ಹಲೋ ಸ್ನೇಹಿತರೇ, ಕಳೆದ ಆರು ತಿಂಗಳಿನಿಂದ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ ಯಶಸ್ವಿಯಾಗಿ ನಡೆಯುತ್ತಿದೆ. ಆರಂಭದಲ್ಲಿ ಕೆಲವು ಗೊಂದಲಗಳು ಇದ್ದರೂ ಕೂಡ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ತಪ್ಪದೇ ಸರ್ಕಾರದಿಂದ ಹಣ ವರ್ಗಾವಣೆ ಆಗುತ್ತಿದೆ.
ಕೋಟ್ಯಾಂತರ ಮಹಿಳೆಯರು ಅರ್ಜಿ ಸಲ್ಲಿಸಿ ಇನ್ನೂ ಕೆಲವು ಮಹಿಳೆಯರಿಗೆ ಮಾತ್ರ ಹಣ ವರ್ಗಾವಣೆ ಆಗುತ್ತಿಲ್ಲ ಎಂಬುದನ್ನು ಹೊರತುಪಡಿಸಿದರೆ, ಹೆಚ್ಚಿನ ಮಹಿಳೆಯರು ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಮಹಿಳೆಯರನ್ನು ಆರ್ಥಿಕವಾಗಿ ಬೆಂಬಲಿಸುವುದಕ್ಕೆ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಲಾಗಿರುವ ಗೃಹಲಕ್ಷ್ಮಿ ಯೋಜನೆ ಹಾಗೂ ಶಕ್ತಿ ಯೋಜನೆ ಬಹಳ ನೆರವಾಗಿದೆ ಎಂದು ಹೇಳಬಹುದು.
ಗೃಹಲಕ್ಷ್ಮಿ ಐದನೇ ಕಂತು ಬಿಡುಗಡೆ ಆಯ್ತು
ಮಹಿಳೆಯರಿಗೆ ಜನವರಿ ತಿಂಗಳು ಬಂಪರ್ ತಿಂಗಳು ಎಂದೇ ಹೇಳಬಹುದು. ಯಾಕೆ ಅಂದ್ರೆ ಗೃಹಲಕ್ಷ್ಮಿಯ ಎರಡು ಕಂತುಗಳು ಇದೇ ತಿಂಗಳಿನಲ್ಲಿ ಬಿಡುಗಡೆ ಆಗಿವೆ. 4 ಹಾಗೂ 5ನೇ ಕಂತಿನ ಹಣ ಒಟ್ಟು ನಾಲ್ಕು ಸಾವಿರ ರೂಪಾಯಿಗಳು ಜನವರಿ ತಿಂಗಳಲ್ಲಿ ಮಹಿಳೆಯರ ಖಾತೆ ತಲುಪಿವೆ.
ಫೆಬ್ರುವರಿ ಮೊದಲ ವಾರದಲ್ಲಿ 6ನೇ ಕಂತಿನ ಹಣವು ಕೂಡ ಬಿಡುಗಡೆ ಆಗಲಿದೆ. ಹಣ ಪಡೆದುಕೊಳ್ಳಲು ಸಾಧ್ಯವಾಗದೇ ಇರುವ ಗೃಹಿಣಿಯರು ತಮ್ಮ ಖಾತೆಯಲ್ಲಿ ಇರುವ ಸಮಸ್ಯೆ ಪರಿಹರಿಸಿಕೊಂಡಿದ್ದರೆ, ಅಂತಹವರಿಗೆ ಕನಿಷ್ಠ 2 ಕಂತಿನ ಹಣವನ್ನಾದರೂ ಒಟ್ಟಿಗೆ ಪಡೆದುಕೊಳ್ಳಲು ಸಾಧ್ಯವಿದೆ.
ಇನ್ನು ಯಾರು ಹಣ ಪಡೆದುಕೊಳ್ಳಲು ಸಾಧ್ಯವಾಗಿಲ್ಲವೋ ಅಂತವರಿಗೆ ಯಾವುದೇ ರೀತಿಯ ವಂಚನೆ ಆಗುವುದಿಲ್ಲ. ಅರ್ಜಿ ಸಲ್ಲಿಸಿದ ಪ್ರತಿಯೊಬ್ಬ ಮಹಿಳೆಯರ ಖಾತೆಗೂ ಹಣ ಬಿಡುಗಡೆ ಆಗುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಭರವಸೆ ನೀಡಿದ್ದಾರೆ.
ಮಹಿಳೆಯರಿಗೆ ಸೂಪರ್ ಡೂಪರ್ ಆಫರ್.!! ಸರ್ಕಾರದಿಂದ ಬಂತು ಹೊಸ ಸ್ಕೀಮ್
ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಡಿಬಿಟಿ ಸ್ಟೇಟಸ್
- ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಪ್ಲೇ ಸ್ಟೋರ್ ಗೆ ಹೋಗಿ ಮತ್ತು DBT Karnataka ಎನ್ನುವ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ.
- ಇದು ನಿಮ್ಮ ಮೊಬೈಲ್ ನಲ್ಲಿ ಇನ್ಟಾಲ್ ಮಾಡಿಕೊಂಡು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಿ.
- ಏಕೆ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ ಒಂದು ಓಟಿಪಿ ಕಳುಹಿಸಲಾಗುತ್ತದೆ. ಅದನ್ನ ನಮೂದಿಸಿ. ಬಳಿಕ 4 ಅಂಕೆಯ mPIN ಹಾಕಿ, ಲಾಗಿನ್ ಆಗಿ. ಈ ಸಂಖ್ಯೆಯನ್ನು ನಿಮ್ಮ ಮೊಬೈಲ್ ಅಪ್ಲಿಕೇಶನ್ ನ ಪಾಸ್ವರ್ಡ್ ಆಗಿರುತ್ತದೆ.
- ಲಾಗಿನ್ ಆದ ಬಳಿಕ ತೆರೆದುಕೊಳ್ಳುತ್ತದೆ. ಇಲ್ಲಿ ನಾಲ್ಕು ಆಯ್ಕೆಗಳನ್ನು ಕಾಣಬಹುದು. Payment, bank account details, profile and contact. ನಾಲ್ಕು ಆಯ್ಕೆಯಲ್ಲಿ ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿದ್ರೆ ಯಾವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂಬುದು ತೋರಿಸುತ್ತದೆ.
ಪ್ರೊಫೈಲ್ ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಹೆಸರು ಮೊಬೈಲ್ ಸಂಖ್ಯೆ ಮೊದಲಾದ ಮಾಹಿತಿಗಳು ಲಭ್ಯವಾಗುತ್ತವೆ. ಪೇಮೆಂಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿದ್ರೆ ಸರ್ಕಾರದಿಂದ ಡಿಬಿಟಿ ಆಗಿರುವ ಯಾವುದೇ ಯೋಜನೆಯ ಹಣ ನಿಮ್ಮ ಖಾತೆಗೆ ಬಂದಿದ್ರೆ ಆ ಸಂಪೂರ್ಣ ವಿವರ ಕಾಣಿಸುತ್ತದೆ. ಕಾಂಟಾಕ್ಟ್ ನಲ್ಲಿ ಮೊಬೈಲ್ ಸಂಖ್ಯೆ ಕಾಣಿಸುತ್ತದೆ.
ಹೀಗೆ ಈ ಒಂದು ಮೊಬೈಲ್ ಅಪ್ಲಿಕೇಶನ್ ಮೂಲಕ ನೀವು ಗೃಹಲಕ್ಷ್ಮಿ ಯೋಜನೆಯ ಹಾಗೂ ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿರುವ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಇತರೆ ವಿಷಯಗಳು:
ಪ್ರತಿಯೊಬ್ಬರ ಖಾತೆಗೆ ಇ-ಶ್ರಮ್ ಕಂತಿನ ಹಣ ಜಮಾ! ನಿಮಗೆ ಬಂದಿಲ್ವಾ ಹಾಗಾದ್ರೆ ಇಲ್ಲಿಂದ ಚೆಕ್ ಮಾಡಿ
1 ಕೋಟಿ ನೌಕರರ ಸಂಬಳದಲ್ಲಿ ಬಂಪರ್ ಜಿಗಿತ!! ಈಗ ಹೆಚ್ಚುವರಿ 49,420 ರೂ ಖಾತೆಗೆ ಬರಲಿದೆ