rtgh

ಗೃಹಲಕ್ಷ್ಮಿ 5ನೇ ಕಂತಿನ ಹಣಕ್ಕೆ ಬೀಳಲಿದೆ ಬ್ರೇಕ್.!! ಈ ಕೆಲಸ ಮಾಡಿಲ್ಲ ಅಂದ್ರೆ ನಿಮಗಿಲ್ಲ ಉಚಿತ ಹಣ

ಹಲೋ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆ ನಾಲ್ಕು ಕಂತಿನ ಹಣ ಬಹುತೇಕ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಬಿಡುಗಡೆ ಆಗಿದೆ. ಕೋಟ್ಯಾಂತರ ಮಹಿಳೆಯರು ಈ ಯೋಜನೆಯ ಮೂಲಕ ಲಾಭವನ್ನು ಈಗಾಗಲೇ 8,000ರೂ.ಗಳನ್ನು ಪಡೆದುಕೊಂಡಿದ್ದಾರೆ. ಇನ್ನೂ ಕೂಡ ನಾವು ಈ ಬಗ್ಗೆ ಅನೇಕ ಮಾಹಿತಿಯನ್ನು ನಾವು ನಿಮಗೆ ತಿಳಿಸಿಕೊಡಲಿದ್ದೇವೆ. ಅದಕ್ಕಾಗಿ ಕೊನೆವರೆಗೂ ಓದಿ.

gruhalakshmi kyc update

ಯಾರಿಗೆಲ್ಲ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲವೋ, ಅವರಿಗೆ ಹಣ ಬರುವಂತೆ ಮಾಡಲು ರಾಜ್ಯ ಸರ್ಕಾರ ಈಗಾಗಲೇ ಗೃಹಲಕ್ಷ್ಮಿ ಅದಾಲತ್, ಗೃಹಲಕ್ಷ್ಮಿ ಕ್ಯಾಂಪ್ ಮೊದಲಾದ ಉಪಕ್ರಮಗಳ ಮೂಲಕ ಖಾತೆಗೆ ಹಣ ಜಮಾ ಮಾಡಲು ಪ್ರಯತ್ನಿಸಿದೆ.

ಗೃಹಲಕ್ಷ್ಮಿ ಯೋಜನೆಯ ಹಣ ಪ್ರತಿ ತಿಂಗಳು ನಿಮ್ಮ ಖಾತೆಗೆ ಜಮಾ ಆಗಬೇಕು ಅಂದ್ರೆ ಸರ್ಕಾರದ ಕೆಲವು ನಿಯಮಗಳನ್ನು ಪಾಲಿಸಲೇಬೇಕು. ಈಗಾಗಲೇ ಸರ್ಕಾರ ನಿಗದಿಪಡಿಸಿರುವ ನಿಯಮಗಳನ್ನು ಪಾಲಿಸದೆ ಇದ್ದರೆ ಅಂತವರ ಖಾತೆಗೆ ಮುಂದಿನ ತಿಂಗಳ ಹಣ ಜಮಾ ಆಗುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

E-KYC ಕಡ್ಡಾಯ

ಗೃಹಿಣಿಯರು 5ನೇ ಕಂತಿನ ಹಣ ತನ್ನ ಖಾತೆಗೆ ಬರಬೇಕು ಎಂದಾದರೆ, ಕಡ್ಡಾಯವಾಗಿ ಈ ಕೆ ವೈ ಸಿ(E-kyc) ಮಾಡಿಸಿಕೊಳ್ಳಲೇಬೇಕು. ಈಗಾಗಲೇ ಸರ್ಕಾರವು ಹೊರಡಿಸಿರುವ ಮತ್ತೊಂದು ಸುತ್ತೋಲೆಯ ಪ್ರಕಾರ ಗೃಹಲಕ್ಷ್ಮಿ ಯೋಜನೆಯ ಹಣ ಬರಲು ಯಾರ ಹೆಸರಿಗೆ ತೆರೆಯಲಾಗಿದೆಯೋ ಅವರ ಖಾತೆಗೆ ಮಾತ್ರವಲ್ಲದೆ ರೇಷನ್ ಕಾರ್ಡ್ ನಲ್ಲಿ ಹೆಸರು ಇರುವ ಪ್ರತಿಯೊಬ್ಬ ಸದಸ್ಯರು ಕೂಡ ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.

ನಿಮ್ಮ ಬ್ಯಾಂಕ್ ಖಾತೆಗೆ ಇಕೆವೈಸಿ ಆಗಿದ್ಯೋ ಇಲ್ಲವೋ ಚೆಕ್ ಮಾಡಿ

ಇದಕ್ಕಾಗಿ ಮೊದಲು https://ahara.kar.nic.in/Home/EServices ಈ ವೆಬ್ ಸೈಟ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ಮೂರು ಲೈನ್ ಗಳ ಮೇಲೆ ಕ್ಲಿಕ್ ಮಾಡಿ, ಮೂರನೇಯ ಆಯ್ಕೆಯಾಗಿರುವ ಈ ಸ್ಥಿತಿಯನ್ನು ಆಯ್ಕೆ ಮಾಡಿಕೊಳ್ಳಿ. ಈ ಸ್ಥಿತಿ ಮೇಲೆ ಕ್ಲಿಕ್ ಮಾಡಿದ ನಂತರ, ಹೊಸ ಮತ್ತು ಚಾಲ್ತಿಯಲ್ಲಿರುವ ರೇಷನ್ ಕಾರ್ಡ್ ತಿದ್ದುಪಡಿ ಸ್ಥಿತಿ ಎನ್ನುವ ಆಯ್ಕೆಯನ್ನು ಕಾಣುತ್ತೀರಿ. ಅದರ ಮೇಲೆ ನೀವು ಕ್ಲಿಕ್ ಮಾಡಿ.


ಕೇಂದ್ರದಿಂದ ಹಣ ಪಡೆಯುವವರಿಗೆ ಶಾಕ್.!!‌ ಅಪ್ಪ ಮಗನಿಗೂ ಬರುತ್ತಾ ಕಿಸಾನ್‌ ಸಮ್ಮಾನ್ ಹಣ?? ಇಲ್ಲಿದೆ ಕಂಪ್ಲೀಟ್‌ ಅಪ್ಡೇಟ್

ಕ್ಲಿಕ್ ಮಾಡಿದರೆ ನಿಮಗೆ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಮೂರು ಲಿಂಕ್ ಗಳನ್ನು ಕಾಣಬಹುದು. ಆ ಲಿಂಕ್ ನ ಕೆಳಗೆ ಕೊಡಲಾಗಿರುವ ಜಿಲ್ಲೆಗಳನ್ನು ನೋಡಿ ನಿಮ್ಮ ಜಿಲ್ಲೆಯು ಯಾವುದು ಎಂಬುದನ್ನು ಆಯ್ಕೆ ಮಾಡಿ ಅದರ ಮೇಲಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ. ಈಗ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನೀವು ಓಟಿಪಿ ಅಥವಾ ವಿಥೌಟ್ ಓಟಿಪಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ ಲಾಗಿನ್ ಆಗಬೇಕು.

ವಿಥ್ ಓಟಿಪಿ ಎಂದು ಆಯ್ಕೆ ಮಾಡಿಕೊಳ್ಳಿ, ನೀವು ನಿಮ್ಮ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿದ್ರೆ ನಿಮ್ಮ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಕಳುಹಿಸಲಾಗುತ್ತದೆ. ನಂತರ ಮೊಬೈಲ್ ಗೆ ಬಂದಿರುವ ಓಟಿಪಿಯನ್ನು ನಮೂದಿಸಿ, ಗೊ(Go) ಎನ್ನುವ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.

ಈಗ ನಿಮ್ಮ ರೇಷನ್ ಕಾರ್ಡ್ ನಲ್ಲಿ ಇರುವ ಯಾರ ಹೆಸರಿಗೆ ಈಕೆವೈಸಿ ಆಗಿದೆ, ಎಂಬುದನ್ನು ಚೆಕ್ ಮಾಡಲು ಸದಸ್ಯರ ಹೆಸರಲ್ಲಿ ಯಾರ ಹೆಸರು ಬೇಕೋ ಆ ಹೆಸರನ್ನು ಆಯ್ಕೆ ಮಾಡಿ. ಬಳಿಕ ನಿಮ್ಮ ಆಯ್ಕೆಯು ಹೆಸರಿಗೆ, ಉಳಿದ ಸದಸ್ಯರ ಹೆಸರಿಗೆ ಕೆವೈಸಿ ಆಗಿದೆಯೋ ಅಥವಾ ಇಲ್ಲವೋ ಎಂದು ತಿಳಿಯಬಹುದು. ಆಗಿದ್ದರೆ ಎಸ್ ಎನ್ನುವ ಸಂದೇಶ ಕಾಣುತ್ತೀರಿ.

ಈ ರೀತಿ ನೀವು ಕೆವೈಸಿ ಮಾಹಿತಿ ಪಡೆದುಕೊಳ್ಳಿ. ಒಂದು ವೇಳೆ ನಿಮ್ಮ ಕೆವೈಸಿ ಆಗದೇ ಇದ್ದರೆ, ಬ್ಯಾಂಕ್ ಗೆ ಹೋಗಿ ಮಾಡಿಸಿಕೊಳ್ಳಿ. ಒಂದು ವೇಳೆ ಕೆವೈಸಿ ಆಗದೆ ಇದ್ದರೆ, ಮುಂದಿನ ತಿಂಗಳ ಗೃಹ ಲಕ್ಷ್ಮಿ ಹಣ ಫಲಾನುಭವಿ ಮಹಿಳೆಯ ಖಾತೆಗೆ ಬರಲು ಸಾಧ್ಯವಿಲ್ಲ ಎಂಬುದನ್ನು ನೆನಪಿಡಿ.

ಅಂತ್ಯೋದಯ ಕಾರ್ಡ್ ಇದ್ದವರಿಗೆ ಭರ್ಜರಿ ಆಫರ್! 2028 ರವರೆಗೆ ಸಿಲಿದೆ ಉಚಿತ ರೇಷನ್‌

ಕಾರ್ಮಿಕ ಕಾರ್ಡ್ ಇದ್ದವರಿಗೆ ಬಂಪರ್! ಕೇಂದ್ರ ಸರ್ಕಾರದಿಂದ ಈ ತಿಂಗಳ ಹಣ ಖಾತೆಗೆ

Leave a Comment