rtgh

ಈ ತಿಂಗಳ ಅನ್ನಭಾಗ್ಯ ಹಣ ಖಾತೆಗೆ ಜಮಾ! ನಿಮ್ಮ DBT ಸ್ಟೇಟಸ್‌ ಚೆಕ್‌ ಮಾಡಿ

ಹಲೋ ಸ್ನೇಹಿತರೇ, ಸರ್ಕಾರ ರಾಜ್ಯದ ಬಡ ಜನರಿಗಾಗಿ ಹಲವು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದು, ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಉಚಿತ ಅಕ್ಕಿಯ ಬದಲು ಹಣವನ್ನು ಪ್ರತಿ ತಿಂಗಳು ಫಲಾನುಭವಿಗಳ ಖಾತೆಗೆ ಸರ್ಕಾರ ಜಮಾ ಮಾಡುತ್ತಿದೆ. ಈಗಗಲೇ 5 ಕಂತಿಗಳಲ್ಲಿ ಪ್ರತಿ ತಿಂಗಳು ಖಾತೆ ಹಣ ಜಮಾ ಮಾಡಲಾಗಿದ್ದು, ಈಗ ಈ ತಿಂಗಳ ಹಣ ಕೂಡ ಜಮಾ ಆಗಿದೆ. ಇದರ ಕುರಿತಾದ ಇನ್ನಷ್ಟು ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..

anna bhagya dbt status check

ಅನ್ನ ಭಾಗ್ಯ ಯೋಜನೆಯ ಹಣವೂ ಕಳೆದ ಆರು ತಿಂಗಳುಗಳಿಂದಲೂ ಕೂಡ ಈ ಫಲಾನುಭವಿಗಳು ಪಡೆದುಕೊಳ್ಳುತ್ತಿದ್ದಾರೆ. ನಿಮ್ಮ ಖಾತೆಗೆ ಹಣ ಬಂದಿದೆಯೋ ಇಲ್ವೋ ಎಂಬುದನ್ನು ಈ ರೀತಿ ಚೆಕ್ ಮಾಡಬಹುದು. ಈ ಯೋಜನೆಯ ಲಾಭ ಪಡೆಯಲು ಎಲ್ಲ BPL ಕಾರ್ಡುದಾರರು ಇ-ಕೆವೈಸಿ ಮಾಡಿಸುವುದು ಕಡ್ಡಾಯ.

ಅನ್ನಭಾಗ್ಯ ಯೋಜನೆ ಹಣ ಬಿಡುಗಡೆ:

ಸರ್ಕಾರಕ್ಕೆ ಹೆಚ್ಚುವರಿ ಅಕ್ಕಿ ಒದಗಿಸಲು ಇದುವರೆಗೆ ಸಾಧ್ಯವಾಗದೆ ಇರುವ ಹಿನ್ನಲೆಯಲ್ಲಿ 34 ರೂಪಾಯಿಗಳಂತೆ 5 ಕೆಜಿ ಅಕ್ಕಿಗೆ 170ಗಳನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ಈವರೆಗೆ ಅನ್ನಭಾಗ್ಯ ಯೋಜನೆಯ 5 ಕಂತಿನ ಹಣವೂ ಕೂಡ ಬಿಡುಗಡೆ ಆಗಿದೆ. ಮನೆಯಲ್ಲಿ ಎಷ್ಟು ಸದಸ್ಯರು ಇದ್ದಾರೆ ಅಷ್ಟು ಜನರಿಗೆ 5 ಕೆಜಿ ಅಕ್ಕಿಗೆ 170 ರೂ. ಗಳನ್ನು ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ.

ಅನ್ನಭಾಗ್ಯ ಯೋಜನೆಯ ಹಣ ನಿಮ್ಮ ಖಾತೆಗೆ ಜಮಾ ಆಗಿಲ್ಲ ಅಂದ್ರೆ ನಿಮ್ಮ ಬ್ಯಾಂಕ್ ಖಾತೆ ಕೆ ವೈ ಸಿ ಪೂರ್ಣಗೊಂಡಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ಅದೇ ರೀತಿ ನೀವು ಡಿಬಿಟಿ ಸ್ಟೇಟಸ್ ಚೆಕ್ ಮಾಡುವಾಗ ಕೂಡ, ಕೆಲವು ಸಂದೇಶಗಳನ್ನು ಸ್ವೀಕರಿಸುತ್ತೀರಿ. ಆ ಸಮಯದಲ್ಲಿ ಬ್ಯಾಂಕ್ ಖಾತೆಗೆ ಕೆವೈಸಿ ಆಗಿಲ್ಲ ಎಂಬುದು ತಿಳಿಯುತ್ತದೆ. ಹೀಗೆನಾದ್ರೂ ಆಧಾರ್ ಸೀಡಿಂಗ್ ಆಗಿಲ್ಲ ಅಥವಾ ಕೆವೈಸಿ ಆಗಿಲ್ಲ ಎನ್ನುವ ಸಂದೇಶ ಸ್ವೀಕರಿಸಿದರೆ ತಕ್ಷಣ ಬ್ಯಾಂಕ್ ಹೋಗಿ, ಈ ಕೆಲಸ ಮಾಡಿಕೊಳ್ಳಿ.

ಇದನ್ನೂ ಸಹ ಓದಿ : ಈ ದಿನಾಂಕದಂದು ಗೃಹಲಕ್ಷ್ಮಿ 6ನೇ ಕಂತಿನ ಹಣ ಜಮಾ! ಸರ್ಕಾರದ ಹೊಸ ಅಪ್ಡೇಟ್


ಇನ್ನು ಸಾಕಷ್ಟು ಅನರ್ಹರ ಬಿಪಿಎಲ್ ಕಾರ್ಡ್ ಕೂಡ ಸರ್ಕಾರ ರದ್ದುಪಡಿಸುತ್ತಿದ್ದು ಅಂತವರಿಗೆ ಇದುವರೆಗೆ ಅನ್ನಭಾಗ್ಯ ಹಣ ಬಂದಿದ್ದರೆ ಇನ್ನೂ ಮುಂದೆ ಈ ಹಣ ಸಿಗುವುದಿಲ್ಲ. ಇದಕ್ಕಾಗಿ ನೀವು ಆಹಾರ ಇಲಾಖೆಯ ವೆಬ್ಸೈಟ್ನಲ್ಲಿ ನಿಮ್ಮ ಕಾರ್ಡ್ ರದ್ದಾಗಿದ್ಯೋ ಇಲ್ವೋ ಎಂಬುದನ್ನು ತಿಳಿದುಕೊಳ್ಳಬಹುದು.

ಈ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ:

ಈ ಯೋಜನೆಯ ಹಣ ಮಾತ್ರವಲ್ಲದೆ ಸರ್ಕಾರದಿಂದ ಬಿಡುಗಡೆ ಆಗುವ ಯಾವುದೇ ಡಿಬಿಟಿ ಸ್ಟೇಟಸ್ ತಿಳಿದುಕೊಳ್ಳಲು ಸರ್ಕಾರದ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಆಗಿರುವ DBT Karnataka ಎನ್ನುವ ಅಪ್ಲಿಕೇಶನ್ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಿ. ನಂತರ ಆಧಾರ್ ಸಂಖ್ಯೆಯನ್ನು ಹಾಕಿ ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಗೆ OTP ಕಳುಹಿಸಲಾಗುತ್ತದೆ. ಅದನ್ನ ನಮೂದಿಸಿ. ಬಳಿಕ 4 ಅಂಕಿಯ mPIN ಅನ್ನು ರಚಿಸಬೇಕು. ಇದೇ ಸಂಖ್ಯೆಯನ್ನು ವೆರಿಫಿಕೇಶನ್ ಮಾಡಿಕೊಂಡು ಲಾಗಿನ್ ಆಗಿ.

ಈಗ ಡಿಬಿಟಿ ಕರ್ನಾಟಕ ಮೊಬೈಲ್ ಅಪ್ಲಿಕೇಶನ್ ನಿಮ್ಮ ಬಳಕೆಗೆ ಸಿದ್ಧವಾಗಿದೆ. ಇದರಲ್ಲಿ ಪೇಮೆಂಟ್ ವಿಭಾಗದಲ್ಲಿ ಡಿ ಬಿ ಟಿ ಸ್ಟೇಟಸ್ ಚೆಕ್ ಮಾಡಬಹುದು. ಮಾತ್ರವಲ್ಲದೆ ಗೃಹಲಕ್ಷ್ಮಿ ಯೋಜನೆ ಹಾಗೂ ಪಿಂಚಣಿ ಯೋಜನೆಯ ಹಣ ಬಿಡುಗಡೆ ಆಗಿರುವ ಮಾಹಿತಿ ಇಲ್ಲಿ ಕಾಣಿಸುತ್ತದೆ.

ಇತರೆ ವಿಷಯಗಳು:

ಈ ಪಟ್ಟಿಯಲ್ಲಿ ಹೆಸರಿದ್ದವರ ಖಾತೆಗೆ ಮಾತ್ರ ಹಣ! ಫಲಾನುಭವಿಗಳ ಪಟ್ಟಿ ಬಿಡುಗಡೆ

ಪೆಟ್ರೋಲ್‌-ಡೀಸೆಲ್‌ ಬೆಲೆ ಭಾರೀ ಇಳಿಕೆ! ಲೀಟರ್‌ಗೆ 10 ರೂ. ಅಗ್ಗ

ಪ್ರತಿಯೊಬ್ಬರ ಖಾತೆಗೆ ಇ-ಶ್ರಮ್ ಕಂತಿನ ಹಣ ಜಮಾ! ನಿಮಗೆ ಬಂದಿಲ್ವಾ ಹಾಗಾದ್ರೆ ಇಲ್ಲಿಂದ ಚೆಕ್‌ ಮಾಡಿ

Leave a Comment