rtgh

B.Ed ಕೋರ್ಸ್‌ ಪ್ರವೇಶಕ್ಕೆ ಸೀಟು ಹಂಚಿಕೆಯ ಅಂತಿಮ ವೇಳಾಪಟ್ಟಿ ಬಿಡುಗಡೆ

ಹಲೋ ಸ್ನೇಹಿತರೇ, ರಾಜ್ಯ ಶಾಲಾ ಶಿಕ್ಷಣ ಇಲಾಖೆಯು ಈ ವರ್ಷದ B.Ed ಕೋರ್ಸ್‌ ಅಡ್ಮಿಷನ್‌ಗೆ ಸಂಬಂಧಿಸಿದ ಅಂತಿಮ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಅಭ್ಯರ್ಥಿಗಳು ಈ ಕೆಳಗಿನ ವೇಳಾಪಟ್ಟಿ ಚೆಕ್‌ ಮಾಡಿ, ಆಪ್ಶನ್‌ ಎಂಟ್ರಿ ಮಾಡಬಹುದಾಗಿದೆ. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ನಮ್ಮ ಲೇಖನವನ್ನು ಕೊನೆಯವರೆಗು ಓದಿ.

bed seat allotment 2024

ಕರ್ನಾಟಕ ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕವು 2023-24ನೇ ಸಾಲಿನ B.Ed ಕೋರ್ಸಿನ ವ್ಯಾಸಂಗಕ್ಕಾಗಿ ಸರ್ಕಾರಿ ಕೋಟಾದ ಸೀಟುಗಳ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ, ಇದೀಗ ಅಂತಿಮ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಯಿತು.

ಇಲಾಖೆಯು ಇತ್ತೀಚೆಗೆ 4ನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಮುಗಿಸಿತ್ತು. ಇದೀಗ ಅಂತಿಮ ಸುತ್ತಿನ B.Ed ಸೀಟು ಹಂಚಿಕೆಯನ್ನು Offline ಬದಲಾಗಿ Online ಮೂಲಕ ಮಾಡಲಾಗುವುದು. ಅಂತಿಮವಾಗಿ ಹಂಚಿಕೆಯಾಗದೇ ಉಳಿದಿರುವ ಸೀಟುಗಳ ಹಂಚಿಕೆಗಾಗಿ ಅಂತಿಮ ಸುತ್ತಿನ ಸೀಟು ಹಂಚಿಕೆಗಳಲ್ಲಿ ಕೆಳಕಂಡ ಆಸಕ್ತ ಅಭ್ಯರ್ಥಿಗಳಿಗೆ ಕಾಲೇಜು ಆಯ್ಕೆಗಾಗಿ Option ಎಂಟ್ರಿಗೆ ಅವಕಾಶ ನೀಡಲಾಗಿದೆ.

ಸೀಟು ರದ್ದುಪಡಿಸಿಕೊಂಡು ಅಂತಿಮ ಸುತ್ತಿಗೆ ಅವಕಾಶ ಕೋರಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು, ಈವರೆಗಿನ ಸುತ್ತಿನಲ್ಲಿ ಸ್ಟಾರ್ ಬಂದಿರುವ ಹಾಗೂ ಯಾವುದೇ ಸೀಟು ಹಂಚಿಕೆಯಾಗದೇ ಇರುವ ಅಭ್ಯರ್ಥಿಗಳು & ಮೂಲ ದಾಖಲೆಗಳ ಪರಿಶೀಲನೆ ಮಾಡಿಸಿಕೊಂಡಿರುವ ಎಲ್ಲಾ ಅಭ್ಯರ್ಥಿಗಳು ಈ ಅಂತಿಮ ಸುತ್ತಿನ ಸೀಟು ಹಂಚಿಕೆಯಲ್ಲಿ Option entry ಮೂಲಕ ಕಾಲೇಜು ಆಯ್ಕೆ ಮಾಡಬಹುದಾಗಿದೆ.

ಬಿ.ಇಡಿ ಕೋರ್ಸಿಗೆ ಅಂತಿಮ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆಯ ವೇಳಾಪಟ್ಟಿ

ಮೂಲ ದಾಖಲೆಗಳ ಪರಿಶೀಲನೆ ದಿನಾಂಕ : 12-02-2024
ಅಭ್ಯರ್ಥಿಗಳು ಕಾಲೇಜುಗಳ ಆಯ್ಕೆ ಮಾಡಿಕೊಳ್ಳಲು ಅವಕಾಶ ದಿನಾಂಕ : 12-02-2024 ರಿಂದ 13-02-2024
ಆಯ್ಕೆ ಪಟ್ಟಿ ಪ್ರಕಟಣೆ ದಿನಾಂಕ : 15-02-2024
Online ಬ್ಯಾಂಕ್ ಚಲನ್ ಪಡೆದುಕೊಳ್ಳಲು ಕೊನೆಯ ದಿನಾಂಕ: 16-02-2024
ಅಭ್ಯರ್ಥಿಗಳು ಜಿಲ್ಲಾ ವ್ಯವಸ್ಥಾಪಕ ಕೇಂದ್ರದಲ್ಲಿ ಪ್ರವೇಶಾತಿ ಪತ್ರ ಪಡೆಯಲು ಕೊನೆಯ ದಿನಾಂಕ: 17-02-2024
ಕಾಲೇಜಿನಲ್ಲಿ ದಾಖಲಾತಿ ಪಡೆಯಲು ಕೊನೆಯ ದಿನಾಂಕ: 20-02-2024


ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಶಾಲಾ ಶಿಕ್ಷಣ ಇಲಾಖೆಯ ವೆಬ್‌ಸೈಟ್‌ ಭೇಟಿ ಮಾಡಿ www.schooleducation.karnataka.gov.in ಅಥವಾ CTE / DIET ನೋಡಲ್ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ.

ಬರ ಪರಿಹಾರದ ಹಣ ಎಲ್ಲಾ ರೈತರ ಖಾತೆಗೆ ಜಮಾ! ಬಾರದೇ ಇದ್ದರೆ ಈ ರೀತಿ ಮಾಡಿ

10th ಪಾಸಾದವರಿಗೆ ಸರ್ಕಾರಿ ಉದ್ಯೋಗ.! ಕೆಲಸ ಹುಡುಕುತ್ತಿದ್ದರೆ ಇವತ್ತೇ ಅರ್ಜಿ ಹಾಕಿ

Leave a Comment