ಹಲೋ ಸ್ನೇಹಿತರೇ, ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆಗಳಲ್ಲಿ ಒಂದಾಗಿರುವ ಆಯುಷ್ಮಾನ್ ಭಾರತ್ ಯೋಜನೆ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಎನ್ನಬಹುದು. ಈ ಯೋಜನೆಯ ಮೂಲಕ ಇಂದು ಕೋಟ್ಯಾಂತರ ಜನರು ಉಚಿತ ಆರೋಗ್ಯ ಚಿಕಿತ್ಸೆ ಪಡೆದುಕೊಳ್ಳಲು ಸಹಾಯಕವಾಗಿದೆ. ಆಯುಷ್ಮಾನ್ ಭಾರತ್ ಕಾರ್ಡ್ ಯಾರ ಬಳಿ ಇದೆಯೋ ಅವರಿಗೆ ಬಹಳ ಪ್ರಯೋಜನ ಆಗಲಿದೆ. ಅತಿ ಕಡಿಮೆ ದರದಲ್ಲಿ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದು.
ಆಯುಷ್ಮಾನ್ ಭಾರತ್ ಕಾರ್ಡ್ ಪಡೆದುಕೊಳ್ಳಲು ಈಗ ನೀವು ಯಾವುದೇ ಕಚೇರಿಗೂ ಅಲೆದಾಡಬೇಕಿಲ್ಲ. ನಿಮ್ಮ ಕೈಯಲ್ಲಿ ಇರುವ ಸ್ಮಾರ್ಟ್ ಫೋನ್ ಮೂಲಕ ಕ್ಷಣಮಾತ್ರದಲ್ಲಿ ಅರ್ಜಿ ಸಲ್ಲಿಸಬಹುದು. ಆಯುಷ್ಮಾನ್ ಭಾರತ ಕಾರ್ಡ್ ಅನ್ನು ಪಡೆದುಕೊಳ್ಳಲು ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸುವುದು ಹೇಗೆ ಎನ್ನುವುದನ್ನು ನೋಡೋಣ.
ಆಯುಷ್ಮಾನ್ ಭಾರತ್ ಕಾರ್ಡ್ ಅರ್ಜಿ
ಬಿಪಿಎಲ್ ಕಾರ್ಡ್ ಹೊಂದಿರುವವರು ಮಾತ್ರವಲ್ಲದೆ ಎಪಿಎಲ್ ಕಾರ್ಡ್ ಹೊಂದಿರುವವರು ಕೂಡ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಪಡೆದುಕೊಳ್ಳಲು ಅರ್ಹರಾಗಿರುತ್ತಾರೆ. ನಿಮ್ಮ ಬಳಿ ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಇದ್ದರೆ ತಕ್ಷಣವೇ ಮೊಬೈಲ್ ನಲ್ಲಿ ಅರ್ಜಿ ಸಲ್ಲಿಸಿ.
https://abdm.gov.in/ ಮೊಬೈಲ್ ನಲ್ಲಿ ಈ ಲಿಂಕ್ ಅನ್ನು ಗೂಗಲ್ ನಲ್ಲಿ ಹಾಕಿ. ಒಂದು ವೆಬ್ಸೈಟ್ ತೆರೆದುಕೊಳ್ಳುತ್ತದೆ. PMJY ಬೆನಿಫಿಶಿಯರಿ ಪೋರ್ಟಲ್ ಕಾಣುತ್ತೀರಿ. ಈಗ ಈ ಪೋರ್ಟಲ್ ನಲ್ಲಿ ಲಾಗಿನ್ (login) ಆಗಬೇಕು ಲಾಗಿನ್ ಆಗುವಾಗ ಬೆನಿಫಿಷಿಯರಿ ಹೆಸರನ್ನು ನಮೂದಿಸಬೇಕು. ನಿಮ್ಮ ಮೊಬೈಲ್ ಸಂಖ್ಯೆಗೆ ಕಳುಹಿಸಲಾಗುವ ಓಟಿಪಿ (OTP) ಯನ್ನು ನಮೂದಿಸುವ ಮೂಲಕ ಲಾಗಿನ್ ಆಗಬಹುದು.
ಏರ್‌ಟೆಲ್ ಹೊಸ ವರ್ಷದ ಕೊಡುಗೆ! ಕೇವಲ ರೂ.148 ವಿಶೇಷ ರೀಚಾರ್ಜ್ ಪ್ಲಾನ್‌ನಲ್ಲಿ ಬಂಪರ್ ಆಫರ್
ಈಗ ನೀವು ನಿಮ್ಮ ರಾಜ್ಯವನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ಕ್ಲೈಮ್ ಟೈಪ್ ಎನ್ನುವ ಆಯ್ಕೆ ಕಾಣಿಸುತ್ತದೆ ಇದರಲ್ಲಿ ನಿಮ್ಮ ಕುಟುಂಬದ ವಿವರಗಳನ್ನು ಹಾಕಬೇಕು. ಬ್ಯಾಂಕ್ ಖಾತೆ ಮತ್ತು ರೇಷನ್ ಕಾರ್ಡ್ ಗೆ ಈ ಕೆ ವೈ ಸಿ (E-KYC) ಆಗಿರುವುದು ಕಡ್ಡಾಯ. ಈ ರೀತಿ ವೆಬ್ಸೈಟ್ ಮೂಲಕವೇ ನೀವು ಆಯುಷ್ಮಾನ್ ಭಾರತ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದಾಗಿದೆ.
ಆಯುಷ್ಮಾನ್ ಕಾರ್ಡ್ ನಿಮ್ಮಲ್ಲಿ ಇದ್ರೆ ಸಿಗುವ ಬೆನಿಫಿಟ್ಸ್ ಏನು ?
1650ಕ್ಕೂ ಅಧಿಕ ಬೇರೆ ಬೇರೆ ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದು, ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 5 ಲಕ್ಷದವರೆಗೆ ಹಾಗೂ ಎಪಿಎಲ್ ಕಾರ್ಡ್ ಹೊಂದಿರುವ ಕುಟುಂಬಕ್ಕೆ 1.5 ಲಕ್ಷದವರೆಗೆ ಚಿಕಿತ್ಸೆಗಾಗಿ ಸರ್ಕಾರದಿಂದ ಸಬ್ಸಿಡಿ ಸಿಗುತ್ತದೆ.
ಆಯುಷ್ಮಾನ್ ಭಾರತ್ ಕಾರ್ಡ್ ಯೋಜನೆಯ ಅಡಿಯಲ್ಲಿ ನಮೂದಿಸಲಾಗಿರುವ /ನೋಂದಾವಣಿಗೊಂಡಿರುವ ಆಸ್ಪತ್ರೆಗಳಲ್ಲಿ ಮಾತ್ರ ಈ ಕಾರ್ಡ್ ಮೂಲಕ ಚಿಕಿತ್ಸೆ ಪಡೆಯಬಹುದು.
ಇತರೆ ವಿಷಯಗಳು:
ಸರ್ಕಾರಿ ನೌಕರರಿಗೆ ಬಂಪರ್! ತುಟ್ಟಿಭತ್ಯೆಯಲ್ಲಿ ನಿರೀಕ್ಷೆಗೂ ಮೀರಿದ ಹೆಚ್ಚಳ