಲಿ ಗ್ರಾಮದಲ್ಲಿ ವಾಸಿಸುವ ಜನರು 5 ಲಕ್ಷಗಳವರೆಗೆ ವೈಯಕ್ತಿಕ ಕಾಮಗಾರಿ ಧನ ಪಡೆದುಕೊಳ್ಳಲು ಸಾಧ್ಯವಿದೆ.
ಯಾರಿಗೆ ಸಿಗಲಿದೆ ವೈಯಕ್ತಿಕ ಕಾಮಗಾರಿ ನೆರವು?
ನರೇಗಾ ಯೋಜನೆ ಅಡಿಯಲ್ಲಿ ವೈಯಕ್ತಿಕ ಕಾಮಗಾರಿಗಾಗಿ ಪ್ರತಿ ಕುಟುಂಬಕ್ಕೆ 2.50 ಲಕ್ಷ ರೂಪಾಯಿಗಳನ್ನು ಈ ಹಿಂದೆ ನೀಡಲಾಗುತ್ತಿತ್ತು. ಈಗ ಈ ನೆರವು ಹಣವನ್ನು 5 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಲಾಗಿದೆ. ಭೂ ರಹಿತರಾದ ಕೃಷಿ ಕಾರ್ಮಿಕರು ಮತ್ತು ಹಸು ಮೇಕೆ ಕುರಿ ಮೊದಲಾದ ಸಾಕು ಪ್ರಾಣಿಗಳನ್ನು ಸಾಕಿ ಸ್ವಂತ ಉದ್ಯೋಗ ನಿರ್ಮಾಣ ಮಾಡಲು ಇಚ್ಛಿಸುವವರು, ವಯಕ್ತಿಕ ಕಾಮಗಾರಿ ನೆರವು ಪಡೆದುಕೊಳ್ಳಬಹುದು.
ಪ್ರತಿ ಮನೆಯ ಛಾವಣಿಯ ಮೇಲೆ ಉಚಿತ ಸೌರ ಫಲಕ! ಮನೆ ಮನೆಗೂ ಸಿಗಲಿದೆ ಬೆಳಕು
ಸಾಕು ಪ್ರಾಣಿಗಳ ಶೆಡ್ ನಿರ್ಮಾಣ, ಕ್ಷೇತ್ರ ಬದು ನಿರ್ಮಾಣ ಮತ್ತು ಕೃಷಿ ಹೊಂಡ ನಿರ್ಮಾಣ, ತೋಟಗಾರಿಕೆ, ಮತ್ತು ಅರಣ್ಯ ಬೆಳೆಗಳನ್ನು ಬೆಳೆಯುವುದು ಮೊದಲಾದವುಗಳಿಗೆ ವೈಯಕ್ತಿಕ ಕಾಮಗಾರಿ ನೆರವು ಪಡೆಯಲು ಅವಕಾಶಗಳು ಇವೆ
ವೈಯಕ್ತಿಕ ಕಾಮಗಾರಿ ನೆರವು ಯಾರಿಗೆ ಸಿಗಲಿದೆ?
ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರು, ಎಸ್ ಸಿ, ಎಸ್ ಟಿ ಪಂಗಡಕ್ಕೆ ಸೇರಿದವರು, ಮಹಿಳಾ ಪ್ರಧಾನ ಕುಟುಂಬದವರು, ದಿವ್ಯಾಂಗ ಕೃಷಿಕರು, ಭೂ ಸುಧಾರಣೆ ಮತ್ತು ವಸತಿ ಯೋಜನೆಯ ಫಲಾನುಭವಿಗಳು, ಸಣ್ಣ ಮತ್ತು ಅತಿ ಸಣ್ಣ ರೈತರು ಮೊದಲಾದವರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.
ವಯಕ್ತಿಕ ಕಾಮಗಾರಿ ನೆರವು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ?
ಉದ್ಯೋಗ ಖಾತ್ರಿ ಯೋಜನೆಯ ಅಡಿಯಲ್ಲಿ ರೈತರು ನೆರವು ಪಡೆಯಲು ಜಾಬ್ ಕಾರ್ಡ್ ಹೊಂದಿರುವುದು ಕಡ್ಡಾಯ. 18 ವರ್ಷ ಮೇಲ್ಪಟ್ಟವರು ಗ್ರಾಮ ಪಂಚಾಯತ್ ನಲ್ಲಿ ಅಗತ್ಯವಿರುವ ದಾಖಲೆಗಳನ್ನು ನೀಡಿ ಫಾರಂ 1 ಭರ್ತಿ ಮಾಡಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ಪಡೆದುಕೊಳ್ಳಬಹುದು. ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಉದ್ಯೋಗವನ್ನು ಪಡೆದುಕೊಳ್ಳುವ ಸಲುವಾಗಿ ಫಾರ್ಮ್ ನಂಬರ್ 6 ಅನ್ನು ಭರ್ತಿ ಮಾಡಿ ಅಗತ್ಯ ಇರುವ ದಾಖಲೆಗಳನ್ನು ಗ್ರಾಮ ಪಂಚಾಯಿತಿಗೆ ಸಲ್ಲಿಸಿ.
ವೈಯಕ್ತಿಕ ಕಾಮಗಾರಿ ನೆರವನ್ನು ಯಾವ ಕಾಮಗಾರಿಗೆ ಪಡೆದುಕೊಳ್ಳುತ್ತೀರಿ ಎನ್ನುವುದರ ಆಧಾರದ ಮೇಲೆ ಮೊತ್ತವನ್ನು ನಿಗದಿ ಪಡಿಸಲಾಗುವುದು. ಹತ್ತು ಸಾವಿರ ರೂ. 1.50 ಲಕ್ಷ ರೂಪಾಯಿಗಳ ವರೆಗೂ ಕೂಡ ನೆರವು ಪಡೆಯಬಹು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಪಂಚಾಯತ್ ಕಚೇರಿಯನ್ನು ಸಂಪರ್ಕಿಸಿ ಮತ್ತು ಹಣವನ್ನು ಪಡೆದುಕೊಳ್ಳಬಹುದಾಗಿದೆ.
ಇತರೆ ವಿಷಯಗಳು:
ಸಿದ್ದರಾಮಯ್ಯ ಸರ್ಕಾರಕ್ಕೆ ಅಕ್ಕಿ ಸಿಗುತ್ತಿಲ್ಲ: ನಗದು ಜಮಾ ಯೋಜನೆ ಮುಂದುವರಿಕೆ!
ಏರ್‌ಟೆಲ್ ಹೊಸ ವರ್ಷದ ಕೊಡುಗೆ! ಕೇವಲ ರೂ.148 ವಿಶೇಷ ರೀಚಾರ್ಜ್ ಪ್ಲಾನ್‌ನಲ್ಲಿ ಬಂಪರ್ ಆಫರ್