rtgh

ಮಹಿಳೆಯರಿಗೆ ಇನ್ನೊಂದು ಗುಡ್ ನ್ಯೂಸ್.!! ರಾಜ್ಯ ಸರ್ಕಾರದಿಂದ ಬಂತು ಹೊಸ ಸ್ಕೀಮ್

ಹಲೋ ಸ್ನೇಹಿತರೇ, ಒಂದು ಸರ್ಕಾರದ ಕೆಲಸವೇ ರಾಜ್ಯದ ಎಲ್ಲ ಜನರ ಅಭಿವೃದ್ಧಿ. ರಾಜ್ಯದ ಕಟ್ಟ ಕಡೆಯ ಪ್ರಜೆಗೂ ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಮಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ. ಹೀಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತದೆ. ಪ್ರಸ್ತುತ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ.

Chit Fund Scheme for Women

ಅವುಗಳಲ್ಲಿ ಶಕ್ತಿ ಯೋಜನೆ ಹಾಗೂ ಗೃಹಲಕ್ಷ್ಮಿ ಯೋಜನೆಗಳು ಮಹಿಳಾ ಸಬಲೀಕರಣಕ್ಕಾಗಿ ತಂದ ಯೋಜನೆ ಆಗಿದೆ. ಇದೀಗ ಮಹಿಳೆಯರಿಗಾಗಿ ಹೊಸ ಯೋಜನೆ ಜಾರಿಗೆ ತಂದಿದ್ದು, ಇದರಲ್ಲಿ ಹೂಡಿಕೆ ಮಾಡುವಂತೆ ವಿನಂತಿಸಿದೆ. ಹಾಗಾದರೆ ಯಾವ ಯೋಜನೆಯು ಎಷ್ಟು ಹೂಡಿಕೆ ಮಾಡಬೇಕು, ಯಾವ ರೀತಿ ಲಾಭ ಸಿಗುತ್ತದೆ ಎನ್ನುವ ಕುರಿತು ಈಗ ತಿಳಿದುಕೊಳ್ಳೊಣ.

ಮಹಿಳೆಯರಿಗಾಗಿ ಚಿಟ್ ಫಂಡ್ ಸ್ಕೀಂ:

ಎಂಎಸ್ಐಎಲ್‌ ನಿಂದ ಈ ವರ್ಷದ ಎಪ್ರೀಲ್‌ ನಿಂದ ಮಹಿಳೆಯರಿಗಾಗಿ ಹೊಸ ಸ್ವರೂಪದ ಚಿಟ್ ಫಂಡ್ ಸ್ಕೀಂ ಆರಂಭವಾಗಲಿದೆ. ಮಹಿಳೆಯರು ಸಹ ಚಿಟ್ ಫಂಡ್‌ನಲ್ಲಿ ತೊಡಗಿಸಿ ಲಾಭ ಗಳಿಸುವಂತಾಗಲಿ ಎನ್ನುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ. ಕೇರಳದ ಮಾದರಿಯಲ್ಲಿ ಚಿಟ್ ಫಂಡ್ ಸ್ಕೀಂ ಜಾರಿಗೆ ತರಲು ರಾಜ್ಯ ಸರ್ಕಾರವು ಸದ್ದುಗದ್ದಲವಿಲ್ಲದೆ ತಯಾರಿ ನಡೆಸಿದೆ ಎಂದು ತಿಳಿಸಿದ್ದಾರೆ.

ಯಾವ ರೀತಿ ಇರುತ್ತದೆ ಯೋಜನೆ:

ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರು ಪ್ರತಿ ತಿಂಗಳು 2,000 ರೂ. ಪಡೆದುಕೊಳ್ಳುತ್ತಿದ್ದು, ಈ ಹಣವನ್ನು ಈ ಚಿಟ್ ಫಂಡ್ನಲ್ಲಿ ತೊಡಗಿಸಿ ಎಂಎಸ್ಐಎಲ್ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಿದೆ. ಕೇರಳ ರಾಜ್ಯದಲ್ಲಿ 40 ಸಾವಿರ ಕೋಟಿ ರೂ. ವಹಿವಾಟು ನಡೆಸುತ್ತಿದ್ದು, ನಮ್ಮ ರಾಜ್ಯದಲ್ಲಿ ಕೇವಲ 300 ಕೋಟಿ ರೂ. ವಹಿವಾಟು ನಡೆಯುತ್ತಿದೆ. ಇದನ್ನು 10 ಸಾವಿರ ಕೋಟಿ ರೂ.ಗೆ ಏರಿಕೆ ಮಾಡುವುದು ರಾಜ್ಯ ಸರ್ಕಾರದ ಉದ್ದೇಶವಾಗಿದೆ.

ಕಾರ್ಮಿಕ ಕಾರ್ಡ್ ಇದ್ದವರಿಗೆ ಬಂಪರ್! ಕೇಂದ್ರ ಸರ್ಕಾರದಿಂದ ಈ ತಿಂಗಳ ಹಣ ಖಾತೆಗೆ


ಗ್ರಾಮೀಣ ಭಾಗದ ಸ್ವ-ಸಹಾಯ ಸಂಘಗಳ ಮೂಲಕವೂ ಚಿಟ್ ಫಂಡ್ ಉದ್ಯಮ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಆದರೆ ಸರ್ಕಾರದ ಈ ಯೋಜನೆ ಎಷ್ಟರ ಮಟ್ಟಿಗೆ ಜನರಿಗೆ ತಲುಪಲಿದೆ ಎಂದು ಕಾದು ನೋಡಬೇಕಾಗಿದೆ.

ಹೀಗಾಗಿ ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಕೊಟ್ಟ ಹಣವನ್ನು ಸಹ ಚಿಟ್ ಫಂಡ್ನಲ್ಲಿ ತೊಡಗಿಸುವಂತೆ ಮಾಡಿ ಈ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ಚಿಟ್ ಫಂಡ್ ಉದ್ಯಮವನ್ನು ಅಭಿವೃದ್ಧಿ ಪಡಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಕಾಂಗ್ರೆಸ್ ಸರ್ಕಾರವು ಈಗಾಗಲೇ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇದರ ಪ್ರಯೋಜನವನ್ನು ರಾಜ್ಯದ ಕೋಟ್ಯಂತರ ಜನರು ಪಡೆದುಕೊಳ್ಳುತ್ತಿದ್ದಾರೆ. ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗು ಮುಟ್ಟಿಸುವ ಸಲುವಾಗಿ ಅದಾಲತ್‌ ಗಳನ್ನು ಸಹ ನಡೆಸಲಾಗುತ್ತಿದೆ. ಒಟ್ಟಿನಲ್ಲಿ ರಾಜ್ಯ ಸರ್ಕಾರದಿಂದ ಕಟ್ಟ ಕಡೆಯ ಪ್ರಜೆಯನ್ನು ಮುಟ್ಟಲು ಪ್ರಾಮಾಣಿಕ ಪ್ರಯತ್ನವನ್ನು ನಡೆಸುತ್ತಿದೆ.

ಗೃಹಲಕ್ಷ್ಮಿ 5ನೇ ಕಂತಿನ ಹಣಕ್ಕೆ ಬೀಳಲಿದೆ ಬ್ರೇಕ್.!! ಈ ಕೆಲಸ ಮಾಡಿಲ್ಲ ಅಂದ್ರೆ ನಿಮಗಿಲ್ಲ ಉಚಿತ ಹಣ

ಅಂತ್ಯೋದಯ ಕಾರ್ಡ್ ಇದ್ದವರಿಗೆ ಭರ್ಜರಿ ಆಫರ್! 2028 ರವರೆಗೆ ಸಿಲಿದೆ ಉಚಿತ ರೇಷನ್‌

Leave a Comment