rtgh

ಅನ್ನಭಾಗ್ಯ-ಗೃಹಲಕ್ಷ್ಮಿ ಯೋಜನೆಯ ಹಣ ಖಾತೆಗೆ ಜಮೆ.! ಮನೆಯಲ್ಲೇ ಕುಳಿತು ಈ ರೀತಿ ʼಡಿಬಿಟಿʼಯಲ್ಲಿ ಚೆಕ್‌ ಮಾಡಿ

ಹಲೋ ಸ್ನೇಹಿತರೇ, ಈಗಾಗಲೇ ಸರ್ಕಾರ ಗೃಹಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಫಲಾನುಭವಿ ಮಹಿಳೆಯರ ಖಾತೆಗೆ ಹಣವನ್ನು ವರ್ಗಾವಣೆ ಮಾಡಿದೆ. ಈ ತಿಂಗಳ ಹಣವನ್ನು ಕೂಡ ವರ್ಗಾವಣೆ ಮಾಡಲಾಗಿದೆ. ಆದರೆ ಅದನ್ನು ತಿಳಿಯುವುದು ಹೇಗೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

anna bhagya dbt status check

ಯೋಜನೆಗಳ ಹಣ ಬಂದಿರುವುದನ್ನು ತಿಳಿದುಕೊಳ್ಳುವುದು ಈಗ ಬಹಳ ಸುಲಭವಾಗಿದೆ. ನೇರವಾಗಿ ಒಂದೇ ಲಿಂಕ್‌ ಕ್ಲಿಕ್‌ ಮಾಡುವ ಮುಖಾಂತರ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗುವ ಬಗ್ಗೆ ಮಾಹಿತಿಯನ್ನು ತಿಳಿಯಬಹುದಾಗಿದೆ.

ಖಾತೆಗೆ ಹಣ ಜಮಾ ಆಗಿರುವ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಹೇಗೆ?

– ಕರ್ನಾಟಕ ಆಹಾರ ಇಲಾಖೆಯ ಅಧಿಕೃತ ವೆಬ್ಸೈಟ್ https://ahara.kar.nic.in/Home/EServices ಕ್ಲಿಕ್ ಮಾಡಿ. OR ನೀವು ಮೊಬೈಲ್ OR ಕಂಪ್ಯೂಟರ್ ಕ್ರೋಮೋನಲ್ಲಿ ಆಹಾರ ಎಂದು ಟೈಪ್ ಮಾಡಿದ್ರೆ ವೆಬ್ಸೈಟ್ ತೆರೆದುಕೊಳ್ಳುತ್ತದೆ..

-ಈಗ ಈ ಸರ್ವಿಸ್‌ನ (e service) ಎಡಭಾಗದಲ್ಲಿ ಮೂರು ಡಾಟ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿದ್ರೆ ಇ – ಸ್ಥಿತಿ ಮೇಲೆ ಕ್ಲಿಕ್ ಮಾಡಿ.

-ಈಗ ಡಿಬಿಟಿ ಸ್ಥಿತಿ (DBT status) ಎಂಬ ಆಯ್ಕೆಯನ್ನು ಕ್ಲಿಕ್ ಮಾಡಬೇಕು. next ಜಿಲ್ಲಾವಾರು ವಿಭಜನೆ ಆಗಿರುವ ಜಿಲ್ಲೆಗಳ ಪಟ್ಟಿ ಕಾಣಿಸುತ್ತಿದೆ. ಇದರಲ್ಲಿ 3 ವಿಭಾಗಗಳಲ್ಲಿ ಜಿಲ್ಲೆಗಳ ಹೆಸರು ನೀಡಲಾಗಿದೆ ನೀವು ನಿಮ್ಮ ಜಿಲ್ಲೆ ಯಾವುದು ಎಂದು ಆಯ್ಕೆ ಮಾಡಿ ಅದರ ಮೇಲ್ಭಾಗದಲ್ಲಿ ಕಾಣಿಸುವ ಲಿಂಕ್ ಮೇಲೆ ಕ್ಲಿಕ್ ಮಾಡಿಬೇಕು.


-ಈಗ ಸ್ಟೇಟಸ್ ಆಫ್ DBT ಎನ್ನುವ ಪುಟ ತೆರೆದುಕೊಳ್ಳುತ್ತದೆ ಅಲ್ಲಿ ನೀವು ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಗೂ ಕ್ಯಾಪ್ಚ ನಂಬರ್ ನಮೂದಿಸಿದರೆ ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿರುವ ಬಗ್ಗೆ ಮಾಹಿತಿ ತಿಳಿಯಬಹುದಾಗಿದೆ ಹಾಗೂ ಯಾವ ತಿಂಗಳಲ್ಲಿ ಹಣ ವರ್ಗಾವಣೆ ಆಗಿದೆ ಎನ್ನುವ ಬಗ್ಗೆ ಸ್ಟೇಟಸ್ ಚೆಕ್ ಮಾಡಬಹುದು.

-ಇದು ಅನ್ನಭಾಗ್ಯ ಯೋಜನೆಯ ಸ್ಟೇಟಸ್ ಆಗಿದ್ದು ಖಾತೆಯ ಸಂಪೂರ್ಣ ವಿವರ ಕಾಣಿಸುತ್ತದೆ. ರೇಷನ್ ಕಾರ್ಡ್ ನಲ್ಲಿ ಯಜಮಾನ / ಯಜಮಾನೀಯ ಹೆಸರು ಮನೆಯಲ್ಲಿರುವ ಸದಸ್ಯರ ಸಂಖ್ಯೆ ಮತ್ತು ಎಷ್ಟು ಹಣ ಜಮಾ ಆಗಿದೆ ಎನ್ನುವ ಮಾಹಿತಿ ಕಂಡುಬರುತ್ತದೆ.

ಇನ್ನು ಅನ್ನಭಾಗ್ಯದ ಹಣ ಜಮಾ ಆಗಿದೆ ಎಂದರೆ ಗೃಹಲಕ್ಷ್ಮಿ ಹಣ ಕೂಡ ಬಂದಿರುತ್ತದೆ ಎಂದರ್ಥ, ಯಾಕಂದರೆ ಈ 2 ಖಾತೆಗಳು ಒಂದೇ ಆಗಿರುವುದರಿಂದ ಸರ್ಕಾರ ಮಿಸ್ ಮಾಡದೆ ಖಾತೆಗೆ ಹಣ ಜಮಾ ಮಾಡಿರುತ್ತದೆ.

ಗೃಹಲಕ್ಷ್ಮಿ ಹಣ ಖಾತೆಗೆ ಬಂದ್ರೆ SMS ಕಳುಹಿಸಲಾಗುತ್ತದೆ, ಒಂದು ವೇಳೆ ನಿಮಗೆ SMS ಬಾರದೆ ಇದ್ದಲ್ಲಿ ಗೃಹಲಕ್ಷ್ಮಿ ಯೋಜನೆಯ ಪ್ರತಿ ಕಂತಿನ ಹಣ ಬಿಡುಗಡೆ ಆದಾಗ ನೇರವಾಗಿ ಬ್ಯಾಂಕ್ ಹೋಗಿ ನಿಮ್ಮ ಖಾತೆಯನ್ನು ಚೆಕ್ ಮಾಡಿಕೊಳ್ಳಬಹುದು.

ಸಾಕಷ್ಟು ಮಹಿಳೆಯರು ತಮ್ಮ ಖಾತೆಯಲ್ಲಿ ಇರುವ ಸಮಸ್ಯೆಗಳನ್ನು ಸರಿಪಡಿಸಿಕೊಂಡಿದ್ದಾರೆ, ಅಂದ್ರೆ E-KYC ಮಾಡಿಸುವುದು ಆಧಾರ್ ಸೀಡಿಂಗ್ ಮೊದಲಾದವನ್ನು ಮಾಡಿದ್ದಾರೆ.. ಇಷ್ಟಾಗಿಯೂ ಕೂಡ ಹಲವರ ರೇಷನ್ ಕಾರ್ಡ್ / ಖಾತೆ ಆಕ್ಟಿವ್ ಆಗಿರದೆ ಇರಬಹುದು ಇದೆಲ್ಲವನ್ನು ತಿಳಿಯಲು ನೀವು ಮಾಹಿತಿ Mahitiknaja ಎಂಬ ವೆಬ್ಸೈಟ್ ಓಪನ್ ಮಾಡಿಬಹುದು.

ಪಡಿತರ ಚೀಟಿ ಪ್ರತ್ಯೇಕವಾಗಿ ಎನ್ನುವ ಆಯ್ಕೆ ಕ್ಲಿಕ್ ಮಾಡಿ ತದನಂತರ ಕೇಳುವ ಎಲ್ಲ ಮಾಹಿತಿ ಭರ್ತಿ ಮಾಡುವುದರ ಮೂಲಕ ನಿಮ್ಮ ರೇಷನ್ ಕಾರ್ಡ್ active ಆಗಿದೆಯೋ ಇಲ್ಲವೋ ಎಂದು ಸುಲಭವಾಗಿ ತಿಳಿಯಬಹುದು.

ಸರ್ಕಾರದಿಂದ ವಿದ್ಯಾರ್ಥಿವೇತನಕ್ಕೆ ಅರ್ಜಿ ಆಹ್ವಾನ.! ವಿದ್ಯಾರ್ಥಿಗಳಿಗೆ ಹಣದ ಜೊತೆ ವಸತಿ ಸೌಲಭ್ಯ.! ತಡ ಮಾಡದೇ ಅರ್ಜಿ ಸಲ್ಲಿಸಿ

ಬ್ಯಾಂಕ್ ಗ್ರಾಹಕರಿಗೆ ಬ್ಯಾಡ್ ನ್ಯೂಸ್.!!! ಗೃಹ ಸಾಲದ EMI ಹೆಚ್ಚಿದೆ; ಏನಿದು ಹೊಸ ರೂಲ್ಸ್?

Leave a Comment