ಹಲೋ ಸ್ನೇಹಿತರೇ, ಪ್ರತಿ ತಿಂಗಳು ಅರ್ಹರಿಗೆ ಸರ್ಕಾರದಿಂದ ಪಿಂಚಣಿ ಹಣವನ್ನು ಜಮಾ ಮಾಡಲಾಗುತ್ತದೆ. ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ನಿರ್ದೇಶನಾಲಯ ಜನವರಿ 2023ರ ಪಿಂಚಣಿ ಹಣವನ್ನು ಬಿಡುಗಡೆ ಮಾಡಿದ್ದು ಫಲಾನುಭವಿಗಳು ತಮ್ಮ ಖಾತೆಗೆ ಹಣ ಬಂದಿದೆಯೋ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.
ಜನವರಿ 2024ರ ಪಿಂಚಣಿ ಹಣ ಬಿಡುಗಡೆ!
ಸಾಕಷ್ಟು ಫಲಾನುಭವಿಗಳು 2024 ಜನವರಿ ತಿಂಗಳಿನ ಪಿಂಚಣಿ ಹಣವನ್ನು ಸಾಮಾಜಿಕ ಭದ್ರತೆ ಹಾಗೂ ಪಿಂಚಣಿ ನಿರ್ದೇಶನಾಲಯದ ಅಡಿಯಲ್ಲಿ ಪಡೆದುಕೊಂಡಿದ್ದಾರೆ. ಖಾತೆಗೆ ಹಣ ಬಂದಿದೆ ಎಂಬುದನ್ನು ಆನ್ಲೈನ್ ಮಾಧ್ಯಮದ ಮೂಲಕ ಚೆಕ್ ಮಾಡಿಸಿಕೊಳ್ಳಬಹುದಾಗಿದೆ.
ಸಾಕಷ್ಟು ಜನರಿಗೆ ಡಿಸೆಂಬರ್ ತಿಂಗಳಿನ ಹಣ ಜಮಾ ಆಗಿಲ್ಲ. ಇದಕ್ಕೆ ಮುಖ್ಯವಾಗಿರುವ ಕಾರಣ, ನಿಮ್ಮ ಖಾತೆಗೆ ಆಧಾರ್ ಸೀಡಿಂಗ್ ಆಗದೆ ಇರುವುದು.
ತಾವುಗಳು ಈಗಲೂ ಕೂಡ ನಿಮ್ಮ ಖಾತೆಗೆ ಕೆವೈಸಿಯನ್ನು ಮಾಡಿಸಿಕೊಂಡಿಲ್ಲ ಎಂದಾದ್ರೆ ತಕ್ಷಣ ಮಾಡಿಕೊಳ್ಳಿ ಇಲ್ಲವಾದರೆ ಜನವರಿ ತಿಂಗಳಿನ ಪಿಂಚಣಿ ಹಣವನ್ನು ಸಹ ಪಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟವಾಗಿ ತಿಳಿಸಿದ್ದಾರೆ.
ಆನ್ಲೈನ್ ಮೂಲಕ ಪಿಂಚಣಿ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಪಡೆದುಕೊಳ್ಳಿ!
ರಾಜ್ಯ ಸರ್ಕಾರ ಗ್ರಾಹಕರ ಅನುಕೂಲಕ್ಕಾಗಿ, ತಮ್ಮ ಖಾತೆಗೆ ಜಮಾ ಆಗಿರುವ ಹಣದ ಬಗ್ಗೆ ಮಾಹಿತಿ ಪಡೆದುಕೊಳ್ಳಲು, DBT Karnataka ಎನ್ನುವ ಮೊಬೈಲ್ ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಮೂಲಕ ನೀವು ನಿಮ್ಮ ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ಪಡೆಯಬಹುದು.
- ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಲು, https://play.google.com/store/apps/details?id=com.dbtkarnataka ಮೇಲೆ ಕ್ಲಿಕ್ ಮಾಡಿ.
- *ಡೌನ್ಲೋಡ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದನ್ನು ಡೌನ್ಲೋಡ್ ಮಾಡಿಕೊಂಡು, ನಿಮ್ಮ ಮೊಬೈಲ್ ನಲ್ಲಿ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿ.
- *ಇ ಅಪ್ಲಿಕೇಶನ್ ನೊಂದಿಗೆ ಲಾಗಿನ್ ಆಗಲು ಮೊದಲು ನೀವು ಆಧಾರ್ ಕಾರ್ಡ್ ಸಂಖ್ಯೆಯನ್ನು ನಮೂದಿಸಲೇಬೇಕು. ನಿಮ್ಮ ಮೊಬೈಲ್ ಗೆ ಓಟಿಪಿ ಕಳುಹಿಸಲಾಗುತ್ತದೆ. ಅದನ್ನ ಇಲ್ಲಿ ನಮೂದಿಸಿ.
- * ಈಗ ನೀವು ನಾಲ್ಕು ಅಂಕೆಗಳ mPIN ಹಾಕಬೇಕು. ಇದನ್ನು ಮರು ಪರಿಶೀಲನೆ ಮಾಡಿ ಸಬ್ಮಿಟ್ ಎಂದು ಕೊಟ್ಟರೆ ಪಾಸ್ವರ್ಡ್ ಕ್ರಿಯೇಟ್ ಆಗುತ್ತದೆ ಹಾಗೂ ನೀವು ಅಪ್ಲಿಕೇಶನ್ ಗೆ ನೇರವಾಗಿ ಲಾಗಿನ್ ಆಗುತ್ತಿರಿ.
- *ಇಲ್ಲಿ ನಾಲ್ಕು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ಪೇಮೆಂಟ್ ಸ್ಟೇಟಸ್ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಇಲ್ಲಿ ಸಂಧ್ಯಾ ಸುರಕ್ಷಾ ಯೋಜನೆಯನ್ನು ಆಯ್ಕೆಯು ಇರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು.
- *ಈಗ ನಿಮ್ಮ ಖಾತೆಗೆ ಡಿಬಿಟಿಯಾಗಿರುವ ಹಣದ ಬಗ್ಗೆ ಮಾಹಿತಿ ಪಡೆಯಬಹುದು. ಒಂದು ವೇಳೆ ಜನವರಿ ತಿಂಗಳ ಹಣ ಈಗ ತಾನೇ ಸರ್ಕಾರದಿಂದ ಬಿಡುಗಡೆ ಆಗಿದ್ದು, ನಿಮ್ಮ ಖಾತೆಗೆ ಇನ್ನೂ ಜಮಾ ಆಗದೆ ಇದ್ದರೆ ಕೆಲವೇ ದಿನಗಳ ನಂತರವಾದರೂ ಜಮಾವಾಗುತ್ತದೆ.
ಇತರೆ ವಿಷಯಗಳು:
ಪ್ರತಿಯೊಬ್ಬರ ಖಾತೆಗೆ ಇ-ಶ್ರಮ್ ಕಂತಿನ ಹಣ ಜಮಾ! ನಿಮಗೆ ಬಂದಿಲ್ವಾ ಹಾಗಾದ್ರೆ ಇಲ್ಲಿಂದ ಚೆಕ್ ಮಾಡಿ
ರಾಮಮಂದಿರ ಉದ್ಘಾಟನೆ ಮುನ್ನ ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆ! ಇಂದಿನ ದರ ಎಷ್ಟಿದೆ?