rtgh

ಧನಶ್ರೀ ಯೋಜನೆ: ಎಲ್ಲಾ ಮಹಿಳೆಯರಿಗೆ ₹30,000 ಉಚಿತ.! ಅರ್ಜಿ ಸಲ್ಲಿಸಿದವರ ಖಾತೆಗೆ ಮಾತ್ರ ಹಣ

ಹಲೋ ಸ್ನೇಹಿತರೇ, ಮಹಿಳೆಯರಿಗೆ ಮತ್ತೊಂದು ಸಿಹಿ ಸುದ್ದಿ. ಗೃಹಲಕ್ಷ್ಮಿ ಯೋಜನೆ ಬೆನ್ನಲ್ಲೆ ಇನ್ನು 5 ಹೊಸ ಯೋಜನೆಗಳನ್ನು ಸರ್ಕಾರ ಜಾರಿ ಮಾಡಿದೆ. ಈಗಾಗಲೇ ಈ ಯೋಜನೆಗಳಿಗೆ ಅರ್ಜಿ ಪ್ರಕ್ರಿಯೇ ಆರಂಭವಾಗಿದೆ. ಈ ಯೋಜನೆಗಳ ಪ್ರಯೋಜನವನ್ನು ಪಡೆಯುವುದು ಹೇಗೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.

dhanashree scheme karnataka

ಈ ಯೋಜನೆಯಡಿ ಮಹಿಳೆಯರಿಗೆ ಸರ್ಕಾರ ಉಚಿತ 30,000 ನೀಡುತ್ತದೆ. ಈ ಯೋಜನೆಗಳು ಗೃಹಲಕ್ಷ್ಮೀ ಶಕ್ತಿ ಯೋಜನೆಗಳಿಗಿಂತ ಉತ್ತಮ ಯೋಜನೆಯಾಗಿದೆ. ಗೃಹಲಕ್ಷ್ಮಿ ಯೋಜನೆ ಹಾಗೂ ಶಕ್ತಿ ಯೋಜನೆ ಇನ್ನೂ 5 ವರ್ಷ ಚಾಲ್ತಿಯಲ್ಲಿರಬಹುದು. ಕಾಂಗ್ರೆಸ್‌ ಸರ್ಕಾರ ಇರುವವರೆಗು ಈ ಯೋಜನೆ ಲಾಭ ಸಿಗತ್ತದೆ. ಒಂದು ವೇಳೆ ಕಾಂಗ್ರೆಸ್‌ 5 ವರ್ಷದ ನಂತರ ಮತ್ತೆ ಅಧಿಕಾರಕ್ಕೆ ಬರದೇ ಇದ್ದಲ್ಲಿ ಈ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ.

ಈಗ ಮಾಹಿತಿ ನೀಡುತ್ತಿರುವ ಯೋಜನೆಗಳಿಂದ ನೀವು ನಿಮ್ಮ ಉದ್ಯೋಗವನ್ನು ನಿಮ್ಮ ಜೀವನವನ್ನು ರೂಪಿಸಿಕೊಳ್ಳಬಹುದಾಗಿದೆ. ಐದು ಯೋಜನೆಗಳಲ್ಲಿ ಮೊದಲನೇಯದು ಉದ್ಯೋಗಿನಿ ಯೋಜನೆ, ಚೇತನ ಯೋಜನೆ ಧನಶ್ರೀ ಯೋಜನೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರ ಪುರ್ನವಸತಿ ಯೋಜನೆ, ದೇವದಾಸಿ ಮಹಿಳೆಯರ ಪುರ್ನವಸತಿ ಯೋಜನೆ ನವೆಂಬರ್‌ 27 ತಾರೀಖಿನಿಂಧ ಅರ್ಜಿ ಸಲ್ಲಿಸಬಹುದು.

ಯೋಜನೆಯ ಉದ್ದೇಶಗಳು

  • ಮಹಿಳೆಯರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಿ, ಸಾಮಾಜಿಕ ಬದಲಾವಣೆಯ ದಾರಿಗೆ ಒಂದು ಪೂರಕ ವಾತಾವರಣ ಸೃಷ್ಟಿಸುವುದಾಗಿದೆ.
  • ಮಹಿಳೆಯರು ಬ್ಯಾಂಕುಗಳು ಮತ್ತು ಇತರೆ ಹಣಕಾಸು ಸಂಸ್ಥೆಗಳ ಮೂಲಕ ಸಾಲ ಪಡೆಯಲು ಅನುಕೂಲ ಮಾಡಿ ಕೊಡುವುದು.
  • ಮಹಿಳಾ ಉದ್ಯಮಿಗಳಿಗೆ ಮಾರುಕಟ್ಟೆ ಸೌಲಭ್ಯವನ್ನು ಕಲ್ಪಿಸುವುದು.
  • ಮಹಿಳಾ ಸ್ವಸಹಾಯ ಗುಂಪುಗಳನ್ನು ಉತ್ತೇಜಿಸುವುದು ಮತ್ತು ಬಲಪಡಿಸುವುದು.
  • ಆರ್ಥಿಕವಾಗಿ ಹಿಂದುಳಿದ ಮಹಿಳೆಯರು, ವಿಶೇಷ ವರ್ಗದವರಿಗೆ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ  ಇಲಾಖೆಯ ಮಾರ್ಗಸೂಚಿಯಂತೆ  ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಅವರಲ್ಲಿ ಉದ್ಯಮಶೀಲತೆಯನ್ನು ಬೆಳೆಸುವುದು.

ಉದ್ಯೋಗಿನಿ ಯೋಜನೆ:

  • ಮಹಿಳೆಯರು ಆದಾಯ ಉತ್ಪನ್ನಕರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸ್ವಯಂ ಉದ್ಯೋಗಿಗಳಾಗಲು ಬ್ಯಾಂಕುಗಳ  ಮೂಲಕ ಸಾಲ ಮತ್ತು ನಿಗಮದ ಮೂಲಕ ಸಹಾಯಧನ ನೀಡಲಾಗುತ್ತಿದೆ.
  • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ಸಾಲದ ಘಟಕ ವೆಚ್ಚ ಕನಿಷ್ಟ ರೂ.1.00 ಲಕ್ಷದಿಂದ ಗರಿಷ್ಟ ರೂ.3.00 ಲಕ್ಷಗಳು.  ಸಹಾಯಧನದ ಮೊತ್ತ ಶೇ.50 ರಷ್ಟು ಗರಿಷ್ಟ   ರೂ.1.50 ಲಕ್ಷಗಳು.  ಕುಟುಂಬದ ವಾರ್ಷಿ‍ಕ  ಆದಾಯದ ಗರಿಷ್ಟ ಮಿತಿ ರೂ.2.00 ಲಕ್ಷಗಳು.
  • ಸಾಮಾನ್ಯ ವರ್ಗ ಮತ್ತು ವಿಶೇಷ  ವರ್ಗದ ಫಲಾನುಭವಿಗಳಿಗೆ ಸಾಲದ ಘಟಕ ವೆಚ್ಚ ಗರಿಷ್ಟ ರೂ.3.00 ಲಕ್ಷಗಳು.  ಸಹಾಯಧನದ ಮೊತ್ತ  ಶೇ30 ರಷ್ಟು ಗರಿಷ್ಟ   ರೂ.90,000/-.  ಕುಟುಂಬದ ವಾರ್ಷಿಕ ಆದಾಯದ ಗರಿಷ್ಟ ಮಿತಿ ರೂ.1.50 ಲಕ್ಷಗಳು.  ಎಲ್ಲಾ ವರ್ಗದ ಮಹಿಳೆಯರಿಗೆ ವಯೋಮಿತಿ 18 ರಿಂದ 55 ವ‍‍ರ್ಷಗಳು.

ಚೇತನ ಯೋಜನೆ:

ದಮನಿತ ಮಹಿಳೆಯರು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ಅನುವಾಗುವಂತೆ ನಿಗಮದಿಂದ ನೇರವಾಗಿ ತಲಾ ರೂ.30,000/-ಗಳ ಪ್ರೋತ್ಸಾಹಧನವನ್ನು ಇ.ಡಿ.ಪಿ. ತರಬೇತಿಯೊಂದಿಗೆ ನೀಡಲಾಗುತ್ತದೆ.

ಲಿಂಗತ್ವ ಅಲ್ಪಸಂಖ್ಯಾತರ ಪುನರ್ವಸತಿ ಯೋಜನೆ

ಲಿಂಗತ್ವ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಿಂದ 2012-13 ನೇ ಸಾಲಿನಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅವರನ್ನು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಸಬಲೀಕರಣಗೊಳಿಸಲು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳಲು ನಿಗಮದಿಂದ ನೇರವಾಗಿ ತಲಾ ರೂ.30,000/-ಗಳ ಪ್ರೋತ್ಸಾಹಧನವನ್ನು ಇ.ಡಿ.ಪಿ. ತರಬೇತಿಯೊಂದಿಗೆ ನೀಡಲಾಗುತ್ತದೆ.


ಧನಶ್ರೀ ಯೋಜನೆ:

 ಧನಶ್ರೀ ಯೋಜನೆಯು ಎಚ್‌ಐವಿ ಸೋಂಕಿತ/ಬಾಧಿತ ಮಹಿಳೆಯರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು 2021-22 ರಿಂದ ಇಡಿಪಿ ತರಬೇತಿಯೊಂದಿಗೆ ರೂ.30,000/- ಪ್ರೋತ್ಸಾಹ ಧನ (ಸಬ್ಸಿಡಿ) ನೀಡುವ ಮೂಲಕ ಆರ್ಥಿಕವಾಗಿ ಸ್ವತಂತ್ರರಾಗಲು ಸಹಾಯ ಮಾಡುತ್ತದೆ. ಆದಾಯ ಉತ್ಪಾದಿಸುವ ಚಟುವಟಿಕೆಗಳು ಮತ್ತು ಸಣ್ಣ ಉತ್ಪಾದನಾ ಘಟಕಗಳನ್ನು ತೆಗೆದುಕೊಳ್ಳಲು ಫಲಾನುಭವಿಗಳಿಗೆ ಈ ಸಹಾಯಧನವನ್ನು ಒದಗಿಸಲಾಗುತ್ತದೆ. 18 ರಿಂದ 60 ವರ್ಷದೊಳಗಿನ ಎಚ್‌ಐವಿ ಸೋಂಕಿತ ಮಹಿಳೆಯರು ಈ ಯೋಜನೆಯಡಿ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿರುತ್ತಾರೆ

ದೇವದಾಸಿ ಮಹಿಳೆಯರ ಪುನರ್ವಸತಿ ಯೋಜನೆ

ಆರ್ಥಿಕವಾಗಿ ಮಾಜಿ ದೇವದಾಸಿಯರನ್ನು ಸಬಲೀಕರಣಗೊಳಿಸಲು ಆದಾಯೋತ್ಪನ್ನ ಚಟುವಟಿಕೆ ಕೈಗೊಳ್ಳುವ ಉದ್ದೇಶಕ್ಕಾಗಿ ನಿಗಮದಿಂದ ನೇರವಾಗಿ ರೂ. 30,000/-ಗಳ ಪ್ರೋತ್ಸಾಹಧನವನ್ನು ಇ.ಡಿ.ಪಿ. ತರಬೇತಿಯೊಂದಿಗೆ ಕಲ್ಪಿಸಲಾಗುತ್ತದೆ.  ಹಾಗೂ ರಾಜ್ಯದ 14 ಜಿಲ್ಲೆಗಳಲ್ಲಿ ದೇವದಾಸಿ ಪುನರ್ವಸತಿ ಯೋಜನೆಯ ಮೂಲಕ  ಅರಿವು ಮೂಡಿಸುವ ಕಾರ್ಯಕ್ರಮಗಳು, ಕಾನೂನು ಅರಿವು, ಜಾತ್ರಾ ಜಾಗೃತಿ ಕಾರ್ಯಕ್ರಮ, ಬೀದಿ ನಾಟಕ, ಗೋಡೆ ಬರಹ ಹಾಗೂ ಮಾಜಿ ದೇವದಾಸಿ ಮಹಿಳೆಯರಿಗಾಗಿ ಆರೋಗ್ಯ ಶಿಭಿರಗಳನ್ನು ಕೈಗೊಳ್ಳಲಾಗುತ್ತಿದೆ. 

BPL ಕಾರ್ಡುದಾರರಿಗೆ ಇನ್ಮೇಲೆ ಅಕ್ಕಿ ಮಾತ್ರ ಫ್ರೀ ಅಲ್ಲ, ಇವು ಇನ್ನು ಪುಕ್ಕಟೆ

ಲಕ್ಷಾಂತರ ಕುಟುಂಬಗಳಿಗೆ ಉಚಿತ ಮನೆ ಮಂಜೂರು.! ಸರ್ಕಾರದಿಂದ 2024ರ ಹೊಸ ಪಟ್ಟಿ ಬಿಡುಗಡೆ

Leave a Comment