rtgh

ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನಲ್ಲಿ ನೇಮಕಾತಿ.! 7,000 ಹುದ್ದೆಗಳ ಭರ್ತಿ

ಹಲೋ ಸ್ನೇಹಿತರೇ, ಬರೋಬ್ಬರಿ 7,000 ಹುದ್ದೆಗಳನ್ನು ಒಂದೇ ಇಲಾಖೆಯಲ್ಲಿ ನೇಮಕ ಮಾಡುವ ಚಿಂತನೆ ನಡೆಸಲಾಗಿದೆ. ಅದಕ್ಕೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಹ ಸಲ್ಲಿಕೆ ಮಾಡಲಾಗಿದೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

assistant professor recruitment

ಕರ್ನಾಟಕ ರಾಜ್ಯ ಸರ್ಕಾರದ ಹಲವು ಇಲಾಖೆಯ ಪೈಕಿ, ಇದೀಗ ಒಂದೇ ಇಲಾಖೆಯಲ್ಲಿ 7000 ಹುದ್ದೆಗಳನ್ನು ಭರ್ತಿ ಮಾಡುವ ಕುರಿತ ಭರ್ಜರಿ ಸಿಹಿ ತಿಳಿದು ಬಂದಿದೆ. ಅದು ಬೇರೆ ಯಾವುದು ಅಲ್ಲ ಅಲ್ಲದೇ ಶಿಕ್ಷಣ ಇಲಾಖೆ ಎಂಬುದು ಮತ್ತೊಂದು ವಿಶೇಷ.

ರಾಜ್ಯದಾದ್ಯಂತ ಪ್ರಥಮ ದರ್ಜೆ ಸರ್ಕಾರಿ ಕಾಲೇಜಿನಲ್ಲಿ ಖಾಲಿ ಇರುವ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಬರೋಬ್ಬರಿ 7,000 ಪೋಸ್ಟ್‌ನ್ನು ನೇಮಕ ಮಾಡಿಕೊಳ್ಳಲು ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ ಎಂ.ಸಿ ಸುಧಾಕರ್ ಮಾಹಿತಿ ತಿಳಿಸಿದ್ದಾರೆ.

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು & ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ 5 ವರ್ಷದಲ್ಲಿ ಕಾಲೇಜುಗಳ ಸಂಖ್ಯೆ ಜೊತೆಗೆ ವಿದ್ಯಾರ್ಥಿಗಳ ಸಂಖ್ಯೆಯೂ ಹೆಚ್ಚಾಗಿದೆ. ಹೊಸ ಕೋರ್ಸ್‌ಗಳು ಸಹ ಆರಂಭಗೊಂಡಿದೆ. ಆದರೆ ಇವುಗಳ ಬೋಧನೆಗೆ ಅಗತ್ಯ ಬೋಧಕರು ಮತ್ತು ಸಿಬ್ಬಂದಿಗಳ ಕೊರತೆಯಿದ್ದು ನೇಮಕ ಮಾಡಿಲ್ಲ. ಆದ್ದರಿಂದ ಹೆಚ್ಚಿನ ಸರ್ಕಾರಿ ಕಾಲೇಜುನಲ್ಲಿ ಪ್ರಾಧ್ಯಾಪಕರ ಹುದ್ದೆಗಳು ಖಾಲಿ ಇದೆ ಎಂದು ತಿಳಿಸಿದ್ದಾರೆ.


ಕಳೆದ ಬಿಜೆಪಿ ಸರ್ಕಾರದಲ್ಲಿ 1,242 ಸಹಾಯಕ ಪ್ರಾಧ್ಯಾಪಕ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಲಾಗಿತ್ತು. ಇದೀಗ ಕಾಂಗ್ರೆಸ್‌ ಸರ್ಕಾರದಲ್ಲಿ 7,000 ಸಹಾಯಕ ಪ್ರಾಧ್ಯಾಪಕರ ಹುದ್ದೆ ಭರ್ತಿ ಮಾಡುವ ಕುರಿತು ಶಿಕ್ಷಣ ಸಚಿವರು ತಿಳಿಸಿದ್ದಾರೆ.

ಕರ್ನಾಟಕ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ವಿದ್ಯಾರ್ಹತೆ : ಸ್ನಾತಕೋತ್ತರ ಪದವಿ ಜೊತೆಗೆ NET, ಕೆಎಸ್‌ಇಟಿ, PHD ಪಾಸ್ ಮಾಡಿರಬೇಕು. ಇಂಥಹವರು ಅರ್ಜಿ ಸಲ್ಲಿಸಿ ನೇಮಕ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳಬಹುದಾಗಿದೆ.

‌ಸರ್ಕಾರಿ ನೌಕರರಿಗೆ ಬಂಪರ್‌ ಕೊಡುಗೆ! ಬಾಕಿ ಪಾವತಿ ಕುರಿತು ಸರ್ಕಾರದ ಮಹತ್ವದ ತಿರುವು

ಅನ್ನದಾತರಿಗೆ ಬಂಪರ್ ಆಫರ್.!!‌ ಈ ಕಾರ್ಡ್‌ ಹೊಂದಿದವರಿಗೆ ಸಿಗಲಿದೆ ಸರ್ಕಾರದ ಸಹಕಾರ;‌ ಇಂದೇ ಚೆಕ್‌ ಮಾಡಿ

Leave a Comment