rtgh

ಪಿಎಂ ಕಿಸಾನ್‌ ಯೋಜನೆ ಬಿಗ್‌ ಅಪ್ಡೇಟ್.!‌ ಇನ್ಮುಂದೆ ಖಾತೆಗೆ ಬರುತ್ತೆ ₹8,000.! ಈ ಕೆಲಸ ಮಾಡಿದವರಿಗೆ ಮಾತ್ರ

ಹಲೋ ಸ್ನೇಹಿತರೇ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವಾರ್ಷಿಕವಾಗಿ 3 ಕಂತುಗಳಲ್ಲಿ ಕೋಟ್ಯಾಂತರ ರೈತ ಬಾಂಧವರಿಗೆ 6000 ರೂ.ಗಳನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತಿತ್ತು. ಪ್ರತಿ ಕಂತಿನಲ್ಲಿ 2000 ರೂ. ನೀಡಲಾಗುತ್ತಿತ್ತು. ಆದರೆ ಸರ್ಕಾರಿ ಮೂಲಗಳು ನೀಡಿರುವ ಮಾಹಿತಿ ನಂಬುವುದಾದರೆ, ರೈತರಿಗೆ ನೀಡುವ ಕಂತನ್ನು 4 ಕಂತುಗಳಿಗೆ ಏರಿಕೆ ಮಾಡಲಾಗುವುದು. ಇದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿಯನ್ನು ಲೇಖನದಲ್ಲಿ ತಿಳಿಯಿರಿ.

pm kisan scheme e kyc update

ಬಜೆಟ್ 2024 ರಲ್ಲಿ ರೈತರಿಗೆ ಖುಷಿ ಸುದ್ದಿ ಸಿಗುವ ನಿರೀಕ್ಷೆಯಿದೆ ಇದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1, 2024 ರಂದು ಬಜೆಟ್ ಮಂಡಿಸುತ್ತಾರೆ. ಈ ಬಜೆಟ್ ವೋಟ್ ಒನ್ ಅಕೌಂಟ್ ಇರಲಿದ್ದು. 2024ರಲ್ಲಿ ಲೋಕಸಭೆ ಚುನಾವಣೆ ನಡೆಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರೈತರಿಗೆ ಉಡುಗೊರೆಯನ್ನು ನೀಡಿ ಸಂತಸವನ್ನು ಪಡಿಸುವ ಸಾಧ್ಯತೆ ಹೆಚ್ಚಿದೆ. ಮೂಲಗಳ ಪ್ರಕಾರ ಈ ಬಾರಿಯ ಬಜೆಟ್‌ನಲ್ಲಿ ಯಾವುದೇ ವಿಶೇಷ ಘೋಷಣೆ ಇರುವುದಿಲ್ಲ, ಆದರೆ ರೈತರಿಗಾಗಿ ಏನಾದರೂ ದೊಡ್ಡ ಘೋಷಣೆಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಪಿಎಂ ಕಿಸಾನ್ ಕಂತು ಹೆಚ್ಚಾಗಬಹುದೇ?
ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಲ್ಲಿ ವಾರ್ಷಿಕವಾಗಿ 3 ಕಂತುಗಳನ್ನು ನೀಡಲಾಗುತ್ತದೆ. ಇದರಲ್ಲಿ 2000 ರೂ. 3 ಕಂತುಗಳ ಮೂಲಕ 6 ಸಾವಿರ ಪಾವತಿಸಲಾಗುತ್ತಿತ್ತು. ಆದರೆ, ರೈತರಿಗೆ ನೀಡುವ ಕಂತನ್ನು ಈಗ 3 ರ ಬದಲು 4 ಕ್ಕೆ ಹೆಚ್ಚಿಸಲಾಗುವುದು. ಅಂದರೆ 1 ಕಂತು ಹೆಚ್ಚಾಗುವ ನಿರೀಕ್ಷೆಯಿದೆ. ಇಲ್ಲಿಯವರೆಗೆ ಪ್ರತಿ 4 ತಿಂಗಳಿಗೊಮ್ಮೆ ಒಂದು ಕಂತನ್ನು ಪಾವತಿ ಮಾಡಲಾಗುತ್ತಿತ್ತು. ಈಗ ರೈತರಿಗೆ 3 ತಿಂಗಳಿಗೊಮ್ಮೆ ಅಂದರೆ ತ್ರೈಮಾಸಿಕ ಆಧಾರದಲ್ಲಿ ಈ 2 ಸಾವಿರ ರೂ.ಗಳನ್ನು ಸರ್ಕಾರ ನೀಡುವ ಸಾಧ್ಯತೆಯಿದೆ. ಇದು ಏಪ್ರಿಲ್ 2024 ರಿಂದ ಆರಂಭಗೊಳ್ಳುವ ಸಾಧ್ಯತೆಯಿದೆ. ಆದರೆ, ಕಂತಿನ ಮೊತ್ತವೂ ಹೆಚ್ಚಾಗಲಿದೆಯೇ / ಇಲ್ಲವೇ ಎಂಬ ಬಗ್ಗೆ ಮಾಹಿತಿಯಿಲ್ಲ. ಕಂತು ಹೆಚ್ಚಿಸಿದರೆ ಖಂಡಿತವಾಗಿ ರೈತರಿಗೆ ಪ್ರತಿ 3 ತಿಂಗಳಿಗೊಮ್ಮೆ 2000 ರೂ. ಅಂದರೆ ವಾರ್ಷಿಕ 8000 ರೂ ಸಿಗುತ್ತದೆ. ಕೃಷಿ ತಜ್ಞರು & ಎಸ್‌ಬಿಐ ಪರಿಸರ ವರದಿಯು ರೈತರಿಗೆ ಮೊತ್ತವನ್ನು ಹೆಚ್ಚಿಸಲು ಪ್ರಸ್ತಾಪಿಸಿದೆ.

ಪಿಎಂ ಕಿಸಾನ್‌ನ ಮುಂದಿನ ಕಂತು ಯಾವಾಗ ಬರುತ್ತದೆ?
ಪಿಎಂ ಕಿಸಾನ್‌ನ 16ನೇ ಕಂತು 2024ರ ಜನವರಿ-ಫೆಬ್ರವರಿಯಲ್ಲಿ ಬರುತ್ತದೆ. ಅದರ ದಿನಾಂಕ ಇನ್ನೂ ಪ್ರಕಟಗೊಂಲ್ಲಾ. ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಖಾತೆಗಳಿಗೆ 16 ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದಾರೆ. 13 ಕೋಟಿಗೂ ಹೆಚ್ಚು ರೈತ ಕುಟುಂಬಗಳು ಇದರ ಲಾಭ ಪಡೆಯುತ್ತಾರೆ. ಇದಕ್ಕೂ ಮೊದಲು ಇಕೆವೈಸಿ ನಿಯಮಗಳು & ಇತರ ಮಾನದಂಡಗಳನ್ನು ಪೂರೈಸುವವರು ಮಾತ್ರ ಹಣವನ್ನು ಪಡೆಯಲಾಗುವುದು.

ಏನಿದು ಪಿಎಂ ಕಿಸಾನ್ ಯೋಜನೆ?
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿ ರೈತರಿಗೆ ಪ್ರತಿ 4 ತಿಂಗಳಿಗೊಮ್ಮೆ 2000 ರೂ. ಅಂದರೆ ವಾರ್ಷಿಕವಾಗಿ  6000 ರೂ. ಸರ್ಕಾರ ನೀಡಲಿದೆ. ಇದನ್ನು ನೇರವಾಗಿ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತದೆ. ಪ್ರಧಾನಿ ಮೋದಿ ಅವರೇ 1 ವರ್ಷದಲ್ಲಿ ಒಟ್ಟು 3 ಕಂತುಗಳನ್ನು ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದು. 2023-24ರ ಕೇಂದ್ರ ಬಜೆಟ್‌ನಲ್ಲಿ ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ 11.4 ಕೋಟಿ ರೈತರಿಗೆ 2.2 ಲಕ್ಷ ಕೋಟಿ ರೂಪಾಯಿ ನಗದು ವರ್ಗಾವಣೆ ಮಾಡಲಾಗುವುದು.


ಅಂತ್ಯೋದಯ ಕಾರ್ಡ್ ಇದ್ದವರಿಗೆ ಭರ್ಜರಿ ಆಫರ್! 2028 ರವರೆಗೆ ಸಿಲಿದೆ ಉಚಿತ ರೇಷನ್‌

ಕಾರ್ಮಿಕ ಕಾರ್ಡ್ ಇದ್ದವರಿಗೆ ಬಂಪರ್! ಕೇಂದ್ರ ಸರ್ಕಾರದಿಂದ ಈ ತಿಂಗಳ ಹಣ ಖಾತೆಗೆ

Leave a Comment