ಹಲೋ ಸ್ನೇಹಿತರೇ, ಜನರ ಸಂಕಷ್ಟಗಳನ್ನು ಪರಿಹಾರಿಸುವುದಕ್ಕಾಗಿ ಮನೆ ಬಾಗಿಲಿಗೆ ಬಂತು ಸರ್ಕಾರ, ಸೇವೆಗೆ ಇರಲಿ ಸಹಕಾರ’ ಎಂಬ ಜನಸ್ಪಂದನ ಕಾರ್ಯಕ್ರಮಕ್ಕೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬುಧವಾರ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಜನರಿಂದ 3 ಸಾವಿರಕ್ಕೂ ಅಧಿಕ ದೂರುಗಳು ಬಂದಿವೆ. ಸಮಸ್ಯೆಗಳ ಸರಮಾಲೆ ಹೊತ್ತು ಮೂರು ಸಾವಿರಕ್ಕೂ ಅಧಿಕ ಜನರು ಬಂದಿದ್ದರು. ಟೋಕನ್ ಪಡೆದ ಒಬ್ಬೊಬ್ಬರನ್ನೇ ತಮ್ಮ ಬಳಿ ಕರೆದ ಡಿಕೆ ಶಿವಕುಮಾರ್ ಅವರು ಅಹವಾಲು ಆಲಿಸಿದರು.
ಕೆಆರ್ಪುರಂನ ದೂರವಾಣಿ ನಗರದ ಡಾ. ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಎ ಬಸವರಾಜು, ಮಂಜುಳ ಅರವಿಂದ ಲಿಂಬಾವಳಿ, ಮಾಜಿ ಎಂಎಲ್ಸಿ ನಾರಾಯಣಸ್ವಾಮಿ, ಮಾಜಿ ರಾಜ್ಯಸಭಾ ಸದಸ್ಯ ರಾಜೀವ್ಗೌಡ, ಬಿಬಿಎಂಪಿ ಆಯುಕ್ತ ತುಷಾರ್ಗಿರಿನಾಥ್ ಅವರು ಭಾಗವಹಿಸಿದ್ದರು.
ಮಹದೇವಪುರ, ಕೆ.ಆರ್.ಪುರಂ ಎರಡು ವಿಧಾನಸಭಾ ಕ್ಷೇತ್ರದಿಂದ ಡಿಸಿಎಂಗೆ ಅಹವಾಲು ಸಲ್ಲಿಸಲು 3 ಸಾವಿರಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದರು. ಡಿಕೆ ಶಿವಕುಮಾರ್ ಅವರು ಟೋಕನ್ ಪಡೆದ ಒಬ್ಬೊಬ್ಬರನ್ನೇ ತಮ್ಮ ಬಳಿ ಕರೆದು ಅಹವಾಲು ಆಲಿಸಿದ್ದಾರೆ.
ಇದನ್ನೂ ಸಹ ಓದಿ : ಡಿಗ್ರಿ ಪಾಸಾದವರಿಗೆ ಸಿಸ್ಟಮ್ ಅಸಿಸ್ಟೆಂಟ್ ಹುದ್ದೆಗಳ ನೇಮಕಾತಿ! 83,000 ರೂ. ವೇತನ
ಕೆಲ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಿದ್ದು, ಅಧಿಕಾರಿಗಳನ್ನೇ ಕರೆದು ತಕ್ಷಣ ಸಮಸ್ಯೆಗೆ ಪರಿಹಾರ ನೀಡುವಂತೆ ಸೂಚನೆ ನೀಡಿದ್ದಾರೆ. ಯಾವ ಇಲಾಖೆಯವರೂ ಸಮಸ್ಯೆ ಬಗೆಹರಿಸಬೇಕು ಎಂದು ಡಿಕೆ ಶಿವಕುಮಾರ್ ಅವರು ಬರೆದು ಕೊಟ್ಟಿದ್ದಾರೆ. ದೂರು ನೀಡಿದ ಬಳಿಕ ಆಯಾ ಡಿಪಾರ್ಟಮೆಂಟ್ ಕೌಂಟರ್ ನಲ್ಲಿ ದೂರು ನೋಂದಣಿ ಮಾಡಲಾಗಿದೆ. ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಸೇರಿದಂತೆ ಹಲವು ಸಂಸ್ಥೆಗಳಿಗೆ ಪ್ರತ್ಯೇಕ ಕೌಂಟರ್ ವ್ಯವಸ್ಥೆ ಮಾಡಲಾಗಿತ್ತು.
ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, 3,431 ದೂರುಗಳನ್ನ ಸ್ವೀಕರಿಸಿದ್ದೇನೆ. ಎರಡು ಕ್ಷೇತ್ರಗಳ ಸಮಸ್ಯೆ ಕುರಿತು ಅಹವಾಲು ಸ್ವೀಕರಿಸಿದ್ದೇನೆ. ಎಲ್ಲ ಅರ್ಜಿಗಳನ್ನ ಸಂಬಂಧಪಟ್ಟ ಇಲಾಖೆಗಳಿಗೆ ಕಳುಹಿಸಿ ಬಗೆಹರಿಸುವ ಕೆಲಸ ಮಾಡುತ್ತೇವೆ. ಅನೇಕ ದೂರುಗಳು ಬಂದಿದ್ದು, ಏನು ಕ್ರಮ ತೆಗೆದುಕೊಳ್ಳಬೇಕು ಅದನ್ನು ತೆಗೆದುಕೊಳ್ಳುತ್ತೇವೆ ಎಂದರು.
ಇತರೆ ವಿಷಯಗಳು:
ಸಿದ್ದರಾಮಯ್ಯ ಸರ್ಕಾರಕ್ಕೆ ಅಕ್ಕಿ ಸಿಗುತ್ತಿಲ್ಲ: ನಗದು ಜಮಾ ಯೋಜನೆ ಮುಂದುವರಿಕೆ!
ಏರ್ಟೆಲ್ ಹೊಸ ವರ್ಷದ ಕೊಡುಗೆ! ಕೇವಲ ರೂ.148 ವಿಶೇಷ ರೀಚಾರ್ಜ್ ಪ್ಲಾನ್ನಲ್ಲಿ ಬಂಪರ್ ಆಫರ್
ಪ್ರತಿ ಮನೆಯ ಛಾವಣಿಯ ಮೇಲೆ ಉಚಿತ ಸೌರ ಫಲಕ! ಮನೆ ಮನೆಗೂ ಸಿಗಲಿದೆ ಬೆಳಕು