ಹಲೋ ಸ್ನೇಹಿತರೇ, ಗ್ಯಾರಂಟಿ ಗಿಫ್ಟ್ ಕೊಟ್ಟ ಸರ್ಕಾರದಿಂದ ಸಿದ್ದವಾಯ್ತು ಹೊಸ ಪ್ಲ್ಯಾನ್. ಸರ್ಕಾರದ ಹೊಸ ಯೋಜನೆ ಅದರಿಂದ ಗೃಹಲಕ್ಷ್ಮಿ ಹಣ ಹೇಗೆ ಡಬಲ್ ಆಗುತ್ತದೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯನ್ನು ತಂದ ಸರ್ಕಾರ ಅದೇ ದುಡ್ಡನ್ನು ಮಹಿಳೆಯರು ಚಿಟ್ಫಂಡ್ನಲ್ಲಿ ಹೂಡಿಕೆ ಮಾಡುವ ಬೊಂಬಾಟ್ ಯೋಜನೆಯನ್ನು ತರಲು ರೆಡಿ ಮಾಡಿದೆ. ಕೇರಳ ಮಾದರಿಯ ಚಿಟ್ಫಂಡ್ನ್ನು ಜಾರಿ ಮಾಡಲು ಸರ್ಕಾರ ಮುಂದಾಗಿದೆ. ಎಂಎಸ್ಐಎಲ್ನಿಂದ ಏಪ್ರಿಲ್ನಲ್ಲಿ ಈ ಸ್ವರೂಪದ ಚಿಟ್ಫಂಡ್ ರಾಜ್ಯದ್ಯಾಂತ ಜಾರಿಯಾಗುತ್ತದೆ.
ಹೇಗಿರಲಿದೆ ಚಿಟ್ ಫಂಡ್?
ಮಹಿಳೆಯರಿಗೆ ಗೃಹಲಕ್ಷ್ಮಿಯ ಯೋಜನೆಯಿಂದ ಹಣ ಬರುತ್ತಿದ್ದು ಸರ್ಕಾರಿ ಸ್ವಾಮ್ಯದ MSIL ಚಿಟ್ಫಂಡ್ ಉನ್ನತೀಕರಣಕ್ಕೆ plan ಮಾಡಲಾಗಿದೆ. ಈಗಾಗಲೇ ಕೇರಳದಲ್ಲಿ 40 ಸಾವಿರ ಕೋಟಿ ರೂ. ವಹಿವಾಟು ನಡೆದಿದ್ದು ಕರ್ನಾಟಕದಲ್ಲಿ ಸದ್ಯ ಚಿಟ್ಫಂಡ್ ಉದ್ಯಮ 300 ಕೋಟಿ ರೂ, ಇದೆ. 10 ಸಾವಿರ ಕೋಟಿ ರೂ. ಲಾಭದಾಯಕವಾಗಿ ಮಾಡುವ ಬಗ್ಗೆ ಉದ್ದೇಶವನ್ನು ಸರ್ಕಾರ ಹೊಂದಿದೆ. ಗ್ರಾಮೀಣ ಭಾಗದಲ್ಲಿರುವ ಸ್ವಸಹಾಯ ಸಂಘದ ಮೂಲಕ ಚಿಟ್ಫಂಡ್ ಉದ್ಯಮ ಬಲಪಡಿಸುವ ಗುರಿಯನ್ನು ಹೊಂದಲಾಗಿದೆ.
ಮಹಿಳೆಯರಿಗಾಗಿ ಚಿಟ್ ಫಂಡ್ ಸ್ಕೀಂ
MSIL ಈ ವರ್ಷದ ಎಪ್ರಿಲ್ನಲ್ಲಿ ಮಹಿಳೆಯರಿಗಾಗಿ ಹೊಸ ಸ್ವರೂಪದ ಚಿಟ್ ಫಂಡ್ ಸ್ಕೀಂ ಪ್ರಾರಂಭವಾಗುತ್ತದೆ. ಮಹಿಳೆಯರು ಕೂಡ ಚಿಟ್ ಫಂಡ್ನಲ್ಲಿ ತೊಡಗಿಸಿಕೊಂಡು ಲಾಭ ಗಳಿಸುವಂತಾಗಲಿ ಎನ್ನುವುದು ರಾಜ್ಯ ಸರ್ಕಾರದ ಮುಖ್ಯ ಉದ್ದೇಶವಾಗಿದೆ.
ಯಾವ ರೀತಿ ಇರುತ್ತದೆ ಯೋಜನೆ:
ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಯರು ಪ್ರತಿ ತಿಂಗಳು 2,000 ರೂ. ನೀಡುತ್ತಿದ್ದು, ಈ ಹಣವನ್ನು ಈ ಚಿಟ್ ಫಂಡ್ನಲ್ಲಿ ತೊಡಗಿಸಿ MSIL ಅಭಿವೃದ್ಧಿಗೆ ಸರ್ಕಾರ ಚಿಂತನೆಯನ್ನು ನಡೆಸಿದೆ. ಗ್ರಾಮೀಣ ಭಾಗದ ಸ್ವ-ಸಹಾಯ ಸಂಘಗಳ ಮೂಲಕವೂ ಚಿಟ್ ಫಂಡ್ ಉದ್ಯಮ ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಲಾಗಿದೆ. ಆದರೆ ಸರ್ಕಾರದ ಈ ಯೋಜನೆ ಜನರಿಗೆ ಎಷ್ಟರ ಮಟ್ಟಿಗೆ ತಲುಪಲಿದೆ ಎಂದು ನೋಡಬೇಕಾಗಿದೆ.
ಗೃಹ ಲಕ್ಷ್ಮಿ ಯೋಜನೆಯಡಿ ಕೊಟ್ಟ ಹಣವನ್ನು ಸಹ ಚಿಟ್ ಫಂಡ್ನಲ್ಲಿ ತೊಡಗಿಸುವಂತೆ ಮಾಡಿ ಈ ಮೂಲಕ ಮಹಿಳೆಯರ ಆರ್ಥಿಕ ಸ್ವಾವಲಂಬನೆ ಹಾಗೂ ಚಿಟ್ ಫಂಡ್ ಉದ್ಯಮ ಅಭಿವೃದ್ಧಿ ಪಡಿಸುವುದು ಸರ್ಕಾರದ ಮೂಲ ಉದ್ದೇಶವಾಗಿದೆ. ಇದರ ಪ್ರಯೋಜನ ರಾಜ್ಯದ ಕೋಟ್ಯಂತರ ಜನರು ಪಡೆಯಲಿದ್ದಾರೆ. ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಕೂಡ ಮುಟ್ಟಿಸುವ ಸಲುವಾಗಿ ಅದಾಲತ್ಗಳನ್ನು ನಡೆಸಲಾಗುವುದು.
ಇತರೆ ವಿಷಯಗಳು
ಅಂತ್ಯೋದಯ ಕಾರ್ಡ್ ಇದ್ದವರಿಗೆ ಭರ್ಜರಿ ಆಫರ್! 2028 ರವರೆಗೆ ಸಿಲಿದೆ ಉಚಿತ ರೇಷನ್
ಹಿರಿಯ ನಾಗರಿಕರಿಗೆ ಗುಡ್ ನ್ಯೂಸ್! ಪ್ರತಿ ತಿಂಗಳು ನಿಮ್ಮ ಖಾತೆಗೆ ಸೇರುತ್ತೆ 20,500 ರೂ. ಪಿಂಚಣಿ