ಹಲೋ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಸರ್ಕಾರ 5ನೇ ಕಂತಿನ ಹಣ ಬಿಡುಗಡೆ ಮಾಡಲು ಮುಂದಾಗಿದೆ, ಈಗಾಗಲೇ ಸುಮಾರು ರೂ. 8000 ಗಳನ್ನು ಅಂದರೆ ನಾಲ್ಕು ಕಂತಿನ ಹಣವನ್ನು ಕೋಟ್ಯಾಂತರ ಮಹಿಳೆಯರು ಪಡೆದುಕೊಂಡಿದ್ದಾರೆ. ಈಗ ಮಹಿಳೆಯರು 5 ನೇ ಕಂತಿಗಾಗಿ ಕಾತುರದಿಂದ ಕಾಯುತ್ತಿದ್ದರೆ, ಅವರಿಗೆ ಸರ್ಕಾರ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ಇದರ ಕುರಿತಾದ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಪಟ್ಟಂತೆ ಸರ್ಕಾರ ಕೆಲವು ಪ್ರಮುಖ ನಿಯಮಗಳನ್ನು ತಿಳಿಸಿದೆ, ಈ ನಿಯಮಗಳನ್ನು ಹಾಗೂ ಸರ್ಕಾರ ಹೇರಿಕೆ ಮಾಡಿರುವ ಮಾನದಂಡಗಳನ್ನು ಮೀರಿ ಗೃಹಲಕ್ಷ್ಮಿ ಯೋಜನೆಗೆ ಯಾರಾದರೂ ಅರ್ಜಿ ಸಲ್ಲಿಸಿದ್ದರೆ ಅಂತವರ ಖಾತೆಗೆ ಒಂದು ರೂಪಾಯಿ ಹಣವು ಕೂಡ ಜಮಾ ಆಗುವುದಿಲ್ಲ, ಇದೇ ಕಾರಣಕ್ಕೆ ನೀವು ಈ ನಿಯಮಗಳನ್ನ ತಿಳಿದುಕೊಂಡು ಹೊಸ ಅರ್ಜಿ ಸಲ್ಲಿಕೆಯನ್ನು ಕೂಡ ಮಾಡಲು ಸರ್ಕಾರ ಅವಕಾಶ ನೀಡಿದೆ.
ಗೃಹಲಕ್ಷ್ಮಿ ಅರ್ಜಿ ಸಲ್ಲಿಕೆ ಆರಂಭ:
ಜುಲೈ 19 2023ರಿಂದ ಗೃಹಲಕ್ಷ್ಮಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿತ್ತು, ಆಗಸ್ಟ್ 30 ರಿಂದ ಪ್ರತಿಯೊಬ್ಬರ ಖಾತೆಗೂ ಕೂಡ ಹಣ ಜಮಾ ಮಾಡಲು ಸರ್ಕಾರ ಆರಂಭಿಸಿತ್ತು. ಆದರೆ ಈ ಯೋಜನೆ ಆರಂಭವಾದಾಗಿನಿಂದಲೂ ಸಾಕಷ್ಟು ಗೊಂದಲಗಳು ಹಾಗೂ ತಾಂತ್ರಿಕ ದೋಷಗಳು ಇರುವ ಕಾರಣ ಎಲ್ಲಾ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗಿಲ್ಲ. ಆದ್ದರಿಂದ ಈ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವವರೆಗೂ ಮತ್ತೆ ಹೊಸ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರ ಹೊಸ ಅರ್ಜಿ ತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು.
ಆದರೆ ಇನ್ನೂ ಲಕ್ಷಾಂತರ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ. ಹಾಗಾಗಿ ಅಂಥವರ ಮನವಿಯ ಮೇರೆಗೆ, ಹೊಸದಾಗಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ನೀವು ಸರ್ಕಾರ ತಿಳಿಸಿರುವ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ಹತ್ತಿರದ ಸೇವ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿ. ನೀವು ಯಾವುದೇ ಸರ್ಕಾರಿ ಹುದ್ದೆಯಲ್ಲಿ ಇದ್ದರೆ ಅಥವಾ ನಿಮ್ಮ ಮನೆಯ ಯಾವುದೇ ಸದಸ್ಯ ಸರ್ಕಾರಿ ಹುದ್ದೆಯಲ್ಲಿ ಇದ್ದರೆ ಅರ್ಜಿ ಸಲ್ಲಿಸುವಂತಿಲ್ಲ. ನೀವು ಅಥವಾ ನಿಮ್ಮ ಮನೆಯ ಸದಸ್ಯರು ಆದಾಯ ತೆರಿಗೆ ಇಲಾಖೆಗೆ ತೆರಿಗೆ ಪಾವತಿ ಮಾಡುತ್ತಿದ್ದರೆ ಅರ್ಜಿ ಸಲ್ಲಿಸುವಂತಿಲ್ಲ.
ಬಿಪಿಎಲ್ ಹಾಗೂ ಅಂತ್ಯೋದಯ ಕಾರ್ಡ್ ಹೊಂದಿರುವವರು ಮಾತ್ರವಲ್ಲದೆ ಎಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವ ಮಹಿಳೆಯರ ರೇಷನ್ ಕಾರ್ಡ್ ಅವರ ಹೆಸರಿನಲ್ಲಿಯೇ ಇರಬೇಕು. ಬ್ಯಾಂಕ್ ಖಾತೆಗೆ ಕೆವೈಸಿ ಕಡ್ಡಾಯ.
ಅರ್ಜಿ ಸಲ್ಲಿಸಲು ಬೇಕಾಗಿರುವ ಮುಖ್ಯ ದಾಖಲೆಗಳು:
- ಅರ್ಜಿ ಸಲ್ಲಿಸಲು ಬಯಸುವ ಮಹಿಳೆಯ ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಬ್ಯಾಂಕ ಖಾತೆಯ ವಿವರ (ಕೆ ವೈ ಸಿ ಕಡ್ಡಾಯ)
- ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
ಇದನ್ನೂ ಸಹ ಓದಿ : ಕೋಟಿಗಟ್ಟಲೆ ರೈತರಿಗೆ ಸಿಹಿ ಸುದ್ದಿ! 16 ನೇ ಕಂತಿನ ಹಣ ಬಿಡುಗಡೆಯಾಗಿದೆ, ಇಲ್ಲಿಂದ ಪಟ್ಟಿ ಪರಿಶೀಲಿಸಿ
ಯಜಮಾನಿಗೆ ಇಲ್ಲ ಅಂದ್ರೆ ಯಜಮಾನರ ಖಾತೆಗೆ ಹಣ ಜಮಾ:
ಈಗಾಗಲೇ ಸರ್ಕಾರ ತಿಳಿಸಿರುವಂತೆ ಯಜಮಾನೀಯ ಖಾತೆಗೆ ಅಂದರೆ 2000 ಯಾರ ಖಾತೆಗೆ ಬರಬೇಕು. ಅಂತಹ ಮಹಿಳೆಯ ಖಾತೆಗೆ ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಒಂದು ವೇಳೆ ಆಧಾರ್ ಸೀಡಿಂಗ್ ಪ್ರಕ್ರಿಯೆ ಸರಿಯಾಗಿ ಆಗಿಲ್ಲದೆ ಇದ್ದರೆ ಅಂತವರ ಖಾತೆಗೆ ಹಣ ಬರಲು ಸಾಧ್ಯವಿಲ್ಲ.
ಹೀಗಾಗಿ ಮನೆಯ ಯಜಮಾನಿಯ ಖಾತೆ ಸರಿ ಇಲ್ಲದೆ ಇದ್ದರೆ ಮನೆಯ ಯಜಮಾನನ ಖಾತೆಗೆ ಹಣ ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಇನ್ನು ಎರಡನೇ ವ್ಯಕ್ತಿಗೆ ಹಣ ವರ್ಗಾವಣೆ ಆಗಲು ಅವರ ಖಾತೆಯಲ್ಲೂ ಕೂಡ ಕೆವೈಸಿ ಪ್ರಕ್ರಿಯೆ ಪೂರ್ಣಗೊಂಡಿರಬೇಕು.
ಗೃಹಲಕ್ಷ್ಮಿ ಐದನೇ ಕಂತು ಮುಂದಿನ ತಿಂಗಳ ಮೊದಲ ವಾರ ಬಿಡುಗಡೆ
ರಾಜ್ಯದಲ್ಲಿ ಅತಿ ಹೆಚ್ಚು ಅನುದಾನ ಪಡೆದುಕೊಂಡಿರುವ ಯೋಜನೆ ಗೃಹಲಕ್ಷ್ಮಿ ಯೋಜನೆಯಾಗಿದೆ. ಸರ್ಕಾರ ಈಗಾಗಲೇ ತಿಳಿಸಿರುವಂತೆ ಗೃಹಲಕ್ಷ್ಮಿ ಯೋಜನೆಯ ನಾಲ್ಕು ಕಂತಿನ ಹಣ ಬಹುತೇಕ ಎಲ್ಲಾ ಜಿಲ್ಲೆಯ ಫಲಾನುಭವಿ ಮಹಿಳೆಯರ ಖಾತೆಗೆ ವರ್ಗಾವಣೆ ಆಗಿದೆ.
ಇನ್ನು 5ನೇ ಕಂತಿನ ಹಣ ಮುಂದಿನ ತಿಂಗಳ ಮೊದಲ ವಾರದಲ್ಲಿ ವರ್ಗಾವಣೆ ಮಾಡಲಾಗುವುದು. ಸರ್ಕಾರ ಈ ಹಿಂದೆ ಪ್ರತಿ ತಿಂಗಳ 15ರಿಂದ 20ನೇ ತಾರೀಖಿನ ಒಳಗೆ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಮಾಡಲಾಗುವುದು ಎಂದು ತಿಳಿಸಿದ್ದು ಆದರೆ ಕಾರಣಾಂತರಗಳಿಂದ ಈ ನಿಗದಿತ ದಿನಾಂಕದಂದು ಹಣ ವರ್ಗಾವಣೆ ಆಗುತ್ತಿಲ್ಲ. ಬದಲಿಗೆ ತಿಂಗಳ 30 ದಿನಗಳ ಅವಧಿಯಲ್ಲಿ ಯಾವುದೇ ದಿನ ಹಣ ವರ್ಗಾವಣೆ ಆಗಬಹುದು.
ಮನೆಯ ಎಲ್ಲಾ ಸದಸ್ಯರ ಖಾತೆಗೂ ಕೆವೈಸಿ ಕಡ್ಡಾಯ:
ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಬೇಕು ಅಂದ್ರೆ ಕೇವಲ ಮಹಿಳೆಯರ ಖಾತೆಗೆ ಮಾತ್ರವಲ್ಲದೆ ಮನೆಯ ಎಲ್ಲಾ ಸದಸ್ಯರ ಖಾತೆಗೆ ಕೆವೈಸಿ ಆಗುವುದು ಕಡ್ಡಾಯವಾಗಿದೆ, ಇಲ್ಲದೆ ಇದ್ದರೆ ಗೃಹಲಕ್ಷ್ಮಿ ಯೋಜನೆಯ ಮುಂದಿನ ಕಂತಿನ ಹಣ ಅಂದರೆ 5ನೇ ಕಂತಿನ ಹಣ ಜಮಾ ಆಗುವುದಿಲ್ಲ.
ಕೆ ವೈ ಸಿ ಸ್ಟೇಟಸ್ ಹೀಗೆ ಚೆಕ್ ಮಾಡಿ:
- https://ahara.kar.nic.in/Home/EServices ಮೊದಲು ಈ ವೆಬ್ ಸೈಟ್ ಗೆ ಭೇಟಿ ನೀಡಿ.
- ಎರಡನೇ ಹಂತದಲ್ಲಿ, ಎಡಬಾಗದಲ್ಲಿ ಮೂರು ಲೈನ್ಗಳು ಕಾಣಿಸುತ್ತವೆ ಅದರ ಮೇಲೆ ಕ್ಲಿಕ್ ಮಾಡಿ. ಈ ಸ್ಥಿತಿ ಎನ್ನುವ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಬಳಿಕ ಹೊಸ ಅಥವಾ ಚಾಲ್ತಿಯಲ್ಲಿ ಇರುವ ರೇಷನ್ ಕಾರ್ಡ್ ತಿದ್ದುಪಡಿ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
- ಮುಂದಿನ ಹಂತದಲ್ಲಿ ನಿಮಗೆ ಮೂರು ಲಿಂಗಗಳು ಕಾಣಿಸುತ್ತವೆ ಅದರ ಕೆಳಗಡೆ ಇರುವ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ, ಅದರ ಮೇಲ್ಭಾಗದ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಈಗ ನಿಮ್ಮ ಆಧಾರ್ ಸಂಖ್ಯೆಯನ್ನು ಹಾಕಿ, ಯಾವ ಸದಸ್ಯರ ಕೆವೈಸಿ ಆಗಿದೆ ಎಂಬುದನ್ನ ಚೆಕ್ ಮಾಡಲು ಆ ಸದಸ್ಯರ ಹೆಸರನ್ನು ಆಯ್ಕೆ ಮಾಡಿ.
- ನಂತರ ಗೋ ಎಂದು ಕೊಟ್ಟರೆ ಕೆ ವೈ ಸಿ ಆಗಿದೆಯೋ ಇಲ್ಲವೋ ಎಂಬುದು ತಿಳಿಯುತ್ತದೆ.
- ನೀವು ಆಧಾರ್ ಸಂಖ್ಯೆಯನ್ನು ವಿತ್ ಓಟಿಪಿ ವಿಥೌಟ್ ಓಟಿಪಿ ಎರಡು ಆಯ್ಕೆಯನ್ನು ಮಾಡಬಹುದು.
ಇತರೆ ವಿಷಯಗಳು:
ಕೇವಲ 10 ರೂ.ಗೆ LED ಬಲ್ಬ್! ಕೈಗೆಟುಕುವ ಬೆಲೆಯಲ್ಲಿ ಖರೀದಿಸಿ: ಸರ್ಕಾರದ ಹೊಸ ಯೋಜನೆ
ಡ್ರೈವಿಂಗ್ ಲೈಸೆನ್ಸ್ ಮಾಡಿಸುವ ನಿಯಮ ಚೇಂಜ್! ಕೇಂದ್ರ ಸರ್ಕಾರದ ಹೊಸ ಆದೇಶ
ರೈತರಿಗೆ ಕಡಿಮೆ ಬಡ್ಡಿಯಲ್ಲಿ 3 ಲಕ್ಷದವರೆಗೆ ಸಾಲ! ಸರ್ಕಾರದ ಹೊಸ ಯೋಜನೆ