ನಮಸ್ಕಾರ ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಯು ಕೂಡ ತನ್ನದೆ ಆದ ಆಸೆ ಕನಸುಗಳನ್ನು ಹೊಂದಿರುತ್ತಾನೆ. ಕೆಲ ತುರ್ತು ಸಂದರ್ಭಗಳಲ್ಲಿ ಪ್ರತಿಯೊಬ್ಬರಿಗೂ ಹಣದ ಸಹಾಯ ಬೇಕಾಗಿರುತ್ತದೆ. ಇದಕ್ಕಾಗಿ ಬೇರೆಯವರ ಬಳಿ ಸಾಲ ಕೇಳುತ್ತಾರೆ ಅಥವಾ ಬ್ಯಾಂಕ್ನಲ್ಲಿ ಲೋನ್ ತೆಗೆದುಕೊಳ್ಳುತ್ತಾರೆ. ಆದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಒಂದು ರೂಪಾಯಿ ಇಲ್ಲವಾದರೂ ನೀವು ಹಣವನ್ನು ಪಡೆದುಕೊಳ್ಳಬಹುದು ಎನ್ನುವುದು ನಿಮಗೆ ಗೊತ್ತಾ? ಹಾಗಾದ್ರೆ ಈ ಹಣವನ್ನು ನಿಮ್ಮದಾಗಿಸಿಕೊಳ್ಳುವುದು ಹೇಗೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ ಇದಕ್ಕಾಗಿ ನೀವು ಈ ಲೇಖನವನ್ನು ತಪ್ಪದೇ ಕೊನೆಯವರೆಗೂ ಓದಿ.
ಜನ್ ಧನ್ ಖಾತೆ ಹೊಂದಿರುವವರಿಗೆ ವಿಶೇಷ ಬೆನಿಫಿಟ್
ಜೀರೋ ಬ್ಯಾಲೆನ್ಸ್ ಅಡಿಯಲ್ಲಿ ಬ್ಯಾಂಕ್ ಖಾತೆ ತೆರೆಯಲು ಪ್ರತಿಯೊಬ್ಬರಿಗೂ ಅವಕಾಶ ನೀಡುವ ಜನ್ ಧನ್ ಯೋಜನೆಯನ್ನು ಸರ್ಕಾರ 2014ರಲ್ಲಿ ಜಾರಿಗೆ ತಂದಿತ್ತು. ಯೋಜನೆ ಜಾರಿಗೆ ಬಂದ ಮೇಲೆ ಇಂದು ಕೋಟ್ಯಾಂತರ ಜನ್ ಧನ್ ಖಾತೆಯನ್ನು ಹೊಂದಿದ್ದಾರೆ ಎನ್ನಬಹುದು. ಈ ಯೋಜನೆಯಡಿಯಲಿ ಒಂದು ರೂಪಾಯಿಗಳನ್ನು ಕೂಡ ಬ್ಯಾಲೆನ್ಸ್ ಮೊತ್ತವಾಗಿ ಇಡದೆ ನೀವು ಖಾತೆ ತೆರೆಯಬಹುದು ಮತ್ತು ಹಣಕಾಸಿನ ವಹಿವಾಟನ್ನು ನಡೆಸಬಹುದಾಗಿದೆ.
ಜನ್ ಧನ್ ಖಾತೆಯ ಓವರ್ ಡ್ರಾಫ್ಟ್ ಸೇವೆ
ಜನ್ ಧನ್ ಖಾತೆಯನ್ನು ತೆರೆಯುವುದರಿಂದ ನಿಮಗೆ ಸಿಗುವ ಲಾಭಗಳು ಯಾವುವು ಎಂದರೆ, ಓವರ್ ಡ್ರಾಫ್ಟ್ ಸೌಲಭ್ಯ ಅದ್ರೆ ನಿಮ್ಮ ಖಾತೆಯಲ್ಲಿ ಬ್ಯಾಲೆನ್ಸ್ ಶೂನ್ಯವಾಗಿದ್ದರು ನೀವು ಕೂಡ ಹತ್ತು ಸಾವಿರ ರೂಪಾಯಿಗಳ ವರೆಗೆ ಬ್ಯಾಂಕ್ ನಿಂದ ಹಣವನನ್ನು ಪಡೆದುಕೊಳ್ಳಬಹುದು. ಇದರೊಂದಿಗೆ ಪಾಸ್ ಪುಸ್ತಕ, ಚೆಕ್ ಬುಕ್, ಜೀವ ವಿಮೆ, ಸುರಕ್ಷತಾ ವಿಮೆ ಇತ್ಯಾದಿ ಸೇವೆಗಳನ್ನು ಪಡೆದುಕೊಳ್ಳಬಹುದಾಗಿದೆ.
ಓವರ್ ಡ್ರಾಫ್ಟ್ ಸೌಲಭ್ಯ ಪಡೆಯುವುದು ಹೇಗೆ?
ಈ ಖಾತೆಯನ್ನು ನೀವು ರಚಿಸಿದರೆ ನಿಮ್ಮ ವಾಹಿವಟಿನ ಮೌಲ್ಯ ಶೂನ್ಯ ರೂಪಾಯಿಂದಲೇ ಪ್ರಾರಂಭವಾಗುತ್ತದೆ. ಅದ್ರೆ ಬ್ಯಾಂಕ್ ಖಾತೆಯಲ್ಲಿ ಒಂದು ರೂಪಾಯಿಯು ಬ್ಯಾಲೆನ್ಸ್ ಇಲ್ಲದೆ ಇದ್ದರೂ ಕೂಡ ನೀವು ಹೆಚ್ಚುವರಿ ಶುಲ್ಕ ಕಡಿತಗೊಳಿಸುವುದಿಲ್ಲ. ಇನ್ನು 10,000 ರೂ. ಗಳ ವರೆಗೆ ಓವರ್ ಡ್ರಾಫ್ಟ್ ಸೌಲಭ್ಯವನ್ನು ಪಡೆಯಬಹುದು.
ನರೇಗಾ ಯೋಜನೆಯಲ್ಲಿ ಉದ್ಯೋಗ ಮಿತಿ ಹೆಚ್ಚಳ.! ಕೆಂದ್ರ ಸರ್ಕಾರದಿಂದ ಆದೇಶ ಪ್ರಕಟ
ಇದು ಅಲ್ಪಾವಧಿಯ ಸಾಲ ಇದ್ದಂತೆ ಇರುತ್ತದೆ ಬ್ಯಾಂಕ್ ನಲ್ಲಿ ಜನ್ ಧನ್ ಖಾತೆ ತೆರೆದು ಆರು ತಿಂಗಳು ಕಳೆದಿದ್ದರೆ ಹತ್ತು ಸಾವಿರ ರೂಪಾಯಿಗಳ ಡ್ರಾಫ್ಟ್ ಪಡೆದುಕೊಳ್ಳಬಹುದು ಹಾಗೂ ಆರು ತಿಂಗಳ ಒಳಗೆ 2,000 ರೂ. ಓವರ್ ಡ್ರಾಫ್ಟ್ ಸೌಲಭ್ಯ ಸಿಗುತ್ತದೆ. ಇನ್ನು ಜನಧನ್ ಖಾತೆ ತೆರೆದ 65 ವರ್ಷ ವಯಸ್ಸಿನ ಮೇಲ್ಪಟ್ಟವರು ಈ ಪ್ರಯೋಜನ ಪಡೆದುಕೊಳ್ಳಲು ಸಹಕಾರಿಯಾಗುತ್ತದೆ.
ಜನ್ ಧನ್ ಖಾತೆಯ ಇತರ ಪ್ರಯೋಜನಗಳು
- ಖಾತೆಯಲ್ಲಿ ಕನಿಷ್ಠ ಬ್ಯಾಲೆನ್ಸ್ ಇರಬೇಕಾದ ಅಗತ್ಯವಿಲ್ಲ
- ಉಳಿತಾಯ ಖಾತೆಗೆ ಸಮಾನವಾದ ಬಡ್ಡಿಯನ್ನು ಪಡೆಯಬಹುದು.
- ಮೊಬೈಲ್ ಬ್ಯಾಂಕಿಂಗ್ ಸೌಲಭ್ಯ
- ಈ ಖಾತೆ ಹೊಂದಿದವರಿಗೆ 2 ಲಕ್ಷ ರೂಪಾಯಿಗಳ ಜೀವ ವಿಮೆ 5 ರವರೆಗಿನ ಅಪಘಾತ ವಿಮೆಯು ಕೂಡ ಸಿಗುತ್ತದೆ.
- 10 ಸಾವಿರ ರೂಪಾಯಿಗಳ ಓವರ್ಡ್ರಾಫ್ಟ್ ಸೌಲಭ್ಯ
- ನಗದು ಹಿಂಪಡೆಯಲು ಮತ್ತು ಶಾಪಿಂಗ್ ಮಾಡಲು ರುಪೇ ಕಾರ್ಡ್ ನ್ನು ಪಡೆಯಬಹುದು.
ಜನ್ ಧನ್ ಖಾತೆಯನ್ನು ಹೊಸದಾಗಿ ತೆರೆಯಬೇಕು ಎಂದೇನು ಇಲ್ಲ ನಿಮ್ಮ ಬ್ಯಾಂಕ್ ನಲ್ಲಿ ಇರುವ ಉಳಿತಾಯ ಖಾತೆಯನ್ನು ಜನ್ ಧನ್ ಖಾತೆಯಾಗಿ ಬದಲಾಯಿಸಬಹುದು.
ಇನ್ನು ಓವರ್ ಡ್ರಾಫ್ಟ್ ಸೌಲಭ್ಯಕ್ಕೆ ಬಡ್ಡಿಯನ್ನು ಕೂಡ ವಿಧಿಸಲಾಗುತ್ತದೆ. ನಿಮ್ಮ ಬಳಿ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಇದ್ದರೆ ಸುಲಭವಾಗಿ ಬ್ಯಾಂಕುಗಳಲ್ಲಿ ಜನ್ ಧನ್ ಖಾತೆ ಆರಂಭಿಸಲು ಸಾಧ್ಯವಿದೆ. ಒಟ್ಟಿನಲ್ಲಿ ಒಂದು ರೂಪಾಯಿ ಬ್ಯಾಲೆನ್ಸ್ ಇಲ್ಲದೆ ಇರುವಾಗ ಕೂಡ ಬ್ಯಾಂಕ್ನಿಂದ 10,000 ರೂ.ಗಳನ್ನು ಯಾರ ಶ್ಯೂರಿಟಿ ಕೂಡ ಇಲ್ಲದೆ ಜನ್ ಧನ್ ಖಾತೆ ಹೊಂದಿದ್ದವರು ಪಡೆಯಬಹುದು.
ಇತರೆ ವಿಷಯಗಳು:
ಆರ್ಬಿಐ ಹೊಸ ರೂಲ್ಸ್ ಜಾರಿ.!! ವೈಯಕ್ತಿಕ ಸಾಲ ತೆಗೆದುಕೊಳ್ಳುವುದು ತುಂಬಾ ಸುಲಭ; ಇಂದೇ ಚೆಕ್ ಮಾಡಿ
1.2 ಕೋಟಿ ರೈತರ ಸಾಲ ಮನ್ನಾ ಘೋಷಣೆ.! ಸರ್ಕಾರದಿಂದ ಹೊಸ ಲಿಸ್ಟ್ ಬಿಡುಗಡೆ.! ಈ ಲಿಂಕ್ ಬಳಸಿ ಹೆಸರನ್ನು ಚೆಕ್ ಮಾಡಿ