ನಮಸ್ಕಾರ ಸ್ನೇಹಿತರೇ, ಚಿನ್ನ ಇಷ್ಟವಾಗದ ವ್ಯಕ್ತಿಗಳೆ ಇಲ್ಲ ಎಂದರು ತಪ್ಪಾಗುವುದಿಲ್ಲ. ಕೆಲವರು ಚಿನ್ನವನ್ನು ಆಭರಣದ ರೂಪದಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುತ್ತಾರೆ, ಇನ್ನೂ ಕೆಲವರು ಚಿನ್ನವನ್ನು ಹೂಡಿಕೆ ಮಾಡುವ ಮೂಲಕ ಹಣವನ್ನು ಪಡೆದುಕೊಳ್ಳುತ್ತಾರೆ. ನೀವು ನಿಮ್ಮ ಮನೆಯಲ್ಲಿ ಎಷ್ಟು ಚಿನ್ನವನ್ನು ಇಟ್ಟುಕೊಳ್ಳಬಹುದು ಎನ್ನುವು ನಿಮಗೆ ಗೊತ್ತಾ ಈ ಬಗ್ಗೆ ನಾವು ನಿಮಗೆ ಈ ಬಗ್ಗೆ ಹೆಚ್ಚಿನ ವಿವರವನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ, ಹಾಗಾಗಿ ಕೊನೆವರೆಗೂ ಓದಿ.
ಸಾಕಷ್ಟು ಜನರು ಕೈಯಲ್ಲಿ ದುಡ್ಡು ಇರುವಾಗ ಬೇರೆ ಯಾವುದಕ್ಕೂ ಖರ್ಚು ಮಾಡುವುದೇಇಲ್ಲ. ಬದಲಿಗೆ ಚಿನ್ನಕ್ಕಾಗಿ ಆ ಹಣವನ್ನು ಮೀಸಲಿಡುತ್ತಾರೆ. ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಎಷ್ಟೇ ಜಾಸ್ತಿ ಆಗುತ್ತಿದ್ದರು ಕೂಡ ಚಿನ್ನ ಖರೀದಿ ಮಾಡುವುದನ್ನು ಮಾತ್ರ ಜನ ಎಂದಿಗೂ ಬಿಟ್ಟಿಲ್ಲ.
ಚಿನ್ನದ ಸಂಗ್ರಹದ ಮೇಲಿನ ಟ್ಯಾಕ್ಸ್
CBDT ಹೊರಡಿಸಿರುವ ಸುತ್ತೋಲೆಯ ಪ್ರಕಾರ ಒಂದು ಮಿತಿಯ ಒಳಗೆ ಸಂಗ್ರಹಿಸಿಟ್ಟಿರುವ ಚಿನ್ನಕ್ಕೆ ಯಾವುದೇ ದಾಖಲೆ ಅಥವಾ ಪುರಾವೆ ಸಲ್ಲಿಸುವ ಅಗತ್ಯವಿಲ್ಲ ಎಂದು ಹೇಳಲಾಗಿದೆ. ಆದರೆ ಒಬ್ಬ ವ್ಯಕ್ತಿಯು ಎಷ್ಟು ಚಿನ್ನವನ್ನು ಮನೆಯಲ್ಲಿ ಸಂಗ್ರಹಿಸಬಹುದು ಎನ್ನುವುದಕ್ಕೂ ಕೂಡ ಸರ್ಕಾರದಿಂದ ಮಿತಿಯನ್ನು ಹಾಕಲಾಗಿದೆ ಇದಕ್ಕೆ ಅನುಗುಣವಾಗಿಯೇ ಪ್ರತಿಯೊಬ್ಬರು ಚಿನ್ನಾಭರಣಗಳನ್ನು ಮನೆಯಲ್ಲಿ ಇಟ್ಟುಕೊಳ್ಳ ಬೇಕು.
ವಿವಾಹವಾದ ಮಹಿಳೆ 500 ಗ್ರಾಂ ಚಿನ್ನವನ್ನು ಇಟ್ಟುಕೊಳ್ಳಬಹುದು, ಅದೇ ರೀತಿ ಅವಿವಾಹಿತ ಮಹಿಳೆ 250 ಗ್ರಾಂ ಹಾಗೂ ಪುರುಷರು 100 ಗ್ರಾಂ ಚಿನ್ನವನ್ನು ಯಾವುದೇ ರಶೀದಿ ಅಥವಾ ಪುರಾವೆ ಇಲ್ಲದೆ ತಮ್ಮ ಬಳಿ ಸಂಗ್ರಹಿಸಿಟ್ಟುಕೊಳ್ಳಬಹುದು. ಇದಕ್ಕೆ ಯಾವುದೇ ರೀತಿಯ ಟ್ಯಾಕ್ಸ್ ಪಾವತಿಸುವ ಅವಶ್ಯಕತೆ ಇರುವುದಿಲ್ಲ.
ಚಿನ್ನದ ಸಂಗ್ರಹದ ಮೇಲೆ ಜಿ ಎಸ್ ಟಿ
ಆದಾಯ ತೆರಿಗೆ ಕಾಯಿದೆ 1961 ರ ವಿಭಾಗ 115BBE ನಲ್ಲಿ ಹೇಳಿರುವಂತೆ, ವಿಭಾಗ 69B ಅಡಿಯಲ್ಲಿ ತೆರಿಗೆಗೆ ಪಾವತಿಸಬೇಕು. ಮಿತಿಗಿಂತ ಹೆಚ್ಚಿನ ಚಿನ್ನ ಇಟ್ಟುಕೊಂಡಾಗ ಅಧಿಕಾರಿಗಳು ದಾಖಲೆ ಕೇಳಿದಾಗ ನೀಡಲೇಬೇಕು ಇಲ್ಲವಾದರೆ ದಂಡ ಮತ್ತು ಸೂಕ್ತ ಶಿಕ್ಷೆಯನ್ನು ಅನುಭವಿಸ ಬೇಕು.
ನರೇಗಾ ಯೋಜನೆಯಲ್ಲಿ ಉದ್ಯೋಗ ಮಿತಿ ಹೆಚ್ಚಳ.! ಕೆಂದ್ರ ಸರ್ಕಾರದಿಂದ ಆದೇಶ ಪ್ರಕಟ
ಚಿನ್ನ ಖರೀದಿಯ ಮೇಲೆ 3% ಹಾಗೂ ಶುಲ್ಕದ ಮೇಲೆ 5% GST ವಿಧಿಸಲಾಗುತ್ತದೆ. ಹೊಸ ಆಭರಣ ಖರೀದಿಗಾಗಿ ಹಳೆಯ ಆಭರಣಗಳ ವಿನಿಮಯ ಮಾಡಿಕೊಂಡರೆ ಆ ಆಭರಣದ ಮೇಲೆ ಮತ್ತೆ ಜಿಎಸ್‌ಟಿ ಪಾವತಿಸುವ ಅಗತ್ಯವಿಲ್ಲ. ಹೊಸ ಚಿನ್ನಾಭರಣ ಅಧಿಕ ತೂಕ ಹೊಂದಿದ್ದರೆ ಅದರ ಮೇಲೆ ಜಿಎಸ್ಟಿ (GST) ಪಾವತಿಸಬೇಕು. ಆದರೆ ಚಿನ್ನದ ಮಾರಾಟದ ಮೇಲೆ ಯಾವುದೇ ಜಿಎಸ್ಟಿ ಪಾವತಿಸುವ ಅಗತ್ಯವಿಲ್ಲ.
ದೀರ್ಘಾವಧಿಯ ಕ್ಯಾಪಿಟಲ್ ಗೇನ್ಸ್ ತೆರಿಗೆ
ಚಿನ್ನ ಖರೀದಿಸಿ (Buy Gold) ಮೂರು ವರ್ಷಗಳ ನಂತರ ಮಾರಾಟ ಮಾಡಿದರೆ ದೀರ್ಘಾವಧಿಯ ಕ್ಯಾಪಿಟಲ್ ಗೇನ್ಸ್ (long term capital gain tax) ತೆರಿಗೆ ಅನ್ವಯವಾಗುತ್ತದೆ, ಈ ತೆರಿಗೆ 20% ನಷ್ಟು ಇರುತ್ತದೆ.
ಮಾರಾಟದಿಂದ ಬರುವ ನಿವ್ವಳ ಆದಾಯವನ್ನು ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾದಿಕಾರದ ಬಾಂಡ್ ಗಳಂತಹ ಸರ್ಕಾರಿ ಬಾಂಡ್ ಗಳನ್ನೂ ಖರೀದಿಸಲು ಬಳಸಿದರೆ ಈ ತೆರಿಗೆ ಕಡಿತಗೊಳ್ಳುತ್ತದೆ ತಂದಿದ್ದಾರೆ, ಹಾಗಾಗಿ ಇನ್ನು ಮುಂದೆ ಚಿನ್ನ ಮನೆಯಲ್ಲಿ ಇಟ್ಟುಕೊಳ್ಳುವುದಕ್ಕಿಂತ ಮೊದಲು ಆದಾಯ ತೆರಿಗೆಯ ನಿಯಮಗಳ ಬಗ್ಗೆ ತಿಳಿದುಕೊಂಡು ಅದೇ ನೀತಿಯಲ್ಲಿ ಚಿನ್ನಾಭರಣಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಿ ಮತ್ತು ಇದರ ಜೊತೆಗೆ ಎಲ್ಲಾ ದಾಖಲೆಗಳನ್ನು ನಿಮ್ಮೊಂದಿಗೆ ಇರಿಸಿಕೊಳ್ಳಿ ಇದರಿಂದ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.
ಇತರೆ ವಿಷಯಗಳು:
ಆರ್‌ಬಿಐ ಹೊಸ ರೂಲ್ಸ್ ಜಾರಿ.!! ವೈಯಕ್ತಿಕ ಸಾಲ ತೆಗೆದುಕೊಳ್ಳುವುದು ತುಂಬಾ ಸುಲಭ; ಇಂದೇ ಚೆಕ್ ಮಾಡಿ
1.2 ಕೋಟಿ ರೈತರ ಸಾಲ ಮನ್ನಾ ಘೋಷಣೆ.! ಸರ್ಕಾರದಿಂದ ಹೊಸ ಲಿಸ್ಟ್ ಬಿಡುಗಡೆ.! ಈ ಲಿಂಕ್ ಬಳಸಿ ಹೆಸರನ್ನು ಚೆಕ್ ಮಾಡಿ