rtgh

ಇನ್ಮುಂದೆ ಗಂಡನ ಆಸ್ತಿಯಲ್ಲಿನ ಪಾಲು ಹೆಂಡತಿಗಿಲ್ಲ.! ಸುಪ್ರೀಂ ಕೋರ್ಟ್ ಹೊಸ ಆದೇಶ

ಹಲೋ ಸ್ನೇಹಿತರೇ, ನಮ್ಮ ದೇಶದಲ್ಲಿ ಒಂದು ಸಂಬಂಧ ಹಾಳಾಗುವುದಕ್ಕೆ ಆಸ್ತಿ ವಿಚಾರ ಮುಖ್ಯವಾದ ಕಾರಣ ಎನ್ನಬಹುದು. ಯಾಕೆಂದರೆ ಒಡಹುಟ್ಟಿದವರು ಕೂಡ ಆಸ್ತಿ ವಿಚಾರಕ್ಕಾಗಿ ಬೆಳೆಯುತ್ತಾ ದೊಡ್ಡವರಾಗಿ ದಾಯಾದಿಗಳೇ ಆಗಿ ಬಿಡುತ್ತಾರೆ.

latest supreme court judgement on property

ಅದೆಷ್ಟೋ ಕೇಸುಗಳು ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಕೋರ್ಟ್ ಮೆಟ್ಟಿಲೇರಿವೆ. ಹಾಗೂ ಇದುವರೆಗೆ ಇತ್ಯರ್ಥವಾಗದೆ ಕಾನೂನಿನ ಕಟಕಟೆಯಲ್ಲಿಯೇ ಕುಳಿತಿವೆ. ನಾವು ಕಾನೂನು ಹೋರಾಟಕ್ಕೆ ಮುಂದಾಗುವುದಕ್ಕೂ ಮೊದಲು ಕಾನೂನುಗಳನ್ನು ತಿಳಿದುಕೊಂಡರೆ ಹೆಚ್ಚು ಅನುಕೂಲ. ಯಾಕಂದ್ರೆ ಸುಖಾ ಸುಮ್ಮನೆ ಕೋರ್ಟ್, ಕಚೇರಿ ಎಂದು ಅಲೆದು ಹಣ ಮತ್ತು ನಮ್ಮ ಸಮಯ ಎರಡನ್ನು ವ್ಯರ್ಥ ಮಾಡಿಕೊಳ್ಳುವ ಅಗತ್ಯ ಇರುವುದಿಲ್ಲ.

ಒಬ್ಬ ಗಂಡ ಹೆಂಡತಿ ಇಬ್ಬರ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸಾಕಷ್ಟು ಕಾನೂನುಗಳು ಇವೆ. ಇವುಗಳನ್ನು ನೀವು ಸರಿಯಾಗಿ ತಿಳಿದುಕೊಳ್ಳದೆ ಯಾರು ಕೂಡ ಹಣಕ್ಕಾಗಿ ಕೋರ್ಟ್ ಮೆಟ್ಟಿಲೇರಿದ್ರೆ ಆದ್ದರಿಂದ ಯಾವ ಪ್ರಯೋಜನವೂ ಇಲ್ಲ. ಹಾಗಾಗಿ ಕೆಲವು ಪ್ರಮುಖ ಮಾಹಿತಿ ಈ ಲೇಖನದಲ್ಲಿ ನಾವು ನೀಡುತ್ತಿದ್ದೇವೆ.

ಮೊದಲನೆಯದಾಗಿ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಪಾಲಿದೆ ಎನ್ನುವ ಪ್ರಶ್ನೆ ಬಂದರೆ ಖಂಡಿತವಾಗಿಯೂ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಹೆಂಡತಿಗೆ ಪಾಲು ಇರುವುದಿಲ್ಲ. ಆದರೆ ಆಕೆಯ ಮಕ್ಕಳಿಗೆ ಅದರಲ್ಲಿ ಪಾಲು ಇರುತ್ತದೆ.

ಒಂದು ವೇಳೆ ಆಕೆಯ ಪತಿ ಮೃತಪಟ್ಟರೆ ಅಥವಾ ಆಕೆಗೆ ವಿಚ್ಛೇದನ ಸಿಕ್ಕಾಗಲು ಕೂಡ ಮಕ್ಕಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುತ್ತದೆ. ಆದರೆ ಪತ್ನಿಗೆ ಮಾತ್ರ ಗಂಡನ ಪಿತ್ರಾರ್ಜಿತ ಆಸ್ತಿಯಲ್ಲಿ ಒಂದು ಬಿಡು ಕಾಸು ಕೂಡ ಹಕ್ಕಿನ ಮೂಲಕ ಪಡೆದುಕೊಳ್ಳಲು ಸಾಧ್ಯವಿಲ್ಲ.


ಇನ್ನೂ ಒಬ್ಬ ವ್ಯಕ್ತಿ ತನ್ನ ಜೀವಿತಾವಧಿಯಲ್ಲಿ ದುಡಿದು ಹಣ ಸಂಪಾದನೆ ಮಾಡಿಟ್ಟರೆ ಮತ್ತು ಆಸ್ತಿ ಗಳಿಕೆ ಮಾಡಿದ್ದರೆ ಅದರಲ್ಲಿ ಆತನ ಪತ್ನಿಗೆ ಪಾಲಿದೆಯೇ ಎನ್ನುವ ಪ್ರಶ್ನೆ ಮೂಡಿದರೆ, ಗಂಡನ ಸ್ವಯಾರ್ಜಿತ ಆಸ್ತಿಯಲ್ಲಿ ಹೆಂಡತಿಯಾಗಲಿ ಅಥವಾ ಆಕೆಯ ಮಕ್ಕಳಾಗಲಿ ಹಕ್ಕಿನ ಮೂಲಕ ಆಸ್ತಿ ಕೇಳುವಂತಿಲ್ಲ. ಯಾವುದೇ ವ್ಯಕ್ತಿಯ ಸ್ವಯಾರ್ಜಿತ ಆಸ್ತಿಯಲ್ಲಿ ಯಾರಿಗೂ ಹಕ್ಕು ಇರುವುದಿಲ್ಲ. ಆ ಆಸ್ತಿಯನ್ನು ಯಾರಿಗೆ ಬೇಕಾದರೂ ಕೊಡಬಹುದು.

 ಪ್ರತಿ ಮನೆಯ ಛಾವಣಿಯ ಮೇಲೆ ಉಚಿತ ಸೌರ ಫಲಕ! ಮನೆ ಮನೆಗೂ ಸಿಗಲಿದೆ ಬೆಳಕು

ಇನ್ನು ಒಂದು ವೇಳೆ ಪತಿ ವಿಲ್ ಮಾಡಿಡದೆ ಮರಣ ಹೊಂದಿದರೆ ಆಗ ಆತಗಳಿಸಿರುವ ಸ್ವಯಾರ್ಜಿತ ಆಸ್ತಿಯಲ್ಲಿ ಆತನ ಹೆಂಡತಿ ಮತ್ತು ಮಕ್ಕಳಿಗೆ ಪಾಲು ಇರುತ್ತದೆ. ಆದ್ರೆ ಆತ ಇಹಲೋಕ ತ್ಯಜಿಸುವ ಮೊದಲೇ ಬೇರೆ ಯಾರದ್ದೋ ಹೆಸರಿಗೆ ನಾಮಿನಿ ಮಾಡಿದ್ದರೆ ಆಗ ಹೆಂಡತಿಗಾಗಲಿ ಮಕ್ಕಳಿಗಾಗಲಿ ಆ ಆಸ್ತಿಯಲ್ಲಿ ಹಕ್ಕು ಇರುವುದಿಲ್ಲ.

ಇನ್ನು ಒಂದು ವೇಳೆ ಗಂಡ ಮರಣ ಹೊಂದಿದ್ರೆ, ಆತನ ತಂದೆ ಮತ್ತು ತಾಯಿ ಅಥವಾ ಮನೆಯವರು ಆತನ ಹೆಂಡತಿಯನ್ನು ಬಲವಂತವಾಗಿ ಮನೆಯಿಂದ ಹೊರಗಡೆ ನೂಕುವಂತಿಲ್ಲ. ಹೆಂಡತಿ, ಗಂಡ ತೀರಿ ಹೋದ ನಂತರವೂ ಗಂಡನ ಮನೆಯಲ್ಲಿಯೇ ಉಳಿದುಕೊಂಡು ತನ್ನ ಮಕ್ಕಳನ್ನು ಆಕೆಯನ್ನು ಮಾಡಬಹುದು. ಆಕೆ ಇನ್ನೊಂದು ಮದುವೆ ಆದ್ರೆ ಅಥವಾ ಗಂಡ ಬದುಕಿರುವಾಗ ವಿಚ್ಛೇದನ ನೀಡಿದರೆ ಮಾತ್ರ ಆಕೆ ಗಂಡನ ಮನೆಯನ್ನು ಬಿಟ್ಟು ಹೊರಗಡೆ ಹೋಗ ಬೇಕಾಗುತ್ತದೆ.

ಗಂಡನ ಆಸ್ತಿಯಲ್ಲಿ ಹೆಂಡತಿಗೆ ಪಾಲು ಇಲ್ಲಾ ಎನ್ನುವ ಕಾರಣಕ್ಕೆ ಆಕೆಗೆ ಪತಿಯಿಂದ ಯಾವುದೇ ಆಸ್ತಿಯೂ ಸಿಗುವುದಿಲ್ಲವೇ ಎನ್ನುವ ಪ್ರಶ್ನೆ ಮೂಡುವುದು ಸಹಜ. ಒಂದು ವೇಳೆ ವಿಚ್ಛೇದನ ಆಗಿರುವ ಸಂದರ್ಭದಲ್ಲಿ ಜೀವನಾಂಶವನ್ನು ಕೊಡಬೇಕು. ಆತನ ಹಣಕಾಸಿನ ಪರಿಸ್ಥಿತಿಯ ಆಧಾರದ ಮೇಲೆ ನ್ಯಾಯಾಲಯದಲ್ಲಿ ಜೀವನಾಂಶ ಯಾವ ರೀತಿ ಮತ್ತು ಹೇಗೆ ಕೊಡಬೇಕು ಎನ್ನುವುದನ್ನು ತೀರ್ಮಾನಿಸಲಾಗುತ್ತದೆ. ಆದರೆ ನಂತರವೂ ಅವರ ಮಕ್ಕಳಿಗೆ ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುತ್ತದೆ.

ಗೃಹಲಕ್ಷ್ಮಿಯರಿಗೆ ಸರ್ಕಾರದ ಹೊಸ ಗ್ಯಾರಂಟಿ.! ಈ ದಾಖಲೆ ಇದ್ದವರ ಖಾತೆಗೆ ಪ್ರತಿ ತಿಂಗಳು ₹2,500 ಬರುತ್ತೆ

ಬಿ.ಎಡ್ ಕೋರ್ಸ್ ಸಂಪೂರ್ಣ ಉಚಿತ.! ಶಿಕ್ಷಕರಾಗುವ ಕನಸು ಹೊತ್ತವರು ಕೂಡಲೇ ಅಪ್ಲೇ ಮಾಡ

Leave a Comment