ಹಲೋ ಸ್ನೇಹಿತರೇ, ಸರ್ಕಾರದ ಗ್ಯಾರಂಟಿ ಯೋಜನೆಯಾದ ಗೃಹಲಕ್ಷ್ಮಿ ಯೋಜನೆಯ 2000 ರೂ. ಗಳನ್ನು ಉಚಿತವಾಗಿ ನೀಡುವುದು ಸಣ್ಣ ವಿಚಾರವಲ್ಲ. ಕರ್ನಾಟಕದ ಫಲಾನುಭವಿ ಮಹಿಳೆಯರು ಈಗಾಗಲೇ ರೂ. 10,000 ಉಚಿತವಾಗಿ ಗೃಹಲಕ್ಷ್ಮಿ ಯೋಜನೆಯಡಿ ನೇರವಾಗಿ ಖಾತೆಗೆ ಜಮಾ ಮಾಡಲಾಗುತ್ತದೆ. ಈಗ 6 ನೇ ಕಂತಿನ ಹಣ ಜಮಾ ಮಾಡಲು ಸರ್ಕಾರ ದಿನಾಂಕ ನಿಗದಿ ಮಾಡಿದೆ. ಇದರ ಕುರಿತಾದ ಮಾಹಿತಿಗಾಗಿ ಈ ಲೇಖನವನ್ನು ಕೊನೆವರೆಗೂ ಓದಿ..
ಗೃಹಲಕ್ಷ್ಮಿ ಯೋಜನೆಯ 5ನೇ ಕಂತಿನ ಹಣ ಬಿಡುಗಡೆ:
ಗೃಹಲಕ್ಷ್ಮಿ ಯೋಜನೆಯಡಿ ಮಹಿಳೆಯರಿಗೆ ಮಾಸಿಕ 2000 ರೂ. ಸಹಾಯಧನ ನೀಡಲಾಗುತ್ತದೆ. ಗೃಹಲಕ್ಷ್ಮಿ ಯೋಜನೆಯು ಹಲವು ಗೊಂದಲಗಳ ನಡುವೆ ಯಶಸ್ವಿಯಾದ ಯೋಜನೆಯಾಗಿದೆ. ಆರಂಭದಲ್ಲಿ ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ (DBT) ಮಾಡುವಲ್ಲಿ ಸಾಕಷ್ಟು ಸಮಸ್ಯೆಗಳನ್ನು ಸರ್ಕಾರ ಎದುರಿಸಿತ್ತು. ಆದರೆ ಈಗ ಬಹುತೇಕ ಫಲಾನುಭವಿ ಮಹಿಳೆಯರ ಖಾತೆಗೆ ಹಣ ವರ್ಗಾವಣೆ ಆಗುತ್ತಿದ್ದು, ಇತ್ತೀಚಿಗೆ, 5ನೇ ಕಂತಿನ ಹಣ ವರ್ಗಾವಣೆ ಆಗಿದೆ.
5ನೇ ಕಂತನ ಹಣವು ಕೂಡ ಜನವರಿ ತಿಂಗಳಿನಲ್ಲಿಯೇ ವರ್ಗಾವಣೆ ಆಗಿದೆ. ಒಟ್ಟಾರೆಯಾಗಿ ಗೃಹಲಕ್ಷ್ಮಿ ಯೋಜನೆಯ 4 ಮತ್ತು 5ನೇ ಕಂತಿನ ಹಣ ಒಂದೇ ತಿಂಗಳಿನಲ್ಲಿ ಮಹಿಳೆಯರ ಕೈ ಸೇರಿದೆ, ಇದುವರೆಗೆ ಹಣ ಬಾರದೆ ಇರುವವರೆಗೂ ಕೂಡ ಕೆವೈಸಿ (E-KYC) ಸರಿಪಡಿಸಿಕೊಂಡ ನಂತರ 5ನೇ ಕಂತಿನ ಹಣ ಬಿಡುಗಡೆ ಆಗಿದೆ.
ಇದನ್ನೂ ಸಹ ಓದಿ : ಫೆ.16ಕ್ಕೆ ರಾಜ್ಯ ಬಜೆಟ್; 15ನೇ ಬಜೆಟ್ ಮಂಡನೆಗೆ ಸಿದ್ಧತೆ ಆರಂಭಿಸಿದ ಸಿಎಂ ಸಿದ್ದರಾಮಯ್ಯ
ಆರನೇ ಕಂತಿನ ಹಣ ಯಾವಾಗ ಸಿಗುತ್ತದೆ?
ಸರ್ಕಾರ ಈಗಾಗಲೇ ಜನವರಿ ತಿಂಗಳಲ್ಲಿ ಎರಡು ಕಂತಿನ ಹಣವನ್ನು ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಇನ್ನು 6ನೇ ಕಂತಿನ ಹಣ ಬಿಡುಗಡೆ ಫೆಬ್ರವರಿ ತಿಂಗಳಿನ ಮೊದಲ ವಾರದಲ್ಲಿ ಆಗಬಹುದು. ಗೃಹಲಕ್ಷ್ಮಿ ಯೋಜನೆಯ ಹಣ ಈ ತಿಂಗಳಿನ ಹಣ ಮುಂದಿನ ತಿಂಗಳಿನಲ್ಲಿ ಬಿಡುಗಡೆ ಆಗುತ್ತದೆ. ಉದಾಹರಣೆಗೆ ಡಿಸೆಂಬರ್ ತಿಂಗಳಿನ ಹಣ ಜನವರಿಯಲ್ಲಿ ಬಿಡುಗಡೆ ಆಗಿತ್ತು. ಈಗ ಜನವರಿ ತಿಂಗಳಿನ ಹಣ ಫೆಬ್ರವರಿಯಲ್ಲಿ ಫಲಾನುಭವಿಗಳ ಖಾತೆ ತಲುಪಲಿದೆ.
5ನೇ ಕಂತಿನ ಹಣ ಬಂದಿಲ್ಲ ಅಂದ್ರೆ ಏನು ಮಾಡಬೇಕು?
ಈಗಾಗಲೇ ಸರ್ಕಾರ ತಿಳಿಸಿರುವಂತೆ 5ನೇ ಕಂತಿನ ಹಣ ಬಾರದೇ ಇದ್ದರೆ ನೀವು ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಆಗಿದ್ಯೋ ಇಲ್ಲವೋ ಎಂಬುದನ್ನು ಬ್ಯಾಂಕಿಗೆ ಹೋಗಿ ಪರಿಶೀಲಿಸಿಕೊಳ್ಳಿ. ಅಥವಾ ಹತ್ತಿರದ ಪೋಸ್ಟ್ ಆಫೀಸ್ನಲ್ಲಿ ಹೊಸ ಖಾತೆಯನ್ನು ಆರಂಭಿಸಿ. ಈ ರೀತಿ ಮಾಡಿದರೆ ನಿಮ್ಮ ಖಾತೆಗೂ ಕೂಡ ಮುಂದಿನ ಗೃಹಲಕ್ಷ್ಮಿಯ ಎಲ್ಲಾ ಕಂತಿನ ಹಣವು ಜಮಾ ಆಗುತ್ತದೆ.
DBT ಸ್ಟೇಟಸ್ ಚೆಕ್ ಮಾಡಿ:
ನಿಮ್ಮ ಖಾತೆಗೆ ಹಣ ಬಂದಿದ್ಯೋ ಇಲ್ಲವೋ ಎಂಬುದನ್ನು ಮಾಹಿತಿ ಕಣಜ ವೆಬ್ಸೈಟ್ ಮೂಲಕ ರೇಷನ್ ಕಾರ್ಡ್ ಸಂಖ್ಯೆಯನ್ನು ಹಾಕಿ ತಿಳಿದುಕೊಳ್ಳಬಹುದು. ಅಥವಾ ಕರ್ನಾಟಕ ಸರ್ಕಾರ ಬಿಡುಗಡೆ ಮಾಡಿರುವ DBT Karnataka mobile ಅಪ್ಲಿಕೇಶನ್ ಮೂಲಕ ಆಧಾರ್ ಸಂಖ್ಯೆಯನ್ನು ನಮೂದಿಸಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದಿದೆಯೋ ಇಲ್ವೋ ಅಂತ ಚೆಕ್ ಮಾಡಿಕೊಳ್ಳಬಹುದು.
ಇತರೆ ವಿಷಯಗಳು:
ರಾಜ್ಯದ 106 ತಾಲೂಕುಗಳಲ್ಲಿ ಮತ್ತೆ ಕೃಷಿ ಭಾಗ್ಯ ಯೋಜನೆ ಜಾರಿ! ರೈತರಿಗೆ ಗುಡ್ ನ್ಯೂಸ್
ರಾಮಮಂದಿರ ಉದ್ಘಾಟನೆ ಮುನ್ನ ಚಿನ್ನದ ಬೆಲೆಯಲ್ಲಿ ಭಾರೀ ಬದಲಾವಣೆ! ಇಂದಿನ ದರ ಎಷ್ಟಿದೆ?
ಅಯೋಧ್ಯೆ ರಾಮಮಂದಿರ ಉದ್ಘಾಟನೆ: ನಿಮ್ಮ ಮೊಬೈಲ್‌ನಲ್ಲಿ ಜೈ ಶ್ರೀ ರಾಮ್ ರಿಂಗ್‌ಟೋನ್ ಉಚಿತವಾಗಿ ಹೀಗೆ ಸೆಟ್ ಮಾಡಿ