ಹಲೋ ಸ್ನೇಹಿತರೇ, ಕೇಂದ್ರ ಸರ್ಕಾರ ಫೆಬ್ರವರಿ 1 2024 ರ ಬಜೆಟ್ನಲ್ಲಿ ಮಹಿಳೆಯರಿಗಾಗಿ ಮಧ್ಯ ಪ್ರದೇಶ ಸರ್ಕಾರ ನಡೆಸುತ್ತಿರುವ ಲಾಡ್ಲಿ ಬೆಹೇನ್ ಯೋಜನೆ ಅಂಥಹ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರುವ ಸಾಧ್ಯತೆಯಿದೆ. ಚುನಾವಣೆಗೂ ಮುನ್ನವೇ ಕೇಂದ್ರ ಸರ್ಕಾರ ಬಜೆಟ್ ಮೂಲಕ ಮಹಿಳೆಯರಿಗೆ ಈ ದೊಡ್ಡ ಉಡುಗೊರೆಯನ್ನು ನೀಡುತ್ತದೆ ಎಂದು ಮಾಧ್ಯಮ ಮೂಲಗಳು ವರದಿಯಲ್ಲಿ ತಿಳಿಸಿದೆ. ಈ ಯೋಜನೆಯಲ್ಲಿ ಏನೆಲ್ಲಾ ಲಾಭ ಸಿಗಲಿದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.
ಚುನಾವಣೆಯಲ್ಲಿ ಮಹಿಳಾ ವೋಟ್ ಬ್ಯಾಂಕ್ ಓಲೈಸಲು ಮೋದಿ ಸರ್ಕಾರ ನಿಜವಾಗಿಯೂ ಮಹಿಳೆಯರಿಗಾಗಿ ಕೆಲವು ಯೋಜನೆಗಳನ್ನು ತರುತ್ತದೆ ಎನ್ನಲಾಗುತ್ತದೆ. ಮಧ್ಯಪ್ರದೇಶ ರಾಜ್ಯ ಚುನಾವಣೆಯಲ್ಲಿ ಲಾಡ್ಲಿ ಬೆಹೇನ್ ಯೋಜನೆ ಚಮತ್ಕಾರವನ್ನೆ ಮಾಡಿತ್ತು, ಹೀಗಾಗಿ ಮೋದಿ ಸರ್ಕಾರವು ಬಜೆಟ್ನಲ್ಲಿ ಮಹಿಳೆಯರಿಗಾಗಿಯೇ ಇದೇ ರೀತಿಯ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಲಿದೆ ಎನ್ನಲಾಗುತ್ತಿದೆ.
2023 ರ ಬಜೆಟ್ನಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ ಆಚರಿಸಲು, ಮಹಿಳಾ ಹೂಡಿಕೆದಾರರಿಗೋಸ್ಕರ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯು ಒಂದು ಬಾರಿಯ ಸಣ್ಣ ಉಳಿತಾಯ ಯೋಜನೆಯಾಗಿದೆ, ಮಾರ್ಚ್ 2025 ರವರೆಗೆ 2 ವರ್ಷಗಳವರೆಗೆ ಇದು ಲಭ್ಯವಿರುತ್ತದೆ.
ಈ ಯೋಜನೆಯಡಿ ಮಹಿಳೆಯರು & ಹುಡುಗಿಯರು 2 ವರ್ಷಗಳ ಅವಧಿಗೆ 2 ಲಕ್ಷದವರೆಗೆ ವಾರ್ಷಿಕ 7.5 ಶೇಕಡಾ ಬಡ್ಡಿದರದಲ್ಲಿ ಭಾಗಶಃ ಹಿಂತೆಗೆದುಕೊಳ್ಳುವ ಸೌಲಭ್ಯದೊಂದಿಗೆ ಹೂಡಿಕೆ ಮಾಡಬಹುದಾಗಿದೆ.
ಮಹಿಳಾ ಸಮ್ಮಾನ್ ಉಳಿತಾಯ ಯೋಜನೆಯು ಮಹಿಳಾ ಹೂಡಿಕೆದಾರರಿಗೆ ಅವರ ಅಲ್ಪಾವಧಿಯ ಆರ್ಥಿಕ ಗುರಿಗಳು & ಅಗತ್ಯಗಳಿಗಾಗಿ ಹೂಡಿಕೆ ಮಾಡಲು ಸಹಾಯ ಮಾಡಲಿದೆ. ಇತರ ಸಣ್ಣ ಉಳಿತಾಯ ಯೋಜನೆಗಳಿಗೆ ಹೋಲಿಕೆ ಮಾಡಿದರೆ ಸುಕನ್ಯಾ ಸಮೃದ್ಧಿ ಯೋಜನೆಯು ಒಂದು ಹಣಕಾಸು ವರ್ಷದಲ್ಲಿ 1.5 ಲಕ್ಷ ರೂ. ಗರಿಷ್ಠ ಹೂಡಿಕೆ ಮಿತಿಯನ್ನು ಹೊಂದಿದ್ದು & 21 ವರ್ಷಗಳ ದೀರ್ಘ ಲಾಕ್-ಇನ್ ಅವಧಿಯನ್ನು ಹೊಂದಿದೆ. ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವು 2 ವರ್ಷಗಳ ಅವಧಿಗೆ ರೂ 2 ಲಕ್ಷ ಹೂಡಿಕೆ ಮಾಡಲು ಅವಕಾಶವನ್ನು ನೀಡುತ್ತದೆ.
ಇತರೆ ವಿಷಯಗಳು
ವಿದ್ಯಾಸಿರಿ ವಿದ್ಯಾರ್ಥಿವೇತನ: ಪ್ರತಿ ತಿಂಗಳು ವಿದ್ಯಾರ್ಥಿಯ ಖಾತೆಗೆ ಬರುತ್ತೆ 1,500 ರೂ..! ತಡ ಮಾಡದೇ ಅಪ್ಲೇ ಮಾಡಿ
ರೈತರಿಗೆ ಬಂಪರ್ ಸುದ್ದಿ.!! ಇವರಿಗೆ ಸರ್ಕಾರಿ ಭೂಮಿ ಮಂಜೂರು; ನೀವು ಇಂದೇ ಚೆಕ್ ಮಾಡಿ