rtgh

ಮದ್ಯ ಪ್ರಿಯರಿಗೆ ಶಾಕ್‌ ಮೇಲೆ ಶಾಕ್.!!‌ ನಿಮ್ಮ ಹಾಟ್ ಫೆವರೇಟ್‌ ಬ್ಯ್ರಾಂಡ್‌ ಇನ್ನೂ ದುಬಾರಿ

ಹಲೋ ಸ್ನೇಹಿತರೇ, ಈಗಾಗಲೇ ಶೇಕಡ 17 ರಷ್ಟು ಓವರ್ ಆಲ್ ಮದ್ಯದ ದರ ಬೆಲೆ ಏರಿಕೆ ಮಾಡಲಾಗಿತ್ತು. ಈಗ ಮತ್ತೆ ಬಡವರು ಹೆಚ್ಚಾಗಿ ಕುಡಿಯುವ ಮೂರು ಹಾಟ್ ಫೇವರೆಟ್ ಬ್ರ್ಯಾಂಡ್​ಗಳ ದರವನ್ನು ಹೆಚ್ಚಳ ಮಾಡಲಾಗಿದೆ. ಮದ್ಯ ಉತ್ಪಾದನ ಕಂಪನಿಗಳು ಒಂದು ಕ್ವಾಟರ್​ಗೆ ಇಪ್ಪತ್ತ ರಿಂದ ಮೂವತ್ತು ರೂಪಾಯಿ ಏರಿಕೆಯಾಗಿವೆ.

Hot favorite Brand is still expensive

ಹೊಸ ವರ್ಷದಂದು ಬರೋಬ್ಬರಿ 193 ಕೋಟಿಗೂ ಹೆಚ್ಚು ಆದಾಯಗಳಿಸಿ ಮಂದಹಾಸ ಬೀರಿದ್ದ ಅಬಕಾರಿ ಇಲಾಖೆಯು ಎಣ್ಣೆ ಪ್ರಿಯರಿಗೂ ಶಾಕ್ ಕೊಟ್ಟಿದೆ. ಇಂದಿನಿಂದ ಬಡವರು ಕುಡಿಯುವ ಎಣ್ಣೆಯ ದರದಲ್ಲಿ ಏರಿಕೆ‌ಯಾಗಿದೆ. ಅಬಕಾರಿ ಇಲಾಖೆಯು ಬಡವರ ನೆಚ್ಚಿನ‌ ಕೆಲ ಬ್ರ್ಯಾಂಡ್​ಗಳ ಬೆಲೆ ಹೆಚ್ಚಿಸಿದೆ. ಈ ಮೂಲಕ ಮಧ್ಯಮ ವರ್ಗದ ಮದ್ಯ ಪ್ರಿಯರಿಗೆ ಶಾಕ್ ಮೇಲೆ ಶಾಕ್ ಸಿಕ್ಕಿದೆ. ಹೊಸ ವರ್ಷಕ್ಕೆ ಕಂಠ ಪೂರ್ತಿ ಕುಡಿದು ಕುಪ್ಪಳಿಸಿದ್ದಂತಹ ಬಡವರು ಈಗ ಎಣ್ಣೆ ಖರೀದಿಸಲು ಯೋಚನೆಯನ್ನು ಮಾಡುತ್ತಿದ್ದಾರೆ.

ಈಗಾಗಲೇ ಶೇಕಡ 17 ರಷ್ಟು ಓವರ್ ಆಲ್ ಮದ್ಯದ ಮೇಲೆ ದರ ಏರಿಕೆ ಮಾಡಲಾಗಿದೆ . ಈಗ ಮತ್ತೆ ಬಡವರು ಹೆಚ್ಚು ಕುಡಿಯುವ ಮೂರು ಹಾಟ್ ಫೇವರೆಟ್ ಬ್ರ್ಯಾಂಡ್​ಗಳ ದರದಲ್ಲಿ ಹೆಚ್ಚಳ ಮಾಡಲಾಗಿದೆ. ಮದ್ಯ ಉತ್ಪಾದನ ಕಂಪನಿಗಳು ಒಂದು ಕ್ವಾಟರ್​ಗೆ 20 ರಿಂದ 30 ರೂಪಾಯಿ ಏರಿಕೆಯನ್ನು ಮಾಡಿದೆ. ಇವತ್ತಿನಿಂದ ರಾಜ್ಯಾದ್ಯಂತ ಬಡವರ ಈ ಮೂರು ಬ್ರ್ಯಾಂಡ್​ಗಳ ಫೇವರೆಟ್ ಮದ್ಯದ ಮೇಲಿನ ದರ ಹೆಚ್ಚಳವಾಗಿದೆ. ಈಗಾಗಲೇ ಬಾರ್ ಮಾಲೀಕರಿಗೆ ಹಾಗೂ ಅಬಕಾರಿ ಇಲಾಖೆಗೆ ಮದ್ಯ ತಯಾರಿಕ ಕಂಪನಿಗಳು ಸಂದೇಶ ಕಳುಹಿಸಿವೆ. ರಾಜ್ಯದಲ್ಲಿನ ಕೆಳ ವರ್ಗದ ಜನ ಅತಿ ಹೆಚ್ಚು ಸೇವಿಸುವ ಬ್ರ್ಯಾಂಡ್​ಗಳ ದರವನ್ನು ಏರಿಕೆಯಾಗಿದೆ.

2024 ರಲ್ಲಿ ಶಾಲೆಗಳು ಇಷ್ಟು ದಿನ ಕ್ಲೋಸ್! ರಜೆಯ ಪಟ್ಟಿ ಬಿಡುಗಡೆ

ಇದೀಗ ಮದ್ಯ ಏರಿಕೆ ಹಿನ್ನೆಲೆ ಅಬಕಾರಿ ಇಲಾಖೆ ಹಾಗೂ ಕಂಪನಿಗಳ ವಿರುದ್ಧ ಮದ್ಯ ಪ್ರಿಯರು ಆಕ್ರೋಶ ಹೊರ ಹಾಕಿದ್ದಾರೆ. ಆದ್ರೆ ಉತ್ಪಾದನ ವೆಚ್ಚ ಅಧಿಕವಾಗಿದೆ ಎಂದು ಮದ್ಯ ಉತ್ಪನ್ನ ಕಂಪನಿಗಳು ಸಮಜಾಯಿಸಿ ನೀಡಿವೆ. ಇನ್ನು ಮತ್ತೊಂದೆಡೆ ಹೀಗೆ ರೇಟ್ ಹೆಚ್ಚಳವಾದರೆ ಮದ್ಯ ಮಾರಾಟದಲ್ಲಿ ಕುಸಿತ ಆಗುತ್ತೆ ಎಂದು ಬಾರ್ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ‌ ಬ್ರ್ಯಾಂಡ್​ಗಳಿಗಿಂತ ಕಡಿಮೆ ರೇಟಿನ ಎಣ್ಣೆಗೆ ಜನ ಶಿಫ್ಟ್ ಆಗುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.


  • OT(180 ML): ಈ ಹಿಂದೆ 90 ರೂಪಾಯಿ, ಜನವರಿ 2 ರಿಂದ 111 ರೂಪಾಯಿ.
  • BP(180 ML): ಹಿಂದೆ 110 ರೂಪಾಯಿ, ಇಂದಿನಿಂದ- 145 ರೂಪಾಯಿ.
  • 8PM(180 ML): ನಿನ್ನೆಯ ದರ 90 ರೂಪಾಯಿ, ಇಂದಿನ ದರ 111 ರೂಪಾಯಿ. ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಕೆಸಿಸಿ ರೈತರ ಸಂಪೂರ್ಣ ಸಾಲ ಮನ್ನಾ! ಈ ಲಿಸ್ಟ್‌ನಲ್ಲಿ ನಿಮ್ಮ ಹೆಸರಿದ್ಯಾ ಚೆಕ್‌ ಮಾಡಿ

ಯುವನಿಧಿ ಯೋಜನೆಗೆ ಸುಳ್ಳು ಮಾಹಿತಿ ನೀಡಿದ್ರೆ ಎಚ್ಚರ! ನಿಮ್ಮ ವಿರುದ್ಧ ಕೇಸ್ ಫಿಕ್ಸ್

Leave a Comment