ಹಲೋ ಸ್ನೇಹಿತರೇ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಾಹನಗಳು ಅಪಘಾತಕ್ಕೀಡಾಗ, ನಿಗಮದ ವಾಹನಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರು ಮೃತಪಟ್ಟಲ್ಲಿ, ಮೃತ ಪ್ರಯಾಣಿಕರ ಅವಂಬಿಕರಿಗೆ, ಆರ್ಥಿಕ ನೆರವು ನೀಡುವ ಸಲುವಾಗಿ ಪ್ರಯಾಣಿಕರ ಅಪಘಾತ ಪರಿಹಾರ ನಿಧಿ ಟ್ರಸ್ಟ್ ವತಿಯಿಂದ ಪ್ರಸ್ತುತ ರೂ.1,00,000/- ಪರಿಹಾರ ನೀಡಲಾಗುತ್ತಿದೆ.
ಈ ನಡುವೆ ಪ್ರಸ್ತುತ ಪಾವತಿಸುತ್ತಿರುವ ಪರಿಹಾರ ಮೊತ್ತವನ್ನು ದಿನಾಂಕ:01.03.2017 ಪಾವತಿಸಲಾಗುತ್ತಿದ್ದು, ತದನಂತರ ಪರಿಹಾರದ ಮೊತ್ತದಲ್ಲಿ ಯಾವುದೇ ಹೆಚ್ಚಳವಾಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ದಿನಾಂಕ:31.10.2023 ರಂದು ಜರುಗಿದ 29ನೇ ಅಪಘಾತ ಸಂಹಾರ ನಿಧಿ ಸಭೆಯಲ್ಲಿ ಚರ್ಚಿಸಿ, ಪರಿಹಾರ ಮೊತ್ತವನ್ನು ರೂ.1,00,000/- ದಿಂದ ರೂ.10,00,000/-(ರೂ.ಹತ್ತು ಲಕ್ಷ ಮಾತ್ರ) ಗಳಿಗೆ ಹೆಚ್ಚಿಸಲು ಸಭೆಯು ಅನುಮೋದಿಸಿರುತ್ತದೆ.
ಪರಿಷ್ಕೃತ ಪರಿಹಾರ ಮೊತ್ತ ರೂ.10,00,000/-ಗಳಲ್ಲಿ ತಕ್ಷಣದ ಪರಿಹಾರವಾಗಿ ರೂ.25,000/-ವನ್ನು (ರೂ.ಇಪ್ಪತ್ತೈದು ಸಾವಿರ ಮಾತ್ರ) ಕ.ರಾ.ರ.ಸಾ.ನಿಗಮದ ಸುತ್ತೋಲೆ ಸಂಖ್ಯೆ:754 ದಿನಾಂಕ:08.12.1998 ರ ಅನುಸಾರ ಸಂಬಂಧಪಟ್ಟ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪಾವತಿಸುವುದು, ತದನಂತರ, ಅಪನಿ ಟ್ರಸ್ಟ್‌ನಿಂದ ರೂ.25,000/-ವನ್ನು ಸಂಬಂಧಪಟ್ಟ ವಿಭಾಗಗಳಿಗೆ ಮರುಪಾವತಿಸಿ, ಬಾಕಿ ಮೊತ್ತ ರೂ.9,75,000/-ಗಳನ್ನು ಉಲ್ಲೇಖ 1 ಸುತ್ತೋಲೆಯಾನುಸಾರ ದಿವಂಗತರ ವಾರಸುದಾರರಿಗೆ ಪಾವತಿಸುವುದು, ಮೃತರ ಕುಟುಂಬದವರಿಗೆ ಪರಿಹಾರ ಧನವನ್ನು ರೂ.10.00 ಲಕ್ಷ ಹೆಚ್ಚಿಸಿರುವುದರಿಂದ ಕಾಲ ಕ್ರಮೇಣವಾಗಿ ಅಪಘಾತ ಪರಿಹಾರ ನಿಧಿಯ ಒಟ್ಟು ಖರ್ಚು ಮತ್ತು ಒಟ್ಟು ಆದಾಯಕ್ಕಿಂತ ಅಧಿಕವಾಗುವ ಹಿನ್ನೆಲೆಯಲ್ಲಿ ಕೆಳಕಂಡಂತೆ ವಂತಿಕೆ ಸಂಗ್ರಹಣೆಯನ್ನು ಹೆಚ್ಚಿಸಲು ಸಹ ಸಭೆಯು ಅನುಮೋದಿಸಿದ್ದು, ಅದರಂತೆ ಕ್ರಮಕೈಗೊಳ್ಳುವುದು, ಈ ಮೇಲಿನ ಸುತ್ತೋಲೆಯು ದಿನಾಂಕ: 01.01.2014 ರಿಂದ ಜಾರಿಗೆ ಬರುತ್ತದೆ ಅಂತ ತಿಳಿಸಿದೆ.
ಇತರೆ ವಿಷಯಗಳು:
ಶಾಕಿಂಗ್ ನ್ಯೂಸ್: ಇನ್ಮುಂದೆ ಮಹಿಳೆಯರಿಗಿಲ್ಲ ಫ್ರೀ ಬಸ್; ಶಕ್ತಿ ಯೋಜನೆಗೆ ಹೊಸ ಟ್ವಿಸ್ಟ್
ಹೊಸ ವರ್ಷಕ್ಕು ಮೊದಲೇ ಬಂಪರ್ ಆಫರ್.! ದಿಢೀರ್ ಇಳಿಕೆ ಕಂಡ ಚಿನ್ನ-ಬೆಳ್ಳಿ.! ಎಷ್ಟಿದೆ ಇಂದಿನ ದರ?