ಹಲೋ ಸ್ನೇಹಿತರೇ, ನೀವು ಪದವಿ/ ಇತರ ಕೋರ್ಸ್ ಮುಗಿಸಿದ್ದೀರಾ? ಹೊಸದಾಗಿ ಸರ್ಕಾರಿ ಕೆಲಸ ಅರ್ಜಿ ಸಲ್ಲಿಸಲು ಮುಂದಾಗಿದ್ದೀರಾ ಹಾಗಿದ್ದರೆ ಈ ಕೆಲಸಕ್ಕೆ ಅರ್ಜಿ ಸಲ್ಲಿಸಬೇಕಾದ್ರೆ ಈ ಮುಖ್ಯ ದಾಖಲೆ ಇನ್ನು ಮುಂದೆ ನಿಮ್ಮ ಬಳಿ ಇರಬೇಕು. ಇಲ್ಲವಾದರೆ ಸರ್ಕಾರಿ ಕೆಲಸ ಪಡೆಯುವುದು ಹಾಗಿರಲಿ ಸರ್ಕಾರಿ ಕೆಲಸಕ್ಕೆ ಅರ್ಜಿ ಸಲ್ಲಿಸಲು ಕೂಡ ಸಾಧ್ಯವಿಲ್ಲ. ಯಾವುದು ಆ ದಾಖಲೆ ಎಂದು ಲೇಖದಲ್ಲಿ ತಿಳಿಯಿರಿ.
ಒಂದು ಹಂತದ ಶಿಕ್ಷಣ ಮುಗಿಸಿದ ನಂತರ ಕೆಲಸಕ್ಕೆ ಸೇರಿ ಉದ್ಯೋಗ ಮಾಡಬೇಕು. ಕೈ ತುಂಬಾ ಹಣ ಸಂಪಾದನೆ ಮಾಡಬೇಕು ಎಂಬುವುದು ಪ್ರತಿಯೊಬ್ಬರ ಆಸೆ. ಅದಕ್ಕಾಗಿ ಖಾಸಗಿ ಅಥವಾ ಸರಕಾರಿ ಕಚೇರಿಗಳಲ್ಲಿ ಕೆಲಸ ಮಾಡಬೇಕೆಂದರೆ ಜನ ಅರ್ಜಿ ಸಲ್ಲಿಸಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.
ಸರ್ಕಾರಿ ನೌಕರಿ ಪಡೆದುಕೊಳ್ಳಲು ಅರ್ಜಿ ಹಾಕುವುದಕ್ಕು ಮೊದಲು ಆಯಾ ಕೆಲಸದ ಬಗ್ಗೆ ಸಾಕಷ್ಟ ತಿಳಿದುಕೊಳ್ಳಬೇಕಾಗುತ್ತದೆ, ನಿಮ್ಮ ಅರ್ಜಿಯಲ್ಲಿ ಸಣ್ಣ ಲೋಪದೋಷ ಆದರು ಕೂಡ ಅಂತಹ ಅರ್ಜಿ ರಿಜೆಕ್ಟ್ ಆಗುತ್ತೆ.
ಸರ್ಕಾರದ ಹೊಸ ನಿಯಮದ ಪ್ರಕಾರ ಕನಿಷ್ಠ ವಿದ್ಯಾರ್ಹತೆ ಇಲ್ಲದಿರುವವರು ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ. ಇನ್ನು ಸರ್ಕಾರಿ ನೌಕರಿ ಪಡೆದುಕೊಳ್ಳಲು ಅರ್ಜಿ ಹಾಕುವ ಅಭ್ಯರ್ಥಿ ಪ್ರಮುಖವಾದ ದಾಖಲೆ ಹೊಂದಿರಬೇಕು ಎಂದು ಸರ್ಕಾರ ತಿಳಿಸಿದೆ.
ಈ ದಾಖಲೆ ಇದ್ದವರು ಮಾತ್ರ ಅರ್ಜಿ ಸಲ್ಲಿಸಿ
ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಬಯಸುವವರು ಇನ್ನು ಮುಂದೆ ಯಾವುದೇ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸುವುದಾದರೆ 10ನೇ ತರಗತಿ ಮಾರ್ಕ್ಸ್ ಕಾರ್ಡ್ ಅನ್ನು ಪ್ರಮುಖ ದಾಖಲೆಯಾಗಿ ನೀಡಲೇಬೇಕಾಗುತ್ತದೆ. ಒಬ್ಬ ವ್ಯಕ್ತಿಗೆ ಬೇಸಿಕ್ ಶಿಕ್ಷಣವಾದರೂ ಸಿಕ್ಕಿದೆ ಹಾಗೂ ಅಭ್ಯರ್ಥಿಯ ಶಿಕ್ಷಣ ಫೇಕ್ ಅಲ್ಲ ಎಂದು ತಿಳಿಸಲು ಈ ಕಡ್ಡಾಯ ನಿಯಮವನ್ನು ತರಲಾಗಿದೆ.
ಕರ್ನಾಟಕ ಸಿವಿಲ್ ಸೇವೆ ಕಾಯ್ದೆ 1978 ಇದು ಕೊಡಿ ಮಾಡಲಾಗಿದ್ದು ರಾಜ್ಯದ್ಯಂತ ಈ ಹೊಸ ರೂಲ್ಸ್ ಬಗ್ಗೆ ಮಾಹಿತಿ ನೀಡಲಾಗಿದೆ. ಯಾವುದೇ ರೀತಿಯ ಗ್ರೂಪ್ ಡಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ 10ನೇ ತರಗತಿ ಉತ್ತೀರ್ಣರಾಗಿಬೇಕು.
ಹಾಗಾಗಿ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಮಂಡಳಿಯ ಅಡಿಯಲ್ಲಿ 10ನೇ ತರಗತಿ ಮುಗಿಸಿರುವುದಕ್ಕೆ ಪ್ರಮಾಣ ಪತ್ರ / ಮಾರ್ಕ್ಸ್ ಕಾರ್ಡ್ ದಾಖಲೆಯನ್ನು ನೀಡಿ ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ಅಧಿಸೂಚನೆಯಲ್ಲಿ ಹೊರಡಿಸಿದೆ.
ಇನ್ಮುಂದೆ ಸರ್ಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಚ್ಚಿಸುವವರು ಯಾವುದೇ ಕಾರಣಕ್ಕೂ ಇತರ ಎಲ್ಲಾ ದಾಖಲೆಗಳ ಜೊತೆಗೆ 10ನೇ ತರಗತಿಯ ಮಾರ್ಕ್ಸ್ ಕಾರ್ಡ್ ಇಟ್ಟುಕೊಳ್ಳುವುದು ಕಡ್ಡಾಯ.
ಇತರೆ ವಿಷಯಗಳು
ಮೊಬೈಲ್ ಬಳಕೆದಾರರೇ ಹುಷಾರ್.!! ಈ ಅಪ್ಲಿಕೇಶನ್ ನಿಮ್ಮ ಬಳಿ ಇದ್ಯಾ?? ಹಾಗಾದ್ರೆ ಮಿಸ್ ಮಾಡ್ದೆ ಓದಿ
ಕೇಂದ್ರದಿಂದ ಬೊಂಬಾಟ್ ಆಫರ್.!! ಈ ದಾಖಲೆ ಇದ್ರೆ ನಿಮ್ಮ ವಿದ್ಯುತ್ ಬಿಲ್ ಸಂಪೂರ್ಣ ಮನ್ನಾ