rtgh

ಸ್ವಂತ ಭೂಮಿ ಹೊಂದಿರದ ರೈತರಿಗೆ ಸಿಹಿ ಸುದ್ದಿ.! ಸರ್ಕಾರದಿಂದ ಹಕ್ಕು ಪತ್ರ ವಿತರಣೆ

ಹಲೋ ಸ್ನೇಹಿತರೇ, ರಾಜ್ಯದ್ಯಂತ ಸರ್ಕಾರದ ಗೋಮಾಳ ಅಥವಾ ಸರ್ಕಾರದ ಇತರ ಜಮೀನುಗಳಲ್ಲಿ ಹಲವಾರು ವರ್ಷಗಳಿಂದ ಭೂ ರಹಿತ ರೈತರು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ ಅಂತಹ ರೈತರಿಗೆ ಇದೀಗ ಸರ್ಕಾರ ಹೊಸ ಯೋಜನೆಯನ್ನು ಜಾರಿಗೆ ತಂದಿದೆ, ಈ ಯೋಜನೆಯ ಬಗೆಗಿನ ಹೆಚ್ಚಿನ ವಿವರವನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.

Distribution of rights only to farmers

ಇಂಥವರಿಗೆ ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ಹಕ್ಕುಪತ್ರ ವಿತರಣೆ ಮಾಡಲು ಸರ್ಕಾರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದೀಗ ರಾಜ್ಯ ಸರ್ಕಾರವು ಹಕ್ಕು ಪತ್ರವನ್ನು ವಿತರಣೆಗೆ ಸಂಬಂಧಪಟ್ಟ ಹಾಗೆ ಮಹತ್ವದ ನಿರ್ಣಯವನ್ನು ಕೈಗೊಂಡಿದೆ ಎನ್ನಲಾಗಿದೆ.

ರಾಜ್ಯದಲ್ಲಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಹಕ್ಕು ಪತ್ರ ವಿತರಣೆ ಮಾಡದೆ ಈ ಕೆಲಸ ನೆನೆಗುದಿಗೆ ಬಿದ್ದಿದೆ. ಮಲೆನಾಡು ಹಾಗೂ ಕರಾವಳಿ ವಿಭಾಗದಲ್ಲಿ ಇಲ್ಲಿಯವರೆಗೆ ಸುಮಾರು 13,750 ಅರ್ಜಿಗಳು ಸಲ್ಲಿಕೆ ಆಗಿದ್ದು ಇವುಗಳ ವಿತರಣೆ ಬಗ್ಗೆ ಕ್ರಮ ಕೈಗೊಂಡಿರುವುದರಿಂದ ಮಾಹಿತಿಯನ್ನು ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಎಲ್ಲಾ ಕಾರ್ಮಿಕರಿಗು ಸಿಗುತ್ತೆ ರೂ. 4 ಲಕ್ಷ.! ಇಲಾಖೆಯಿಂದ ಅರ್ಜಿ ಆಹ್ವಾನ.! ಆಸಕ್ತರು ಕೂಡಲೇ ನೋಂದಾಯಿಸಿ

ಒಟ್ಟು 31,864 ರಷ್ಟು ಎಕರೆ ಭೂಮಿಗೆ ಹಕ್ಕು ಪತ್ರ ನೀಡಲು ಅರ್ಜಿ ಸಲ್ಲಿಕೆ ಆಗಿದೆ. ಈ ಪೈಕಿ ಏಳು ಸಾವಿರ ಹಕ್ಕು ಪತ್ರ ವಿತರಣೆಗೆ ಸರ್ಕಾರ ಮುಂದಾಗಿದೆ. ಈಗಾಗಲೇ ಸರ್ಕಾರಿ ಭೂಮಿ ಕೊರತೆ ಉಂಟಾಗಿದ್ದು, 3 ಎಕರೆಗಿಂತ ಹೆಚ್ಚಿಗೆ ಭೂಮಿಗೆ ಹಕ್ಕು ಪತ್ರ ವಿತರಣೆ ಮಾಡಲು ಸಾಧ್ಯವಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ ನೀಡಿದ್ದಾರೆ.


ಅರಣ್ಯ ಸಂರಕ್ಷಣಾ ಕಾಯ್ದೆ 1980ಕ್ಕೂ ಮೊದಲು ಅರಣ್ಯ ಭಾಗದಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಮಾತ್ರ ಹಕ್ಕು ಪತ್ರ ವಿತರಣೆಯನ್ನು ಮಾಡಲಾಗುವುದು. ಹಕ್ಕು ಪತ್ರ ವಿತರಣೆ ಪ್ರಕ್ರಿಯೆಯು ಆರಂಭವಾಗಿದ್ದು ಜನವರಿ ತಿಂಗಳ ಅಂತ್ಯದ ಒಳಗೆ ಸುಮಾರು ಏಳು ಸಾವಿರ ಅರ್ಜಿಗಳ ವಿಲೇವಾರಿಯು ನಡೆಯಲಿದೆ.

ಅನ್ನಭಾಗ್ಯದ ಹಣ ನಿಮ್ಮ ರೇಷನ್‌ ಕಾರ್ಡ್‌ಗೆ ಬಂದಿದ್ಯಾ?? ಹೀಗೆ ಚೆಕ್‌ ಮಾಡಿ

ಇನ್ಮುಂದೆ UPI ಮೂಲಕ ಹಣ ವರ್ಗಾವಣೆ ಅಸಾಧ್ಯ.! ನಿಮ್ಮ ಖಾತೆಯನ್ನೊಮ್ಮೆ ಚೆಕ್ ಮಾಡಿ

Leave a Comment