ಹಲೋ ಸ್ನೇಹಿತರೇ, ಈ ಬಾರಿಯ ಮಧ್ಯಂತರ ಬಜೆಟ್‌ನಲ್ಲಿ ಮಹಿಳೆಯರಿಗೆ ಬಂಪರ್ ಗುಡ್‌ನ್ಯೂಸ್ ಸಿಗಲಿದೆ. ಸರ್ಕಾರದ ಒಂದು ಪ್ರಮುಖ ಯೋಜನೆಯ ಮೊತ್ತವನ್ನು ಹೆಚ್ಚಳ ಮಾಡಲಾಗುವುದು ಅದು ಮಹಿಳಾ ಫಲಾನುಭವಿಗಳ ಮೊತ್ತವನ್ನು ಹೆಚ್ಚಿಗೆ ಮಾಡಲಾಗುವುದು ಯಾವುದ ಆ ಯೋಜನೆ ಎಂಬುದನ್ನು ನಮ್ಮ ಲೇಖನದಲ್ಲಿ ತಿಳಿಯಿರಿ.
ಈ ಬಾರಿಯ ಮಧ್ಯಂತರ ಬಜೆಟ್‌ನಲ್ಲಿ ಪಿಎಂ ಕಿಸಾನ್ ಯೋಜನೆಯ ಮಹಿಳಾ ಫಲಾನುಭವಿಗಳಿಗೆ ಹಣವನ್ನು ದ್ವಿಗುಣಗೊಳಿಸುವ ಸಾಧ್ಯತೆಯಿದೆ. ಫೆಬ್ರುವರಿ 1ರಂದು ಬಜೆಟ್ ಮಂಡನೆಯಾಗಲಿದೆ, ಜನವರಿ 31ರಿಂದ ಫೆಬ್ರುವರಿ 9ರವರೆಗೂ ಬಜೆಟ್ ಅಧಿವೇಶನ ನಡೆಯುತ್ತದೆ. ಜನವರಿ 31ರಂದು ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಸಂಸತ್ನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣವನ್ನು ಮಾಡಲಿದ್ದಾರೆ.
ಎನ್ಡಿಎ-2 ಸರ್ಕಾರದ ಕೊನೆಯ ಬಜೆಟ್ ಫೆಬ್ರುವರಿ 1ರಂದು ಮಂಡನೆಯಾಗಲಿದೆ. ಬಜೆಟ್ ಮಂಡನೆಗೆ 1 ದಿನ ಮುಂಚೆ, ಜನವರಿ 31ರಂದ ಬಜೆಟ್ ಅಧಿವೇಶನ ಆರಂಭವಾಗುತ್ತದೆ. ಅಂದು ರಾಷ್ಟ್ರಪತಿ ದ್ರೌಪದಿ ಮುರ್ಮುರವರು ಸಂಸತ್ನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಅದಾದ ಮರುದಿನ ಅಂದರೆ ಫೆಬ್ರುವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಂದ ಬಜೆಟ್ ಮಂಡನೆ ನಡೆಯಾಗುತ್ತದೆ.
ಇಂಡಿಯಾ ಟುಡೇ ವರದಿ ಪ್ರಕಾರವಾಗಿ, ಬಜೆಟ್ ಅಧಿವೇಶನ ಫೆಬ್ರುವರಿ 9ರವರೆಗೂ ನಡೆಯಲಿದೆ. ಜನವರಿ 31ರಂದು ಪ್ರಾರಂಭವಾಗಿ 11 ದಿನಗಳ ಅವಧಿಯವರೆಗೆ ಅಧಿವೇಶನ ನಡೆಯುವ ಸಾಧ್ಯತೆಗಳಿದೆ.
ಮಹಿಳಾ ಕೃಷಿಕರಿಗೆ ಡಬಲ್ ಸಹಾಯ
ಮೂಲಗಳನ್ನು ಉಲ್ಲೇಖದ ಈ ವರದಿ ಪ್ರಕಾರ, ಮಧ್ಯಂತರ ಬಜೆಟ್‌ನಲ್ಲಿ ಮಹತ್ವದ ಘೋಷಣೆಯಾಗುವ ಸಾಧ್ಯತೆ ಬಹಳ ಕಡಿಮೆ ಇದ್ದು. ಆದರೆ, ಕೃಷಿಕ ಮಹಿಳೆಯರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ಧನ ಸಹಾಯ ದ್ವಿಗುಣಗೊಳ್ಳಬಹುದು ಎನ್ನಲಾಗಿದೆ.
ಪಿಎಂ ಕಿಸಾನ್ ಯೋಜನೆಯಲ್ಲಿ ಈಗ ವರ್ಷಕ್ಕೆ 6,000 ರೂ ರೂ ನೀಡಲಾಗುತ್ತಿದ್ದು. ಮಹಿಳಾ ಕೃಷಿಕರಿಗೆ ಇದು 12,000 ರೂ. ಏರಿಕೆಯಾಗಬಹುದು. ಅಂದರೆ, ಜಮೀನು ಮಾಲಕತ್ವ ಹೊಂದಿರುವ ಮಹಿಳೆಯರಿಗೆ ಹೆಚ್ಚಿನ ಧನಸಹಾಯ ಪಡೆಯುತ್ತಾರೆ. ಇದು ಬಿಟ್ಟರೆ ಬೇರೆ ಮಧ್ಯಂತರ ಬಜೆಟ್‌ನಲ್ಲಿ ಪ್ರಮುಖ ನಿರ್ಧಾರ ಬರುವ ಸಾಧ್ಯತೆಯಿಲ್ಲ ಎನ್ನಲಾಗಿದೆ.
ಹಿಂದೆ ಕೆಲ ವರದಿಯ ಪ್ರಕಾರ ಪಿಎಂ ಕಿಸಾನ್ ಯೋಜನೆಯಲ್ಲಿ ಹಣದ ಮೊತ್ತವನ್ನು ಸರ್ಕಾರ ಹೆಚ್ಚಿಸಲು ಯೋಜಿಸಿದೆ ಎಂದು ಹೇಳಲಾಗಿದ್ದು. 6,000 ರೂ ಇರುವ ಧನಸಹಾಯವನ್ನು 8,000 ರೂ. ಏರಿಸಲಾಗುವುದು ಎನ್ನಲಾಗಿದ್ದು. ಸರ್ಕಾರ ಈ ಯೋಜನೆಯ ಸರ್ವ ಫಲಾನುಭವಿಗಳಿಗೂ ನೆರವು ಹೆಚ್ಚಿಸುತ್ತಾ? ಅಥವಾ ಮಹಿಳಾ ಕೃಷಿಕರನ್ನು ಮಾತ್ರವೇ ಗುರಿ ಮಾಡಿ ಸಹಾಯ ನೀಡುತ್ತದೆಯಾ ಸ್ಪಷ್ಟವಾಗಿಲ್ಲ.
ಇತರೆ ವಿಷಯಗಳು
ಡ್ರೈವಿಂಗ್ ಲೈಸೆನ್ಸ್ ಮಾಡಿಸುವ ನಿಯಮ ಚೇಂಜ್! ಕೇಂದ್ರ ಸರ್ಕಾರದ ಹೊಸ ಆದೇಶ
ರೈತರಿಗೆ ಕಡಿಮೆ ಬಡ್ಡಿಯಲ್ಲಿ 3 ಲಕ್ಷದವರೆಗೆ ಸಾಲ! ಸರ್ಕಾರದ ಹೊಸ ಯೋಜನೆ