ಹಲೋ ಸ್ನೇಹಿತರೇ, ಹಣಕಾಸಿನ ವಿಚಾರದಲ್ಲಿ ಆರ್ಥಿಕವಾಗಿ ಹಿಂದುಳಿದ ಗ್ರಾಮೀಡ ಹಾಗೂ ನಗರ ಪ್ರದೇಶದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮುಂದುವರೆಸಲು ವಿದ್ಯಾರ್ಥಿವೇತನ, ವಿದ್ಯಾಸಿರಿ ಊಟ, ಶುಲ್ಕ ಮರುಪಾವತಿ, ವಸತಿ ಸಹಾಯ ಯೋಜನೆ ಈ ಎಲ್ಲಾ ಸೌಲಭ್ಯವನ್ನು ಪಡೆಯಲು ಅರ್ಜಿ ಸಲ್ಲಿಸುವುದು ಹೇಗೆ ಎಂದು ತಿಳಿಯಿರಿ.
ಯಾರೆಲ್ಲ ಅರ್ಜಿ ಸಲ್ಲಿಸಬವುದು?
ಮೆಟ್ರಿಕ್ ನಂತರ ಕೋರ್ಸಗಳಲ್ಲಿ ವ್ಯಾಸಣಗ ಮಾಡುತ್ತಿರುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಪ್ರವರ್ಗ-1 ಹಾಗು ಅಲೆಮಾರಿ ಹಾಗೂ ಅರೆ ಅಲೆಮಾರಿ ವರ್ಗಕ್ಕೆ ಸೇರಿರುವ ವಿದ್ಯಾರ್ಥಿಗಳು ನೋಂದಣಿ ಮಾಡಬಹುದಾಗಿದೆ.
ಅರ್ಜಿ ಸಲ್ಲಿಕೆ ಪ್ರಯೋಜನಗಳು:
SSP ಪೋರ್ಟಲ್ ಮುಖಾಂತರ online ನಲ್ಲಿ ಕೊನೆಯ ದಿನಾಂಕದ ಒಳಗೆ ಅರ್ಜಿ ಸಲ್ಲಿಸಿದರೆ ಈ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಅಗತ್ಯವಾಗಿ ಬೇಕಾಗುವ ದಾಖಲಾತಿಗಳು:
- ಆಧಾರ್ ಕಾರ್ಡ ಪ್ರತಿ
- ಮೊಬೈಲ್ ನಂಬರ್
- ಇ-ಮೇಲ್ ಐ.ಡಿ.
- ಶಾಲಾ/ಕಾಲೇಜು ನೋಂದಣಿ ಸಂಖ್ಯೆ
- ಹೆಸರಿನಲ್ಲಿ ಇರುವ ಜಾತಿ ಹಾಗೂ ಆದಾಯ ಪ್ರಮಾಣ ಪತ್ರದ ಆರ್.ಡಿ ನಂಬರ್
- ವಿಕಲಚೇತನರಾಗಿದ್ದಲ್ಲಿ ಯು.ಡಿ.ಐ.ಡಿ ಗುರುತಿನ ಸಂಖ್ಯೆ ಸಲ್ಲಿಸಬೇಕಾಗುತ್ತದೆ.
- ಹಾಸ್ಟೆಲ್ ನಲ್ಲಿ ಇದ್ದಲ್ಲಿ ಹಾಸ್ಟೆಲ್ ವಿವರ ಸಲ್ಲಿಸಬೇಕಾಗುತ್ತದೆ.
ಕುಟುಂಬ ಐಡಿಯನ್ನು ಮೊಬೈಲ್ ನಲ್ಲಿ ತಿಳಿಯುವ ವಿಧಾನ:
SSP ಪೋರ್ಟಲ್ ಮುಖಾಂತರ online ನಲ್ಲಿ ಅರ್ಜಿ ಸಲ್ಲಿಸಲು ಕುಟುಂಬ ಐಡಿ ಬೇಕಾಗುತ್ತದೆ. ಆದರೆ ಅದನ್ನು ಹೇಗೆ ಮೊಬೈಲ್‌ನಲ್ಲಿ ಪಡೆದುಕೊಳ್ಳುವುದು.
Step-1: Kutumba ID status ಮೇಲೆ ಕ್ಲಿಕ್ ಮಾಡಿ ಅದರಲ್ಲಿ1 ದಾಖಲಾತಿಯನ್ನು ಆಯ್ಕೆ ಮಾಡಿ ರೇಷನ್ ಕಾರ್ಡ ನಂಬರ್, ಆಧಾರ್ ಕಾರ್ಡ ನಂಬರ್, ಹಾಗೂ ಪ್ರೂಟ್ಸ್ ಐಡಿ ನಂಬರ್ ನಮೂದಿಸಬೇಕು.
Step-2: ನಂತರ 4 number ಕ್ಯಾಪ್ಚರ್ ಕೋಡ್ ನಮೂದಿಸಿ “Show Data” ಮೇಲೆ ಕ್ಲಿಕ್ ಮಾಡಿದರೆ ಅದು ನಿಮ್ಮ ಕುಟುಂಬದ ಐಡಿ ತೋರಿಸುತ್ತದೆ.
ಇದೆಲ್ಲ ಮಾಡಿದರು ನಿಮಗೆ ಕುಟುಂಬ ಐಡಿ ಸಿಗದಿದ್ದರೆ Kutumba ID Application link ಮೇಲೆ ಕ್ಲಿಕ್ ಮಾಡಿ ಹೊಸದಾಗಿ ಅರ್ಜಿ ಸಲ್ಲಿಸಿ ಕುಟುಂಬ ಐಡಿಯನ್ನು ಪಡೆದುಕೊಳ್ಳಬೇಕಾಗುತ್ತದೆ.
ಇತರೆ ವಿಷಯಗಳು
ಸದನದಲ್ಲಿ ಸಿದ್ದು ಮಹತ್ವದ ಘೋಷಣೆ.! ಸಹಕಾರಿ ಬ್ಯಾಂಕ್‌ನಲ್ಲಿ ಎಷ್ಟೇ ಸಾಲ ಮಾಡಿದ್ರು ಬಡ್ಡಿ ಮನ್ನಾ