ಹಲೋ ಸ್ನೇಹಿತರೇ, ರಾಜ್ಯ ಸರ್ಕಾರ ಮಹಿಳೆಯರ ಸ್ವಾವಲಂಬನ ಜೀವನಕ್ಕಾಗಿ ಒಂದಲ್ಲ ಒಂದು ರೀತಿಯ ಯೋಜನೆಗಳನ್ನು 2023 ರಿಂದ ಜಾರಿಗೆ ತರುತ್ತಿದೆ. ಈಗ ಮತ್ತೊಂದು ಯೋಜನೆ ಜಾರಿಗೆ ಬಂದಿದ್ದು, ಈ ಮೂಲಕ ಮಹಿಳೆಯರು ತಮ್ಮ ಸ್ವಂತ ಉದ್ಯಮ ಆರಂಭಿಸಲು ತರಬೇತಿ ಹಾಗೂ ಕಡಿಮೆ ಬಡ್ಡಿ ದರದ ಸಾಲ ಸೌಲಭ್ಯವನ್ನು ಕೂಡ ಸರ್ಕಾರ ಒದಗಿಸುತ್ತದೆ. ಈ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಮಹಿಳೆಯರು ಸ್ವಂತ ಉದ್ಯಮ ಮಾಡುವ ಕನಸು ಹೊಂದಿರುತ್ತಾರೆ. ಆದರೆ ಎಲ್ಲರಿಗೆ ಈ ಕನಸನ್ನು ಈಡೇರಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಇಂತಹ ಮಹಿಳೆಯರಿಗೆ ಉತ್ತೇಜನ ನೀಡಲು ಕೆಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.
ಅದರಲ್ಲೂ ಮಹಿಳೆಯರ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಸಲುವಾಗಿ ಈಗಾಗಲೇ ಗೃಹಲಕ್ಷ್ಮಿ ಯೋಜನೆ ಜಾರಿಗೆ ತರಲಾಗಿದೆ. ಈ ಮೂಲಕ 2000 ಪ್ರತಿ ತಿಂಗಳು ಗೃಹಿಣಿಯರ ಖಾತೆಗೆ ಸೇರುತ್ತದೆ.
ಬೆಂಗಳೂರಿನ IIM ಸಂಸ್ಥೆ ಮೂಲಕ ಸಹಾಯ
ರಾಜ್ಯ ಸರ್ಕಾರ, ಬೆಂಗಳೂರಿನ IIM ಸಂಸ್ಥೆಯ ಸಹಯೋಗದಲ್ಲಿ ಮಹಿಳೆಯರಿಗಾಗಿ ಮತ್ತೊಮ್ಮೆ ಯೋಜನೆಯ ಜಾರಿಗೆ ತಂದಿದ್ದು ಉದ್ಯಮಶೀಲತೆಯನ್ನು ಮಹಿಳೆಯರಲ್ಲಿ ಹೆಚ್ಚಿಸಲು ಯೋಜನೆ ಪ್ರಯೋಜನಕಾರಿ ಆಗಲಿದೆ.
ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ 50% ಹೆಚ್ಚಳ! ಈ ದಿನ ನಿಮ್ಮ ಖಾತೆ ಜಮಾ
ಐ ಐ ಎಂ ಸಂಸ್ಥೆ ಪರಿಶಿಷ್ಟ ಜಾತಿಯ ಪದವಿ ಮುಗಿಸಿರುವ ಮಹಿಳೆಯರಿಗೆ ಸ್ವಂತ ಉದ್ಯಮ ಆರಂಭಿಸಲು ಉದ್ಯಮಶೀಲತಾ ತರಬೇತಿಯನ್ನು ನೀಡುತ್ತಿದೆ. ಇಲ್ಲಿ ಸ್ವಂತ ಉದ್ಯಮವನ್ನು ಮಾಡಿ ಕೊಳ್ಳಲು ಸಹಾಯಕವಾಗುವಂತೆ ಉದ್ಯಮಶೀಲತಾ ತರಬೇತಿಯನ್ನು ಪಡೆದುಕೊಳ್ಳಬಹುದು.
ಉದ್ಯಮಶೀಲತಾ ತರಬೇತಿ ಪಡೆದುಕೊಳ್ಳಲು ಅರ್ಜಿ ಸಲ್ಲಿಸಿ
ಆಸಕ್ತ ಪರಿಶಿಷ್ಟ ಜಾತಿಯ ಪದವಿ ಪಡೆದಿರುವ ಮಹಿಳೆಯರು ಸ್ವಂತ ಉದ್ಯಮ ಆರಂಭಿಸುವುದಕ್ಕೆ ಬೆಂಗಳೂರಿನ ಮೂಲಕ ಉದ್ಯಮಶೀಲತಾ ತರಬೇತಿಯನ್ನು ಪಡೆದುಕೊಳ್ಳಬಹುದು, ಆಸಕ್ತ ಅಭ್ಯರ್ಥಿಗಳು ಜನವರಿ 31, 2024ರ ಒಳಗೆ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆ ಹೊರಡಿಸಲಾಗಿದೆ.
ಅರ್ಜಿ ಸಲ್ಲಿಸಲು https://swdservices.karnataka.gov.in ಈ ಲಿಂಕ್ ಮೇಲೆ ಕ್ಲಿಕ್ ಮಾಡಿ. ಅಗತ್ಯ ಇರುವ ಮಾಹಿತಿಗಳನ್ನು ನೀಡಿ ಅರ್ಜಿ ಸಲ್ಲಿಸಬಹುದು. ದಿನಾಂಕ 21ರಿಂದ 45 ವರ್ಷ ವಯಸ್ಸಿನ ಪರಿಶಿಷ್ಟ ಜಾತಿ ಮತ್ತು ಮಹಿಳಾ ಪದವೀಧರರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಆಯ್ಕೆಯಾದ ಮಹಿಳಾ ಅಭ್ಯರ್ಥಿಗಳಿಗೆ ನಾಲ್ಕರಿಂದ ಆರು ತಿಂಗಳುಗಳ ವರೆಗೆ ಉದ್ಯಮಶೀಲತಾ ತರಬೇತಿಯನ್ನು ನೀಡಲಾಗುತ್ತದೆ. ಇಲ್ಲಿ ತರಬೇತಿ ಪಡೆದುಕೊಂಡ್ರೆ ಸುಲಭವಾಗಿ ಯಾವುದೇ ರೀತಿಯ ಸ್ವಉದ್ಯೋಗವನ್ನು ಆರಂಭಿಸಲು ಮಹಿಳೆಯರಿಗೆ ಆತ್ಮವಿಶ್ವಾಸ ಹಾಗೂ ಜ್ಞಾನ ಎರಡು ಲಭ್ಯವಾಗುತ್ತವೆ.
ಇತರೆ ವಿಷಯಗಳು:
ಪ್ರತಿಯೊಬ್ಬರ ಖಾತೆಗೆ ಇ-ಶ್ರಮ್ ಕಂತಿನ ಹಣ ಜಮಾ! ನಿಮಗೆ ಬಂದಿಲ್ವಾ ಹಾಗಾದ್ರೆ ಇಲ್ಲಿಂದ ಚೆಕ್ ಮಾಡಿ
1 ಕೋಟಿ ನೌಕರರ ಸಂಬಳದಲ್ಲಿ ಬಂಪರ್ ಜಿಗಿತ!! ಈಗ ಹೆಚ್ಚುವರಿ 49,420 ರೂ ಖಾತೆಗೆ ಬರಲಿದೆ