rtgh

ಭಾರೀ ಮಳೆ ಎಫೆಕ್ಟ್: 9 ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಣೆ.!‌ ಅನೇಕ ಪರೀಕ್ಷೆಗಳು ಮುಂದೂಡಿಕೆ

ಹಲೋ ಸ್ನೇಹಿತರೇ, ವಾಯುಭಾರ ಕುಸಿತದಿಂದ ಭಾರೀ ಮಳೆಯಾಗಿದ್ದು 9 ಜಿಲ್ಲೆಯ ಶಾಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ ಎಲ್ಲೆಲ್ಲಿ ಮಳೆಯಾಗಿದೆ ಯಾವೆಲ್ಲ ಜಿಲ್ಲೆಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ ಮತ್ತು ಮುಂದೆ ಎಲ್ಲೆಲ್ಲಿ ಮಳೆಯಾಗಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

heavy rain school closed

ವಾಯುಭಾರ ಕುಸಿತದಿಂದ ನೆರೆಯ ರಾಜ್ಯ ತಮಿಳುನಾಡಿನಲ್ಲಿ ಭಾರೀ ಮಳೆಯಾಗಿದೆ, ಇದರಿಂದಾಗಿ ರಾಜ್ಯದ 9 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. 

ಕರ್ನಾಟಕದ ನೆರೆಯ ರಾಜ್ಯವಾದ ತಮಿಳುನಾಡಿನ ಹಲವು ಜಿಲ್ಲೆಗಳಲ್ಲಿ ಭಾರೀ ಮಲೆಯಾಗುತ್ತಿದ್ದು, ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೋಮವಾರ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತಮಿಳುನಾಡಿನ ನಾಗಪಟ್ಟಿಣಂ, ಕಿಲ್ವೇಲೂರು ತಾಲೂಕು, ವಿಲುಪ್ಪುರಂ, ಕಡಲೂರು, ರಾಣಿಪೇಟ್, ವೆಲ್ಲೂರು & ತಿರುವಣ್ಣಾಮಲೈ ಜಿಲ್ಲೆಗಳಲ್ಲಿ ಇಂದು ಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ.

ಇಡೀ ತಮಿಳುನಾಡಿನಲ್ಲಿ ಕಳೆದ 24 ಗಂಟೆಯಿಂದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ತಮಿಳುನಾಡಿನ ನಾಗಪಟ್ಟಿಣಂ ಜಿಲ್ಲೆಯಲ್ಲಿ ಜನವರಿ 7 ರಿಂದ ಜನವರಿ 8 ರವರೆಗೆ 16.7 ಸೆಂ.ಮೀ ಮಳೆ ಸುರಿದಿದೆ. ಇದಲ್ಲದೆ, ಕಾರೈಕಲ್ 12.2 ಸೆಂ.ಮೀ., ಪುದುಚೇರಿ 9.6 ಸೆಂ.ಮೀ., ಕಡಲೂರು 9.3 ಸೆಂ.ಮೀ. & ಎನ್ನೋರ್ 9.2 ಸೆಂ.ಮೀ ಮಳೆಯು ವರದಿಯಾಗಿದೆ. 

ಇದಲ್ಲದೆ ಕುಲಸಚಿವರು ಹೊರಡಿಸಿರುವ ಒಂದು ಅಧಿಸೂಚನೆಯ ಪ್ರಕಾರ, ಭಾರೀ ಮಳೆಯಿಂದಾಗಿ ವಿಶ್ವವಿದ್ಯಾನಿಲಯ & ಅದರ ಸಂಯೋಜಿತ ಕಾಲೇಜುಗಳಲ್ಲಿ ಜನವರಿ 8 ರಂದು ನಿಗದಿಯಾಗಿದ್ದ ಎಲ್ಲಾ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಪರೀಕ್ಷೆಯ ಹೊಸ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ. 


ಪುದುಚೇರಿಯಲ್ಲಿ ಶಾಲೆಗಳಿಗೆ ರಜೆ: 
ಪುದುಚೇರಿಯಲ್ಲಿ ಭಾರೀ ಮಳೆಯಿಂದಾಗಿ ಪುದುಚೇರಿ ಸರ್ಕಾರವು ಜನವರಿ 8 ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದೆ. 

ಟ್ರಾಫಿಕ್ ಜಾಮ್ ಸಮಸ್ಯೆಗೂ ಕಾರಣವಾದ ಭಾರೀ ಮಳೆ: 
ಇನ್ನೂ ಬಿಟ್ಟು ಬಿಡದೆ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಭಾನುವಾರ ಸಂಜೆ ತಮಿಳುನಾಡಿನ ಕೆಲವು ಭಾಗಗಳಲ್ಲಿ  ಟ್ರಾಫಿಕ್ ಜಾಮ್ ಉಂಟಾಗಿದೆ. 

ಪ್ರವಾಹ ಪರಿಸ್ಥಿತಿ: 
ಶನಿವಾರವೂ ಪಶ್ಚಿಮ ಘಟ್ಟದಲ್ಲಿ ಸುರಿದ ಭಾರಿ ಮಳೆಗೆ ತಮಿಳುನಾಡಿನ ತೆಂಕಶಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿರುವ ಹಳೆಯ ಕುರ್ಟಾಲಂ ಜಲಪಾತವು ಪ್ರವಾಹದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪ್ರದೇಶದಲ್ಲಿ ಭಾರೀ ಪ್ರವಾಹದ ಕಾರಣದಿಂದ, ಜಿಲ್ಲೆಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ಹಳೆಯ ಕುರ್ಟಾಲಂ ಜಲಪಾತದ ಪಕ್ಕದ ಜಲಪಾತಗಳ ಬಳಿ ಪ್ರವಾಸಿಗರು ನೀರಿಗೆ ಇಳಿಯುವುದನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿಕೆ ನೀಡಿದ್ದಾರೆ.

ಐಎಂಡಿ ಮುನ್ಸೂಚನೆ: 
ಮುಂದಿನ 7 ದಿನಗಳ ಕಾಲ ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ  & ಹವಾಮಾನ ಕಚೇರಿಯು ಭಾನುವಾರ ರಾಜ್ಯದ 10 ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದೆ ಎಂದು ಚೆನ್ನೈನಲ್ಲಿರುವ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.

ವಿಲ್ಲುಪುರಂ, ತಿರುವಣ್ಣಾಮಲೈ, ರಾಣಿಪೇಟ್, ವೆಲ್ಲೂರು, ತಿರುವಳ್ಳೂರು, ಚೆನ್ನೈ, ರಾಮನಾಥಪುರಂ, ತೂತುಕುಡಿ & ತಿರುನಲ್ವೇಲಿ ಎಲ್ಲಾ ಜಿಲ್ಲೆಗಳು & ಪುದುಚೇರಿಯ ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತನ್ನ ನಿಯಮಿತ ಬುಲೆಟಿನ್‌ನಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದೆ. 

ಹೊಸ ಲೇಬರ್‌ ಕಾರ್ಡ್‌ ಪಡೆಯಲು ಅರ್ಜಿ ಆಹ್ವಾನ.! ನೀವು ಪಡೆದುಕೊಳ್ಳಬೇಕಾ? ಹಾಗಿದ್ದರೆ ತಕ್ಷಣ ಈ ಕೆಲಸ ಮಾಡಿ

ನಿರುದ್ಯೋಗಿ ಯುವಕರಿಗೆ ಬಿಗ್‌ ಅಪ್ಡೇಟ್.!!‌ ಯುವನಿಧಿ ಯೋಜನೆಯ ಅರ್ಜಿ ಸಲ್ಲಿಕೆಗೆ ಕೊನೆ ದಿನಾಂಕ ಫಿಕ್ಸ್;‌ ಬೇಗ ಈ ಕೆಲಸ ಮಾಡಿ

Leave a Comment