ಹಲೋ ಸ್ನೇಹಿತರೇ, ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಬಹುತೇಕ ಯಶಸ್ವಿಯಾಗಿದೆ. ಕೋಟ್ಯಾಂತರ ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ ಇನ್ನೂ ಲಕ್ಷಾಂತರ ಮಹಿಳೆಯರು ಗೃಹಲಕ್ಷ್ಮೀಯ ಭಾಗ್ಯದಿಂದ ವಂಚಿತರಾಗಿರೋದು ಸುಳ್ಳಲ್ಲ. ಆದ್ರೆ ಮಹಿಳೆಯರ ಖಾತೆಗೆ ಇನ್ನು ಹಣ ಬಾರದೇ ಇರೋದಿಕ್ಕೆ ಕಾರಣಗಳು ಏನು ಅನ್ನೋದನ್ನು ಸ್ವತಃ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರೇ ತಿಳಿಸಿದ್ದಾರೆ.
ಗೃಹ ಲಕ್ಷ್ಮೀ ಯೋಜನೆಯ ಹಣದಿಂದ ಮಹಿಳೆಯರು ವಂಚಿರಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರವನ್ನು ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್ ರವರು ಇದೊಂದು ದೊಡ್ಡ ಯೋಜನೆಯಾಗಿದ್ದು, ಬಹು ಪಾಲು ಯಶಸ್ವಿಯಾಗಿದೆ. ಈ ಯೋಜನೆ ವಂಚಿತರಿಗಿಂತ ಫಲಾನುಭವಿಗಳ ಸಂಖ್ಯೆ ಹೆಚ್ಚಿದೆ.
ಇತ್ತೀಚಿಗೆ ಸಿಕ್ಕಿರೋ ಅಂಕಿಅಂಶದ ಪ್ರಕಾರ ರಾಜ್ಯದ 1 ಕೋಟಿ17 ಲಕ್ಷ ಮಹಿಳೆಯರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಆದರೆ ಇನ್ನೂ ಅಂದಾಜು ಒಂದೂವರೆ ಲಕ್ಷ ಮಹಿಳೆಯರು ಈ ಯೋಜನೆಯಿಂದ ವಂಚಿತರಾಗಿದ್ದಾರೆ. ಅದರಲ್ಲೂ ಮಹಿಳೆಯರು ಹಣದಿಂದ ವಂಚಿತರಾಗಿರೋದು ಯೋಜನೆಯ ವೈಫಲ್ಯದಿಂದ ಅಲ್ಲ. ಇದು ರೇಷನ್ ಕಾರ್ಡ್ ಮತ್ತು ಆಧಾರ ಕಾರ್ಡ್ ಹಾಗೂ ಬ್ಯಾಂಕ್ ಅಕೌಂಟ್ ಗಳಿಗೆ ಸಂಬಂಧಿಸಿದ ತಾಂತ್ರಿಕ ಕಾರಣ ಎಂದು ತಿಳಿಸಿದ್ದಾರೆ.
ಈಗಾಗಲೇ ನವೆಂಬರ್ ತಿಂಗಳಿನ ಹಣ ಜಮೆಯಾಗಿದ್ದು, ಡಿಸೆಂಬರ್ ತಿಂಗಳಿನ ಹಣ ಜನವರಿ 5 ರ ಒಳಗೆ ಮಹಿಳೆಯರ ಬ್ಯಾಂಕ್ ಅಕೌಂಟ್ ಗೆ ಬೀಳಲಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ಇನ್ನೂ ಕೆಲ ಮಹಿಳೆಯರು ತಾಂತ್ರಿಕ ಸಮಸ್ಯೆಗಳಿಂದ ಹಣ ಪಡೆಯುವಲ್ಲಿ ಹಿಂದೆ ಉಳಿದಿದ್ದಾರೆ. ಆದರೆ ಇನ್ನೂ ಮುಂದೆ ಈ ರೀತಿಯ ತಪ್ಪುಗಳು ಆಗುವುದಿಲ್ಲ ಎನ್ನುವುದನ್ನು ನಾವು ತಿಳಿಸಿಕೊಡಲಿದ್ದೇವೆ.
ಗೃಹಲಕ್ಷ್ಮೀ ಯೋಜನೆಯ ಗೊಂದಲ ನಿವಾರಿಸಲು ಪ್ರತಿಯೊಂದು ಗ್ರಾಮ ಪಂಚಾಯತಿ ಮಟ್ಟದಲ್ಲಿ ಕ್ಯಾಂಪ್ ಆಯೋಜಿಸಲು ಸರಕಾರ ಮುಂದಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯ ಮೂಲಕ ಕ್ಯಾಂಪ್ ನಡೆಯಲಿದ್ದು, ಪಿಡಿಓ ಗಳ ನೇತೃತ್ವದಲ್ಲಿ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಂತೆ ಇಲಾಖೆ ಸೂಚಿಸಿದೆ. ಡಿಸೆಂಬರ್ 27 ತಾರೀಕಿನಿಂದ 29 ರವರೆಗಿನ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಈ ಕ್ಯಾಂಪ್ ನಡೆಯುತ್ತದೆ.
ಈ ಕ್ಯಾಂಪ್ ನಲ್ಲಿ ಸ್ಥಳೀಯ ಸೇವಾಕೇಂದ್ರಗಳ ಸಿಬ್ಬಂದಿ,ಕಂಪ್ಯೂಟರ್ ಆಫರೇಟರ್ಸ್, ಅಂಗನವಾಡಿ ಕಾರ್ಯಕರ್ತರು, Electronic Delivery Of Citizen Services ತಂಡಗಳು ಸಹ ಕ್ಯಾಂಪ್ ನಲ್ಲಿ ಭಾಗವಹಿಸಲು ಸರ್ಕಾರ ಸೂಚಿಸಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನ ಸಿಬ್ಬಂದಿ, ಬ್ಯಾಂಕ್ ಪ್ರತಿನಿಧಿಗಳು ಭಾಗವಹಿಸಬೇಕು.
ವ್ಯಕ್ತಿ ಸತ್ತ ಬಳಿಕ ಜಮೀನು ಕುಟುಂಬಸ್ಥರ ಹೆಸರಿಗೆ ವರ್ಗಾವಣೆ ರದ್ದು.! ಸರ್ಕಾರದಿಂದ ಹೊಸ ನಿಯಮ ಜಾರಿ
ಅಲ್ಲದೇ ಸ್ಥಳದಲ್ಲಿಯೇ ಮಹಿಳೆಯರಿಗೆ ಹೊಸ ಬ್ಯಾಂಕ್ ಖಾತೆ ತೆರೆಯುವುದು ಹಾಗೂ ಆಧಾರ ಲಿಂಕ್ ಮಾಡುವುದು, ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸ್ಥಿತಿ ಪರಿಶೀಲಿಸುವುದು ಹಾಗೂ ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದ ಇತರ ಸಮಸ್ಯೆಗಳನ್ನು ಬಗೆಹರಿಸಲೇಬೇಕೆಂದು ಸರ್ಕಾರವು ಆದೇಶಿಸಿದೆ. ಅಲ್ಲದೇ ಪ್ರತಿಯೊಂದು ಗ್ರಾಮದಲ್ಲಿ ಮಹಿಳೆಯರಿಗೆ ಈ ಕ್ಯಾಂಪ್ ಬಗ್ಗೆ ಮಾಹಿತಿ ನೀಡಿ ಅವರನ್ನು ಕ್ಯಾಂಪ್ ಕರೆತರುವ ಜವಾಬ್ದಾರಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ನೀಡಲಾಗಿದೆ.
ಅಲ್ಲದೇ ಸ್ಥಳೀಯ ಪೇಪರ್ ಹಾಗೂ ಮಾಧ್ಯಮಗಳಲ್ಲಿ ಈ ಬಗ್ಗೆ ಸೂಕ್ತ ಪ್ರಚಾರ ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ. ಆ ಮೂಲಕ ಕೆಲವರಿಗೆ ಮಾತ್ರ ಗೃಹಲಕ್ಷ್ಮೀ ಯೋಜನೆ ಸಿಗುತ್ತಿದೆ. ನಮಗೆ ಸೌಲಭ್ಯ ಸಿಗುತ್ತಿಲ್ಲ ಎಂದು ನೊಂದುಕೊಳ್ಳುತ್ತಿದ್ದ ಮಹಿಳೆಯರಿಗೆ ಈ ಸುದ್ದಿ ಭರವಸೆ ತಂದಿದೆ. ಸ್ವತಃ ಮುಖ್ಯ ಅಧಿಕಾರಿಗಳು ಮತ್ತು ಇತರ ಇಲಾಖೆಯ ಸಿಬ್ಬಂದಿಗಳು, ಬ್ಯಾಂಕ್ ಸಿಬ್ಬಂದಿಗಳ ಸಮ್ಮುಖದಲ್ಲೇ ಕ್ಯಾಂಪ್ ನಡೆಯೋದರಿಂದ ಹೆಣ್ಣು ಮಕ್ಕಳನ್ನು ದಾಖಲೆಗಳ ಹೆಸರಿನಲ್ಲಿ ಇಲ್ಲಿಂದ ಅಲ್ಲಿಗೆ ಅಲ್ಲಿಂದ ಇಲ್ಲಿಗೆ ಸಾಗಿಸುವಂತಹ ಸಮಸ್ಯೆಗಳು ತಪ್ಪಲಿದೆ ಎಂಬುದು ಮಹಿಳೆಯರ ಅಭಿಪ್ರಾಯವಾಗಿದೆ.
ಇತರೆ ವಿಷಯಗಳು:
ಸರ್ಕಾರಿ ಕೆಲಸ ಬೇಕು ಅಂದ್ರೆ ಇನ್ಮುಂದೆ ಈ ದಾಖಲೆ ಇರ್ಲೇ ಬೇಕು.! ರಾತ್ರೋರಾತ್ರಿ ಬಂತು ಹೊಸ ರೂಲ್ಸ್
ಮೊಬೈಲ್ ಬಳಕೆದಾರರೇ ಹುಷಾರ್.!! ಈ ಅಪ್ಲಿಕೇಶನ್ ನಿಮ್ಮ ಬಳಿ ಇದ್ಯಾ?? ಹಾಗಾದ್ರೆ ಮಿಸ್ ಮಾಡ್ದೆ ಓದಿ