ಹಲೋ ಸ್ನೇಹಿತರೇ, ಸರ್ಕಾರವು ಜಿಎಸ್ಟಿ ನಿಯಮದಲ್ಲಿ ಹೊಸ ಬದಲಾವಣೆಯನ್ನು ಮಾಡಲು ನಿರ್ಧಾರವನ್ನು ಮಾಡಿದೆ ಏನು ಆ ಹೊಸ ಬದಲಾವಣೆ ಮತ್ತು ಯಾಕೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಸರಕು & ಸೇವಾ ತೆರಿಗೆ ಜಿಎಸ್ಟಿ ವ್ಯವಸ್ಥೆಯಡಿ, 50,000 ರೂ.ಗಿಂತ ಹೆಚ್ಚಿನ ಮೌಲ್ಯದ ಸರಕನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸಲು ಇ-ವೇ ಬಿಲ್ ಹೊಂದಿರುವುದು ಅತ್ಯಗತ್ಯ.
5 ಕೋಟಿಗಿಂತ ಹೆಚ್ಚಿಗೆಯ ವಹಿವಾಟನ್ನು ಹೊಂದಿರುವ ವ್ಯಾಪಾರಗಳು ಮಾರ್ಚ್ 1 ರಿಂದ ಇ-ಇನ್ವಾಯ್ಸ್ ನೀಡದೆ ಎಲ್ಲಾ ವ್ಯವಹಾರ ವಹಿವಾಟುಗಳಿಗೆ ಇ-ವೇ ಬಿಲ್ನ್ನು ನೀಡಲು ಸಾಧ್ಯವಾಗುವುದಿಲ್ಲ. ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯವಸ್ಥೆಯಡಿ, 50,000 ರೂ.ಗಿಂತ ಹೆಚ್ಚಿನ ಮೌಲ್ಯದ ಸರಕುಗಳನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಾಗಿಸಲು ಇ-ವೇ ಬಿಲ್ ಹೊಂದಿರುವುದು ಅವಶ್ಯಕ.
ವಿಶ್ಲೇಷಣೆಯ ಆಧಾರದ ಮೇರೆಗೆ ರಾಷ್ಟ್ರೀಯ ಮಾಹಿತಿ ಕೇಂದ್ರ ಎನ್ಐಸಿ, ಇ-ಇನ್ವಾಯ್ಸ್ಗಾಗಿ ಕೆಲವು ಅರ್ಹ ತೆರಿಗೆದಾರರು ಬಿ2ಬಿ ಸಂಸ್ಥೆಯಿಂದ ಸಂಸ್ಥೆಗೆ & ಬಿ2ಇ ರಫ್ತುದಾರರಿಗೆ ಕಂಪನಿಗಳಿಗೆ ವಹಿವಾಟುಗಳಿಗೆ ಇ-ವೇ ಬಿಲ್ಗಳನ್ನು ಬಳಸುತ್ತಿಲ್ಲ ಎಂಬುದನ್ನೂ ಪತ್ತೆಹಚ್ಚಲಾಗಿದೆ.
ಇ-ವೇ ಬಿಲ್ ಮತ್ತು ಇ-ಇನ್ವಾಯ್ಸ್ ಸ್ಟೇಟ್ಮೆಂಟ್ ನಡುವೆ ಹೊಂದಾಣಿಕೆಯಿಲ್ಲ
ಈ ಕೆಲವು ಪ್ರಕರಣದಲ್ಲಿ, ಇ-ವೇ ಬಿಲ್ & ಇ-ಇನ್ವಾಯ್ಸ್ ಅಡಿಯಲ್ಲಿ ಪ್ರತ್ಯೇಕವಾಗಿ ಸಲ್ಲಿಸಲಾದ ಚಲನ್ ಸ್ಟೇಟ್ಮೆಂಟ್ ಕೆಲವು ಪ್ಯಾರಾಮೀಟರ್ಗಳಲ್ಲಿ ಹೊಂದಾಣಿಕೆಯಾಗುವುದಿಲ್ಲ. ಈ ಕಾರಣದಿಂದಾಗಿ, ಇ-ವೇ ಬಿಲ್ & ಇ-ಇನ್ವಾಯ್ಸ್ ಸ್ಟೇಟ್ಮೆಂಟ್ ನಡುವೆ ಯಾವುದೇ ಹೊಂದಾಣಿಕೆ ಇಲ್ಲ ಎಂದು ಕೇಂದ್ರವು ಹೇಳಿಕೆ ನೀಡಿದೆ.
ಇಂತಹ ಸಂದರ್ಭವನ್ನು ತಪ್ಪಿಸಲು, ಮಾರ್ಚ್ 1, 2024 ರಿಂದ ಇ-ಚಲನ್ ಸ್ಟೇಟ್ಮೆಂಟ್ ಇಲ್ಲದೆ ಇ-ವೇ ಬಿಲ್ ಅನ್ನು ತಯಾರಿಸಲು ಅನುಮತಿಸುವುದಿಲ್ಲ ಎಂದು ಎನ್ಐಸಿ ಜಿಎಸ್ಟಿ ತೆರಿಗೆದಾರರಿಗೆ ಮಾಹಿತಿಯನ್ನು ನೀಡಿದ್ದಾರೆ. ಈ ಇ-ಇನ್ವಾಯ್ಸ್ ಅರ್ಹ ತೆರಿಗೆದಾರರಿಗೆ & ವ್ಯಾಪಾರ & ರಫ್ತಿನ ಅಡಿಯಲ್ಲಿ ಪೂರೈಕೆಗಳಿಗೆ ಸಂಬಂಧಿಸಿದ ವಹಿವಾಟುಗಳಿಗೆ ಅನ್ವಯಿಸುತ್ತದೆ. ಆದಾಗ್ಯೂ, ಗ್ರಾಹಕರು ಅಥವಾ ಸರಬರಾಜು ಮಾಡದ ಇತರ ವಹಿವಾಟುಗಳಿಗೆ ಇ-ವೇ ಬಿಲ್ ಮೊದಲಿನಂತೆಯೇ ಮುಂದುವರಿಯುತ್ತದೆ ಎಂದು ಎನ್ಐಸಿ ಸ್ಪಷ್ಟನೆಯನ್ನು ನೀಡಿದೆ.
ಇತರೆ ವಿಷಯಗಳು
ಅತಿಥಿ ಉಪನ್ಯಾಸಕರಿಗೆ ಎಳ್ಳು-ಬೆಲ್ಲ ನೀಡಿದ ಸರ್ಕಾರ: ತಿಂಗಳಿಗೆ 8000 ರೂ.ವರೆಗೆ ವೇತನ ಹೆಚ್ಚಳ
ರೈತರಿಗೆ ಗುಡ್ನ್ಯೂಸ್ ಕೊಟ್ಟ ಸರ್ಕಾರ! 1 ಲಕ್ಷ ಕೆಸಿಸಿ ಸಾಲ ಮನ್ನಾ, ಹೊಸ ಪಟ್ಟಿ ಬಿಡುಗಡೆ