ಹಲೋ ಸ್ನೇಹಿತರೇ, ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಯನ್ವಯ ಮೊದಲ ಕಂತಿನ ಬರ ಪರಿಹಾರದ ಹಣ ಬಿಡುಗಡೆ ಮಾಡಲಾಗಿದೆ. ಯಾರೆಗೆಲ್ಲ ಹಣ ಸಿಗಲಿದೆ ಮತ್ತ ಯಾವಾಗ ಸಿಗಲಿದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

ಈ ಬಾರಿ ರಾಜ್ಯದಲ್ಲಿ ಜೂನ್‌ನಿಂದ ಸೆಪ್ಟೆಂಬರ್ ತಿಂಗಳ ನಡುವೆ ಮುಂಗಾರಿನಲ್ಲಿ 25% ರಷ್ಟು ಮಳೆ ಕೊರತೆಯಿಂದಾಗಿ ಉಂಟಾಗಿರುವ ಬರ ಪರಿಸ್ಥಿತಿಗೆ ರೈತರಿಗೆ ಅರ್ಥಿಕವಾಗಿ ನೆರವು NDRF ಮಾರ್ಗಸೂಚಿ ಪ್ರಕಾರ ಕೇಂದ್ರದಿಂದ ಪರಿಹಾರದ ಹಣ ಬರದ ಕಾರಣ ರಾಜ್ಯ ಸರ್ಕಾರದಿಂದ ಮೊದಲನೆ ಕಂತಿನಲ್ಲಿ ತಲಾ ರೂ 2,000 ವನ್ನು SDRF ಮಾರ್ಗಸೂಚಿ ಅನ್ವಯ ಒಟ್ಟು 105.00 ಕೋಟಿ ಹಣವನ್ನು ಬಿಡುಗಡೆ ಮಾಡಲಾಗಿದೆ..
ಮೊದಲನೇ ಕಂತಿನಲ್ಲಿ 105.00 ಕೋಟಿ ಬರ ಪರಿಹಾರ ಬಿಡುಗಡೆ:
ಪ್ರಸ್ತುತ ರಾಜ್ಯ ಸರ್ಕಾರದಿಂದ ಜಿಲ್ಲಾ ಮಟ್ಟಕ್ಕೆ 5-1-2024 ರಂದು ಮೊದಲ ಕಂತಿನ ರೂ 105.00 ಕೋಟಿ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ ಬರ ಪೀಡಿತ ತಾಲ್ಲೂಕು ಎಂದು ಈ ಹಿಂದೆ ಘೋಷಣೆ ಮಾಡಿದ ತಾಲ್ಲೂಕುಗಳಲ್ಲಿ ಇರುವ ರೈತರಿಗೆ ಈ ಹಣ ಸಿಗುತ್ತದೆ.
ರೂ 2,000 ರೈತರ ಖಾತೆಗೆ ಯಾವಾಗ ಸಿಗಲಿದೆ?
ನಿನ್ನೆ ಅಂದರೆ 5-1-2024 ರಂದು ಮೊದಲ ಕಂತಿನ ಹಣ ಬಿಡುಗಡೆಗೆ ಅಧಿಕೃತ ಆದೇಶ ಹೊರಡಿಸಲಾಗಿದೆ Fruits ತಂತ್ರಾಂಶದಲ್ಲಿ ನೋಂದಾವಣೆ ಮಾಡಿರುವ ರೈತರ ಖಾತೆಗೆ ಇನ್ನು 4-5 ದಿನಗಳ ಒಳಗಾಗಿ DBT ಮೂಲಕ ಮೊದಲನೆ ಕಂತಿನ ರೂ 2,000 ರೈತರ ಖಾತೆಗೆ ಜಮಾ ಆಗುತ್ತದೆ.
ಯಾವೆಲ್ಲ ತಾಲ್ಲೂಕಿನ ರೈತರಿಗೆ ಬರ ಪರಿಹಾರ?
ರಾಜ್ಯ ಸರ್ಕಾರದಿಂದ 13-9-2023 ರಂದು 195 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು ಮತ್ತು 12-10-2023 ರಂದು 21 ತಾಲ್ಲೂಕುಗಳನ್ನು 04-11-2023 ರಂದು 7 ತಾಲ್ಲೂಕುಗಳನ್ನು ಒಟ್ಟು 223 ತಾಲ್ಲೂಕಿನ ರೈತರಿಗೆ ಬರ ಪರಿಹಾರದ ಅರ್ಥಿಕ ನೆರವು ಸಿಗುತ್ತದೆ.
ಬರ ಪರಿಹಾರದ ಒಟ್ಟು ಮೊತ್ತ ಎಷ್ಟು?
ಕೇಂದ್ರ ಸರಕಾರದ SDRF/NDRF ಮಾರ್ಗಸೂಚಿಯ ಅನುಸಾರ ಬರ ಪರಿಸ್ಥಿತಿಯಿಂದ ಶೇ.33% ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಉಂಟಾದ ಬೆಳೆ ನಷ್ಟಕ್ಕೆ ಗರಿಷ್ಟ 02 ಹೆಕ್ಟೇರ್‌ಗೆ ಸೀಮಿತಗೊಳಿಸಿ ಈ ಕೆಳಕಂಡ ದರದಲ್ಲಿ ಸಬ್ಸಿಡಿಯನ್ನು ನಿಗಧಿಪಡಿಸಲಾಗಿದೆ.
ಬೆಳೆ ವಿಧ | ಪ್ರತಿ ಹೆಕ್ಟೇರ್ ಗೆ |
1.ಮಳೆಯಾಶ್ರಿತ ಬೆಳೆ | 8,500/- |
2.ನೀರಾವರಿ ಬೆಳೆ | 17,000/- |
3.ಬಹುವಾರ್ಷಿಕ ಬೆಳೆ | 22,500/- |
ಮುಂದಿನ ದಿನದಲ್ಲಿ ಕೇಂದ್ರ ಸರ್ಕಾರದಿಂದ NDRF ಅನುದಾನ ಬಿಡುಗಡೆಯಾದ ನಂತರ SDRF ಮಾರ್ಗಸೂಚಿಯ ಪ್ರಕಾರ ಹೆಚ್ಚುವರಿ ಮೊತ್ತಕ್ಕೆ ಅರ್ಹತೆಯಿದ್ದ ರೈತರಿಗೆ ಹೆಚ್ಚುವರಿ ಬೆಳೆಹಾನಿ ಪರಿಹಾರ ಬಿಡುಗಡೆ ಮಾಡಲಾಗುವುದು ಎಂದು ಆದೇಶದಲ್ಲಿ ಉಲ್ಲೇಖ ಮಾಡಲಾಗಿದೆ.
ಮಳೆ ಕೊರತೆಯಿಂದ 48.17 ಲಕ್ಷ ಹೆಕ್ಟೇರ್ ಬೆಳೆ ಹಾನಿ:
ಬರ ಪೀಡಿತ ತಾಲ್ಲೂಕು ಎಂದು ಘೋಷಿಸಿರುವ ತಾಲ್ಲೂಕುಗಳಲ್ಲಿ ಕೃಷಿ, ತೋಟಗಾರಿಕೆ & ಕಂದಾಯ ಇಲಾಖೆಯ ಅಧಿಕಾರಿ ಅಥವಾ ಸಿಬ್ಬಂದಿಯ ಜಂಟಿ ತಂಡಗಳು ಬೆಳೆ ಸಮೀಕ್ಷೆ ನಡೆಸಿ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಶೇ.33 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ವರದಿಯನ್ನು ತಯಾರು ಮಾಡಲಾಗಿದೆ.
ಅದರಂತೆಯೇ 46.11 ಲಕ್ಷ ಹೆಕ್ಟೇರ್ ಕೃಷಿ ಹಾಗೂ 2.06 ಲಕ್ಷ ಹೆಕ್ಟೇರ್ ತೋಟಗಾರಿಕೆ ಸೇರಿದಂತೆ ಒಟ್ಟು 48.17 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ, ಇದರ ಪೈಕಿ 40.72 ಲಕ್ಷ ಹೇರ್ ಮಳೆಯಾಶ್ರಿತ 7.39 ಲಕ್ಷ ಹೇಕ್ಟೇರ್, ನೀರಾವರಿ, ಹಾಗೂ 0.07 ಲಕ್ಷ ಹೇಕ್ಟೇರ್ ಬಹುವಾರ್ಷಿಕ ಬೆಳೆಯು ಹಾನಿಯಾಗಿದೆ ತಾಲ್ಲೂಕುವಾರು ಬೆಳೆಹಾನಿಗೆ ಇನ್‌ಪುಟ್ ಸಬ್ಸಿಡಿಗೆ NDRF ಅಡಿ ರೂ.4663.12 ಕೋಟಿಗಳ ಆರ್ಥಿಕ ನೆರವನ್ನು ನೀಡುವಂತೆ ಕೋರಿ ರಾಜ್ಯ ಸರ್ಕಾರದಿಂದ ಒಟ್ಟಾರೆಯಾಗಿ ಕೇಂದ್ರೀಯ ಕೃಷಿ ಮಂತ್ರಾಲಯಕ್ಕೆ ಅಂತಿಮ ಮೆಮೋರಾಂಡಮ್ ಸಲ್ಲಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿಕೊಡಲಾಗಿದೆ.
ಇತರೆ ವಿಷಯಗಳು
90% ಸಬ್ಸಿಡಿಯಲ್ಲಿ ನಿಮ್ಮದಾಗಲಿದೆ ಸೋಲಾರ್ ಪಂಪ್ ಸೆಟ್; ರೈತರಿಗೆ ಬೊಂಬಾಟ್ ಆಫರ್.!
ಮೊಬೈಲ್‌ನಲ್ಲೆ ಆಯುಷ್ಮಾನ್ ಕಾರ್ಡ್ ಪಡೆಯಬೇಕೆ.? ಇದರಿಂದ ನಿಮಗೆ ಏನು ಬೆನಿಫಿಟ್ಸ್ ಗೊತ್ತಾ??