ಹಲೋ ಸ್ನೇಹಿತರೇ, ನಿಮ್ಮ ಕೂದಲಿನ ಬಗ್ಗೆ ಅತಿಯಾದ ಕಾಳಜಿ ಮಾಡುತ್ತಿದ್ದೀರಾ..? ಕೂದಲು ಉದುರದಂತೆ ತಡೆಯಲು, ಕೂದಲು ಸೊಂಪಾಗಿ ಇರಲು, ಕೂದಲು ರೇಷ್ಮೆಯಂತೆ ಸಿಲ್ಕಿಂತೆ ಆಗಲು ಬ್ರಾಂಡೆಡ್ ಸೋಪು ಶಾಂಪುಗಳನ್ನು ಬಳಸುತ್ತೀದ್ದೀರಾ. ಹಾಗಾದರೆ ತಪ್ಪದೇ ಈ ಸ್ಟೋರಿ ಓದಿ. ಯಾಕೆಂದರೆ ಕೂದಲಿನ ಅಂದಕ್ಕೆ ಬಳಸುವ ಶಾಂಪೂ ಸೇರಿದಂತೆ ಹೇರ್‌ಕೇರ್ ಗಳಂತಹ ಉತ್ಪನ್ನಗಳು ನಿಮ್ಮ ಆರೋಗ್ಯವನ್ನೇ ಕೆಡಿಸಬಹುದು. ಶಾಂಪೂಗಳ ಬಳಕೆ ಮಾರಣಾಂತಿಕ ಕಾಯಿಲೆಗೆ ದಾರಿ ಮಾಡಿಕೊಡಬಹುದು ಎನ್ನುವುದನ್ನು ನಾವು ನಿಮಗೆ ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ.

ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕೈಗಾರಿಕೆಗಳಲ್ಲಿಯೇ ಒಂದಾದ ಕಾಸ್ಮೆಟಿಕ್ ಗಳ ಉದ್ಯಮವು ಪ್ರತಿ ವರ್ಷವು 6%ರಷ್ಟು ಹೆಚ್ಚಾಗುತ್ತಿರುತ್ತದೆ. ಬಳಕೆದಾರರ ಸಂಖ್ಯೆಯು ಹೆಚ್ಚಾಗುತ್ತಿದ್ದಂತೆ ದಿನಕ್ಕೊಂದು ಬ್ರಾಂಡ್‌ಗಳಂತೆ ಅನೇಕ ಬ್ಯಾಂಡ್ ಗಳು ಮಾರುಕಟ್ಟೆಗೆ ಬರುತ್ತದೆ. ಹೇರ್ ಕೇರ್ ವಸ್ತುಗಳ ತಯಾರಿಕಾ ಉದ್ಯಮವು ಕೂಡ ಹೀಗೆ ಮುಂದುವರೆದು ಬಂದಿದೆ, ಬಳಕೆದಾರರ ಸಂಖ್ಯೆಯೂ ಕೂಡ ಗಣನೀಯವಾಗಿ ಹೆಚ್ಚಾಗುತ್ತಿದೆ. ಆದ್ರೆ ಇತ್ತೀಚಿಗೆ ವಿಜ್ಞಾನಿಗಳ ಅಧ್ಯಯನವೊಂದು ಆಘಾತಕಾರಿ ವಿಚಾರವನ್ನು ಬಹಿರಂಗಪಡಿಸಿದೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಹೆಚ್ಚಿನ ಶ್ಯಾಂಪೂಗಳು ಮತ್ತು ಹೇರ್‌ಕೇರ್ ಉತ್ಪನ್ನಗಳು ಕೂದಲನ್ನು ಸ್ವಚ್ಛಗೊಳಿಸುವ ಜೊತೆಗೆ ಅದರಲ್ಲಿನ ಬೃಹತ್ ಪ್ರಮಾಣದ ರಾಸಾಯನಿಕವನ್ನು ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಈಗಾಗಲೇ ಹೇಳುತ್ತಾರೆ.
ಎನ್ವಿರಾನ್ಮೆಂಟಲ್ ಸೈನ್ಸ್ ಮತ್ತು ಟೆಕ್ನಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಕೂದಲಿನ ರಕ್ಷಣೆಯ ಉತ್ಪನ್ನಗಳಲ್ಲಿನ ರಾಸಾಯನಿಕ ವಸ್ತುಗಳು ನಮ್ಮ ಕೂದಲಿನಲ್ಲಿ ಹಾಗೂ ಸುತ್ತಲಿನ ಪ್ರದೇಶದಲ್ಲಿ ಅಗತ್ಯಕ್ಕಿಂತ ಹೆಚ್ಚು ಕಾಲ ಉರುತ್ತದೆ.. ಇದನ್ನು ಉಸಿರಾಡುವುದರಿಂದ ಶ್ವಾಸಕೋಶ ಮತ್ತು ನರಮಂಡಲದ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲ ಲಿವರ್ ಡ್ಯಾಮೇಜ್ ಕೂಡ ಆಗುವ ಸಾಧ್ಯತೆ ಕೂಡ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.
ರಾಜ್ಯದ ಜನತೆಗೆ ಬಂಪರ್ ಸುದ್ದಿ.!! ಇವರ ಖಾತೆಗೆ ಸರ್ಕಾರದಿಂದ ಪ್ರತಿ ತಿಂಗಳು 1 ಸಾವಿರ ರೂ.; ನೀವು ಅರ್ಜಿ ಸಲ್ಲಿಸಿ
ಸಂಶೋದನೆಯ ಪ್ರಕಾರ, ಒಬ್ಬ ವ್ಯಕ್ತಿಯ ಮನೆಯಲ್ಲಿ ಒಂದು ಬಾರಿ ಕೂದಲ ರಕ್ಷಣೆಯ ಉತ್ಪನ್ನಗಳ ಬಳಕೆಯಿಂದ 17 ಮಿಗ್ರಾಂಗಳಷ್ಟು ಹಾನಿಕಾರಕ ರಾಸಾಯನಿಕಗಳನ್ನು ಉಸಿರಾಡುತ್ತಾನೆ. ಕೂದಲ ರಕ್ಷಣೆಯ ಉತ್ಪನ್ನಗಳಲ್ಲಿ ಹೆಚ್ಚಿನವು ಪರಿಮಳಯುಕ್ತವಾಗಿರುವುದು ಕೂಡ ಇದಕ್ಕೆ ಮುಖ್ಯವಾದ ಕಾರಣ ಎಂದು ತಿಳಿಸಿದ್ದಾರೆ. ಪರಿಮಳದ ಸಲುವಾಗಿ ಬಳಸುವ ಕೆಲವು ರಾಸಾಯನಿಕಗಳು ಉಸಿರಾಡಲು ಅಪಾಯಕಾರಿಯಾಗಿದೆ. ಈ ಉತ್ಪನ್ನಗಳಲ್ಲಿ ಬಳಸುವ ರಾಸಾಯನಿಕಗಳು ನಾವು ತಿಳಿದಿರುವುದಕ್ಕಿಂತ ಹೆಚ್ಚು ಮಾನವನ ದೇಹಗಳ ಮೇಲೆ ಹೆಚ್ಚಿನ ಪರಿಣಾಮವನ್ನು ಬೀರುತ್ತದೆ.
ಈ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಎನ್ನುವುದು ಇದ್ದೆ ಇರುತ್ತದೆ, ಇಂತಹ ಅಪಾಯಕಾರಿ ಉತ್ಪನ್ನಗಳನ್ನು ಬಳಸದಿರುವುದು ಉತ್ತಮವಲ್ಲ ಎಂದು ಸಂಶೋಧಕರು ಹೇಳುತ್ತಾರೆ. ಇನ್ನು ಮುಖ್ಯವಾಗಿ ಶಾಂಪೂ ಬಳಸುವ ಸಂಧರ್ಭದಲ್ಲಿ ಬಾತ್ರೂಮ್ ಎಕ್ಸಾಸ್ಟ್ ಫ್ಯಾನ್ ಅನ್ನು ಆನ್ ಮಾಡುವುದರಿಂದ ಶೇಕಡಾ 90% ರಷ್ಟು ಇದರ ಪರಿಣಾಮವನ್ನು ಕಡಿಮೆ ಮಾಡುತ್ತದೆ ಇದು ನಿಮ್ಮನ್ನು ಸ್ಪಲ್ಪ ಮಟ್ಟಿಗೆ ರಕ್ಷಿಸುತ್ತದೆ ಎಂದು ತಿಳಿಸಿದ್ದಾರೆ.
ಇತರೆ ವಿಷಯಗಳು:
ಸರ್ಕಾರದಿಂದ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ.! ಈ ದಾಖಲೆ ಹೊಂದಿದವರು ಈಗಲೇ ಅರ್ಜಿ ಸಲ್ಲಿಸಿ