rtgh

ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಹೊಸ ನಾಮಕರಣ! ಅಲ್ಲಮಪ್ರಭು ಎಂದು ಹೆಸರಿಟ್ಟ ಸಿಎಂ

ಹಲೋ ಸ್ನೇಹಿತರೇ, ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಅವರ ಹೆಸರನ್ನು ಇಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿಂದು ನಡೆದ  ಕಾಂಗ್ರೆಸ್‌ ಸರ್ಕಾರದ 5ನೇ ಗ್ಯಾರಂಟಿ ಯುವನಿಧಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಿದ್ದರಾಮಯ್ಯ, ಶಿವಮೊಗ್ಗದ ಫ್ರೀಡಂಪಾರ್ಕ್‌ಗೆ ಅಲ್ಲಮಪ್ರಭು ಹೆಸರಿಡುತ್ತೇವೆ. ಯಾಕಂದ್ರೆ, ಅಲ್ಲಮಪ್ರಭು ಅವರು ಶಿವಮೊಗ್ಗ ಜಿಲ್ಲೆಯವರೇ. ಅಲ್ಲದೇ ಅವರು ಅನುಭವ ಮಂಟಪದ ಅಧ್ಯಕ್ಷರಾಗಿದ್ದರು. ಹೀಗಾಗಿ ಶಿವಮೊಗ್ಗದ ಫ್ರೀಡಂಪಾರ್ಕ್‌ಗೆ ಅಲ್ಲಮಪ್ರಭುರವರ ಹೆಸರು ಸೂಕ್ತ ಎಂದು ಘೋಷಿಸಿದರು.

New name for Shimoga Freedom Park

ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಅವರ ಹೆಸರನ್ನು ಇಡುವುದು ಸೂಕ್ತ ಎಂದು ನಾನೂ ಸಹ ಭಾವಿಸಿದ್ದೇನೆ. ಈ ಬಗ್ಗೆ ಯಾರಿಗೂ ಸಮಸ್ಯೆ ಇಲ್ಲವೆಂದಾದರೆ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಎಂದು ನಾಮಕರಣ ಮಾಡಲು ನಾನು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.

ಅಲ್ಲಮ ಪ್ರಭು ಒಬ್ಬ ಶ್ರೇಷ್ಠ ಕವಿಯಾಗಿದ್ದು, ಅವರು ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ನಮ್ಮ ನಾಡಿಗೆ ಅವರ ಕೊಡುಗೆ ಅಪಾರವಾಗಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಆಶಯದಂತೆ ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಅವರ ಹೆಸರನ್ನು ಇಡುವುದು ಸೂಕ್ತ ಎಂದು ನಾನೂ ಸಹ ಭಾವಿಸಿದ್ದೇನೆ. ಹೀಗಾಗಿ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಎಂದು ನಾಮಕರಣ ಮಾಡಲು ನಾನು ಸಿದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಇದನ್ನೂ ಸಹ ಓದಿ : ಮಹಿಳಾ ರೈತರಿಗೆ ಸಿಹಿ ಸುದ್ದಿ! ಕೇಂದ್ರದಿಂದ ವಾರ್ಷಿಕ ₹12,000 ಕಿಸಾನ್‌ ಸಮ್ಮಾನ್‌ ನಿಧಿ ಘೋಷಣೆ

ಮಧು ಬಂಗಾರಪ್ಪ ಮನವಿ

ಸಿಎಂ ಭಾಷಣಕ್ಕೂ ಮೊದಲು ಮಾತನಾಡಿ ಜಿಲ್ಲಾ ಉಸ್ತುವಾರಿ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, 12ನೇ ಶತಮಾನದಲ್ಲಿ ಒಬ್ಬ ಪ್ರಸಿದ್ಧ ಕವಿ, ಹೆಸರಾಂತ ತತ್ವಜ್ಞಾನಿಯಾಗಿದ್ದ ಅಲ್ಲಮ ಪ್ರಭುಗಳು ನಮ್ಮ ಶಿವಮೊಗ್ಗ ಜಿಲ್ಲೆಯವರು ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತದೆ. ಹೀಗಾಗಿ ಶಿವಮೊಗ್ಗ ಫ್ರೀಡಂ ಪಾರ್ಕ್‌ಗೆ ಅಲ್ಲಮ ಪ್ರಭು ಅವರ ಹೆಸರಿಡಬೇಕು ಎಂದು ವೇದಿಕೆ ಮೇಲಿದ್ದ ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದರು ಈ ವೇಳೆ ಬಿಜೆಪಿ ಶಾಸಕ ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿದ್ದು, ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಹೋರಾಟಗಾರ ಚಂದ್ರಶೇಖರ್ ಅಜಾದ್ ಹೆಸರಿಡಬೇಕು. ಈ ಹಿಂದೆಯೇ ಬಿಎಸ್‌ವೈ ಪ್ರಸ್ತಾಪಿಸಿದ್ದರು. ಹೀಗಾಗಿ ರಾಜ್ಯ ಸರ್ಕಾರ ಈ ಫ್ರೀಡಂ ಪಾರ್ಕ್‌ಗೆ ಚಂದ್ರಶೇಖರ್‌ ಅಜಾದ್ ಹೆಸರಿಡಿ ಎಂದರು. ಈ ವೇಳೆ ಬೇಡ ಬೇಡ ಎಂದು ಕಾರ್ಯಕ್ರಮದಲ್ಲಿ ನೆರೆದಿದ್ದ ಕಾರ್ಯಕರ್ತರು ಕೂಗಿದರು.


ಬಳಿಕ ಮಾತನಾಡಿದ ಸಿದ್ದರಾಮಯ್ಯ, ನಾನು ಈ ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗ ನಗರದಲ್ಲಿ ಈ ಫ್ರೀಡಂ ಪಾರ್ಕ್ ಮಾಡಿದ್ದೆ. ಶಾಸಕರಾದ ಚೆನ್ನಬಸಪ್ಪನವರೇ, ಅಲ್ಲಮ ಪ್ರಭು ನಿಮ್ಮ ಜಿಲ್ಲೆಯವರು. ನಿಮ್ಮ ಊರಿನವರು ಕಣ್ರೀ, ಈಗ ನೀವೇ ಹೇಳಿ ಈ ಫ್ರೀಡಂ ಪಾರ್ಕ್‌ಗೆ ಯಾರ ಹೆಸರಿಡಬೇಕು? ನನಗಂತೂ ಮಧು ಬಂಗಾರಪ್ಪ ಅವರು ಹೇಳಿದಂತೆ ಅಲ್ಲಮ ಪ್ರಭು ಅವರ ಹೆಸರನ್ನು ಇಡುವುದು ಸೂಕ್ತ ಎಂದು ಟಾಂಗ್ ಕೊಟ್ಟರು.

ಇತರೆ ವಿಷಯಗಳು:

ಕರ್ನಾಟಕ ಶಕ್ತಿ ಯೋಜನೆ ಎಫೆಕ್ಟ್‌! ನೆರೆಯ ರಾಜ್ಯಗಳಲ್ಲೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ

ಮಹಿಳೆಯರಿಗೆ ಗುಡ್‌ ನ್ಯೂಸ್: ಗೃಹಲಕ್ಷ್ಮಿಯ 4ನೇ ಕಂತಿನ ಹಣ ಬಿಡುಗಡೆ! 5ನೇ ಕಂತಿಗೆ ಹೊಸ ನಿಯಮ

ಯುವನಿಧಿ ಯೋಜನೆಗೆ ಕ್ಷಣಗಣನೆ! ಇಂದೇ ಖಾತೆಗೆ ದುಡ್ಡು, ನಿಮಿಷಗಳಲ್ಲಿ ಅರ್ಜಿ ಸಲ್ಲಿಸಿ

Leave a Comment