ಹಲೋ ಸ್ನೇಹಿತರೇ, ಬರಗಾಲದ ಸಂದರ್ಭದಲ್ಲಿ ನರೇಗಾ ಯೋಜನೆಯ ಅಡಿಯಲ್ಲಿ 150 ದಿನಗಳವರೆಗೂ ಕೆಲಸವನ್ನು ಕೊಡಬೇಕೆನ್ನುವ ನಿಯಮವಿದ್ದರೂ ಕೇಂದ್ರಸರ್ಕಾರ ದುಡಿಮೆಯ ದಿನವನ್ನು ಹೆಚ್ಚಿಸಲು ಅನುಮತಿಯನ್ನು ನೀಡಿರಲಿಲ್ಲ, ಈಗ ಮುಖ್ಯಮಂತ್ರಿಯವರ ವಾಗ್ದಾಳಿಯಿಂದಾಗಿ ಹೆಚ್ಚಿಸುವ ನಿರ್ಧಾರವನ್ನು ಮಾಡಿದೆ. ಎಷ್ಟು ಹೆಚ್ಚಿಗೆ ಮಾಡಲಿದೆ ಎಂದು ಲೇಖನದಲ್ಲಿ ತಿಳಿಯಿರಿ.
ಕರ್ನಾಟಕದಲಿ ಮಾತ್ರವಲ್ಲದೆ ದೇಶದ 12 ರಾಜ್ಯಗಳಲ್ಲಿ ಬರಗಾಲ ಆವರಿಸಿಕೊಂಡಿದೆ. ಪರಿಸ್ಥಿತಿ ಹೀಗಿರುವ ಕಾರಣಕ್ಕೆ ದುಡಿಯುವ ಜನರಿಗೆ ಹೆಚ್ಚಿನ ದುಡಿಮೆಯ ಅವಕಾಶವನ್ನು ನೀಡಿಬೇಕಾಗುತ್ತದೆ. ನರೇಗಾ ಯೋಜನೆಯ ಅಡಿಯಲ್ಲಿ ಇದೀಗಾ 100 ದಿನಗಳ ಉದ್ಯೋಗ ಮಾಡುತ್ತಿರುವುದನ್ನು 150 ದಿನಗಳ ವರೆಗೆ ಹೆಚ್ಚಳ ಮಾಡಲು ರಾಜ್ಯ ಸರ್ಕಾರ ಸಿದ್ದವಾಗಿದ್ದರು ಕೂಡ ಕೇಂದ್ರ ಸರ್ಕಾರ ಇದಕ್ಕೆ ಯಾವುದೇ ಅನುಮತಿಯನ್ನು ನೀಡಿರಲಿಲ್ಲ.
ಜನರಿಗೆ ಬರ ಪರಿಹಾರವನ್ನು ಒದಗಿಸಲು ರಾಜ್ಯ ಸರ್ಕಾರ ಕ್ರಮವನ್ನು ಕೈಗೊಳ್ಳುತ್ತಿದೆ. ಆದರೆ ಕೇಂದ್ರ ಸರ್ಕಾರ ತನ್ನ ಕಡೆಯಿಂದ ಒದಗಿಸುವ ಅನುದಾನವನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರ ಕೊಡುವ ತೆರಿಗೆ ಹಣವನ್ನು ನಮಗೆ ಕೊಡುತ್ತಿಲ್ಲ ಎನ್ನುವುದು ಸಿಎಂ ವಾದವಾಗಿದೆ.
ನಮ್ಮ ರಾಜ್ಯದಲ್ಲಿ ಯಾವುದೇ ಕುಡಿಯುವ ನೀರು ಹಾಗು ಜಾನುವಾರುಗಳಿಗೆ ಮೇವು ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಜಿಲ್ಲಾ ಆಡಳಿತಕ್ಕೆ ಸೂಚನೆ ನೀಡಿರುವುದಾಗಿ ಮತ್ತು ಇದರ ಬಗ್ಗೆ ನಿರಂತರ ಸಭೆಯನ್ನು ನಡೆಸುವುದಾಗಿ ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸೂಚನೆ ನೀಡಿಲಾಗಿದೆ.
ಇತರೆ ವಿಷಯಗಳು
ಆರ್‌ಬಿಐ ಹೊಸ ರೂಲ್ಸ್ ಜಾರಿ.!! ವೈಯಕ್ತಿಕ ಸಾಲ ತೆಗೆದುಕೊಳ್ಳುವುದು ತುಂಬಾ ಸುಲಭ; ಇಂದೇ ಚೆಕ್ ಮಾಡಿ
1.2 ಕೋಟಿ ರೈತರ ಸಾಲ ಮನ್ನಾ ಘೋಷಣೆ.! ಸರ್ಕಾರದಿಂದ ಹೊಸ ಲಿಸ್ಟ್ ಬಿಡುಗಡೆ.! ಈ ಲಿಂಕ್ ಬಳಸಿ ಹೆಸರನ್ನು ಚೆಕ್ ಮಾಡಿ