rtgh

ಆಧಾರ್ ಕಾರ್ಡ್‌ ವಿಳಾಸ ಬದಲಾವಣೆಗೆ ನೂತನ ವ್ಯವಸ್ಥೆ ಜಾರಿ.! ಗುರುತಿನ ಚೀಟಿ ಪ್ರಾಧಿಕಾರದ ಪ್ರಕಟಣೆ

ಹಲೋ ಸ್ನೇಹಿತರೇ, ಆಧಾರ್ ಕಾರ್ಡನಲ್ಲಿ ತಪ್ಪಾದ ಮಾಹಿತಿ ಅಥವಾ ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರವಾದಾಗ ನೀವು ವಿಳಾಸದ ವಿವರವನ್ನು ಬದಲಾವಣೆ ಮಾಡಲು ಸರಕಾರಿ ಕಚೇರಿ ಅಲೆದಾಡುವ ಅಗತ್ಯವಿಲ್ಲ ಈ ಸಮಸ್ಯೆಗೆ ಕೇಂದ್ರ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ನೂತನ ವಿಧಾನವನ್ನು ಪರಿಚಯಿಸಿದೆ. ಯಾವುದು ಆ ಯೋಜನೆ ಎಂದು ನಮ್ಮ ಲೇಖನದಲ್ಲಿ ತಿಳಿಯಿರಿ.

aadhar card address change

ಪ್ರತಿಯೊಬ್ಬ ನಾಗರಿಕನಿಗೆ ಆಧಾರ್ ಕಾರ್ಡ್ ಒಂದು ಅತೀ ಮುಖ್ಯ ದಾಖಲೆಯಾಗಿರುತ್ತದೆ. ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಲು ಪ್ರಮುಖವಾಗಿ ಆಧಾರ್ ಕಾರ್ಡ್ ವಿವರವನ್ನು ಕಡ್ಡಾಯವಾಗಿ ಒದಗಿಸಬೇಕಾಗುತ್ತದೆ. ಇದೇ ಕಾರಣಕ್ಕಾಗಿ ಆಧಾರ್ ಕಾರ್ಡ್ ನಲ್ಲಿ ತಮ್ಮ ಹೆಸರು, ಮೊಬೈಲ್ ಸಂಖ್ಯೆ, ವಿಳಾಸದ ವಿವರಗಳು ಸಹ ಸರಿಯಾಗಿರುವುದು ಅಷ್ಟೇ ಮುಖ್ಯವಾಗಿರುತ್ತದೆ.

ಆಧಾರ್ ಕಾರ್ಡ ನಲ್ಲಿ ತಪ್ಪಾದ ವಿವರವನ್ನು ಅಥವಾ ನೀವು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರವಾದಾಗ ನಿಮ್ಮ ವಿಳಾಸದ ವಿವರವನ್ನು ಬದಲಾವಣೆ ಮಾಡಲು ಸರ್ಕಾರಿ ಕಚೇರಿ ಅಲೆದಾಡುವ ಅಗತ್ಯವಿಲ್ಲ ಈ ಸಮಸ್ಯೆಗೆ ಕೇಂದ್ರದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ನೂತನ ಕ್ರಮ ಪರಿಚಯಿಸಿದೆ.

ಪ್ರಮುಖ ಅಂಶಗಳು:

ನಿಮ್ಮ ಕುಟುಂಬದ ಮುಖ್ಯಸ್ಥರ ಒಪ್ಪಿಗೆ ಆನ್‌ಲೈನ್‌ನಲ್ಲಿ ವಿಳಾಸ ಬದಲಾವಣೆ ಮಾಡಿಕೊಳ್ಳಬಹುದು.


ನಿಮ್ಮ ಹೊಸ ವಿಳಾಸದ ವಿವರ ಸೇರಿಸಲು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತೋರಿಸದೆಯೇ ಆಧಾರ್ ಕಾರ್ಡ್‌ನಲ್ಲಿ ವಿಳಾಸವನ್ನು ಬದಲಾವಣೆಗೆ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಎನಿದು ನೂತನ ವ್ಯವಸ್ಥೆ?

ನೂತನ ವ್ಯವಸ್ಥೆ ಅಡಿಯಲ್ಲಿ ವಿಳಾಸ ಬದಲಾವಣೆ ಮಾಡುವ ಇಚ್ಚೆ ಹೊಂದಿರುವವರು ಮೊದಲು ಕುಟುಂಬದೊಂದಿಗೆ ಸಂಬಂಧ ಪತ್ನಿ, ಮಗ, ಸೊಸೆ, ಮಗಳು, ಇತರರ ಕುರಿತು ಸೂಕ್ತ ದಾಖಲೆಯ ಪ್ರತಿಯನ್ನು ವೆಬ್‌ಸೈಟ್‌ಗೆ ಅಪ್‌ಲೋಡ್‌ ಮಾಡಬೇಕಾಗುತ್ತದೆ. ಬಳಿಕ ಕುಟುಂಬದ ಮುಖ್ಯಸ್ಥರ ನೋಂದಾವಣೆ ಮಾಡಿದ ಮೊಬೈಲ್‌ ಸಂಖ್ಯೆಗೆ ಬರುವ ‘ಒಟಿಪಿ’ ಬಳಸಿ ಸದಸ್ಯರು ತಮ್ಮ ಕಾರ್ಡ್‌ನಲ್ಲಿ ವಿಳಾಸವನ್ನು ತಿದ್ದುಪಡಿ ಮಾಡಿಕೊಳ್ಳಬಹುದು. ರೇಷನ್‌ ಕಾರ್ಡ್‌, ಮ್ಯಾರೇಜ್‌ ಸರ್ಟಿಫಿಕೇಟ್‌, ಪಾಸ್‌ಪೋರ್ಟ್‌ ಇತರ ದಾಖಲೆಗಳನ್ನು ಒದಗಿಸಬೇಕಾಗುತ್ತದೆ.

ಒಂದು ವೇಳೆ ಕುಟುಂಬ ಮುಖ್ಯಸ್ಥರ ಜೊತೆಗೆ ಸಂಬಂಧದ ಸಾಬೀತಿಗೆ ಅಧಿಕೃತ ದಾಖಲೆಗಳು ಇಲ್ಲದಿದ್ದರೆ, ಅಂಥಹವರು ಕುಟುಂಬ ಮುಖ್ಯಸ್ಥರಿಂದ ‘ಸ್ವಯಂ ದೃಢೀಕರಣ ಪತ್ರ UIDAI ವೆಬ್‌ಸೈಟ್‌ನಲ್ಲಿ ನಮೂದಿಸಿದ ಪ್ರಕಾರವಾಗಿ ಸಲ್ಲಿಸಿದರೆ ಆಗ ಸೂಕ್ತ ದಾಖಲೆಯಾಗಿ ಪರಿಗಣಿಸಲಾಗುತ್ತದೆ ಎಂದು ಆಧಾರ್‌ ಪ್ರಾಧಿಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಕುಟುಂಬಗಳಿಗೆ ಇನ್ಮುಂದೆ ಸಿಗಲ್ಲ ಉಚಿತ ರೇಷನ್! ಸರ್ಕಾರದಿಂದ ಹೊಸ ರೂಲ್ಸ್‌ ಜಾರಿ

ಹೊಸ ವರ್ಷದ ಮೊದಲ ಬರೆ.! ಈ ಬಾರಿಯೂ ಬಂಗಾರ ಬಲು ಭಾರ

Leave a Comment