ಹಲೋ ಸ್ನೇಹಿತರೇ, ರೈತ ದೇಶದ ಬೆನ್ನೆಲುಬು. ಹಾಗಾಗಿ ರೈತರ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಿವೆ. ಇದು ಸರ್ಕಾರಗಳ ಕರ್ತವ್ಯ ಕೂಡ. ಪ್ರಸ್ತುತ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಕೂಡ ರೈತರಿಗೆ ಸಿಹಿ ಸುದ್ದಿ ನೀಡಿದೆ. ರೈತರಿಗೆ ಬಡ್ಡಿರಹಿತವಾಗಿ ಒಂದು ಲಕ್ಷ ರೂ. ಸಾಲ ವಿತರಣೆ ಮಾಡಲು ಮುಂದಾಗಿದೆ.
ರೈತರು ಆರ್ಥಿಕವಾಗಿ ಸಬಲರಾಗಬೇಕು. ಬೆಳೆ ಬೆಳೆಯುವ ಸಲುವಾಗಿ ಹೆಚ್ಚಿನ ಬಡ್ಡಿದರದ ನೀಡುವ ಸಾಲ ಪಡೆಯಬಾರದು ಎನ್ನುವ ಕಾರಣಕ್ಕಾಗಿ ರಾಜ್ಯ ಸರ್ಕಾರವು ಸಚಿವ ಸಂಪುಟದಲ್ಲಿ ಬಡ್ಡಿರಹಿತವಾಗಿ ಸಾಲ ನೀಡುವ ತೀರ್ಮಾನ ಕೈಗೊಂಡಿದೆ. ಇದಕ್ಕಾಗಿ 5700 ಕೋಟಿ ರೂ. ಮೀಸಲಿಟ್ಟಿದೆ.
ಬಡ್ಡಿರಹಿತ ಸಾಲ:
ರೈತರಿಗೆ ಹಲವು ಯೋಜನೆಗಳಲ್ಲಿ ಬಡ್ಡಿರಹಿತವಾಗಿ ಸಾಲ ನೀಡಲಾಗುತ್ತದೆ. ರಾಜ್ಯ ಸರ್ಕಾರವು ವಿಶೇಷವಾಗಿ ಸಣ್ಣ ಮತ್ತು ಅತಿಸಣ್ಣ ರೈತರನ್ನು ಗಮನದಲ್ಲಿಟ್ಟುಕೊಂಡು ಈ ಬಡ್ಡಿರಹಿತವಾಗಿ ಸಾಲ ಯೋಜನೆ ಅನುಷ್ಠಾನಕ್ಕೆ ಮುಂದಾಗಿದೆ.
ಸಣ್ಣ ಮತ್ತು ಅತಿ ಸಣ್ಣ ರೈತರು ಬೆಳೆ ಬೆಳೆಯುವ ಉದ್ದೇಶಕ್ಕಾಗಿ ತಮ್ಮ ಊರಿನಲ್ಲಿರುವ ಬಡ್ಡಿಗೆ ಹಣ ನೀಡುವವರ ಬಳಿ ಸಾಲವನ್ನು ಮಾಡುತ್ತಾರೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಜಾರಿಗೆ ತರಲಾಗಿದೆ.
ಮತ್ತೆ ದುಬಾರಿಯಾಯ್ತು ದುನಿಯಾ.!! ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ದಿಢೀರ್ ಏರಿಕೆ
ಸಹಕಾರಿ ಸಂಘಗಳ ಮೂಲಕ ಸಾಲ ವಿತರಣೆ
ರಾಜ್ಯ ಸರ್ಕಾರವು ಕಳೆದ 5 ವರ್ಷಗಳಿಂದ ರೈತರಿಗಾಗಿ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಅನುಷ್ಠಾನಗೊಳಿಸಿದೆ. ಈ ಯೋಜನೆ ಅಡಿಯಲ್ಲಿ 2022-23ರಲ್ಲಿ 32.43 ಲಕ್ಷ ಸಣ್ಣ ಹಾಗೂ ಅತಿಸಣ್ಣ ರೈತರಿಗೆ ಸಹಕಾರಿ ಸಂಘಗಳು ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘಗಳ ಮೂಲಕ ಸಾಲ ವಿತರಣೆ ಮಾಡಲಾಗಿದೆ. ಸರ್ಕಾರ ಸೂಚಿಸಿದಂತೆ ಸಾಲ ವಿತರಣೆಯಲ್ಲಿ ತೊಡಗಿರುವ ಸಹಕಾರಿ ಸಂಘಗಳು ಮತ್ತು ಪ್ರಾಥಮಿಕ ಕೃಷಿ ಸಹಕಾರಿ ಸಂಘಗಳಿಗೆ ಉಂಟಾಗುತ್ತಿರುವ ನಷ್ಟವನ್ನು ಭರಿಸಲು ರಾಜ್ಯ ಸರ್ಕಾರವು ಬಡ್ಡಿ ಸಹಾಯಧನ ಹಾಗೂ ಸಹಾಯ ಧನವನ್ನು ನೀಡುತ್ತಿದೆ.
ಈ ರೀತಿ ಸಹಕಾರಿ ಸಂಘಗಳಿಂದ ಸಾಲ ನೀಡುವುದರಿಂದ ರೈತರು ಸಹ ಸುಲಭವಾಗಿ ಸಾಲ ಪಡೆದುಕೊಳ್ಳಲು ಸಹಕಾರಿಯಾಗಿದೆ. 2023-24 ರಿಂದ 2027-28ರ ವರೆಗೆ ಎಲ್ಲ ಸಹಕಾರಿ ಸಂಘಗಳಿಗೆ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಿಗೆ ಈ ಬಡ್ಡಿ ಸಹಾಯಧನ ಯೋಜನೆ ಅನ್ವಯವಾಗುತ್ತದೆ.
ಸಹಕಾರಿ ಬ್ಯಾಂಕ್ಗಳು 2001-೦2 ರಲ್ಲಿ 6.4೦ ಲಕ್ಷ ರೈತರಿಗೆ 438.36 ಕೋಟಿ ರೂ. ಬೆಳೆ ಸಾಲ ವಿತರಣೆ ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದವು.2022-23 ನೇ ಸಾಲಿನಲ್ಲಿ 32.57 ಲಕ್ಷ ರೈತರಿಗೆ 16683.57 ಕೋಟಿ ರೂ. ಬೆಳೆ ಸಾಲ ವಿತರಣೆ ಮಾಡಲಾಗಿದೆ. ಪ್ರಸ್ತುತ ವರ್ಷ ಸಹಕಾರಿ ಸಂಘಗಳು ರಾಜ್ಯದಲ್ಲಿ ವಿತರಿಸಿದ ಬೆಳೆಸಾಲವು ಶೇ.55 ರಷ್ಟನ್ನು ಒದಗಿಸುತ್ತದೆ. ಇದು ರಾಷ್ಟ್ರೀಯ ಸರಾಸರಿಯ ಶೇ17ರಷ್ಟಾಗಿದೆ.
ಇತರೆ ವಿಷಯಗಳು:
48 ಲಕ್ಷ ಉದ್ಯೋಗಿಗಳಿಗೆ ಜಾಕ್ ಪಾಟ್.! ಫೆಬ್ರವರಿಯಿಂದ ಖಾತೆಗೆ ಬರುತ್ತೆ ದುಪ್ಪಟ್ಟು ಸಂಬಳ
ಪಿಎಂ ಕಿಸಾನ್ 16 ನೇ ಕಂತಿನ ಹಣ ಡಬಲ್! ಈ ರೈತರ ಖಾತೆಗೆ ಬೀಳಲಿದೆ 4000 ರೂ.