rtgh

ವ್ಯಕ್ತಿ ಸತ್ತ ಬಳಿಕ ಜಮೀನು ಕುಟುಂಬಸ್ಥರ ಹೆಸರಿಗೆ ವರ್ಗಾವಣೆ ರದ್ದು.! ಸರ್ಕಾರದಿಂದ ಹೊಸ ನಿಯಮ ಜಾರಿ

ಹಲೋ ಸ್ನೇಹಿತರೇ, ಹಣ ಮತ್ತು ಆಸ್ತಿ ಇಂದಿನ ಜೀವನದಲ್ಲಿ ಅತ್ಯವಶ್ಯವಾಗಿದೆ. ಹಾಗಾಗಿಯೇ ಆಸ್ತಿ ಪಾಲು ಆದಾಗ ಯಾರು ಕೂಡ ಬೇಡ ಎಂದು ಬಿಟ್ಟು ಕೊಡಲಾರರು. ಈಗ ಆಸ್ತಿ ವಿಭಾಗಕ್ಕೂ ಅನೇಕ ನಿಯಮ ಬಂದಿದೆ ಆಸ್ತಿ ಹೊಂದಿದ್ದಾತನೆ ಮರಣ ಹೊಂದಿದಾಗ ಆತನ ಕುಟುಂಬಸ್ಥರಿಗೆ ಆಸ್ತಿ ಯಾವ ರೀತಿ ವಿಭಾಗ ಮಾಡಿ ಹಂಚಿಕೆ ಮಾಡಲಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ತಿಳಿಯಿರಿ.

property transfer

ಖಾತೆ ಬದಲಾಗಿಲ್ಲ ?

ಆಸ್ತಿ ಖಾತೆ ಬದಲಾಗದೇ ಇರಲು ಅನೇಕ ಕಾರಣವಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು, ಬಹುಪತ್ನಿತ್ವ, ಭೂ ವಿವಾದ ಇದ್ದರೆ ಮತ್ತು ತಿಳುವಳಿಕೆ ಕೊರತೆ ಇದ್ದರೆ ಆಸ್ತಿ ಹೊಂದಿರುವ ದಾಖಲಾತಿ ಖಾತೆಯ ಹಕ್ಕುನ್ನು ಬದಲಾವಣೆ ಮಾಡಲಾಗದು. ಇದಕ್ಕೆ ಸರ್ಕಾರದ ನಿಯಮ ವಿಭಿನ್ನವಾಗಿದೆ. ಜಮೀನಿನ ವಾರಸುದಾರ / ಆಸ್ತಿಯ ಮಾಲಕ ಮರಣ ಹೊಂದಿದ 6 ತಿಂಗಳ ಒಳಗೆ ಕಡ್ಡಾಯವಾಗಿ ಖಾತೆ ಬದಲಾವಣೆ ಮಾಡಿಸಲೇಬೇಕು ಎಂಬ ನಿಯಮಯಿದೆ. ಪೌತಿ ಖಾತೆ ಮೂಲಕ ಕಡ್ಡಾಯವಾಗಿ ಹಕ್ಕು ಬದಲಾವಣೆ ಮಾಡಲೇಬೇಕಾಗುತ್ತದೆ.

ಜಮೀನಿನ ಮಾಲಿಕ ತೀರಿ ಹೋದಾರೆ ಆ ಆಸ್ತಿಯನ್ನು ಯಾವ ರೀತಿ ವಿಭಾಗಿಸುತ್ತಾರೆ ಎಂದರೆ ಮೊದಲು ಹಕ್ಕು ಬದಲಾವಣೆಗೆ ಪೌತಿ ಖಾತೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಇದರಲ್ಲಿ ಮರಣ ಹೊಂದಿದ್ದ ಮಾಲಿಕನ ಹೆಸರು ತೆಗೆದು ಕುಟುಂಬ ಸದಸ್ಯರಲ್ಲಿ ನೇರ ಮಾಲಿಕನ ತಾಯಿ, ಹೆಂಡತಿ, ಮಕ್ಕಳು ಹೆಸರಿಗೆ ಹಕ್ಕಿನ ವರ್ಗಾವಣೆ ಮಾಡಬೇಕಾಗುತ್ತದೆ. ಹಾಗೆಂದು ಸಂಪೂರ್ಣ ಜಮೀನಿನ ಒಡೆತನವು ಅವರಿಗೆ ಇರುವುದಿಲ್ಲ ಇದರಲ್ಲಿನ ಸೇವಾ ಸೌಲಭ್ಯಗಳನ್ನು ಪಡೆಯಲು ಮಾತ್ರ ಪೌತಿ ಖಾತೆಯು ಉಪಯುಕ್ತವಾಗಲಿದೆ.

11E ಸ್ಕೆಚ್:

ಬಳಿಕ 11E ಸ್ಕೆಚ್ ಅರ್ಜಿ ಸಲ್ಲಿಸಬೇಕಾಗುತ್ತದೆ. ಅದಕ್ಕಾಗಿ ನೀವು ಎಲ್ಲ ದಾಖಲಾತಿ ಮತ್ತು ಪಹಣಿಯೊಂದಿಗೆ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ. 11Eನಲ್ಲಿ ಒಳಗೆ 11Bನಲ್ಲಿ ಯಾರು ಯಾರಿಗೆ ಎಷ್ಟು ಜಮೀನು ಸಿಗಲಿದೆ, ಎಷ್ಟು ವಿಸ್ತೀರ್ಣ ಎಂಬ ಎಲ್ಲ ಅಂಶಗಳು ಇರುತ್ತದೆ. ನಿಗಧಿ ಪಡಿಸಿದ ದಿನಾಂಕದ ದಿನ ಭೂ ಮಾಪಕರು ಬಂದು ಜಮೀನು ಅಳತೆ ಮಾಡಿ ಹಂಚಿಕೆ ಮಾಡಿ ತಿಳಿಸುತ್ತಾರೆ. ನಂತರ ನಿಮ್ಮ ಜಮೀನಿನ 11E ನಕ್ಷೆ ನಿಮಗೆ ಸಿಗಲಿದೆ.

ವಿಭಾಗ ಪತ್ರ:

11E ಸ್ಕೆಚ್ ಬಂದ ಬಳಿಕ ವಿಭಾಗೀಯ ಪತ್ರ ಮಾಡಿಸಬೇಕಾಗುತ್ತದೆ. ಅದಕ್ಕಾಗಿ 11E ಸ್ಕೆಚ್ ಹಾಗೂ ಪಾಲುದಾರರ ಆಧಾರ್ ಕಾರ್ಡ್, ವಂಶಾವಳಿ ಪತ್ರ ಮತ್ತು ಇತರ ದಾಖಲಾತಿಯೊಂದಿಗೆ ಹತ್ತಿರದ ಉಪ ನೋಂದಣಿ ಕಚೇರಿಗೆ ಭೇಟಿ ನೀಡಬೇಕು. ಬಳಿಕ ವಿಭಾಗ ಪತ್ರದ ಮೂಲಕ ರಿಜಿಸ್ಟರ್ ಮಾಡಿ. ನೋಂದಾವಣಿ ಮುಗಿದು 30 ದಿನಗ ಒಳಗೆ ಗ್ರಾಮ ಲೆಕ್ಕಿಗರು ಮ್ಯೂಟೇಶನ್ ಪ್ರೊಸೆಸ್ ಮಾಡುತ್ತಾರೆ. ಹೀಗೆ ಮಾಡಿದ ಬಳಿಕ ಪ್ರತ್ಯೇಕ ಪಹಣಿ ಪತ್ರ ಲಭ್ಯವಾಗುತ್ತದೆ.


ಸರ್ಕಾರಿ ಕೆಲಸ ಬೇಕು ಅಂದ್ರೆ ಇನ್ಮುಂದೆ ಈ ದಾಖಲೆ ಇರ್ಲೇ ಬೇಕು.! ರಾತ್ರೋರಾತ್ರಿ ಬಂತು ಹೊಸ ರೂಲ್ಸ್

ಮೊಬೈಲ್‌ ಬಳಕೆದಾರರೇ ಹುಷಾರ್.!!‌ ಈ ಅಪ್ಲಿಕೇಶನ್‌ ನಿಮ್ಮ ಬಳಿ ಇದ್ಯಾ?? ಹಾಗಾದ್ರೆ ಮಿಸ್‌ ಮಾಡ್ದೆ ಓದಿ

Leave a Comment