ಹಲೋ ಸ್ನೇಹಿತರೇ, ರಾಜ್ಯದಲ್ಲಿ ಸಾಕಷ್ಟು ಜನ ರೈತರು ಕೃಷಿಯ ಜೊತೆಗೆ ಉಪಕಸುಬಾಗಿ ಹೈನುಗಾರಿಕೆ ಮತ್ತು ಪಶು ಸಂಗೋಪನೆ, ಜೇನು ಸಾಕಾಣಿಕೆ ಹೀಗೆ ಮೊದಲಾದ ಕಸುಬುಗಳನ್ನು ಮಾಡುತ್ತಾರೆ. ಇದಕ್ಕೆ ತಕ್ಕಂತೆ ಸರ್ಕಾರವು ಕೂಡ ಬೇರೆ ಬೇರೆ ರೀತಿಯ ಯೋಜನೆಗಳನ್ನು ಜಾರಿಗೆ ತಂದಿದ್ದು ರೈತರಿಗೆ ಅನುಕೂಲವಾಗುವ ಸಬ್ಸಿಡಿಗಳನ್ನು ಕೂಡ ನೀಡುತ್ತದೆ. ಅಷ್ಟೇ ಅಲ್ಲದೆ ಎಮ್ಮೆ, ಹಸು ಮತ್ತು ಕೋಳಿ, ಹಂದಿ, ಮೊಲಗಳಂತಹ ಸಾಕು ಪ್ರಾಣಿಗಳ ಸಾಕಾಣಿಕೆಗೆ ಸಬ್ಸಿಡಿ ಜೊತೆಗೆ ಸಾಲ ಸೌಲಭ್ಯವನ್ನು ಕೂಡ ಸರ್ಕಾರ ನೀಡುತ್ತಿದೆ.
ಎಮ್ಮೆ ಸಾಕಾಣಿಕೆಗೆ ಸರ್ಕಾರದಿಂದ ಸಬ್ಸಿಡಿ
ನೀವು ರೈತರಾಗಿದ್ರೆ ಹೆಚ್ಚು ಲಾಭಗಳಿಸಲು ಬಯಸಿದರೆ ಖಂಡಿತವಾಗಿ ಎಮ್ಮೆಯ ತಳಿ ಸಾಕಾಣಿಕೆ ಮಾಡಬೇಕು. ವಿಶೇಷವೆಂದರೆ ಈ ತಳಿಯ ಎಮ್ಮೆ ಸಾಕಾಣಿಕೆಯ ಮೇಲೆ ಸರ್ಕಾರ ವಿಮೆ ಸೌಲಭ್ಯವನ್ನು ಕೂಡ ನೀಡುತ್ತಿದೆ ಹಾಗಾಗಿ ಸಂಪೂರ್ಣವಾದ ಬಂಡವಾಳವನ್ನು ಕೂಡ ಸರ್ಕಾರದಿಂದಲೇ ಪಡೆದು ನೀವು ಈ ಎಮ್ಮೆ ತಳಿ ಸಾಕಾಣಿಕೆ ಮಾಡಿ ತಿಂಗಳಿಗೆ ಲಕ್ಷಗಟ್ಟಲೆ ಆದಾಯ ಪಡೆಯಬಹುದಾಗಿದೆ.
ವಿಶೇಷ ಎಮ್ಮೆಯ ತಳಿ ಯಾವುದು ಗೊತ್ತಾ?
ಸರ್ಕಾರದಿಂದಲೂ ಕೂಡ ಪ್ರೋತ್ಸಾಹ ಇರುವಂತಹ ಎಮ್ಮೆ ತಳಿ ಮುರ್ರಾ ತಳಿ ಆಗಿದೆ. ಈ ತಳಿಯ ಎಮ್ಮೆಗಳನ್ನು ಸಾಕಾಣಿಕೆ ಮಾಡಲು ಆರಂಭಿಸಿದ್ರೆ ಪ್ರತಿ ತಿಂಗಳು ಲಕ್ಷ ಲಕ್ಷ ಆದಾಯ ಪಡೆದುಕೊಳ್ಳಲು ಸಾಧ್ಯವಿದೆ. ಇದಕ್ಕೆ ಮುಖ್ಯ ಕಾರಣ ಮುರ್ರಾ ತಳಿ ಬಹಳ ವಿಶೇಷವಾದ ತಳಿ ಆಗಿದ್ದು, ಅತಿ ಹೆಚ್ಚು ಹಾಲು ನೀಡುವಂತಹ ಎಮ್ಮೆ ತಳಿಇದಾಗಿದೆ.
ಜನರಿಗೆ ಬೊಂಬಾಟ್ ಆಫರ್.!! ಕೇವಲ 4900 ರೂ. ಹೂಡಿಕೆ ಮಾಡಿದ್ರೆ; ಕ್ಷಣದಲ್ಲಿ ಮಿಲಿಯನೇರ್ ಆಗೋದು ಪಕ್ಕಾ
ಮುರ್ರಾ ಎಮ್ಮೆ ತಳಿಯ ವೈಶಿಷ್ಟ್ಯತೆಗಳು
- ಪಂಜಾಬ್, ಹರ್ಯಾಣ, ದೆಹಲಿ ಭಾಗದಲ್ಲಿ ಮಾತ್ರ ಕಂಡುಬರುವ ಮುರ್ರಾ ಎಮ್ಮೆ ತಳಿಯನ್ನು ಕರ್ನಾಟಕದಲ್ಲಿಯೂ ಕೂಡ ಸಾಕಾಣಿಕೆ ಮಾಡಲು ಸಾಧ್ಯವಿದೆ.
- ಈ ಎಮ್ಮೆ ತಳಿ ಪ್ರತಿದಿನ ಸುಮಾರು 30 ಲೀಟರ್ ಹಾಲು ಕೊಡಬಲ್ಲದು.
- ಎಮ್ಮೆ ತಳಿಯ ಗರ್ಭಧಾರಣೆಯ ಅವಧಿ 310 ದಿನಗಳು.
- ಬಾಗಿದ ಕೊಂಬುಗಳನ್ನು ಹೊಂದಿರುವ ಮುರ್ರಾ ತಳಿಯ ಎಮ್ಮೆಗಳು ಬಹಳ ದಷ್ಟ ಪುಷ್ಟವಾಗಿರುತ್ತದೆ ಮತ್ತು ನೋಡಲು ಬಹಳ ಎತ್ತರವಾಗಿರುತ್ತದೆ.
- ಕಪ್ಪು ಬಣ್ಣದಲ್ಲಿ ಇರುವ ಈ ಎಮ್ಮೆ ತಳಿಗಳು ನೋಡಲು ಕೂಡ ಬಹಳ ಆಕರ್ಷಕವಾಗಿ ಇರುತ್ತವೆ. ನೋಡಲು ಎಷ್ಟು ದೊಡ್ಡದಾಗಿ ಕಾಣಿಸುತ್ತದೆಯೋ ಅಷ್ಟೇ ಮೃದು ಸ್ವಭಾವವನ್ನು ಹೊಂದಿದೆ.
- ಮುರ್ರಾ ತಳಿಯ ಹಾಲಿನಲ್ಲಿ 7.3% ನಷ್ಟು ಕೊಬ್ಬಿನಂಶ ಇದೆ.
ಯಾರಿಗೆ ಸಿಗಲಿದೆ ಸಬ್ಸಿಡಿ
ಮಹಿಳಾ ಹಾಗೂ ಅಂಗವಿಕಲ ವ್ಯಕ್ತಿ ಕೂಡ ಸಬ್ಸಿಡಿ ಪಡೆದುಕೊಳ್ಳಬಹುದು ಅದೇ ರೀತಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರು ಅರ್ಜಿ ಸಲ್ಲಿಸಬಹುದು. ಹಾಲು ಉತ್ಪಾದಕರು ಸಂಘದಲ್ಲಿ ಸದಸ್ಯತ್ವ ಹೊಂದಿರುವ ಪಶು ಸಂಗೋಪನೆಯನ್ನು ಮಾಡುವ ರೈತರು ಅರ್ಜಿ ಸಲ್ಲಿಸಬಹುದು. ಹಾಲು ಉತ್ಪಾದಕರ ಸಂಘದಿಂದಲ ಕೂಡ ನೀವು ಈ ಎಮ್ಮೆ ತಳಿ ಖರೀದಿಗೆ ಸಹಾಯಧನವನ್ನು ಪಡೆಯಬಹುದಾಗಿದ್ದು ಹಾಲನ್ನು ಮಾತ್ರ ಅದೇ ಡೈರಿಗೆ ಮಾರಾಟ ಮಾಡಬೇಕು ಎನ್ನುವ ನಿಯಮ ಇರುತ್ತದೆ.
ಇತರೆ ವಿಷಯಗಳು:
ಭರ್ಜರಿ ಗುಡ್ ನ್ಯೂಸ್ : ಸರ್ಕಾರಿ ನೌಕರರಿಗೆ ಡಿಎ ಜೊತೆಗೆ ಸ್ಯಾಲರಿ ಕೂಡ ಹೆಚ್ಚು
ಮಹಿಳೆಯರಿಗೆ ಬಂಪರ್ ಕೊಡುಗೆ.!! ಸ್ವಾವಲಂಬಿಯಾಗಲು ಸರ್ಕಾರದ ಹೊಸ ಸ್ಕೀಮ್; ನೀವು ಅಪ್ಲೇ ಮಾಡಿ