rtgh

ಮಹಿಳೆಯರ ಆರೈಕೆ ಮಾಡಲಿದೆ ರಾಜ್ಯ ಸರ್ಕಾರ; ಬಂತು ಹೊಸ ಗ್ಯಾರಂಟಿ

ಹಲೋ ಸ್ನೇಹಿತರೇ, ಕರ್ನಾಟಕ ರಾಜ್ಯದಲ್ಲಿ ಹೆಣ್ಣುಮಕ್ಕಳಿಗೆ ಸಾಕಷ್ಟು ಯೋಜನೆಗಳನ್ನು ಈಗಾಗಲೇ ಜಾರಿಗೆ ತರಲಾಗುತ್ತಿದೆ. ಹೆಣ್ಣನ್ನು ಅರ್ಥಿಕವಾಗಿ  ಸ್ವಾತಂತ್ರ್ಯ ನೀಡಬೇಕು, ಹೆಣ್ಣು ಆರ್ಥಿಕವಾಗಿ ತೊಂದರೆ ಅನುಭವಿಸಬಾರದು, ಹೆಣ್ಣು ಮಕ್ಕಳಿಗೆ ಆರ್ಥಿಕವಾಗಿ ಸಹಾಯವಾಗಬೇಕು ಎನ್ನುವ ದೃಷ್ಠಿಯಿಂದ ರಾಜ್ಯದಲ್ಲಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇತ್ತೀಚೆಗೆ ಕಾಂಗ್ರೆಸ್ ಸರ್ಕಾರವು ಕೇವಲ ಮಹಿಳೆಯರಿಗಾಗಿಯೇ ಗೃಹಲಕ್ಷ್ಮಿ ಎಂಬ ಯೋಜನೆ ಹಾಗೂ ಶಕ್ತಿ ಯೋಜನೆಯನ್ನು ಜಾರಿಗೆ ತಂದಿದೆ.

madilu kit scheme

ಇಂತಹ ಯೋಜನೆಗಳು ಇರುವಾಗಲೇ ರಾಜ್ಯ ಸರ್ಕಾರವು ಮತ್ತೊಂದು ಮಹಿಳೆಯರ ಯೋಜನೆಯ ಬಗ್ಗೆ ಜನರು ಆಕರ್ಷಿತರಾಗಿದ್ದು, ಆ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಕ್ಯೂನಲ್ಲಿ ನಿಂತಿದ್ದಾರೆ.. ಹೆಣ್ಣುಮಕ್ಕಳಿಗಾಗಿ ಇರುವ ಈ ಮತ್ತೊಂದು ಯೋಜನೆಯ ಹೆಸರು ಮಡಿಲು ಕಿಟ್ ಯೋಜನೆಯೇ ಆಗಿದೆ. ಈ ಯೋಜನೆಯ ಅಡಿಯಲ್ಲಿ ಗರ್ಭಿಣಿ ಹೆಣ್ಣುಮಕ್ಕಳಿಗಾಗಿ ವಿಶೇಷವಾಗಿ ಜಾರಿಗೆ ತಂದಿದ್ದಾರೆ.

ಮಡಿಲು ಕಿಟ್ ಯೋಜನೆಯನ್ನು 2007ರಲ್ಲಿ ಶುರುವಾಗಿದೆ. ಈ ಯೋಜನೆಯ ಅಡಿ ಸರ್ಕಾರವು ಮಗು ಹುಟ್ಟಿದ ನಂತರ ತಾಯಿಗೆ ಒಂದು ವೆಲ್ ನೆಸ್ ಕಿಟ್ ನೀಡುತ್ತದೆ. ಇದು ತಾಯಿ ಮತ್ತು ಮಗು ಪ್ರತಿದಿನ ಉಪಯೋಗಕ್ಕೆ ಬರುವ 19 ದಿನಬಳಕೆ ವಸ್ತುಗಳನ್ನು ಒಳಗೊಂಡಿರುತ್ತದೆ. ಈ ಮಡಿಲು ಕಿಟ್ ಗಳ ಬೆಲೆ ಸುಮಾರು ₹1500 ರೂಪಾಯಿಗಳು ಆಗಿದೆ.

ಈ ಕಿಟ್‌ನ ವಸ್ತುಗಳು ತಾಯಿ ಹಾಗೂ ಮಗು ಇಬ್ಬರ ಆರೋಗ್ಯಕ್ಕೆ ಅಗತ್ಯವಾದ ವಸ್ತುಗಳಾಗಿರುತ್ತದೆ. ಈ ಯೋಜನೆಗೆ ಕೆಲವು ನಿಯಮಗಳಿವೆ, ಮಡಿಲು ಕಿಟ್ ಯೋಜನೆಯ ಫಲ ಪಡೆಯುವವರು ಬಿಪಿಎಲ್ ಕಾರ್ಡ್ ಹೊಂದಿರುವ ಮಹಿಳೆಯರು, ಹಾಗೂ SC/ST ಕ್ಯಾಟಗರಿಗೆ ಬರುವ ಮಹಿಳೆಯರು ಮಾತ್ರ ಈ ಯೋಜನೆಯ ಅನುಕೂಲ ಪಡೆಯಬಹುದು.

ಕೇಂದ್ರ ಸರ್ಕಾರದ ಮೊದಲ ಹೊಸ ಗ್ಯಾರೆಂಟಿ? ಸರ್ಕಾರದಿಂದ ಜಿಲ್ಲಾವಾರು ಹೊಸ ಪಟ್ಟಿ ಬಿಡುಗಡೆ


ಹಾಗೆಯೇ ಸಿ.ಹೆಚ್.ಸಿ, ಪಿ.ಹೆಚ್.ಸಿ, ತಾಲ್ಲೂಕು ಆಸ್ಪತ್ರೆ ಮತ್ತು ಸರ್ಕಾರಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಡೆಲಿವರಿ ಆಗುವ ಹೆಣ್ಣುಮಕ್ಕಳು ಮಾತ್ರ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಒಂದು ವೇಳೆ ಪ್ರೈವೇಟ್ ಆಸ್ಪತ್ರೆಯಲ್ಲಿ ಮಗು ಹುಟ್ಟಿದರೆ, ಮಡಿಲು ಕಿಟ್ ಕೊಡುವುದಿಲ್ಲ, ಬದಲಾಗಿ 1000 ರೂಪಾಯಿ ಹಣಕೊಡಲಾಗುತ್ತದೆ.

ಈ ಯೋಜನೆಯು ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ  ಸಲುವಾಗಿ ಈ ಯೋಜನೆಯನ್ನು ಜಾರಿಗೆ ತರಲಾಗುತ್ತದೆ, ತಾಯಂದಿರು ಯಾವುದೇ ಅರ್ಜಿ ಸಲ್ಲಿಸಿದೆಯೇ ಈ ಯೋಜನೆಯ ಅನುಕೂಲವನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಈ ಯೋಜನೆಯ ಲಾಭ ಪಡೆಯಲು ಕೆಲವು ಅಗತ್ಯ ದಾಖಲೆಗಳು ಬೇಕಾಗುತ್ತದೆ.

*ತಾಯಿಯು ಕರ್ನಾಟಕದವರೇ ಆಗಿರಬೇಕು, ಅದಕ್ಕಾಗಿ ಆಧಾರ್ ಕಾರ್ಡ್ ಅಥವಾ ಅಡ್ರೆಸ್ ಪ್ರೂಫ್ ಬೇಕಾಗುತ್ತದೆ. *ಬಿಪಿಎಲ್ ರೇಷನ್ ಹಾಗೂ ಕಾರ್ಡ್, ಬರ್ತ್ ಸರ್ಟಿಫಿಕೇಟ್, ಮಡಿಲು ಕಿಟ್ ಗಾಗಿ  ಆಶಾ ಕಾರ್ಯಕರ್ತೆಯರು ಕೊಡುವ ANC ರಿಜಿಸ್ಟ್ರೇಶನ್ ನಂಬರ್ ಮತ್ತು ಮೊಬೈಲ್ ನಂಬರ್ ಬೇಕಾಗುತ್ತದೆ. ಮಡಿಲು ಕಿಟ್‌ ಯೋಜನೆಯ ನೆರವು ಪಡೆಯಲು ಅರ್ಜಿ ಸಲ್ಲಿಕೆ ಹಾಗೂ ಇನ್ನೇನನ್ನು ಮಾಡಬೇಕಾಗಿಲ್ಲ ನಿಮ್ಮ ಹತ್ತಿರದ ಆಶಾ ಕಾರ್ಯಕರ್ತೆಯರ ಬಳಿ ಈ ವಿಚಾರ ತಿಳಿಸಿದರೆ ಸಾಕು, ಅವರಿಂದ ಈ ಯೋಜೆನೆಯ ಸೌಲಭ್ಯವನ್ನು ಪಡೆದುಕೊಳ್ಳುತ್ತೀರಿ.

ಈ ಜಿಲ್ಲೆಯ ಶಾಲೆ ಕಾಲೇಜುಗಳಿಗೆ ತಿಂಗಳಿನಲ್ಲಿ ಸಾಲು ಸಾಲು ರಜೆ

ಹೆಣ್ಣು ಮಕ್ಕಳೇ ಇತ್ತ ಕಡೆ ಗಮನ ಕೊಡಿ.!! ನಿಮ್ಮ ಖಾತಗೆ ಇನ್ಮುಂದೆ 2000+1500 ರೂ.; ತಕ್ಷಣ ಈ ಕೆಲಸ ಮಾಡಿ

Leave a Comment