ಹಲೋ ಸ್ನೇಹಿತರೇ, ನೀವು ಸಣ್ಣ ಪ್ರಮಾಣದ ಹೂಡಿಕೆ ಮಾಡಲು ಯೋಚಿಸಿದರೆ, ಅಂಚೆ ಕಚೇರಿಯ ಈ ಸ್ಕೀಮ್ ನಿಮಗೆ ಹೇಳಿ ಮಾಡಿಸಿದಂತೆ ಇದೆ. ಯಾಕೆಂದ್ರೆ ಯಾವುದೇ ಮಾರುಕಟ್ಟೆಯ ಅಪಾಯವು ಇಲ್ಲದೆ ಹೂಡಿಕೆ ಮಾಡಬಹುದಾದ ಏಕೈಕ ಸಂಸ್ಥೆ ಅಂದರೆ ಅದು ಸರ್ಕಾರಿ ಸ್ವಾಮ್ಯದ ಅಂಚೆ ಕಚೇರಿ ಎಂದು ಹೇಳಬಹುದು.
ಇತ್ತೀಚಿನ ದಿನದಲ್ಲಿ ಅಂಚೆ ಕಚೇರಿಯಲ್ಲಿ 12ಕ್ಕೂ ಅಧಿಕ ಉಳಿತಾಯ ಯೋಜನೆಗಳನ್ನು ಪರಿಚಯಿಸಿದ್ದು, ಈ ಯೋಜನೆಗಳು, ಒಂದಕ್ಕಿಂತ ಇನ್ನೊಂದು ಉತ್ತಮ ಹೂಡಿಕೆ ಯೋಜನೆಗಳಾಗಿವೆ. ಇವುಗಳಲ್ಲಿ ಮುಖ್ಯವಾಗಿರುವ ಒಂದು ಯೋಜನೆ ಮಾಸಿಕ ಉಳಿತಾಯ ಯೋಜನೆ.
ಏನಿದು ಮಾಸಿಕ ಉಳಿತಾಯ ಯೋಜನೆ?
ಮಾಸಿಕ ಉಳಿತಾಯ ಯೋಜನೆ ಎಂದರೆ, ನಿಶ್ಚಿತ ಆದಾಯವನ್ನು ಕೊಡುವಂತಹ ಒಂದು ಯೋಜನೆ ಆಗಿದೆ. ಈ ಯೋಜನೆಯ ಅವಧಿ ಐದು ವರ್ಷಗಳು. ನೀವು ಸಣ್ಣ ವಯಸ್ಸಿನಿಂದಲೇ ಹೂಡಿಕೆ ಆರಂಭಿಸಿದರೆ ಈ ಯೋಜನೆಯ ಅಡಿಯಲ್ಲಿ ಐದು ವರ್ಷಗಳ ಮೆಚುರಿಟಿ ಅವಧಿಯಲ್ಲಿ ಲಕ್ಷಗಟ್ಟಲೆ ಹಣ ಸಂಪಾದಿಸಿಕೊಳ್ಳಲು ಸಾಧ್ಯವಿದೆ.
ಮಾಸಿಕ ಉಳಿತಾಯ ಯೋಜನೆಯಲ್ಲಿ ಎಷ್ಟು ಹೂಡಿಕೆ ಮಾಡಬಹುದು?
ಈ ಯೋಜನೆಯಲ್ಲಿ ನೀವು ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ಖಾತೆ ಆರಂಭಿಸಬಹುದು. 7.4% ಬಡ್ಡಿ ದರವನ್ನು ನಿಗದಿಪಡಿಸಲಾಗಿದ್ದು, ವೈಯಕ್ತಿಕವಾಗಿ 9 ಲಕ್ಷದವರೆಗೆ ಹಾಗೂ ಜಂಟಿಯಾಗಿ 15 ಲಕ್ಷದವರೆಗೆ ಹೂಡಿಕೆ ಮಾಡಬಹುದು.
ಈ ಪಟ್ಟಿಯಲ್ಲಿ ಹೆಸರಿದ್ದವರ ಖಾತೆಗೆ ಮಾತ್ರ ಹಣ! ಫಲಾನುಭವಿಗಳ ಪಟ್ಟಿ ಬಿಡುಗಡೆ
ಇವು ಒಂಬತ್ತು ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಲು ಬಯಸಿದರೆ ಪ್ರತಿ ತಿಂಗಳು ರೂ.5,550ಗಳನ್ನು ಗಳಿಸಬಹುದು. ಅಂದರೆ ವರ್ಷಕ್ಕೆ 66,600 ಗಳಂತೆ ಐದು ವರ್ಷಗಳಲ್ಲಿ 3,33,000ಗಳನ್ನು ಹಿಂಪಡೆಯಲು ಸಾಧ್ಯವಿದೆ.
ಇನ್ನು ಜಂಟಿ ಖಾತೆ ಆರಂಭಿಸುವುದಾದ್ರೆ ಪತಿ-ಪತ್ನಿ ಮಾತ್ರ ಖಾತೆ ಆರಂಭಿಸಬೇಕಾಗಿ ಇಲ್ಲ. ತಂದೆ – ಮಕ್ಕಳು, ಸಹೋದರ – ಸಹೋದರಿ ಹೀಗೆ ಯಾರು ಬೇಕಾದರೂ ಜಂಟಿ ಖಾತೆ ಆರಂಭಿಸಬಹುದು.
ಅಂಚೆ ಕಚೇರಿಯಲ್ಲಿ ಐದು ವರ್ಷಗಳಲ್ಲಿ ಸಿಕ್ಕ ಹಣವನ್ನು ನೀವು ಇದೇ ಯೋಜನೆಯಲ್ಲಿ ಮುಂದುವರಿಸಬಹುದು ಅಥವಾ ಆ ಹಣವನ್ನು ತೆಗೆದು ಬ್ಯಾಂಕ್ ನಲ್ಲಿ ಇಟ್ಟು ಬಡ್ಡಿ ಪಡೆದುಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಅಂಚೆ ಕಚೇರಿಯನ್ನು ಸಂಪರ್ಕಿಸಿ.
ಇತರೆ ವಿಷಯಗಳು:
ಪ್ರತಿಯೊಬ್ಬರ ಖಾತೆಗೆ ಇ-ಶ್ರಮ್ ಕಂತಿನ ಹಣ ಜಮಾ! ನಿಮಗೆ ಬಂದಿಲ್ವಾ ಹಾಗಾದ್ರೆ ಇಲ್ಲಿಂದ ಚೆಕ್ ಮಾಡಿ
ಈ ದಿನಾಂಕದಂದು ಗೃಹಲಕ್ಷ್ಮಿ 6ನೇ ಕಂತಿನ ಹಣ ಜಮಾ! ಸರ್ಕಾರದ ಹೊಸ ಅಪ್ಡೇಟ್