ಹಲೋ ಸ್ನೇಹಿತರೇ, ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಸರ್ಕಾರಕ್ಕೆ ಈಗಲೂ ಕೂಡ ಹೆಚ್ಚುವರಿ ಅಕ್ಕಿ ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ಖಾತೆಗೆ ಅನ್ನಭಾಗ್ಯ ಯೋಜನೆಯ ಉಚಿತ ಅಕ್ಕಿಯ ಬದಲು ಹಣವನ್ನು ವರ್ಗಾವಣೆ ಮಾಡಲಾಗುತ್ತಿದೆ..
ಇದೀಗ ಅನ್ ಭಾಗ್ಯ ಯೋಜನೆಯ ಮತ್ತೊಂದು ಕಂತಿನ ಹಣವು ಬಿಡುಗಡೆ ಆಗಿದ್ದು ಫಲಾನುಭವಿಗಳು ತಕ್ಷಣ ತಮ್ಮ ಖಾತೆಯನ್ನು ಪರಿಶೀಲಿಸಿಕೊಳ್ಳುವುದು ಒಳ್ಳೆಯದು.
ಇಲ್ಲಿಯವರೆಗೆ ಬಿಡುಗಡೆ ಆಗಿದ್ದ ಕಂತಿನ ಹಣ ನಿಮ್ಮ ಖಾತೆಗೆ ಬಂದಿದ್ಯಾ? ಅಂತೆಯೇ ಈ ತಿಂಗಳ ಹಣ ನಿಮ್ಮ ಖಾತೆಗೆ ಬಾರದೇ ಇದ್ದರೆ ನೀವು ಇದಕ್ಕೆ ಸಂಬಂಧಪಟ್ಟ ಹಾಗೆ ದೂರು ಸಲ್ಲಿಸಬಹುದು ಅಥವಾ ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.
ಅನ್ನಭಾಗ್ಯ ಹಣದ ಡಿಬಿಟಿ ಸ್ಟೇಟಸ್ ಚೆಕ್ ಮಾಡಿ
https://ahara.kar.nic.in/lpg ಈ ಅಧಿಕೃತ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಈಗ ಒಂದು ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಬೇರ್ಬೇರೆ ಜಿಲ್ಲೆಗಳಿಗೆ ಸಂಬಂಧಪಟ್ಟಂತಹ ಅನೇಕ ಲಿಂಕ್ ಗಳು ಇರುತ್ತವೆ. ಆ ಲಿಂಕ್ಗಳ ಅಡಿಯಲ್ಲಿ ನಿಮ್ಮ ಜಿಲ್ಲೆಯ ಹೆಸರು ಮತ್ತು ವಿಳಾಸ ಇರುವುದನ್ನು ಪರಿಶೀಲಿಸಿಕೊಳ್ಳಿ. ಬಳಿಕ ಲಿಂಕ್ ಮೇಲೆ ಕ್ಲಿಕ್ ಮಾಡಿಕೊಳ್ಳಿ.
ಈಗ ಸ್ಟೇಟಸ್ ಆಫ್ ಡಿಬಿಟಿ ಎನ್ನುವ ಆಯ್ಕೆಯನ್ನು ಕಾಣುತ್ತೀರಿ ಅದರ ಮೇಲೆ ಕ್ಲಿಕ್ ಮಾಡಿ. ಅಲ್ಲಿ ನೀವು ವರ್ಷ, ತಿಂಗಳು ಆಯ್ಕೆ ಮಾಡಿ ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ. ನಂಬರ್ ಹಾಕಿ GO ಎಂದು ಕ್ಲಿಕ್ ಮಾಡಿ.
ರಾಜ್ಯದ ಎಲ್ಲಾ ರೈತರ ಸಾಲ ಮನ್ನಾ! ಮುಖ್ಯಮಂತ್ರಿಯವರ ಅಧಿಕೃತ ಘೋಷಣೆ
ಈಗ ನಿಮ್ಮ DBT ಸ್ಟೇಟಸ್ ನಿಮ್ಮ ಕಣ್ಣೆದುರು ಕಾಣಿಸುತ್ತದೆ. ನಿಮ್ಮ ಯಾವ ಬ್ಯಾಂಕ್ ಖಾತೆಗೆ ಎಷ್ಟು ಹಣ ಮಂಜೂರಾಗಿದೆ. ಎಷ್ಟು ಸದಸ್ಯರುಗಳು ನಿಮ್ಮ ಮನೆಯಲ್ಲಿ ಇದ್ದಾರೆ ಎಲ್ಲಾ ವಿವರಗಳನ್ನು ಕೂಡ ಇಲ್ಲಿ ಕಾಣಬಹುದು.
ಒಂದು ವೇಳೆ ನಿಮಗೆ ಅನ್ನಭಾಗ್ಯ ಯೋಜನೆಯ ಈ ಕಂತಿನ ಹಣ ಬಿಡುಗಡೆ ಆಗದೆ ಇದ್ದರೆ, ಪ್ರೋಸೆಸಿಂಗ್ ಎನ್ನುವ ಸಂದೇಶ ಕಾಣಿಸಿದರೆ ಸದ್ಯದಲ್ಲಿಯೇ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುತ್ತದೆ ಎಂದು ಅರ್ಥ.
ಇದನ್ನು ಹೊರತುಪಡಿಸಿ ಆಧಾರ್ ಸೀಡಿಂಗ್ ಆಗಿಲ್ಲ ಅಥವಾ ಇತರ ಯಾವುದೇ ರೀತಿಯ ಸಂದೇಶಗಳು ಕಂಡುಬಂದರು ನೀವು ನಿಮ್ಮ ಬ್ಯಾಂಕ್ ಖಾತೆಗೆ ಹೋಗಿ ಈಕೆ ವೈ ಸಿ ಪರಿಶೀಲಿಸಿ.
ಇತರೆ ವಿಷಯಗಳು:
ಸಿದ್ದರಾಮಯ್ಯ ಸರ್ಕಾರಕ್ಕೆ ಅಕ್ಕಿ ಸಿಗುತ್ತಿಲ್ಲ: ನಗದು ಜಮಾ ಯೋಜನೆ ಮುಂದುವರಿಕೆ!
ಏರ್ಟೆಲ್ ಹೊಸ ವರ್ಷದ ಕೊಡುಗೆ! ಕೇವಲ ರೂ.148 ವಿಶೇಷ ರೀಚಾರ್ಜ್ ಪ್ಲಾನ್ನಲ್ಲಿ ಬಂಪರ್ ಆಫರ್