ಹಲೋ ಸ್ನೇಹಿತರೇ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ರೈತರಿಗೆ ಒಂದು ವರ್ಷಕ್ಕೆ ಒದಗಿಸುವ 6,000 ರೂ ಹಣವನ್ನು 8,000 ರೂಗಳಿಗೆ ಏರಿಸುವ ಸಾಧ್ಯತೆಯಿದೆ. ಏಪ್ರಿಲ್ ಮೇ ತಿಂಗಳಲ್ಲಿ ನಡೆಯುವ ಲೋಕಸಭೆ ಚುನಾವಣೆಗೆ ಮುನ್ನ ಯೋಜನೆಗಳ ಹಣ ಹೆಚ್ಚಿಸುವ ನಿರ್ಧಾರ ಪ್ರಕಟಿಸಲಾಗುತ್ತದೆ ಈ ಯೋಜನೆಯ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ತಿಳಿಯಲು ನಮ್ಮ ಲೇಖನವನ್ನು ಕೊನೆಯವರೆಗು ಓದಿ.
ಜನವರಿ 8: ರೈತರ ವ್ಯವಸಾಯಕ್ಕೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರ ಹಣ ಸಹಾಯ ಒದಗಿಸುವ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಹಣದ ಮೊತ್ತ ಹೆಚ್ಚಿಸಲು ಕೇಂದ್ರ ಸರ್ಕಾರ ಚಿಂತಿಸಿದೆ. ವರ್ಷದ ಹಿಂದೆಯೇ ಈ ಬಗ್ಗೆ ವರದಿಗಳನ್ನು ನೀಡಲಾಗಿದ್ದು. ಈಗ ಈ ವಿಷಯ ದಟ್ಟವಾಗುತ್ತಿದೆ. ಸದ್ಯ ವರ್ಷಕ್ಕೆ ಒಟ್ಟು 6,000 ರೂಗಳು 3 ಕಂತುಗಳಲ್ಲಿ ಸರ್ಕಾರ ಫಲಾನುಭವಿಗಳ ಖಾತೆಗೆ ಒದಗಿಸುತ್ತಿದೆ. ಈ ಹಣವನ್ನು 8 ಸಾವಿರ ರೂ. ಗೆ ಹೆಚ್ಚಿಸಬಹುದು. ಈ 8 ಸಾವಿರ ರೂ ಹಣವನ್ನು 4 ಕಂತುಗಳಲ್ಲಿ ಕೊಡುಲು ಸರ್ಕಾರದ ಚಿಂತನೆ ಆಗಿದೆ ಎಂದು ಮೂಲಗಳನ್ನು ತಿಳಿಸಿದೆ ಸಿಎನ್ಬಿಸಿ ಟಿವಿ 18 ವಾಹಿನಿಯಲ್ಲಿ ವರದಿ ಮಾಡಲಾಗಿದೆ. ಈ ವರದಿಯ ಪ್ರಕಾರ ಲೋಕಸಭೆಗೆ ಮುನ್ನ ಸರ್ಕಾರದಿಂದ ಘೋಷಣೆ ಆಗುವ ಸಾಧ್ಯತೆಯಿದೆ.
ಪಿಎಂ ಕಿಸಾನ್ ಯೋಜನೆ ಮಾತ್ರವಲ್ಲದೆ ಪಿಎಂ ಗರೀಬ್ ಕಲ್ಯಾಣ್ ಯೋಜನೆಯ ಮೊತ್ತವನ್ನೂ ಕೂಡ ಸರ್ಕಾರ ಹೆಚ್ಚಿಸುವ ಸಾಧ್ಯತೆಯಿದೆ ಏಪ್ರಿಲ್ & ಮೇ ತಿಂಗಳಲ್ಲಿ ಲೋಕಸಭೆ ಚುನಾವಣೆ ನಡೆಯುವ ಸಾಧ್ಯತೆ ಇದೆ, ಫೆಬ್ರುವರಿಯಲ್ಲಿ ಸರ್ಕಾರದಿಂದ ಇದರ ಬಗ್ಗೆ ಪ್ರಕಟಣೆ ಹೊರಡಿಸಲಾಗುತ್ತದೆ.
ಪಿಎಂ ಕಿಸಾನ್ ಯೋಜನೆಯಲ್ಲಿ ಪ್ರತೀ 4 ತಿಂಗಳಿಗೊಮ್ಮೆ ಫಲಾನುಭವಿ ರೈತರ ಬ್ಯಾಂಕ್ ಖಾತೆಗಳಿಗೆ 2,000 ರೂ ಹಣವನ್ನು ಸರ್ಕಾರ ವರ್ಗಾವಣೆ ಮಾಡುತ್ತದೆ. ಈಗ ಕಂತುಗಳ ಸಂಖ್ಯೆಯನ್ನು 3 ರಿಂದ 4ಕ್ಕೆ ಹೆಚ್ಚಿಸಬಹುದು. ಅಂದರೆ, ಪ್ರತೀ 3 ತಿಂಗಳಿಗೊಮ್ಮೆ ರೈತರಿಗೆ 2,000 ರೂ ಸಿಗುತ್ತದೆ.
2019ರಲ್ಲಿ ಆರಂಭವಾದ ಪಿಎಂ ಕಿಸಾನ್ ಯೋಜನೆಯಲ್ಲಿ ಇದೂವರೆಗೂ 15 ಕಂತುಗಳನ್ನು ಸರ್ಕಾರ ನೀಡಿದ್ದು. ಒಟ್ಟಾರೆ 2.75 ಲಕ್ಷ ಕೋಟಿ ರೂ ಹಣ ರೈತರ ಖಾತೆಗಳಿಗೆ ಹಾಕಿದೆ.
15ನೇ ಕಂತಿನ ಹಣವನ್ನು ನವೆಂಬರ್ 15ರಂದು ಹಾಕಲಾಗಿದ್ದು. ಅದಕ್ಕೂ ಹಿಂದಿನ 14ನೇ ಕಂತಿನ ಹಣ ಜುಲೈ ಕೊನೆಯ ವಾರದಲ್ಲಿ ನೀಡಲಾಗಿದ್ದು. ಫೆಬ್ರುವರಿ 27ರಂದು ಬೆಳಗಾವಿಯ ಸಮಾವೇಶವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 13ನೇ ಕಂತಿನ ಹಣವನ್ನು ಬಿಡುಗಡೆ ಘೋಷಿಸಿದ್ದರು.
ಇತರೆ ವಿಷಯಗಳು
ಅತಿಥಿ ಉಪನ್ಯಾಸಕರಿಗೆ ಎಳ್ಳು-ಬೆಲ್ಲ ನೀಡಿದ ಸರ್ಕಾರ: ತಿಂಗಳಿಗೆ 8000 ರೂ.ವರೆಗೆ ವೇತನ ಹೆಚ್ಚಳ
ರೈತರಿಗೆ ಗುಡ್‌ನ್ಯೂಸ್ ಕೊಟ್ಟ ಸರ್ಕಾರ! 1 ಲಕ್ಷ ಕೆಸಿಸಿ ಸಾಲ ಮನ್ನಾ, ಹೊಸ ಪಟ್ಟಿ ಬಿಡುಗಡೆ